Menu

Home ನಲಿಕಲಿ About ☰ Menu


 

ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ 2023-24

ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ (ಎಂಡಿಆರ್‌ಎಸ್/ ಜಿಎಂಆರ್‌ಎಸ್/ಎಪಿಜೆ ಎಕೆಆರ್ ಎಸ್) 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

mdrs-admission-2023-24

☞ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  27/04/2023

☞ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ :  13/05/2023



MDRS
  2023-24ರ ಸಾಲಿಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯಗಳು, ಪಜಾ/ಪಪಂ, ಮತ್ತು ಒಬಿಸಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆಗಳು:
  1. ಅಭ್ಯರ್ಥಿಯು ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಿಂದ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಅಂಕಪಟ್ಟಿಯನ್ನು ಹೊಂದಿರಬೇಕು.
  2. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  3. ಅಭ್ಯರ್ಥಿಯು 10 ರಿಂದ 13 ವರ್ಷದ ವಯೋಮಾನದವರಾಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  1. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ (JPEG / JPG -20KB to 50KB).
  2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (PDF-500KB to 1MB).
  3. ಶಾಲಾ ಘೋಷಣಾ ಪ್ರಮಾಣ ಪತ್ರ ( PDF-500KB to 1MB).
  4. ಹಿಂದಿನ ತರಗತಿಯ ಅಂಕಪಟ್ಟಿ ( PDF-500KB to 1MB).
  5. ವಿದ್ಯಾರ್ಥಿಯ ಅಂಗವಿಕಲ ಪ್ರಮಾಣ ಪತ್ರ ( PDF-500KB to 1MB).
  6. ವಿಶೇಷ ವರ್ಗಗಳಿಗೆ ಬೇಕಾಗಿರುವ ಪ್ರಮಾಣ ಪತ್ರ (ಬಾಲ ಕಾರ್ಮಿಕ ಮಕ್ಕಳು/ಅನಾಥ ಮಕ್ಕಳು/ವಿಧವೆಯರ ಮಕ್ಕಳು/ಮಾಜಿ ಸೈನಿಕರ ಮಕ್ಕಳು/ಸಫಾಯಿ ಕರ್ಮಚಾರಿ ಮಕ್ಕಳು/ಅತ್ಮಹತ್ಯೆ ರೈತರ ಮಕ್ಕಳು/ಸ್ಥಳೀಯ ಅಭ್ಯರ್ಥಿ ಮಕ್ಕಳು/ವಿಶೇಷ ದುರ್ಬಲ ವರ್ಗ) ( PDF-500KB to IMB).

ಅರ್ಜಿ ಸಲ್ಲಿಸುವುದು ಎಲ್ಲಿ?
ಸೇವಾಸಿಂಧು ಪೋರ್ಟಲ್  (ಲಿಂಕ್: in) ಮೂಲಕ ಆನ್‌ಲೈನ್‌ ಅರ್ಜಿಗಳನ್ನು ಸಲ್ಲಿಸಬಹುದು. ಅಥವಾ  ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ ಅಥವಾ ಎಂಡಿಆರ್‌ಎಸ್/ ಜಿಎಂಆರ್‌ಎಸ್/ಡಾ.ಎಪಿಜೆಎಕೆಆರ್ (ಸಿಬಿಎಸ್‌ಇ) ಶಾಲೆಗಳು ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಬಹುದು.

ಪ್ರವೇಶ ಪರೀಕ್ಷೆ ವಿಧಾನ:
(1)ಪ್ರವೇಶ ಪರೀಕ್ಷೆ ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ. 
ಪ್ರಶ್ನೆಗಳ ಸಂಖ್ಯೆ - 100 
ಅಂಕಗಳು     - 100  
ಸಮಯ        - 120ನಿಮಿಷ
(2)ಪ್ರಶ್ನೆ ಪತ್ರಿಕೆಯು ಕನ್ನಡ, ಇಂಗ್ಲೀಷ್ ಮತ್ತು ಉರ್ದು ಭಾಷಾ ಮಾಧ್ಯಮದಲ್ಲಿರುತ್ತದೆ.
(3)ಶೇ.90% ಪ್ರಶ್ನೆಗಳು 4 ಮತ್ತು 5 ನೇ ತರಗತಿಯ ಪಠ್ಯಾಧಾರಿತವಾಗಿರುತ್ತದೆ ಮತ್ತು ಪ್ರವೇಶ ಪರೀಕ್ಷೆಗೆ ನಿಗಧಿಪಡಿಸಿದ ವಿಷಯವಾರು ಅಂಕಗಳು ಈ ಕೆಳಕಂಡಂತಿವೆ
  • ಕನ್ನಡ- 20
  • ಇಂಗ್ಲೀಷ್-15
  • ಗಣಿತ- 15
  • ಪರಿಸರ ಅಧ್ಯಯನ/ ಸಾಮಾನ್ಯ ವಿಜ್ಞಾನ-20
  • ಸಾಮಾನ್ಯ ಜ್ಞಾನ- 15
  • ಮಾನಸಿಕ ಸಾಮರ್ಥ್ಯ-15

ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ :
ಸಹಾಯವಾಣಿ: 8277799990, 080-22535916.

