ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 3 ಪ್ರಾಚೀನ ಭಾರತದ ನಾಗರಿಕತೆಗಳು (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 3 MCQs ಕನ್ನಡದಲ್ಲಿಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ 

​NMMS Class 8 Social Science MCQs – ಕನ್ನಡ ಮಾಧ್ಯಮ (ಅಧ್ಯಾಯವಾರು)

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ,
NMMS ಪರೀಕ್ಷೆಗೆ ತಯಾರಿ ನಡೆಸುತ್ತಿರುವ 8ನೇ ತರಗತಿ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 2 ಭರತವರ್ಷ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 2 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 1 ಆಧಾರಗಳು (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 1 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-27: ಜೀವಗೋಳ (MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 27 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS ಪರೀಕ್ಷೆ 2025-26: ಗಣಿತ - 20 ಪ್ರಮುಖ ಪ್ರಶ್ನೋತ್ತರಗಳು

NMMS 2025-26 ಗಣಿತ ಪ್ರಶ್ನೆಗಳು
ಆತ್ಮೀಯ ವಿದ್ಯಾರ್ಥಿಗಳೇ, NMMS ಪರೀಕ್ಷೆಯ SAT ವಿಭಾಗದಲ್ಲಿ ಗಣಿತ ವಿಷಯವು ಅತಿ ಮುಖ್ಯವಾಗಿದೆ.

NMMS ಪರೀಕ್ಷೆ 2025-26: ವಿಜ್ಞಾನ - 35 ಪ್ರಮುಖ ಪ್ರಶ್ನೋತ್ತರಗಳು

NMMS Science 35 Important Questions 2025-26
ಆತ್ಮೀಯ ವಿದ್ಯಾರ್ಥಿಗಳೇ, NMMS ಪರೀಕ್ಷೆಯ SAT ವಿಭಾಗದಲ್ಲಿ ವಿಜ್ಞಾನ ವಿಷಯವು

NMMS ಪರೀಕ್ಷೆ 2025-26: ಸಮಾಜ ವಿಜ್ಞಾನ - 35 ಪ್ರಮುಖ ಪ್ರಶ್ನೋತ್ತರಗಳು

NMMS Social Science 35 Questions Kannada

ಆತ್ಮೀಯ ವಿದ್ಯಾರ್ಥಿಗಳೇ, NMMS ಪರೀಕ್ಷೆಯ SAT ವಿಭಾಗದಲ್ಲಿ ಸಮಾಜ ವಿಜ್ಞಾನ ವಿಷಯವು

States and Union Territories of India | ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

          ಭಾರತದಲ್ಲಿ ಪ್ರಸ್ತುತ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ,

ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಪರಿಣಾಮಕಾರಿ ಅನುಷ್ಠಾನ | Kalika Habba 2025-26

Cluster FLN Kalika Habba 2025-26

ಕ್ಲಸ್ಟರ್ ಮಟ್ಟದ FLN  ಕಲಿಕಾ ಹಬ್ಬ ಪರಿಣಾಮಕಾರಿ ಅನುಷ್ಠಾನ | Kalika Habba 2025-26

ಪೋಷಕ-ಶಿಕ್ಷಕರ ಮಹಾಸಭೆ (PTM)ಯ ಚಟುವಟಿಕೆಗಳ ಸಂಪೂರ್ಣ ಮಾಹಿತಿ.

 ಪೋಷಕ ಶಿಕ್ಷಕರ ಮಹಾಸಭೆ (Parent-Teacher Meet)ಯ ಚಟುವಟಿಕೆಗಳು

ಕನ್ನಡ - ಕರ್ನಾಟಕದ ಕುರಿತು ರಸಪ್ರಶ್ನೆಯಲ್ಲಿ ಭಾಗವಹಿಸಿ

               ಕನ್ನಡ ನಾಡು-ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಹಿರಿಮೆ-

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025)ಗೆ ಅರ್ಜಿ ಸಲ್ಲಿಸಿ

TET ಪರೀಕ್ಷೆಗೆ ಅರ್ಜಿ ಸಲ್ಲಿಸಿ 2025
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025)ಗೆ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗

