States and Union Territories of India | ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಶ್ರೀ ನಾಡಪ್ರಭು ಕೆಂಪೇಗೌಡರ ಕುರಿತು ರಸಪ್ರಶ್ನೆ
Q ➤ 1. 1ನೇ ಕೆಂಪೇಗೌಡ ಯಾವ ರಾಜ ವಂಶಸ್ಥಕ್ಕೆ ಸೇರಿದ ರಾಜ?Ans ➤ ಯಲಹಂಕ ನಾಡಪ್ರಭುಗಳು
Q ➤ 2. ಹಿರಿಯ ಕೆಂಪೇಗೌಡ ಯಾವಾಗ ಜನಿಸಿದರು?Ans ➤ 1510 ಜೂನ್ 27
Q ➤ 3. ಕೆಂಪೇಗೌಡರ ತಂದೆಯ ಹೆಸರೇನು? Ans ➤ ಕೆಂಪನಂಜೇಗೌಡ
Q ➤ 4. ಕೆಂಪೇಗೌಡರ ತಾಯಿಯ ಹೆಸರೇನು? Ans ➤ ಲಿಂಗಮಾಂಬೆ
Q ➤ 5. ಕೆಂಪೇಗೌಡರ ಕುಲಗುರುಗಳು ಯಾರು? Ans ➤ ಮಾಧವಭಟ್ಟರು
Q ➤ 6. ಕೆಂಪೇಗೌಡರ ಧರ್ಮಪತ್ನಿಯ ಹೆಸರೇನು?Ans ➤ ಚೆನ್ನಮಾಂಬೆ.
Q ➤ 7. ಕೆಂಪೇಗೌಡರು ಕಟ್ಟಿಸಿದ ಪ್ರಸಿದ್ದ ನಗರದ ಹೆಸರೇನು? Ans ➤ ಬೆಂಗಳೂರು.
Q ➤ 8. ಬೆಂಗಳೂರು ನಗರವನ್ನು ಯಾವ ವರ್ಷದಲ್ಲಿ ಕಟ್ಟಿಸಿದರು?Ans ➤ ಸಾ.ಶ 1537
Q ➤ 9. ಕೆಂಪೇಗೌಡ ನ ಯಾವ ಸಾಮ್ರಾಜ್ಯದ ಸಾಮಂತ ದೊರೆಯಾಗಿದ್ದರು?Ans ➤ ವಿಜಯನಗರ ಸಾಮ್ರಾಜ್ಯದ ಅರಸರು.
Q ➤ 10. ಬೆಂಗಳೂರು ನಗರ ಎಷ್ಟನೇ ಶತಮಾನದಲ್ಲಿ ನಿರ್ಮಿಸಲಾಯಿತು?Ans ➤ 16 ನೇ ಶತಮಾನ.
Q ➤ 11. ಯಾರ ನೆನಪಿಗಾಗಿ ಬೆಂಗಳೂರು ನಗರವನ್ನು ನಿರ್ಮಿಸಲಾಯಿತು?Ans ➤ ಕೆಂಪಾಂಬೆ ಮತ್ತು ಚೆನ್ನಮಾಂಬೆಯ ನೆನಪಿಗಾಗಿ.
Q ➤ 12. ವಿಜಯ ದಶಮಿಯ ಮಲ್ಲಯುದ್ದದಲ್ಲಿ ಕೆಂಪೇಗೌಡರು ಸೋಲಿಸಿದ ಜಟ್ಟಿಯ ಹೆಸರೇನು?Ans ➤ ರಣದುಲ್ಲಾಖಾನ
Q ➤ 13. ರಣದುಲ್ಲಾಖಾನ ಯಾವ ಸುಲ್ತಾನರ ಸಾಮ್ರಾಜ್ಯಕ್ಕೆ ಸೇರಿದವನು?Ans ➤ ಬಹುಮನಿ ಸುಲ್ತಾನರು.