ಹೆಚ್ಚಿನ ವಿವರಗಳಿಗೆ ಇಲಾಖೆ ವೆಬ್‌ಸೈಟ್: https://dom.karnataka.gov.in ಗೆ ಭೇಟಿ ನೀಡಿ.

NMMS - 2023ರ ಬ್ಲಾಕ್ ವಾರು Provisional ಆಯ್ಕೆ ಪಟ್ಟಿ ಪ್ರಕಟ.

         ದಿನಾಂಕ 22/01/2023 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ K.S.Q.A.A.C ನಡೆಸಿದ NMMS ಪರೀಕ್ಷೆಯ ಬ್ಲಾಕ್ ವಾರು ವಿದ್ಯಾರ್ಥಿಗಳ Provisional ಆಯ್ಕೆ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್(DSERT) ನಲ್ಲಿ ಪ್ರಕಟಿಸಿದೆ.

NMMS - 2023 ಬ್ಲಾಕ್ ವಾರು Provisional ಆಯ್ಕೆ ಪಟ್ಟಿ ಪ್ರಕಟ.

 Provisional ಆಯ್ಕೆ ಪಟ್ಟಿ Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. 

Download Block Wise Provisional Selection list



2nd PUC Result Published | ಫಲಿತಾಂಶ ಪ್ರಕಟ

2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ  ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು  ದಿನಾಂಕ 21/04/2023 ರ ಮುಂಜಾನೆ  11:00 ಗಂಟೆಗೆ   ಪ್ರಕಟಿಸಲಿದೆ.

2nd PUC Result Published | ಫಲಿತಾಂಶ ಪ್ರಕಟ

ಫಲಿತಾಂಶ ಪರೀಕ್ಷಿಸುವ ವಿಧಾನ : 
1. ಕೆಳಗಿನ ಲಿಂಕ್ ಕ್ಲಿಕ್ ಮಾಡಿ. http://www.karresults.nic.in/

2. ನಿಮ್ಮ Registration Number(ಹಾಲ್ ಟಿಕೆಟ್ ನಂಬರ್)  ನಮೂದಿಸಿ.

3. ನಿಮ್ಮ Subject Combination ನಮೂದಿಸಿ.

4. Submit ಮೇಲೆ ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಿ.

 ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್  ಮಾಡಿ

  Result Link Updated

ಸೌರವ್ಯೂಹ ಮತ್ತು ಗ್ರಹಗಳು | Solar System and Planets

ಸೌರವ್ಯೂಹ
ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ, ಉಪಗ್ರಹ, ಧೂಮಕೇತು,  ಕ್ಷುದ್ರ ಗ್ರಹಗಳ ಸಮೂಹವನ್ನು ಸೌರವ್ಯೂಹ ಅಥವಾ ಸೌರಮಂಡಲ ಎನ್ನುವರು.
☞ ಸೌರವ್ಯವಸ್ಥೆಯು ಸೂರ್ಯನ ಸುತ್ತ ಕೇಂದ್ರಿಕೃತವಾಗಿದೆ.
☞ ಸೂರ್ಯನು ಸೌರವ್ಯವಸ್ಥೆಯ ಅತ್ಯಂತ ದೊಡ್ಡ ಸದಸ್ಯ.
 ಸೌರವ್ಯೂಹದ ಎಲ್ಲಾ ಗ್ರಹಗಳೂ ಇವನ ಸುತ್ತ ಪ್ರದಕ್ಷಿಣೆ ಹಾಕುತ್ತವೆ.
 ಸೂರ್ಯ ತನ್ನ ಅಕ್ಷದ ಸುತ್ತ ಪಸೌರವ್ಯೂಹಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿದ್ದಾನೆ.
 ಸಂಪೂರ್ಣ ಸೌರವ್ಯವಸ್ಥೆಯ ಶಾಖ ಮತ್ತು ಬೆಳಕಿಗೆ ಸೂರ್ಯನೇ ಏಕೈಕ ಆಧಾರ.
☞ ಸೂರ್ಯನ ಕಿರಣವು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ 8 ನಿಮಿಷ.

 ಗ್ರಹಗಳು
 ಸೂರ್ಯನ ಸುತ್ತ ಸುತ್ತುತ್ತಿರುವ ಆಕಾಶಕಾಯಗಳೇ 'ಗ್ರಹಗಳು'.
☞ ಸೌರವ್ಯೂಹದಲ್ಲಿ 8 ಗ್ರಹಗಳಿವೆ, ಅನುಕ್ರಮವಾಗಿ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.
 ಮೊದಲು 9 ಗ್ರಹಗಳನ್ನು ಗುರುತಿಸಲಾಗಿತ್ತು. ಆದರೆ ಸಾ.ಶ 2006 ರಲ್ಲಿ ನಡೆದ ವಿಶ್ವ ಖಗೋಳಶಾಸ್ತ್ರಜ್ಞರ ಸಮ್ಮೇಳನದಲ್ಲಿ 9 ನೇ ಗ್ರಹವಾದ "ಪ್ಲೂಟೋ"ವು ಗ್ರಹ ಎನಿಸಿಕೊಳ್ಳಬಹುದಾದ ಕೆಲ ಲಕ್ಷಣಗಳನ್ನು ಹೊಂದಿಲ್ಲವಾದ್ದರಿಂದ ಅದನ್ನು ಗ್ರಹ ಸ್ಥಾನದಿಂದ ಕೈಬಿಡಲಾಯಿತು. 