 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗

NMMS ಪರೀಕ್ಷೆಗೆ ಅರ್ಜಿ ಸಲ್ಲಿಸಿ 2025-26

NMMS ಪರೀಕ್ಷೆಗೆ ಅರ್ಜಿ ಸಲ್ಲಿಸಿ 2025-26

@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ನಾವು ಓದಿ ತಿಳಿದು ಮಕ್ಕಳಿಗೆ ತಿಳಿಸಬೇಕಾದ ನಮ್ಮ ಪರಂಪರೆಯ ಪ್ರಮುಖ ಅಂಶಗಳು

   ನಮ್ಮ ಸಂಸ್ಕೃತಿ-ಪರಂಪರೆಯ ಪ್ರಮುಖ ಅಂಶಗಳನ್ನು ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿ ಕೊಳ್ಳೋಣ.

ನಾವು ಓದಿ ತಿಳಿದು ಮಕ್ಕಳಿಗೆ ತಿಳಿಸಬೇಕಾದ  ನಮ್ಮ ಪರಂಪರೆಯ ಪ್ರಮುಖ ಅಂಶಗಳು

ದಿಕ್ಕುಗಳು:-

1. ಪೂರ್ವ /ಮೂಡಣ

2. ದಕ್ಷಿಣ.  /ತೆಂಕಣ

3. ಪಶ್ಚಿಮ /ಪಡುವಣ

4. ಉತ್ತರ /ಬಡಗಣ


ಮೂಲೆಗಳು:-

1. ಆಗ್ನೇಯ 

2. ನೈರುತ್ಯ 

3. ವಾಯುವ್ಯ 

4. ಈಶಾನ್ಯ 


ವೇದಗಳು:-

1. ಋಗ್ವೇದ 

2. ಯಜುರ್ವೇದ 

3. ಸಾಮವೇದ 

4. ಅಥರ್ವಣ ವೇದ 


ಪುರುಷಾರ್ಥಗಳು:-

1. ಧರ್ಮ 

2. ಅರ್ಥ 

3. ಕಾಮ 

4. ಮೋಕ್ಷ 


ಪಂಚಭೂತಗಳು:-

1. ಗಾಳಿ 

2. ನೀರು 

3. ಭೂಮಿ 

4. ಆಕಾಶ 

5. ಅಗ್ನಿ 


ಪಂಚೇಂದ್ರಿಯಗಳು:-

1. ಕಣ್ಣು 

2. ಮೂಗು 

3. ಕಿವಿ 

4. ನಾಲಿಗೆ 

5. ಚರ್ಮ 


ಲಲಿತ ಕಲೆಗಳು:-

1. ಕವಿತ್ವ 

2. ಚಿತ್ರಲೇಖನ 

3. ನಾಟ್ಯ 

4. ಸಂಗೀತ 

5. ಶಿಲ್ಪ ಕಲೆ 


ಪಂಚಗಂಗೆಯರು:-

1. ಗಂಗಾ 

2. ಕೃಷ್ನಾ

3. ಗೋದಾವರಿ 

4. ಕಾವೇರಿ 

5. ತುಂಗಭದ್ರಾ 


ದೇವತಾ ವೃಕ್ಷಗಳು: -

1. ಮಂದಾರ 

2. ಪಾರಿಜಾತ 

3. ಕಲ್ಪವೃಕ್ಷ 

4. ಸಂತಾನ 

5. ಹರಿ ಚಂದನ 


ಪಂಚೋಪಚಾರಗಳು:-

1. ಸ್ನಾನ 

2. ಪೂಜೆ 

3. ನೈವೇದ್ಯ 

4. ಪ್ರದಕ್ಷಿಣೆ 

5. ನಮಸ್ಕಾರ 


ಪಂಚಾಮೃತಗಳು:-

1. ಹಸುವಿನ ಹಾಲು 

2. ಮೊಸರು 

3. ತುಪ್ಪ 

4. ಸಕ್ಕರೆ 

5. ಜೇನುತುಪ್ಪ 


ಪಂಚಲೋಹಗಳು:- 

1. ಚಿನ್ನ 

2. ಬೆಳ್ಳಿ 

3. ತಾಮ್ರ 

4. ಸೀಸ 

5. ತವರ 


ಪಂಚರಾಮರು:-

1. ಅಮರಾವತಿ 

2. ಭೀಮವರಂ 

3. ಪಾಲಕೊಲ್ಲು 

4. ಸಾಮರ್ಲಕೋಟ

5. ದ್ರಾಕ್ಷಾರಾಮಂ 


ಷಡ್ರುಚಿಗಳು:-

1. ಸಿಹಿ 

2. ಹುಳಿ 

3. ಕಹಿ 

4. ಒಗರು 

5. ಕಾರ 

6. ಉಪ್ಪು 


ಅರಿಷಡ್ವರ್ಗಗಳು:-

1. ಕಾಮ 

2. ಕ್ರೋಧ 

3. ಲೋಭ 

4. ಮೋಹ 

5. ಮದ

6. ಮತ್ಸರ 


ಋತುಗಳು:-

1. ವಸಂತ 

2. ಗ್ರೀಷ್ಮ 

3. ವರ್ಷ 

4. ಶರತ್ 

5. ಹೇಮಂತ 

6. ಶಿಶಿರ 


ಸಪ್ತ ಋಷಿಗಳು:-

1. ಕಾಶ್ಯಪ 

2. ಗೌತಮ 

3. ಅತ್ರಿ 

4. ವಿಶ್ವಾಮಿತ್ರ 

5. ಭಾರದ್ವಾಜ 

6. ವಸಿಷ್ಠ 

7. ⁠ಜಮದಗ್ನಿ 


ತಿರುಪತಿಯಲ್ಲಿನ ಸಪ್ತಗಿರಿಗಳು:- 

1. ಶೇಷಾದ್ರಿ 

2. ನೀಲಾದ್ರಿ 

3. ಗರುಡಾದ್ರಿ

4. ಅಂಜನಾದ್ರಿ 

5. ವೃಷಭಾದ್ರಿ

6. ನಾರಾಯಣದ್ರಿ 

7. ವೇಂಕಟಾದ್ರಿ 


ಸಪ್ತ ವ್ಯಸನಗಳು:-

1. ಜೂಜು 

2. ಮದ್ಯಪಾನ 

