Menu

Home ನಲಿಕಲಿ About ☰ Menu


 

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025)ಗೆ ಅರ್ಜಿ ಸಲ್ಲಿಸಿ

TET ಪರೀಕ್ಷೆಗೆ ಅರ್ಜಿ ಸಲ್ಲಿಸಿ 2025
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025)ಗೆ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) 2025 ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ TET 2025 ಕಡ್ಡಾಯ ಅರ್ಹತಾ ಪರೀಕ್ಷೆಯಾಗಿದೆ.

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 23/10/2025

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 09/11/2025  

ಶುಲ್ಕ ಪಾವತಿಸಲು ಕೊನೆಯ ದಿನಾಂಕ 10/11/2025

ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ : 01/12/2025 07/12/2025

ಪರೀಕ್ಷೆ ನಡೆಯುವ ದಿನಾಂಕ 07/12/2025

ಅರ್ಜಿ ಸಲ್ಲಿಸುವ ವಿಧಾನ:
1. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ ಸಂಪರ್ಕಿಸಿ ಅಧಿಸೂಚನೆಯಲ್ಲಿ https://schooleducation.karnataka.gov.in ನೀಡಲಾಗಿರುವ ಸೂಚನೆಗಳನ್ನು ತಪ್ಪದೇ ಓದಿ, ಅರ್ಥೈಸಿಕೊಳ್ಳುವುದು.

2. 'Registration' ಆದ ನಂತರ 'Login' ವಿವರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸುವುದು. ಆನ್‌ಲೈನ್ ಅರ್ಜಿಯನ್ನು ಪೂರ್ಣ

3. User ID ಮತ್ತು Password ಅನ್ನು ಅಭ್ಯರ್ಥಿಗಳು ಇತರರಿಗೆ ಸಿಗದಂತೆ/ ಗೊತ್ತಾಗದಂತೆ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಕೊಳ್ಳತಕ್ಕದ್ದು, ಒಂದು ವೇಳೆ ತಮ್ಮ User ID ಮತ್ತು Password ಇತರೆ ಯಾರಿಗಾದರೂ ಲಭ್ಯವಾದಲ್ಲಿ ತಮ್ಮ ಹೆಸರಿನಿಂದ ಲಾಗಿನ್ ಆಗಿ ತಮ್ಮ ಮಾಹಿತಿಯನ್ನು ವ್ಯತ್ಯಾಸ ಮಾಡುವ ಅಥವಾ ವಿರೂಪಗೊಳಿಸುವ ಸಾಧ್ಯತೆಯಿರುತ್ತದೆ. ಇದಕ್ಕೆ ಸಿ.ಎ.ಸಿ ಜವಾಬ್ದಾರಿಯಾಗಿರುವುದಿಲ್ಲ.

4. ಅಭ್ಯರ್ಥಿಯು Passport ಅಳತೆಯ (ಎದುರು ಭಂಗಿಯಲ್ಲಿ ಇರುವಂತಹ) ಭಾವಚಿತ್ರವನ್ನು 50KB ಗೆ ಮೀರದಂತೆ ಹಾಗೂ ಕಪ್ಪು ಶಾಹಿಯಲ್ಲಿ ಮಾಡಿರುವ ಸಹಿಯನ್ನು 40KB ಗೆ ಮೀರದಂತೆ ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್‌ ಲೋಡ್ ಮಾಡುವುದು.

5. ಅಭ್ಯರ್ಥಿಯ ಭಾವಚಿತ್ರ, ಸಹಿ ಹಾಗೂ ಹೆಸರು ತಾಳೆ ಆಗದಿದ್ದಲ್ಲಿ, ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.

6. Internet Banking / Debit Card/ Credit Card ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ) ಮೂಲಕವೇ ಪಾವತಿಸತಕ್ಕದ್ದು.