1.ಬುಧ ಗ್ರಹ :
 ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. 
☞ ಸೌರವ್ಯವಸ್ಥೆಯ ಅತ್ಯಂತ ಸಣ್ಣ ಗ್ರಹವಾಗಿದೆ.
☞ ಬುಧ ಗ್ರಹಕ್ಕೆ ಉಪಗ್ರಹಗಳು ಇಲ್ಲ.
 ಬುಧ ಗ್ರಹದ ಪರಿಭ್ರಮಣ ಅವಧಿ 88 ದಿನಗಳು.
☞ ಬುಧ ಗ್ರಹದ ಭ್ರಮಣ ಅವಧಿ 176 ದಿನಗಳು.
 ಬುಧ ಗ್ರಹದ ಮೆಲೆ ಯಾವುದೇ ಜೀವಿಗಳಿಲ್ಲ.

2. ಶುಕ್ರ ಗ್ರಹ :
ಶುಕ್ರವು ಸೂರ್ಯನಿಂದ ಎರಡನೆಯ ಗ್ರಹವಾಗಿದೆ.
 ಇದು ಭೂಮಿಗೆ ಅತ್ಯಂತ ಸಮೀಪದಲ್ಲಿರು ಗ್ರಹವಾಗಿದೆ.
 ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹ. 
 ಅತಿ ಹೆಚ್ಚು ಪ್ರಕಾಶಮಾನವಾದ ಗ್ರಹವಾಗಿದ್ದು, ರಾತ್ರಿ ಆಕಾಶದಲ್ಲಿ ಚಂದ್ರನನ್ನು ಬಿಟ್ಟರೆ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಕಾಯವೆಂದರೆ ಶುಕ್ರಗ್ರಹ.
 ಶುಕ್ರ ಗ್ರಹವನ್ನು ಬೆಳಗಿನ ನಕ್ಷತ್ರ ಅಥವಾ ಸಂಜೆ ನಕ್ಷತ್ರ ಎಂದು ಕರೆಯಲಾಗುತ್ತದೆ.
 ಈ ಗ್ರಹದ ಮೇಲೆ "ಮ್ಯಾಕ್ಸ್ವೆಲ್ ಮೊಂಟಾಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಅದರ ಎತ್ತರ ಮೌಂಟ್ ಎವರೆಸ್ಟ್ ನಷ್ಟಿದೆ.
  ಗ್ರೀಕರ ಸೌಂದರ್ಯ ದೇವತೆಯಾದ "ವೀನಸ್" ಳ ಹೆಸರನ್ನು ಈ ಗ್ರಹಕ್ಕೆ ಇಡಲಾಗಿದೆ.
  ಶುಕ್ರ ಗ್ರಹದಲ್ಲಿ  ಇಂಗಾಲದ  ಡೈ ಆಕ್ಸೈಡ್ ಹೆಚ್ಚಿದ್ದ ಕಾರಣ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ, ಆದ್ದರಿಂದ  ತಾಪ 400 ಡಿಗ್ರಿ ಸೆಲ್ಸಿಯಸ್‍ಗಿಂತ ಅಧಿಕವಾಗಿದೆ. ಆದ್ದರಿಂದ ಇದು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ.
 ಈ ಗ್ರಹದ ಪರಿಭ್ರಮಣ ಅವಧಿ 224 ದಿನಗಳು.
ಈ ಗ್ರಹದ ಭ್ರಮಣೆಯ ಅವಧಿ 243 ದಿನಗಳು.
 ಶುಕ್ರ ಗ್ರಹಕ್ಕೆ ಯಾವುದೇ ಉಪಗ್ರಹಗಳಿಲ್ಲ.

3. ಭೂಮಿ :
 ಜೀವಿಗಳಿರುವ ಏಕೈಕ ಗ್ರಹ ಭೂಮಿ.
ಭೂಮಿಯನ್ನು ನೀಲಿ ಗ್ರಹವೆಂದು ಕರೆಯುತ್ತಾರೆ. (ಕಾರಣ 70 ಶೇಕಡಾ ಭಾಗ ನೀರಿನಿಂದ ಆವೃತ್ತವಾಗಿದ್ದು ಮೇಲಿನಿಂದ ನೋಡಿದಾಗ ನೀಲಿಬಣ್ಣದಲ್ಲಿ ಕಾಣುತ್ತದೆ)
ಭೂಮಿಯ ಪರಿಭ್ರಮಣ ಅವಧಿ 365 ದಿನ 6 ಗಂಟೆ 9 ನಿಮಿಷ 9.54 ಸೆಕೆಂಡ್‍ಗಳು.
 ಭೂಮಿಯ ಭ್ರಮಣ ಅವಧಿ 23 ಗಂಟೆ 56 ನಿಮಿಷ 4.09 ಸೆಕೆಂಡ್‍ಗಳು.
 ಭೂಮಿಯ ಏಕೈಕ ಉಪಗ್ರಹ "ಚಂದ್ರ".
 ಭೂಮಿಯ ವಾತಾವರಣದಲ್ಲಿ  21% ಆಮ್ಲಜನಕವಿದೆ.