3. ಕಳ್ಳತನ 

4. ಬೇಟೆ 

5. ವ್ಯಭಿಚಾರ 

6. ದುಂದು ಖರ್ಚು 

7. ಕಠಿಣ ಮಾತು 


ಸಪ್ತ ನದಿಗಳು:-

1. ಗಂಗಾ 

2. ಯಮುನಾ 

3. ಸರಸ್ವತಿ 

4. ಗೋದಾವರಿ 

5. ಸಿಂಧು 

6. ನರ್ಮದಾ 

7. ಕಾವೇರಿ 


ನವ ಧಾನ್ಯಗಳು:- 

1. ಗೋಧಿ 

2. ಭತ್ತ/ನೆಲ್ಲು 

3. ಹೆಸರು 

4. ಕಡಲೆ 

5. ತೊಗರಿ 

6. ನವಣೆ 

7. ಉದ್ದು 

8. ಹುರಳಿ 

9. ಅಲಸಂದೆ 


ನವರತ್ನಗಳು:-

1. ಮುತ್ತು

2. ಹವಳ

3. ಗೋಮೇಧಿಕ

4. ವಜ್ರ 

5. ಕೆಂಪು 

6. ನೀಲಿ 

7. ಕನಕ ಪುಷ್ಯ ರಾಗ 

8. ಪಚ್ಚೆ/ಮರಕತ

9. ವೈಡೂರ್ಯ


ನವ ಧಾತುಗಳು:-

1. ಚಿನ್ನ

2. ಬೆಳ್ಳಿ 

3. ಹಿತ್ತಾಳೆ 

4. ತಾಮ್ರ 

5. ಕಬ್ಬಿಣ 

6. ಕಂಚು 

7. ಸೀಸ

8. ತವರ 

9. ಕಾಂತ ಲೋಹ


ನವರಸಗಳು:-

1. ಹಾಸ್ಯ 

2. ಶೃಂಗಾರ 

3. ಕರುಣ 

4. ಶಾಂತ 

5. ರೌದ್ರ 

6. ಭಯಾನಕ 

7. ಬೀಭತ್ಸ

8. ಅದ್ಭುತ 

9. ವೀರ 


ನವದುರ್ಗೆಯರು:-

1. ಶೈಲ ಪುತ್ರಿ 

2. ಬ್ರಹ್ಮಚಾರಿಣಿ

3. ಚಂದ್ರ ಘಂಟ 

4. ಕೂಷ್ಮಾಂಡ 

5. ಸ್ಕಂದ ಮಾತೆ 

6. ಕಾತ್ಯಾಯನಿ

7. ಕಾಳರಾತ್ರಿ 

8. ಮಹಾಗೌರಿ

9. ಸಿದ್ಧಿದಾತ್ರಿ


ದಶ ಸಂಸ್ಕಾರಗಳು:-

1. ವಿವಾಹ 

2. ಗರ್ಭದಾನ

3. ಪುಂಸವನ

4. ಸೀಮಂತ

5. ಜಾತಕ ಕರ್ಮ 

6. ನಾಮಕರಣ 

7. ಅನ್ನಪ್ರಾಶನ

8. ಚೂಡಕರ್ಮ

9. ಉಪನಯನ 

10. ಸಮವರ್ತನ 


ದಶಾವತಾರಗಳು - ಕ್ಷೇತ್ರಗಳು 

1. ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ. 

2. ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.

3. ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.

4. ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.

5. ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.

6. ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.

7. ಶ್ರೀರಾಮ ಕ್ಷೇತ್ರ -  ಅಯೋಧ್ಯ, ಉತ್ತರ ಪ್ರದೇಶ.

8. ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ. 

9. ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.

10. ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).


ಜ್ಯೋತಿರ್ಲಿಂಗಗಳು:-

1. ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ 

2. ಕಾಶಿ - ಕಾಶಿ ವಿಶ್ವೇಶ್ವರ 

3. ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ 

4. ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ. 

5. ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.

6. ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )

7. ತಮಿಳುನಾಡು - ರಾಮಲಿಂಗೇಶ್ವರ


ವಾರಗಳು:-

1. ಭಾನು 

2. ಸೋಮ 

3. ಮಂಗಳ 

4. ಬುಧ 

5. ಗುರು 

6. ಶುಕ್ರ 

7. ಶನಿ 


ಚಂದ್ರಮಾನ ತಿಂಗಳುಗಳು:-

1. ಚೈತ್ರ 

2. ವೈಶಾಖ 

3. ಜೇಷ್ಠ 

4. ಆಷಾಢ 

5. ಶ್ರಾವಣ 

6. ಭಾದ್ರಪದ 

7. ಆಶ್ವಯುಜ 

8. ಕಾರ್ತೀಕ 

9. ಮಾರ್ಗಶಿರ 

10. ಪುಷ್ಯ

11. ಮಾಘ

12. ಫಾಲ್ಗುಣ


ರಾಶಿಗಳು:-

1. ಮೇಷ 

2. ವೃಷಭ 

3. ಮಿಥುನ 

4. ಕರ್ಕಾಟಕ 

5. ಸಿಂಹ 

6. ಕನ್ಯಾ 

7. ತುಲಾ 

8. ವೃಶ್ಚಿಕ 

9. ಧನಸ್ಸು 

10. ಮಕರ 

11. ಕುಂಭ 

12. ಮೀನ


ತಿಥಿಗಳು: -

1. ಪಾಡ್ಯ 

2. ಬಿದಿಗೆ 

3. ತದಿಗೆ 

4. ಚೌತಿ 

5. ಪಂಚಮಿ 

6. ಷಷ್ಠಿ 

7. ಸಪ್ತಮಿ 

8. ಅಷ್ಟಮಿ 

9. ನವಮಿ 

10. ದಶಮಿ 

11. ಏಕಾದಶಿ 

12. ದ್ವಾದಶಿ 

13. ತ್ರಯೋದಶಿ 

14. ಚತುರ್ದಶಿ 

15. ಅಮಾವಾಸ್ಯೆ/ಹುಣ್ಣಿಮೆ


ನಕ್ಷತ್ರಗಳು:-

1. ಅಶ್ವಿನಿ 

2. ಭರಣಿ 

3. ಕೃತಿಕಾ 

4. ರೋಹಿಣಿ 

5. ಮೃಗಶಿರ 

6. ಆರುದ್ರ 

7. ಪುನರ್ವಸು 

8. ಪುಷ್ಯ 

9. ಆಶ್ಲೇಷ 

10. ಮಖ 

11. ಪುಬ್ಬಾ

12. ಉತ್ತರ 

13. ಹಸ್ತ 

14. ಚಿತ್ತಾ 

15. ಸ್ವಾತಿ 

16. ವಿಶಾಖ 

17. ಅನುರಾಧ 

18. ಜೇಷ್ಠ 

19. ಮೂಲ 

20. ಪೂರ್ವಾಷಾಢ 

21. ಉತ್ತರಾಷಾಢ 

22. ಶ್ರವಣ 

23. ಧನಿಷ್ಠ

24. ಶತಭಿಷಾ 

25. ಪೂರ್ವಾಭಾದ್ರ 

26. ಉತ್ತರಾಭಾದ್ರ 

27. ರೇವತಿ


ಮಾಹಿತಿ ಮೂಲ: ಅಂತರ್ಜಾಲ, ಸಾಮಾಜಿಕ ಮಾಧ್ಯಮ

FLN ಕ್ರಿಯಾ ಯೋಜನೆ | Action Plan PDF Download