Q ➤ 14. ಅರ್ಕಾವತಿ ನದಿಯ ಉಗಮತಾಣ ಯಾವುದು?Ans ➤ ನಂದಿಬೆಟ್ಟ
Q ➤ 15. ಬೆಂಗಳೂರು ನಗರಕ್ಕೆ ಇರುವ ಮುಖ್ಯದ್ವಾರಗಳು ಎಷ್ಟು?Ans ➤ 4 (ನಾಲ್ಕು)
Q ➤ 16. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಪೂರ್ವದ ಮುಖ್ಯದ್ವಾರ ಯಾವುದು?:Ans ➤ ಹಲಸೂರು ದ್ವಾರ
Q ➤ 17. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಪಶ್ಚಿಮದ ಮುಖ್ಯದ್ವಾರ ಯಾವುದು?Ans ➤ ಸೊಂಡೆಕೊಪ್ಪ
Q ➤ 18. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಉತ್ತರದ ಮುಖ್ಯದ್ವಾರ ಯಾವುದು?Ans ➤ ಯಲಹಂಕ ದ್ವಾರ
Q ➤ 19.ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ದಕ್ಷಿಣದ ಮುಖ್ಯದ್ವಾರ ಯಾವುದು?Ans ➤ ಆನೇಕಲ್ ದ್ವಾರ.
Q ➤ 20. ಬೆಂಗಳೂರು ನಗರದ ಕೋಟೆ ನಿರ್ಮಾಣಕ್ಕೆ ತನ್ನ ಪ್ರಾಣವನ್ನೆ ಬಲಿ ಕೊಟ್ಟ ನಾಡಪ್ರಭುಗಳ ಸೊಸೆಯ ಹೆಸರೇನು?Ans ➤ ಲಕ್ಷ್ಮೀದೇವಿ.
Q ➤ 21. ಕೆಂಪೇಗೌಡ ನಿರ್ಮಿಸಿದ ಒಟ್ಟು ಕೋಟೆಗಳು ಎಷ್ಟು?Ans ➤ 64
Q ➤ 22. ಸಾ.ಶ 1537 ರಲ್ಲಿ ಕಟ್ಟಿಸಿದ ಬೆಂಗಳೂರು ಕೋಟೆಯು ಯಾವುದರಿಂದ ನಿರ್ಮಾಣಗೊಂಡಿತ್ತು?Ans ➤ ಮಣ್ಣಿನಿಂದ.
Q ➤ 23. "ಯಲಹಂಕದ ನಾಡಪ್ರಭುಗಳು" ಎಂಬ ಬಿರದನ್ನು ನೀಡಿದವರು ಯಾರು?Ans ➤ ವಿಜಯನಗರದ ಅರಸರು..
Q ➤ 24. ಬೆಂಗಳೂರು ನಿರ್ಮಾಣ ಮಾಡಲು ಕೆಂಪೇಗೌಡರಿಗೆ ಸಹಾಯ ಮಾಡಿದ ವಿಜಯನಗರದ ಅರಸ ಯಾರು?Ans ➤ ಅಚ್ಯುತರಾಯ.
Q ➤ 25. ಕೆಂಪೇಗೌಡ ತನ್ನ ಆಡಳಿತದ ಅನುಕೂಲಕ್ಕಾಗಿ ಟಂಕಿಸಿದ ನಾಣ್ಯದ ಹೆಸರೇನು?Ans ➤ ಭೈರವ ನಾಣ್ಯ
Q ➤ 26. ಕಂಪೇಗೌಡರನ್ನು ಭೈರವ ನಾಣ್ಯ ಟಂಕಿಸಿದ್ದಾಕ್ಕಾಗಿ ಯಾವ ಜೈಲಿನಲ್ಲಿ ಬಂಧಿಸಿಡಲಾಯಿತು?Ans ➤ ಆನೆಗೊಂದಿ ಜೈಲು.