4. ಮಂಗಳ :
☞ ಮಂಗಳ ಗ್ರಹ  ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹ.
☞ ಬರಿಗಣ್ಣಿಗೆ ಕಾಣುವ ಕೆಂಪು ಬಣ್ಣದ ಗ್ರಹ ಮಂಗಳ.
 ಮಂಗಳಗ್ರಹವನ್ನು ಅಂಗಾರಕ, ಕುಜ, ಕೆಂಪುಗ್ರಹ ಎಂದು ಕರೆಯುತ್ತಾರೆ.
 ಮಂಗಳ ಗ್ರಹಕ್ಕೆ 2 ಉಪಗ್ರಹಗಳಿವೆ. "ಪೋಬೋಸ್" ಮತ್ತು "ಡೈಮೋಸ್".
 ಮಂಗಳಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಶೇಕಡ 95 ರಷ್ಟು ಕಾರ್ಬನ್ ಡೈ ಆಕ್ಸೈಡ್  ಹಾಗೂ ಶೇಕಡ 5 ರಷ್ಟು ನೈಟ್ರೋಜೆನ್ ಇದೆ.
☞ ಈ ಗ್ರಹದ ಮೇಲೆ "ಒಲಂಪಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು, ಸೌರ ಮಂಡಲದಲ್ಲಿಯೇ ಅತ್ಯಂತ ದೊಡ್ಡ ಪರ್ವತವಾಗಿದೆ. 
☞ ತನ್ನ ಸುತ್ತ ತಾನು ತಿರುಗುವ ಅಕ್ಷವು ಪರಿಭ್ರಮಣಾ ಪಥದಿಂದ 24 ಡಿಗ್ರಿ ಕೊನದಲ್ಲಿ ವಾಲಿದೆ. ಹೀಗಾಗಿ ಅದು ಭೂಮಿಯಲ್ಲಿ ಇರುವ ಹಾಗೇಯೇ ಋತುಗಳನ್ನು ಹೊಂದಿದೆ.
 ಮಂಗಳದ ಧ್ರುವಗಳಲ್ಲಿನ ಹಿಮದ ಹೊದಿಕೆಗಳು ಅದರ ಅತ್ಯಂತ ಪ್ರಮುಖ ಲಕ್ಷಣಗಳು. ಇವುಗಳ ಆಕಾರ ಮತ್ತು ಚಹರೆಗಳು ಋತುಮಾನಗಳೊಂದಿಗೆ ಬದಲಾಗುವುದು ಕಂಡುಬಂದಿದೆ.
 ಈ ಗ್ರಹದ ಪರಿಭ್ರಮಣ ಅವಧಿ 687 ದಿನಗಳು.
 ಈ ಗ್ರಹದ ಭ್ರಮಣ ಅವಧಿ 24 ಗಂಟೆ, 37 ನಿಮಿಷ 23 ಸೆಕೆಂಡ್‍ಗಳು.

5. ಗುರು :
☞  ಗುರು ಗ್ರಹ ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹವಾಗಿದೆ.
 ಇದೊಂದು ದೈತ್ಯಾಕಾರದ ಅನಿಲಗ್ರಹವಾಗಿದೆ.
☞ ಸೌರ ಮಂಡಲದಲ್ಲಿ ಸೃಷ್ಟಿಯಾದ ಮೊಟ್ಟಮೊದಲ ಗ್ರಹವೆಂದರೆ ಗುರು ಗ್ರಹ.
☞ ಸೂರ್ಯನಿಂದ ಬರೋಬ್ಬರಿ 778.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
 ಸೌರವ್ಯೂಹದಲ್ಲಿರುವ ಒಟ್ಟು ದ್ರವ್ಯದ 2/3 ಅಂಶ ಗುರು ಗ್ರಹದಲ್ಲಿದೆ. ಇಷ್ಟೊಂದು ದ್ರವ್ಯರಾಶಿ ಮತ್ತು ಗಾತ್ರ ಇದ್ದರೂ ಇದು ಗ್ರಹಗಳಲ್ಲೆ ಅತ್ಯಂತ ವೇಗವಾಗಿ ಪರಿಭ್ರಮಿಸುವ ಗ್ರಹ.
ಈ ಗ್ರಹದ ದಕ್ಷಿಣ ಗೋಳಾರ್ಧದಲ್ಲಿ ಸಮಭಾಜಕವೃತ್ತದ ಸಮೀಪದಲ್ಲಿರುವ 'ದೊಡ್ಡ ಕೆಂಪು ಮಚ್ಚೆ' ಯು ಗುರುವಿನ ಅತ್ಯಂತ ಪ್ರಮುಖ ಮೇಲ್ಮೈ ಲಕ್ಷಣ.
 ಗುರುಗ್ರಹವು ಉಂಗುರವ್ಯವಸ್ಥೆಯನ್ನು ಹೊಂದಿದೆ.
☞ ಗೆಲಿಲಿಯೋ ಗೆಲಿಲಿ ಗುರುಗ್ರಹದ ನಾಲ್ಕು ಉಪಗ್ರಹಗಳನ್ನು ಮೊತ್ತಮೊದಲ ಬಾರಿಗೆ ದೂರದರ್ಶಕದ ಮೂಲಕ ಕಂಡುಹಿಡಿದನು. ಇವುಗಳನ್ನು "ಗೆಲಿಲಿಯನ್" ಉಪಗ್ರಹಗಳು ಎನ್ನುವರು.
 ಈ ನಾಲ್ಕು ಉಪಗ್ರಹಗಳೆಮದರೆ- ಐಯೋ, ಯುರೋಪ, ಗ್ಯಾನಿಮೇಡ್ ಮತ್ತು ಕ್ಯಾಲಿಸ್ಟೋ.
 ಗ್ಯಾನಿಮೆಡ್ ಉಪಗ್ರಹವು ಸೌರವ್ಯೂಹದ ಅತ್ಯಂತ ದೊಡ್ಡ ಉಪಗ್ರಹವಾಗಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 12 ವರ್ಷಗಳು.