            2025-26ನೇ ಸಾಲಿನ ಶೈಕ್ಷಣಿಕ ವರ್ಷದ 3 ರಿಂದ 10ನೇ ತರಗತಿಯ FLN (Foundational Literacy and Numeracy) ಕಲಿಕಾ ಫಲಗಳು ಅಥವಾ LAKSHYAS (ಕನ್ನಡದ 9 ಮತ್ತು ಗಣಿತದ 8 ಒಟ್ಟು 17ಕಲಿಕಾ ಫಲಗಳು)  ಗೆ ಸಂಬಂಧಿಸಿದಂತೆ ತಯಾರಿಸಿದ ಮಾದರಿ ಕ್ರಿಯಾ ಯೋಜನೆಯನ್ನು ವಿವೇಕ ಜ್ಯೋತಿ Blog & YouTube Channel ನಿಂದ ತಯಾರಿಸಲಾಗಿದೆ.
FLN ಕ್ರಿಯಾ ಯೋಜನೆ | Action Plan PDF Download

 Download FLN ಕಲಿಕಾ ಫಲಗಳು

ಕ್ರಿಯಾ ಯೋಜನೆ PDF ಡೌನ್ಲೋಡ್ ಮಾಡಿ ಮಾದರಿಯಾಗಿ ಬಳಸಿ...

 
Scan below QR code and Pay you get a PDF.
  • Water Mark ಇಲ್ಲದ PDF ಗೆ Rs 100
  • Water Mark ಇರುವ PDF ಗೆ Rs 200

ಮರುಸಿಂಚನ‌ ಸಾಹಿತ್ಯ | Download Marusinchana Material

ಮರುಸಿಂಚನ‌ ಸಾಹಿತ್ಯ | Download Marusinchana Material

ಮರುಸಿಂಚನ ಕಾರ್ಯಕ್ರಮವು 2023-2024, 2024-2025 ಮತ್ತು 2025-26ರ

ಶಾಲಾ ಸಂಸತ್ತು ರಚನೆ, ಉದ್ದೇಶ ಮತ್ತು ಅವಶ್ಯ ನಮೂನೆಗಳ PDF

ಶಾಲಾ ಸಂಸತ್ತು ರಚನೆ, ಉದ್ದೇಶ, ಪ್ರಯೋಜನಗಳು, ಶಾಲೆಯ ಪಾತ್ರ ಮತ್ತು ಅವಶ್ಯ  ನಮೂನೆಗಳ PDF.
      "ಇಂದಿನ ಮಕ್ಕಳೇ ಇಂದಿನ ಮತ್ತು ಮುಂದಿನ ನಾಯಕರು"; (ಇಂದಿನ ಮಕ್ಕಳು ಇಂದಿನ ಪ್ರಜೆಗಳು) ಇಂದು ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಇದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಂಸತ್ ಎಂಬುದು ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸಲು ಅನುಕೂಲವಾಗುತ್ತದೆ.
ಶಾಲಾ ಸಂಸತ್ತು ರಚನೆ, ಉದ್ದೇಶ ಮತ್ತು ಅವಶ್ಯ ನಮೂನೆಗಳ PDF
    ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡಾ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ. 