7. ಅಭ್ಯರ್ಥಿಗಳು ಒಮ್ಮೆ ಪಾವತಿಸಿರುವ ಪರೀಕ್ಷಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿಯೂ ಮಾಡುವುದಿಲ್ಲ ಅಥವಾ ಮುಂದಿನ ಪರೀಕ್ಷೆಗಳಿಗೆ ಹೊಂದಾಣಿಕೆ ಮರುಪಾವತಿ ಮಾಡಲಾಗುವುದಿಲ್ಲ.

8. INTERNET /SERVER ನ ಒತ್ತಡವನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು.

9. ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಇಲಾಖಾ ವೆಬ್‌ಸೈಟ್ ಮೂಲಕ login ಆಗಿ ಡೌನ್‌ಲೋಡ್ ಮಾಡಿಕೊಳ್ಳುವುದು. ಶುಲ್ಕ ಪಾವತಿಯಾದ ಎರಡು ದಿನಗಳ ನಂತರದಲ್ಲೂ ಪೇಮೆಂಟ್ ಸ್ಟೇಟಸ್ (Payment Status) ಪೆಂಡಿಂಗ್ ಎಂದು ಕಂಡುಬಂದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕವನ್ನು ಸಂಪರ್ಕಿಸುವುದು.

10. ಅಭ್ಯರ್ಥಿಗಳು ಡೌನ್‌ಲೋಡ್ ಮಾಡಲಾದ ತಮ್ಮ ಅನ್‌ಲೈನ್ ಅರ್ಜಿಯನ್ನು ಮುಂದಿನ ದಿನಗಳಲ್ಲಿ ಯಾವುದೇ ಕಛೇರಿ ಸಂಬಂಧಿತ ಪತ್ರವ್ಯವಹಾರಕ್ಕಾಗಿ ತಮ್ಮ ಬಳಿ ಕಡ್ಡಾಯವಾಗಿ ಇರಿಸಿಕೊಳ್ಳುವುದು.

11. ಅಭ್ಯರ್ಥಿಗಳು ಅತ್ಯಂತ ಜಾಗರೂಕತೆಯಿಂದ ಆನ್‌ಲೈನ್ ಅರ್ಜಿಯನ್ನು ಭರ್ತಿಮಾಡಬೇಕು. ಅರ್ಜಿಯನ್ನು Submit ಮಾಡುವ ಮೊದಲು, ಭರ್ತಿ ಮಾಡಲಾದ ವಿವರಗಳನ್ನು ಇನ್ನೊಮ್ಮೆ ಪರಿಶೀಲಿಸಿಕೊಳ್ಳಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿ/ ಬದಲಾವಣೆಗೆ ಅವಕಾಶ ಇರುವುದಿಲ್ಲ.

12. ಅರ್ಜಿಯನ್ನು ಸಲ್ಲಿಸಿದ ನಂತರ ಅಭ್ಯರ್ಥಿಯ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಅದರಿಂದ ಉಂಟಾಗುವ ಪರಿಣಾಮಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.

13. ಅಭ್ಯರ್ಥಿಗಳು ಒಮ್ಮೆ ಮಾಹಿತಿ ತುಂಬಿ ಅಂತಿಮವಾಗಿ ಅರ್ಜಿ ಸಲ್ಲಿಸಿದ ಮೇಲೆ ಯಾವುದೇ ತಿದ್ದುಪಡಿಗೆ, ಹೊಸ ವಿವರಗಳನ್ನು ಅರ್ಜಿಯಲ್ಲಿ ಸೇರಿಸಲು ಅಥವಾ ತೆಗೆಯಲು (Edit ಗೆ) ಅವಕಾಶವಿರುವುದಿಲ್ಲ. ಈ ಸಂಬಂಧ ಉದ್ಭವಿಸುವ ಸಮಸ್ಯೆಗಳಿಗೆ ಕೇಂದ್ರೀಕೃತ ದಾಖಲಾತಿ ಘಟಕವು ಜವಾಬ್ದಾರಿಯಾಗಿರುವುದಿಲ್ಲ.