6. ಶನಿ :
☞ ಈ ಗ್ರಹವು ನಮ್ಮ ಸೌರ ಮಂಡಲದಲ್ಲಿ ಎರಡನೆಯ ದೊಡ್ಡ ಗ್ರಹ.
☞ ಸೌರವ್ಯೂಹದ ಅತ್ಯಂತ ಸುಂದರವಾದ ಗ್ರಹ ಶನಿ.
☞  ಶನಿಗ್ರಹವು ಅತ್ಯಂತ ಸುಂದರವಾಗಿರಲು ಕಾರಣ ಅದರ ಸುತ್ತಲೂ ಇರುವ ಉಂಗುರ ವ್ಯವಸ್ಥೆ.
☞ ಶನಿ ಗ್ರಹಕ್ಕೆ ಎರಡು ಉಂಗುರಗಳಿದ್ದು, ಈ ಉಂಗುರಗಳ ಮಧ್ಯದಲ್ಲಿರುವ ಖಾಲಿ ಜಾಗವನ್ನು " ಕ್ಯಾಸಿನಿ ವಿಭಾಜಕ"ಎಂದು ಕರೆಯುವರು.
☞ ಈ ಗ್ರಹವು ಸೂರ್ಯನಿಂದ 1.43 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಶನಿ ಗ್ರಹಕ್ಕೆ ಸುಮಾರು 18 ಕ್ಕಿಂತಲೂ ಹೆಚ್ಚಿನ ಉಪಗ್ರಹಗಳಿವೆ. ಇವುಗಳ ಪೈಕಿ ಅತ್ಯಂತ ಪ್ರಮುಖವಾದದ್ದು "ಟೈಟಾನ್"
☞ ಟೈಟಾನ್ ಉಪಗ್ರಹವು ಸ್ವತ: ವಾತಾವರಣವನ್ನು ಹೊಂದಿದೆ. ಇದು ಸೌರವ್ಯೂಹದಲ್ಲಿ ವಾತಾವರಣವನ್ನು ಹೊಂದಿರುವ ಏಕೈಕ ಉಪಗ್ರಹವಾಗಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ  29 ವರ್ಷಗಳು.

7. ಯುರೇನಸ್
☞ ಸೂರ್ಯನಿಂದ 2.87 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಸೌರ ಮಂಡಲದಲ್ಲಿಯೇ ಕಡಿಮೆ ಉಷ್ಣಾಂಶ ಹೊಂದಿರುವ ಗ್ರಹವಾಗಿದೆ.
☞ ದೂರದರ್ಶಕದ ಸಹಾಯದಿಂದ ಕಂಡುಹಿಡಿಯಲಾದ ಮೊದಲ ಗ್ರಹ ಯುರೇನಸ್.
☞ ಸಾ.ಶ 1781 ರಲ್ಲಿ ವಿಲಿಯಂ ಹರ್ಷಲ್ ಎಂಬ ವಿಜ್ಞಾನಿಯು ಈ ಗ್ರಹ ಕಂಡುಹಿಡಿದನು.
☞  ಇದರ ಪ್ರಮುಖ ಉಪಗ್ರಹಗಳೆಂದರೆ- ಟೈಟಾನಿಯಾ ಮತ್ತು ಒಬೆರನ್.
☞ ಶನಿ ಮತ್ತು ಗುರು ಗ್ರಹಗಳಿಗಿರುವಂತೆ ಯುರೇನಸ್ ಗ್ರಹವು ಉಂಗುರ ವ್ಯವಸ್ಥೆಯನ್ನು ಹೊಂದಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 84.3 ವರ್ಷಗಳು.