Q ➤ 27. ಕೆಂಪೇಗೌಡರ ನಿಧನಗೊಂಡಿದ್ದು ಯಾವಾಗ?Ans ➤ ಸಾ.ಶ 1565
Q ➤ 28. ಕೆಂಪೇಗೌಡರ ಸಮಾಧಿ ಸ್ಥಳ ಎಲ್ಲಿದೆ?Ans ➤ ಮಾಗಡಿ ತಾಲ್ಲೂಕಿನ ಕೆಂಪಾಪೂರ.
Q ➤ 29. ಇತ್ತೀಚಿಗೆ ಸ್ಥಾಪಿಸಿದ ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯ ಹೇಸರೇನು?Ans ➤ ಪ್ರಗತಿಯ ಪ್ರತಿಮೆ / ಸಮೃದ್ಧಿಯ ಪ್ರತಿಮೆ
Q ➤ 30.ಕೆಂಪೇಗೌಡರ ಕಾಲಾವಧಿಯಲ್ಲಿ ತೊಲಗಿಸಿದ ಸಂಪ್ರದಾಯ ಸಮಾಜದ ಅನಿಷ್ಟ ಪದ್ಧತಿ ಯಾವುದು?.Ans ➤ ಬಂಡಿದೇವರು ( ಅವಿವಾಹಿತ ಮಹಿಳೆಯ ಎಡಗೈ ಎರಡು ಬೆರಳು ಕತ್ತರಿಸುವ ಪದ್ಧತಿ)
Q ➤ 31. ಕೆಡಂಪೇಗೌಡರ ಆರಾಧ್ಯ ಧೈವ ಯಾವುದು?Ans ➤ ಕಾಲಬೈರವ.
Q ➤ 32. ಕೆಂಪೇಗೌಡರು ರಚಿಸಿದ ಕೃತಿ ಯಾವುದು?Ans ➤ “ಗಂಗಾಗೌರಿ ಸಲ್ಲಪಮು"
Q ➤ 33. ಕೆಂಪೇಗೌಡರು ರಚಿಸಿದ ಕೃತಿ ಯಾವ ಭಾಷೆಯಲ್ಲಿದೆ?Ans ➤ ತೆಲುಗು ಭಾಷೆ
Q ➤ 34. ನಾಡಪ್ರಭು ಕೆಂಪೇಗೌಡರ 108 ಅಡಿ ಪುತ್ಥಳಿಯನ್ನು ಎಷ್ಟನೇ ಜಯಂತೋತ್ಸವದ ನೆನಪಿಗಾಗಿ ಸ್ಥಾಪಿಸಲಾಯಿತು?Ans ➤ 511ನೇ ವರ್ಷ
Q ➤ 35. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಯಾವ ತಾಲ್ಲೂಕಿನಲ್ಲಿದೆ?Ans ➤ ದೇವನಹಳ್ಳಿ
Q ➤ 36. ಬೆಂಗಳೂರು ಕಟ್ಟಿಸಿದ ದೊರೆ ಯಾರು?Ans ➤ ಒಂದನೇ ಕೆಂಪೇಗೌಡ
Q ➤ 37. ಕೆಂಪೇಗೌಡರು ಆಳ್ವಿಕೆ ಮಾಡಿದ್ದು ಎಷ್ಟನೇ ಶತಮಾನ ?Ans ➤ 16ನೇ ಶತಮಾನ
Q ➤ 38. ಮೊದಲನೆಯ ಕೆಂಪೇಗೌಡರು ಯಾವ ಸಾಮ್ರಾಜ್ಯದ ಸಾಮಂತ ಅರಸರಾಗಿದ್ದರು?Ans ➤ ವಿಜಯನಗರ ಅರಸರು
Q ➤ 39. ಕೆಂಪೇಗೌಡರ ಕುಲದೇವರು ಯಾರು?Ans ➤ ಕೆಂಪಮ್ಮ, ಭೈರವ
Q ➤ 40. ಕೆಂಪೇಗೌಡರ ಪಟ್ಟಾಭಿಷೇಕ ಯಾವಾಗ ಮಾಡಲಾಯಿತು?Ans ➤ ಸಾ.ಶ 1528
Q ➤ 41. ಕೆಂಪೇಗೌಡರು ಕೆಂಪಮ್ಮನ ಹೆಸರಿನಲ್ಲಿ ಕಟ್ಟಿಸಿದ ಕೆರೆಯ ಹೆಸರೇನು?Ans ➤ ಕೆಂಪಾಂಬುದಿ ಕೆರೆ
Q ➤ 42. ಕೆಂಪೇಗೌಡರಿಗೆ ಶಿಕ್ಷಣ ನೀಡಿದ ಗುರುಗಳ ಹೆಸರೇನು? Ans ➤ ಮಾಧವ ಭಟ್ಟರು
Q ➤ 43.ಕೆಂಪೇಗೌಡರು ಮದ್ದುಗುಂಡಿನ ಕಾರ್ಖಾನೆ ಸ್ಥಾಪಿಸಿದ ಸ್ಥಳ ಯಾವುದು?Ans ➤ ರಾಮಗಿರಿ
Q ➤ 44. ಕೆಂಪೇಗೌಡ ಯಾವ ದೇವರ ಆರಾಧಕರಾಗಿದ್ದರುAns ➤ ಕಾಲಭೈರವೇಶ್ವರ.