14. KARTET-2025 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಳಕೆಯಲ್ಲಿರುವಂತಹ ತಮ್ಮ ಸ್ವಂತ ಮೊಬೈಲ್‌ನ ಸಂಪರ್ಕ ಸಂಖ್ಯೆಯನ್ನು ಹಾಗೂ ಇ-ಮೇಲ್ ವಿಳಾಸವನ್ನು ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸುವುದು.

15. ಹೆಚ್ಚುವರಿ ಮಾಹಿತಿಗಳನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ಆಗಿಂದಾಗ್ಗೆ ಇಲಾಖಾ ವೆಬ್‌ಸೈಟ್ https://schooleducation.karnataka.gov.in ಅನ್ನು ಸಂಪರ್ಕಿಸುವುದು.

KARTETಯು  ಎರಡು ಪತ್ರಿಕೆಗಳನ್ನು ಒಳಗೊಂಡಿದೆ:

ಪತ್ರಿಕೆ 1: 
1 ರಿಂದ 5 ನೇ ತರಗತಿಗಳಿಗೆ ಬೋಧಿಸಲು ಬಯಸುವ ಅಭ್ಯರ್ಥಿಗಳಿಗೆ

ಪತ್ರಿಕೆ 2: 
6 ರಿಂದ 8 ನೇ ತರಗತಿಗಳಿಗೆ ಬೋಧಿಸಲು ಬಯಸುವ ಅಭ್ಯರ್ಥಿಗಳಿಗೆ

ಪ್ರತಿಯೊಂದು ಪತ್ರಿಕೆಯು 150 ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಹೊಂದಿದ್ದು, ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ, ಒಟ್ಟು 150 ಅಂಕಗಳು.

ರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳು ಮತ್ತು ಯಾವುದೇ ಋಣಾತ್ಮಕ ಅಂಕಗಳಿಲ್ಲ.

KARTET 2025 ಪೇಪರ್ 1 ಪಠ್ಯಕ್ರಮ (1–5 ತರಗತಿಗಳಿಗೆ)

6 ವಿಷಯಗಳು ಒಳಗೊಂಡಿರುವ ವಿಷಯಗಳು

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರ (CDP) ಕಲಿಕಾ ಸಿದ್ಧಾಂತಗಳು, ಮಕ್ಕಳ ಅಭಿವೃದ್ಧಿ (6–11 ವರ್ಷಗಳು), ಅಂತರ್ಗತ ಶಿಕ್ಷಣ, ಬೋಧನಾ ತಂತ್ರಗಳು, ಕಲಿಕೆಗಾಗಿ ಮೌಲ್ಯಮಾಪನ.

ಭಾಷೆ I ಭಾಷಾ ಗ್ರಹಿಕೆ, ಭಾಷಾ ಬೆಳವಣಿಗೆಯ ಶಿಕ್ಷಣಶಾಸ್ತ್ರ, ವ್ಯಾಕರಣ, ಕಾಣದ ವಾಕ್ಯವೃಂದಗಳು.

ಭಾಷೆ II ಭಾಷಾ ಕೌಶಲ್ಯಗಳು, ಸಂವಹನ, ಭಾಷಾ ಬೋಧನೆಯ ಶಿಕ್ಷಣಶಾಸ್ತ್ರ.

ಗಣಿತ ಸಂಖ್ಯೆಗಳು, ಭಿನ್ನರಾಶಿಗಳು, ರೇಖಾಗಣಿತ, ಮಾಪನ, ದತ್ತಾಂಶ ನಿರ್ವಹಣೆ, ಸಮಸ್ಯೆ ಪರಿಹಾರ ಮತ್ತು ಗಣಿತದ ಶಿಕ್ಷಣಶಾಸ್ತ್ರ.