8. ನೆಪ್ಚೂನ್ :
☞ ಸೂರ್ಯನಿಂದ 4.5 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ನ್ಯೂಟನ್ ಚಲನೆಯ ನಿಯಮ ಮತ್ತು ಗುರುತ್ವ ನಿಯಮಗಳ ಅನ್ವಯದ ಫಲವೇ ನೆಪ್ಚೂನ್ ಗ್ರಹದ ಸಂಶೋಧನೆ.
☞ ಯುರೇನಸ್ ಗ್ರಹದ ಕಕ್ಷೆಯಲ್ಲಿ ಉಂಟಾದ ಪಲ್ಲಟವು ನೆಪ್ಚೂನ್ ಗ್ರಹದ ಇರುವಿಕೆಯನ್ನು ಮುನ್ಸೂಚಿಸಿತು.
 ಸಾ.ಶ 1846 ರಲ್ಲಿ ದೂರದರ್ಶಕದ ಸಹಾಯದಿಂದ ಜೋಹಾನ್‍ಗಾಲಿ ಎಂಬ ವಿಜ್ಞಾನಿ ಇದನ್ನು ಪತ್ತೆಹಚ್ಚಿದನು.
 ನೆಪ್ಚೂನ್ ಗ್ರಹದ ಉಪಗ್ರಹಗಳೆಂದರೆ- ಟ್ರೈಟನ್ ಮತ್ತು ನೆರೈಡ್.
☞ ಈ ಗ್ರಹದ ವಾತಾವರಣದಲ್ಲಿ ಹೈಡ್ರೋಜನ್ ಮತ್ತು ಹೀಲಿಯಮ್ ಅನಿಲಗಳಿವೆ.
☞ ಈ ಗ್ರಹದ ಪರಿಭ್ರಮಣ ಅವಧಿ 164.8 ವರ್ಷಗಳು.


ಈ ಮೇಲಿನ ವಿಷಯದಲ್ಲಿ ಹೊಸ ಪದಗಳ ಅರ್ಥ :
ಪರಿಭ್ರಮಣ ಅವಧಿ :- ಗ್ರಹವು ತನ್ನ ಅಕ್ಷದ ಮೇಲೆ ಸುತ್ತುತ್ತಾ ಸೂರ್ಯನನ್ನು ಒಂದು ಸುತ್ತು ಸುತ್ತಲೂ ತೆಗೆದುಕೊಳ್ಳುವ ಅವಧಿ(ವಾರ್ಷಿಕ ಚಲನೆ)
ಭ್ರಮಣ ಅವಧಿ :- ಗ್ರಹವು ತನ್ನ ಅಕ್ಷದ ಮೇಲೆ ಒಂದು ಸುತ್ತು ಸುತ್ತಲೂ ತೆಗೆದುಕೊಳ್ಳುವ ಅವಧಿ(ದೈನಂದಿನ ಚಲನೆ)

'ಸಮಾಜ ವಿಜ್ಞಾನ' ಮೂಲಭೂತ ಜ್ಞಾನ | Basic knowledge of 'Social Science'

         ಮಾಜ ವಿಜ್ಞಾನದ ಮೂಲಭೂತ ಜ್ಞಾನದ ಬಗ್ಗೆ ನಮಗೆಷ್ಟು ಗೊತ್ತು? ಸಮಾಜ ವಿಜ್ಞಾನವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯಗಳನ್ನು ಒಳಗೊಂಡಿದ್ದು ಸಾಮಾನ್ಯ ಜ್ಞಾನದ ಹೆಚ್ಚು ಭಾಗವನ್ನು  ಹೊಂದಿದೆ.
   ಹಾಗಾಗಿ ಇಲ್ಲಿ  ಸಮಾಜ ವಿಜ್ಞಾನದ ಮೂಲಭೂತ ಅಂಶಗಳು ಮತ್ತು ಅವುಗಳ ಸಾಹಿತ್ಯವನ್ನು ಸಿದ್ಧಪಡಿಸಲಾಗಿದೆ.
'ಸಮಾಜ ವಿಜ್ಞಾನ' ಮೂಲಭೂತ ಜ್ಞಾನ | Basic knowledge of 'Social Science'

ಸೂಚನೆ : ಈ ಕೆಳಗೆ ನೀಡಲಾದ ವಿಷಯಗಳ ಮೇಲೆ ಕ್ಲಿಕ್ ಮಾಡಿ ಅದರ ಸಾಹಿತ್ಯ/ಮಾಹಿತಿಯನ್ನು ಪಡೆಯಬಹುದು.

1
. ನಿಮ್ಮ ಊರು, ಗ್ರಾಮ ಪಂಚಾಯಿತಿ ತಾಲೂಕು ಮತ್ತು ಜಿಲ್ಲೆ.

2. ದಿಕ್ಕುಗಳ ಹೆಸರು (ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ನಲ್ಲಿ).

3. ನಿಮ್ಮ ಜಿಲ್ಲೆ ಅದರಲ್ಲಿ ಬರುವ ತಾಲೂಕುಗಳು.

4. ಕರ್ನಾಟಕದಲ್ಲಿರುವ 31 ಜಿಲ್ಲೆ ಮತ್ತು ಎಲ್ಲ ತಾಲೂಕುಗಳು.