Q ➤ 45. ತಾಳಿಕೋಟಿ ಕದನದಲ್ಲಿ ಭಾಗವಹಿಸಲು ಕೆಂಪೇಗೌಡರು 2000 ಸೈನಿಕರೊಂದಿಗೆ ಯಾರನ್ನು ಕಳುಹಿಸಿಕೊಟ್ಟರು?Ans ➤ ಮಗ ಸೋಮಯ್ಯ
Q ➤ 46. ಇತ್ತೀಚಿಗೆ ಯಾವ ವರ್ಷ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.Ans ➤ ಸಪ್ಟೆಂಬರ್ 22ರ 2022
Q ➤ 47.ಇತ್ತೀಚಿಗೆ ಅನಾವರಣಗೊಳಿಸಿದ ಕೆಂಪೇಗೌಡರ ಪ್ರತಿಮೆ ಯಾವ ಲೋಹದಿಂದ ಮಾಡಲಾಗಿದೆ?Ans ➤ ಕಂಚು ಮತ್ತು ಉಕ್ಕು
Q ➤ 48. ಕೆಂಪೇಗೌಡರ ಪ್ರತಿಮೆಯ ಎತ್ತರ ಎಷ್ಟು?Ans ➤ 108 ಅಡಿ
Q ➤ 49. ಕೆಂಪೇಗೌಡ ಪ್ರತಿಮೆಯ ನಿರ್ಮಾಣಕ್ಕೆ ಖರ್ಚಾದ ಹಣವೆಷ್ಟು?Ans ➤ 84 ಕೋಟಿ
Q ➤ 50.ಕೆಂಪೇಗೌಡರ ಪ್ರತಿಮೆಯಲ್ಲಿರುವ ಖಡ್ಗದ ಒಟ್ಟು ತೂಕವೆಷ್ಟು?Ans ➤ 4000 ಕೆ.ಜಿ
Q ➤ 51. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?Ans ➤ ಬೆಂಗಳೂರಿನ ದೇವನಹಳ್ಳಿ.ಯ
Q ➤ 52. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹೆಸರೇನು? Ans ➤ ದೇವನಹಳ್ಳಿ ವಿಮಾನ ನಿಲ್ದಾಣ
Q ➤ 53. ಕೆಂಪೇಗೌಡರು ಯಾವಾಗ ತಂದೆಯಿಂದ ಅಧಿಕಾರ ಪಡೆದು ರಾಜ್ಯಭಾರ ಆರಂಭಿಸಿದರು?Ans ➤ ಸಾ.ಶ 1531
Q ➤ 54.ಕೆಂಪೇಗೌಡರ ಆಡಳಿತದ ಅವಧಿಯಲ್ಲಿಯ ಎಷ್ಟು ಶಾಸನಗಳು ಇಲ್ಲಿಯವರೆಗೆ ದೊರೆತಿವೆ?Ans ➤ 24
Q ➤ 55. ವಿಜಯನಗರ ಅರಸ ಅಚ್ಯುತರಾಯ ಕೆಂಪೇಗೌಡರಿಗೆ ಎಷ್ಟು ಹೋಬಳಿಗಳನ್ನು ಉಡುಗೊರೆಯಾಗಿ ನೀಡಿದನು? Ans ➤ 12 ಹೋಬಳಿಗಳು.