ಪರಿಸರ ಅಧ್ಯಯನಗಳು (ಇವಿಎಸ್) ಕುಟುಂಬ, ಆಹಾರ, ವಸತಿ, ನೀರು, ಪ್ರಯಾಣ, ಸಸ್ಯಗಳು, ಪ್ರಾಣಿಗಳು, ನೈಸರ್ಗಿಕ ಸಂಪನ್ಮೂಲಗಳು, ಪರಿಸರ ಶಿಕ್ಷಣ.

KARTET 2025 ಪೇಪರ್ 2 ಪಠ್ಯಕ್ರಮ (6–8 ತರಗತಿಗಳಿಗೆ)

5 ವಿಷಯಗಳು ಒಳಗೊಂಡಿರುವ ವಿಷಯಗಳು

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರ (CDP) ಮನೋವಿಜ್ಞಾನ ಕಲಿಕೆ, ಅಂತರ್ಗತ ಶಿಕ್ಷಣ, ಮಕ್ಕಳ ಕೇಂದ್ರಿತ ಬೋಧನೆ, ಪ್ರೇರಣೆ ಮತ್ತು ತರಗತಿ ನಿರ್ವಹಣೆ.

 ★ಭಾಷೆ I ಭಾಷಾ ಕಲಿಕೆಯ ವ್ಯಾಕರಣ, ಗ್ರಹಿಕೆ, ಶಿಕ್ಷಣಶಾಸ್ತ್ರ.

 ಭಾಷೆ II ಭಾಷಾ ಸಂವಹನ, ಕಾಣದ ವಾಕ್ಯವೃಂದಗಳು, ವ್ಯಾಕರಣ, ಎರಡನೇ ಭಾಷೆಯ ಶಿಕ್ಷಣಶಾಸ್ತ್ರ.

ಗಣಿತ ಮತ್ತು ವಿಜ್ಞಾನ (ಗಣಿತ/ವಿಜ್ಞಾನ ಶಿಕ್ಷಕರಿಗೆ) ಬೀಜಗಣಿತ, ರೇಖಾಗಣಿತ, ಸಂಖ್ಯಾ ವ್ಯವಸ್ಥೆಗಳು, ಬಲ, ಚಲನೆ, ಕಾಂತೀಯತೆ, ಜೀವಿಗಳು, ನೈಸರ್ಗಿಕ ವಿದ್ಯಮಾನಗಳು, ಬೋಧನಾ ವಿಧಾನಗಳು.

ಸಮಾಜ ವಿಜ್ಞಾನ/ಸಮಾಜ ವಿಜ್ಞಾನ (ಸಮಾಜ ವಿಜ್ಞಾನ ಶಿಕ್ಷಕರಿಗೆ) ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ, ಶಿಕ್ಷಣ ಸಮಸ್ಯೆಗಳು.

ರೀಕ್ಷಾ ಶುಲ್ಕದ ವಿವರ :

ಮಾಧ್ಯಮ ಮತ್ತು ಅರ್ಹತಾ ಅಂಕಗಳು :

KARTET 2025 ಪರೀಕ್ಷೆಯನ್ನು ಇಂಗ್ಲಿಷ್, ಕನ್ನಡ, ಉರ್ದು, ತಮಿಳು, ತೆಲುಗು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ನಡೆಸಲಾಗುವುದು.

KARTET 2025 ಪ್ರಮಾಣಪತ್ರಕ್ಕೆ ಅರ್ಹತೆ ಪಡೆಯಲು:

ಸಾಮಾನ್ಯ ವರ್ಗ: ಕನಿಷ್ಠ 60% ಅಂಕಗಳನ್ನು ಗಳಿಸುವುದು ಕಡ್ಡಾಯ.

ಕಾಯ್ದಿರಿಸಿದ ವರ್ಗ (SC/ST/CI): ಕನಿಷ್ಠ 55% ಅಂಕಗಳನ್ನು ಗಳಿಸುವುದು  ಕಡ್ಡಾಯ.

★Click Below & Download Circular★

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post