5. ನಾಲ್ಕು ಕಂದಾಯ ವಿಭಾಗಗಳು ಮತ್ತು ಅವುಗಳಲ್ಲಿ ಬರುವ ಜಿಲ್ಲೆಗಳು.

6. ಭಾರತದ ರಾಜ್ಯ - ರಾಜಧಾನಿಗಳು.

7. ಭಾರತದ ಕೇಂದ್ರಾಡಳಿತ ಪ್ರದೇಶಗಳು - ರಾಜಧಾನಿಗಳು.

8. ಪ್ರಪಂಚದಲ್ಲಿರುವ ಖಂಡಗಳು(7)

9. ಭಾರತ ಯಾವ ಖಂಡದಲ್ಲಿದೆ ಆ ಖಂಡದಲ್ಲಿರುವ ದೇಶಗಳು.

10. ಪ್ರಪಂಚದ ಮಹಾಸಾಗರಗಳು (4)

11. ಸೌರಮಂಡಲದ ಗ್ರಹಗಳು (ಅನುಕ್ರಮವಾಗಿ)

12. ಕಾಲಗಳು.

13. ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಅರ್ಥಶಾಸ್ತ್ರ ಎಂದರೇನು ಹಾಗೂ ಪಿತಾಮಹರ ಹೆಸರುಗಳು.

14. ಅಕ್ಷಾಂಶ ಮತ್ತು ರೇಖಾಂಶಗಳ ನಡುವಿನ ವ್ಯತ್ಯಾಸ.

15. ಭಾರತದ ರಾಷ್ಟ್ರೀಯ ಹಬ್ಬಗಳು.

16. ಭಾರತದ ಸ್ವತಂತ್ರ ಹೋರಾಟಗಾರರು.

17. ಭಾರತವನ್ನು ಆಳಿದ ರಾಜಮನೆತನಗಳು.

18. ಕರ್ನಾಟಕ ಆಳಿದ ರಾಜಮನೆತನಗಳು-ರಾಜರು.

19. ಭಾರತದ ಪ್ರಸಿದ್ಧ ಸ್ಮಾರಕಗಳ ಹೆಸರು ಮತ್ತು ಅವುಗಳ ನಿರ್ಮಾಪಕರು.

20. ನಿಮ್ಮ ಜಿಲ್ಲೆ, ಕರ್ನಾಟಕ, ಭಾರತ, ಏಷ್ಯಾ ಮತ್ತು ವಿಶ್ವ ನಕಾಶೆ ಬಿಡಿಸಿ ಪ್ರಮುಖ ಸ್ಥಳಗನ್ನು ಗುರುತಿಸುವುದು.

21. ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ.

22. ಭಾರತದ ರಾಷ್ಟ್ರಪತಿಗಳ ಪಟ್ಟಿ.

23. ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ.

24. ಕರ್ನಾಟಕದ ರಾಜ್ಯಪಾಲರ ಪಟ್ಟಿ.

25. ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಮತ್ತು ಉಗಮ ಸ್ಥಳಗಳು.

26. ಪೂರ್ವಾಭಿಮುಖವಾಗಿ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು.

27. ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು ಮತ್ತು ಉಗಮ ಸ್ಥಳಗಳು.

28. ನಿಮ್ಮ ಆದರ್ಶ ವ್ಯಕ್ತಿ ಯಾರು? ಅವರ ಕುರಿತು ಮಾಹಿತಿ ಸಂಗ್ರಹಣೆ.

29. ಕರ್ನಾಟಕದ ಜಿಲ್ಲೆಗಳ ವಿಶೇಷ ಹೆಸರುಗಳು 

30. ಕೃಷಿ ಸಂಬಂಧಿತ ಸಂಶೋಧನಾ ಸಂಸ್ಥೆಗಳು 

31. ಭಾರತದ ನೋಟುಗಳ ವಿಶೇಷತೆ 

32. ಕರ್ನಾಟಕದ ಏಳು ಅದ್ಭುತಗಳು.

33. ಪ್ರಮುಖ ರಾಜಕೀಯ ಹುದ್ದೆಗಳ ಆಯ್ಕೆಗೆ ಬೇಕಾದ ಕನಿಷ್ಠ ವಯಸ್ಸು. 

34. ಪ್ರಮುಖ ಅಕ್ಷಾಂಶ ಮತ್ತು ರೇಖಾಂಶಗಳು.

35. ಸಂವಿಧಾನದ ಬಗ್ಗೆ ರಸಪ್ರಶ್ನೆ.

36. ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು.

37. ಗಣರಾಜ್ಯೋತ್ಸವದ ಬಗ್ಗೆ ರಸಪ್ರಶ್ನೆ

38. ನಮ್ಮ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ. 

39. ವಿಶ್ವದ ಏಳು ಅದ್ಭುತಗಳು. 

40. 350+ ಸಾಮಾನ್ಯ ಜ್ಞಾನದ ಪ್ರಶ್ನೆಗಳು

41. ವಿಶ್ವದ ಪ್ರಮುಖ ಪಿತಾಮಹರು

42. ರಾಷ್ಟ್ರೀಯ & ಅಂತಾರಾಷ್ಟ್ರೀಯ ಪ್ರಮುಖ ದಿನಗಳು 

ಇನ್ನು ಹೆಚ್ಚಿನ Update ಗಾಗಿ ಮತ್ತೇ ಭೇಟಿ ನೀಡಿ. 