ಶಾಲಾ ಸಂಸತ್ತು ಚುನಾವಣೆಗೆ ಅವಶ್ಯವಿರುವ ನಮೂನೆಗಳು ಅಥವಾ ದಸ್ತಾವೇಜುಗಳು.

ಸೂಚನೆ: ನಮೂನೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ Download ಮಾಡಿ ಮಾದರಿಯಾಗಿ ಬಳಸಿ.

1. ಶಾಲಾ ಸಂಸತ್ತು ಚುನಾವಣಾ ಅಧಿಸೂಚನೆ.

2. ರಜಿಸ್ಟರ್ 17A

3. ಬ್ಯಾಲೆಟ್ ಪೇಪರ್ 

4. ಪಿ. ಆರ್. ಓ ಡೈರಿ (PRO Dairy)

5. Voter Slips

6. ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ ನಮೂನೆ.

7. ಗಂಡು ಹೆಣ್ಣು ನಮೂದು ವಹಿ.

8. ಅಭ್ಯರ್ಥಿಗಳ ನಾಮಪತ್ರ ನಮೂನೆ.

9. ಪ್ರಮಾಣವಚನ.

10. ಮತದಾರರ ಪಟ್ಟಿ.
11. ಚುನಾಯಿತ ಅಭ್ಯರ್ಥಿಗಳ ಪಟ್ಟಿ.

12. ಶಾಲಾ ಸಂಸತ್ತು ಮಂತ್ರಿಗಳ ಪಟ್ಟಿ.


ಶಾಲಾ ಸಂಸತ್ತು ಚುನಾವಣೆ ವಿಡಿಯೋ


ಮಕ್ಕಳ ಶಾಲಾ ಸಂಸತ್ತು: 
ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‌ನಲ್ಲಿ ಮಕ್ಕಳೇ ಸಂಪೂರ್ಣ ಭಾಗೀದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆ. ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಮೌಲ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಸಂಸತ್ ಹೆಚ್ಚು ಮಹತ್ವ ಪಡೆದಿದೆ. 

ಶಾಲಾ  ಸಂಸತ್‌ನ ಉದ್ದೇಶಗಳು: 

  • ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು.
  • ಜವಬ್ದಾರಿಯುತ ನಾಗರಿಕರಾಗಲು ತರಬೇತು ನೀಡುವುದು.
  • ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ತೆಗೆದುಕೊಳ್ಳುವುದು.
  • ಶಾಲೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ ಮತ್ತು ಕಾರ್ಯಕ್ರಮಗಳಿಗೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವುದು.
  • ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು.
  • ಮಕ್ಕಳ ಸಮಸ್ಯೆಗಳ ಚರ್ಚೆಗೆ ಸೂಕ್ತ ವೇದಿಕೆ ನಿರ್ಮಿಸುವುದು. 
  • ಶಾಲಾ ಆಡಳಿತದಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ಅವಕಾಶ ನೀಡುವುದು.
  • ಚುನಾವಣೆಯ ಪ್ರಕ್ರಿಯೆಯನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸುವುದು.
  • ಶಾಲೆ ಮತ್ತು ಸಮುದಾಯದ ನಡುವಿನ ಸೂಕ್ತ ಪ್ರಾತಿನಿಧ್ಯವನ್ನು ಸಕ್ರಿಯಗೊಳಿಸುವುದು.
  • ಮಕ್ಕಳಲ್ಲಿ ಪರಸ್ಪರ ಐಕ್ಯತೆ, ಒಗ್ಗಟ್ಟು ಮತ್ತು ಸಹೋದರತ್ವ ಭಾವನೆ ಬೆಳೆಸುವುದು.
  • ದೇಶ ಕಟ್ಟುವ ಕಾರ್ಯದಲ್ಲಿ ಜವಾಬ್ದಾರಿ ನಾಯಕತ್ವ ಬೆಳೆಸುವುದು.