Q ➤ 56. ಬೆಂಗಳೂರು ನಗರ ನಿರ್ಮಾಣಕ್ಕೆ ಕೆಂಪೇಗೌಡರಿಗೆ ಸ್ಪೂರ್ತಿಯಾದ ಸ್ಥಳ ಯಾವುದು? Ans ➤ ವಿಜಯನಗರದ ಹಂಪಿ
Q ➤ 57. ಕೆಂಪೇಗೌಡರು ಯಾವ ಮನೆತನಕ್ಕೆ ಸೇರಿದವರು?Ans ➤ ಯಲಹಂಕ ನಾಡಪ್ರಭುಗಳು
Q ➤ 58. ಕೆಂಪೇಗೌಡರ ಪೂರ್ವಜರು ಯಾವುದನ್ನು ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ಮಾಡುತ್ತಿದ್ದರು?Ans ➤ ಯಲಹಂಕ
Q ➤ 59.ಬೆಂಗಳೂರನ್ನು ಕೆಂಪೇಗೌಡರು ನಿರ್ಮಿಸಿದ ವರ್ಷ ಯಾವುದು?Ans ➤ ಸಾ.ಶ 1537
Q ➤ 60. ಕೆಂಪೇಗೌಡರು ಬೆಂಗಳೂರು ಸುತ್ತಲೂ ನಿರ್ಮಿಸಿದ ದ್ವಾರಗಳು ಎಷ್ಟು?.Ans ➤ ಮುಖ್ಯ ದ್ವಾರಗಳು ನಾಲ್ಕು ಉಪದ್ವಾರಗಳು ಐದು
Q ➤ 61. ಕೆಂಪೇಗೌಡರು ಬೆಂಗಳೂರಿನಲ್ಲಿ ನಿರ್ಮಿಸಿದ ಒಟ್ಟು ಪೇಟೆಗಳ ಸಂಖ್ಯೆ ಎಷ್ಟು?Ans ➤ 64 ಪೇಟೆಗಳು
Q ➤ 62. ಕೆಂಪೇಗೌಡರನ್ನು ಯಾವ ನಗರದ ನಿರ್ಮಾತೃ ಎಂದು ಕರೆಯುತ್ತಾರೆ ?Ans ➤ ಬೆಂಗಳೂರು ನಗರ
Q ➤ 63.ಬೆಂಗಳೂರಿನ ಹಳೆಯ ಅಥವಾ ಪ್ರಾಚೀನ ಹೆಸರೇನು?Ans ➤ ಬೆಂದಕಾಳೂರು
Q ➤ 64. ಕೆಂಪೇಗೌಡ ಎಲ್ಲಿ ಜನಿಸಿದರು ?Ans ➤ ಯಲಹಂಕ
Q ➤ 65. ಕೆಂಪೇಗೌಡರ ಸೊಸೆಯ ಹೆಸರೇನು?Ans ➤ ಲಕ್ಷ್ಮೀದೇವಿ
Q ➤ 66. ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳನ್ನು ಪೂರೈಸಲು ಸುಮಾರು ಎಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಿದರು?Ans ➤ ಒಂದು ಸಾವಿರ ಕೆರೆಗಳು
Q ➤ 67.ಕೆಂಪೇಗೌಡ ಯಾವಾಗ ನಿಧನರಾದರು?Ans ➤ ಸಾ. ಶ 1569
Q ➤ 68. ಯಾವ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಡಲಾಗಿದೆ ?Ans ➤ ಬೆಂಗಳೂರು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ
Q ➤ 69. ಕೆಂಪೇಗೌಡರ ಪ್ರತಿಮೆಯನ್ನು ಇತ್ತೀಚಿಗೆ ಎಲ್ಲಿ ಅನಾವರಣಗೊಳಿಸಲಾಯಿತು?Ans ➤ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ
Q ➤ 70. ಇತ್ತೀಚಿಗೆ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಯಾರು?Ans ➤ ಶ್ರೀ ಮಾನ್ಯ ಬಸವರಾಜ ಬೊಮ್ಮಾಯಿ.