ಶೈಕ್ಷಣಿಕ ಮಾರ್ಗದರ್ಶಿ 2023-24 (PDF)

annual-guidelines-for-academic-activities-2023-24
           2023-24ನೇ ಸಾಲಿನ ಶೈಕ್ಷಣಿಕ ಪ್ರಗತಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಪ್ರಸ್ತುತ 2023-24 ಶೈಕ್ಷಣಿಕ ಚಟುವಟಿಕೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸಿರುವುದರ ಜೊತೆಗೆ ವಾರ್ಷಿಕ ಪಠ್ಯವಸ್ತು ಬೋಧನೆ, ಪತ್ಯೇತರ ಚಟುವಟಿಕೆಗಳು, ಮೌಲ್ಯಾಂಕನ ಕೈಗೊಳ್ಳಲು ಅನುವಾಗುವಂತೆ ಕೆಳಕಂಡ ಶೈಕ್ಷಣಿಕ ವಾರ್ಷಿಕ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ತಯಾರಿಸಿದೆ.
ಶಾಲಾ ಕರ್ತವ್ಯದ ದಿನಗಳು

ಮೊದಲನೇ ಅವಧಿ : ದಿನಾಂಕ 29-05-2023 ರಿಂದ ದಿನಾಂಕ 07-10- 2023ರವರೆಗೆ.

ಎರಡನೇ ಅವಧಿ : ದಿನಾಂಕ 25-10-2023ರಿಂದ ದಿನಾಂಕ 10-04- 2024ರವರೆಗೆ.

ರಜಾ ದಿನಗಳು

ದಸರಾ ರಜೆ : ದಿನಾಂಕ 08-10-2023ರಿಂದ ದಿನಾಂಕ 24-10-203ರವರೆಗೆ.

ಬೇಸಿಗೆ ರಜೆ : ದಿನಾಂಕ 11-04-2024ರಿಂದ ದಿನಾಂಕ 28-05-2024ರವರೆಗೆ.
2023-24 school working days

  • 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯ ಘೋಷ್ವಾರೆ. 
  • ಶೇಕಡಾವಾರು ಮಾಹೆವಾರು / ವಾರ್ಷಿಕ ಪಾಠ ಹಂಚಿಕೆ ಘೋಷ್ವಾರೆ.
    Annual lesson allocation

  • 2023-24 ನೇ ಸಾಲಿನ ಮಾಹೆವಾರು ಶೈಕ್ಷಣಿಕ ಕಾರ್ಯಕ್ರಮಗಳ / ಚಟುವಟಿಕೆಗಳ ಕಾರ್ಯಸೂಚಿ.
  • 2023-24ನೇ ಸಾಲಿಗೆ ರಾಜ್ಯ ಪಠ್ಯಕ್ರಮದ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾ ಪಟ್ಟಿ.
    Advisory time table

  • ಚಟುವಟಿಕೆ ಬ್ಯಾಂಕ್‌.
    Activity Bank

  • 2023-24 ನೇ ಸಾಲಿನ ಶೈಕ್ಷಣಿಕ ಕಾರ್ಯಸೂಚಿ ತರಗತಿವಾರು / ವಿಷಯವಾರು ಬೋಧನೆ,ಕಲಿಕೆ ಮತ್ತು ಸಿ.ಸಿ.ಇ. ಚಟುವಟಿಕೆಗಳ ನಿರ್ವಹಣೆಗೆ ಅಂದಾಜು ಬೋಧನಾ ಅವಧಿಗಳು ಮತ್ತು ಅಗತ್ಯವಿರುವ ಶಾಲಾ ಕರ್ತವ್ಯದ ದಿನಗಳು.

2023-24 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಮಾರ್ಗಸೂಚಿ

Download ನವೋದಯ ವಿದ್ಯಾಲಯ 6th ಹಾಲ್ ಟಿಕೆಟ್ / JNV Admit Card-2023.

download-jnv-hall-ticket-2023

      ಜವಾಹರ್ ನವೋದಯ ವಿದ್ಯಾಲಯ ಸಮಿತಿ ನಡೆಸುವ 2023-24 ಶೈಕ್ಷಣಿಕ ವರ್ಷದ, 6 ನೇ ತರಗತಿ ಪರೀಕ್ಷೆ 29-04-2023 ರ ಶನಿವಾರದಂದು ನಡೆಯಲಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ದಿನಾಂಕ 03-04-2023 ರಿಂದ https://navodaya.gov.in/nvs/en/Home1 ಅಥವಾ  cbseitms.rcil.gov.in ವೆಬ್‌ಸೈಟ್ ಮೂಲಕ ಡೌನ್ಲೋಡ್ ಮಾಡಬಹುದು. 

ವಿದ್ಯಾರ್ಥಿಯ Registration Number ಮತ್ತು Date Of Birth ನಮೂದಿಸಿ ಹಾಲ್ ಟಿಕೆಟ್ ಅನ್ನು ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ.



Popular Post