  • ಸೈದ್ದಾಂತಿಕ ತತ್ವಗಳನ್ನು ಪ್ರಾಯೋಗಿಕವಾಗಿ ತಿಳಿಯುವುದು.

ಶಾಲಾ ಸಂಸತ್ತಿನ ಪ್ರಯೋಜನಗಳು:

  • ಸುವ್ಯವಸ್ಥಿತ ಶಾಲೆಯ ನಿರ್ವಹಣೆ.
  • ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸುಧಾರಣೆ. 
  • ಶಿಸ್ತಿನ ಪರಿಸರ ನಿರ್ಮಾಣವಾಗುತ್ತದೆ.
  • ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ.
  • ನಿರ್ದಿಷ್ಟ ಅವಧಿಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಆಯೋಜನೆ. 
  • ಕಲಿಕೆಯಲ್ಲಿ ಹಿಂದುಳಿಗೆ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲ. 
  • ಶಾಲಾ ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಿಕೆ.
  • ಮಕ್ಕಳಲ್ಲಿ ಅಭಿವ್ಯಕ್ತಿ ಹಾಗೂ ಸಂವಹನ ಕೌಶಲಗಳ ಅಭಿವೃದ್ದಿ. 
  • ಮಾನವೀಯ ಮೌಲ್ಯಗಳ ಜಾಗೃತಿಯಾಗುತ್ತದೆ.
  • ಮಕ್ಕಳಲ್ಲಿ ವಿಷಯಾಧಾರಿತ ಕೌಶಲ್ಯಗಳ ಅಭಿವೃದ್ದಿಯಾಗುತ್ತದೆ. 
  • ಮಕ್ಕಳಲ್ಲಿ ನಾಯಕತ್ವದ ಗುಣಗಳ ಅಭಿವೃದ್ದಿ. 
  • ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಾಯೋಗಿಕ ಪರಿಚಯ.
  • ಮಕ್ಕಳಲ್ಲಿ ಆರೋಗ್ಯಕರ ಪೈಪೋಟಿಯ ಬೆಳವಣಿಗೆ. 


ಶಾಲೆಯ ಪಾತ್ರ : 
           ಪ್ರಾಥಮಿಕ ಶಾಲೆಗಳಾದರೆ ಹಿರಿಯ ತರಗತಿ ಮಕ್ಕಳನ್ನು, ಪ್ರೌಢಶಾಲೆಗಳಾದರೆ ಎಲ್ಲಾ ತರಗತಿ ಮಕ್ಕಳನ್ನು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ರಾಷ್ಟ್ರ, ರಾಜ್ಯ ಅಥವಾ ಸ್ಥಳೀಯ ಚುನಾವಣೆಗಳ ಮಾದರಿಯಲ್ಲಿಯೇ, ಶಾಲಾ ಹಂತದ ಚುನಾವಣೆ ಮೂಲಕ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡಬೇಕು. ಸಂಪೂರ್ಣವಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆಯಾದ ಸದಸ್ಯರಿಗೆ ಅವರ ಸಾಮರ್ಥ್ಯ ಮತ್ತು ಅಪೇಕ್ಷೆಗೆ ತಕ್ಕಂತಹ ಖಾತೆಗಳನ್ನು ಹಂಚಿ ಪ್ರತಿಜ್ಞಾ ವಿಧಿ ಬೋಧಿಸಬೇಕು. ಇಲ್ಲಿ ಶಿಕ್ಷಕರ ವೈಯಕ್ತಿಕ ಹಿತಾಸಕ್ತಿಗಿಂತ ಮಗುವಿನ ಸಾಮರ್ಥ್ಯಕ್ಕೆ ಹೆಚ್ಚು ಆಧ್ಯತೆ ನೀಡಬೇಕು. 