Q ➤ 71. ಇತ್ತೀಚಿಗೆ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದವರು ಯಾರು?Ans ➤ ರಾಮ್ ಸುತಾರ್ ಕ್ರಿಯೇಷನ್
Q ➤ 72. ಯಲಹಂಕ ನಾಡಪ್ರಭುಗಳಲ್ಲಿ ಪ್ರಸಿದ್ದ ರಾಜ ಯಾರು?Ans ➤ ಒಂದನೆಯ ಕೆಂಪೇಗೌಡ
Q ➤ 73. ಕೆಂಪೇಗೌಡ ಹೆಸರಿನ ಸಿನಿಮಾದಲ್ಲಿ ಪೋಲಿಸ್ ಅಧಿಕಾರಿ ಕೆಂಪೇಗೌಡನ ಪಾತ್ರದಲ್ಲಿ ನಟನೆ ಮಾಡಿದ ನಟ ಯಾರು?Ans ➤ ಸುದೀಪ
Q ➤ 74. ಕೆಂಪೇಗೌಡರು ಯಾವುದರ ಆಧಾರದ ಮೇಲೆ ಪೇಟೆಗಳನ್ನು ನಿರ್ಮಿಸಿದರು?Ans ➤ ಜನರ ವೃತ್ತಿಯ ಆಧಾರದ ಮೇಲೆ
ಶ್ರೀ ಮೊರಾರ್ಜಿ ದೇಸಾಯಿ ಭಾರತದ ಪ್ರಧಾನ ಮಂತ್ರಿ.
ಚಂದ್ರಯಾನ - 3 ರ ಕುರಿತು ರಸಪ್ರಶ್ನೆಯಲ್ಲಿ ಭಾಗವಹಿಸಿ ಹೆಮ್ಮೆ ಪಡಿ.
ನಮ್ಮ ಭಾರತ ದೇಶದ ಬಾಹ್ಯಾಕಾಶ ಸಂಸ್ಥೆಯಾದ ISRO ಚಂದ್ರಯಾನ - 3 ರನ್ನು ಚಂದ್ರನ ಮೇಲೆ ಇಳಿಸುವಲ್ಲಿ ಯಶಸ್ವಿಯಾಗಿದ್ದು; ಈಡಿ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಇದೆಲ್ಲದಕ್ಕೂ ಕಾರಣರಾದ ವಿಜ್ಞಾನಿಗಳಿಗೆ ಅನಂತಕೋಟಿ ಧನ್ಯವಾದಗಳನ್ನು ತಿಳಿಸುತ್ತ ಈ ಚಂದ್ರಯಾನ - 3 ರ ಕುರಿತು 40 ಪ್ರಶ್ನೆಗಳ ರಸಪ್ರಶ್ನೆ ಸಿದ್ಧಪಡಿಸಿದ್ದು ಎಲ್ಲರೂ ಭಾಗವಹಿಸಿ ಹೆಮ್ಮೆ ಪಡಿ.
ಚಂದ್ರಯಾನ - 3 ರ ರಸಪ್ರಶ್ನೆ
Please fill the above data!
Name : Apu
Roll : 9
Total Questions:
Correct: | Wrong:
Attempt: | Percentage:
ರಸಪ್ರಶ್ನೆಯಲ್ಲಿ ಭಾಗವಹಿಸಿದ ನಂತರ ರಸಪ್ತರಶ್ನೆ ಕುರಿತು ತಮ್ಮ ಅಭಿಪ್ರಾಯಗಳನ್ನು ತಪ್ಪದೇ Comment ಮಾಡಿ...
.jpg)