          ನಿಗದಿತ ಅವಧಿಗೆ ಚುನಾಯಿತ ಸದಸ್ಯರೆಲ್ಲ ಸಭೆ ಸೇರಿ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಮಕ್ಕಳು ತಮ್ಮ ಹಂತದಲ್ಲಿ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳವುದು. ಉಳಿದ ಸಮಸ್ಯೆಗಳನ್ನು ಶಿಕ್ಷಕರು ಹಾಗೂ ಶಾಲಾ ಮುಖ್ಯಸ್ಥರ ಗಮನಕ್ಕೆ ತರುವುದು ಮತ್ತು ಅವುಗಳನ್ನು ಪರಿಹರಿಸಲು ಒತ್ತಾಯ ಮಾಡುವುದು. ಪ್ರತಿ ಸಭೆಯ ನಡಾವಳಿಗಳನ್ನು ದಾಖಲು ಮಾಡಬೇಕು. ಅಗತ್ಯವಿದ್ದಾಗ ಸಂಬಂಧಿಸಿದ ಅಧಿಕಾರಿಗಳನ್ನು ಆಹ್ವಾನಿಸಿ ಅವರ ಸಲಹೆ ಪಡೆಯುವುದು. 

        ಶಾಲೆಯಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಸಂಸತ್ ಸದಸ್ಯರ ನೇತೃತ್ವದಲ್ಲಿ ನಡೆಸುವುದು. ಮಕ್ಕಳು ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯ್ತಿ/ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆಗಳ ವಾರ್ಡ್ ಸಭೆಗಳಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳ ಈಡೇರಿಕೆಗೆ ಒತ್ತಾಯಿಸುವುದು. ಬಾಲ್ಯವಿವಾಹ, ಬಾಲ ಕಾರ್ಮಿಕತನ, ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಡಿ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವುದು. ಪ್ರತಿವರ್ಷ ಪಂಚಾಯ್ತಿ ಹಂತದಲ್ಲಿ ನಡೆಯುವ ಮಕ್ಕಳ ಗ್ರಾಮಸಭೆಗಳಲ್ಲಿ ಭಾಗವಹಿಸಿ ಮಕ್ಕಳ ಹಿತಾಸಕ್ತಿ ಕಾಪಾಡಲು ಮನವಿ ಸಲ್ಲಿಸುವುದು. ಒಟ್ಟಾರೆ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡುವುದು ಸಂಸತ್‌ನ ಆದ್ಯ ಕರ್ತವ್ಯವಾಗಿದೆ. 

ಮಾಹಿತಿ ಕೃಪೆ : 
ಪ್ರಜಾವಾಣಿ ದಿನಪತ್ರಿಕೆ ಮತ್ತು ಅಂತರ್ಜಾಲ..

ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ 1 - 10 | Lesson Based Assessment Materials

ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ 1 - 10 | Lesson  Based Assessment Materials
               DSERT ಯು 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ 1 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಯನ್ನು (ಪ್ರಶ್ನೆಕೋಠಿ) ಸಿದ್ದಪಡಿಸಿ ತನ್ನ Website ನಲ್ಲಿ ಅಳವಡಿಸಿದೆ.

LBA ಅಂಕ Online Entry ಮಾಡುವ ವಿಧಾನ 
  
     ಸದರಿ ಸಾಮಗ್ರಿಯನ್ನು ತರಗತಿ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
DSERT ಅಧಿಕೃತ Website 
ಸೂಚನೆ: ಕೆಳಗೆ ತಮಗೆ ಬೇಕಾದ ತರಗತಿಯ ವಿಷಯದ ಮೇಲೆ Click ಮಾಡಿ Download ಮಾಡಬಹುದು.

1ನೇ ತರಗತಿ



2ನೇ ತರಗತಿ



3ನೇ ತರಗತಿ



4ನೇ ತರಗತಿ

5ನೇ ತರಗತಿ




6ನೇ ತರಗತಿ 

7ನೇ ತರಗತಿ 

8ನೇ ತರಗತಿ 

9ನೇ ತರಗತಿ 
019ನೇ ತರಗತಿ LBA ಕನ್ನಡ ಪ್ರಥಮ ಭಾಷೆ

10ನೇ ತರಗತಿ





Downloads
DSERT ಪ್ರಕಟಣೆ

ವಿವೇಕ ಜ್ಯೋತಿ YouTube Channel