Menu

Home ನಲಿಕಲಿ About ☰ Menu


 

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025)ಗೆ ಅರ್ಜಿ ಸಲ್ಲಿಸಿ

TET ಪರೀಕ್ಷೆಗೆ ಅರ್ಜಿ ಸಲ್ಲಿಸಿ 2025
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025)ಗೆ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) 2025 ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ TET 2025 ಕಡ್ಡಾಯ ಅರ್ಹತಾ ಪರೀಕ್ಷೆಯಾಗಿದೆ.

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 23/10/2025

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 09/11/2025  

ಶುಲ್ಕ ಪಾವತಿಸಲು ಕೊನೆಯ ದಿನಾಂಕ 10/11/2025

ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ : 01/12/2025 07/12/2025

ಪರೀಕ್ಷೆ ನಡೆಯುವ ದಿನಾಂಕ 07/12/2025

ಅರ್ಜಿ ಸಲ್ಲಿಸುವ ವಿಧಾನ:
1. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ ಸಂಪರ್ಕಿಸಿ ಅಧಿಸೂಚನೆಯಲ್ಲಿ https://schooleducation.karnataka.gov.in ನೀಡಲಾಗಿರುವ ಸೂಚನೆಗಳನ್ನು ತಪ್ಪದೇ ಓದಿ, ಅರ್ಥೈಸಿಕೊಳ್ಳುವುದು.

2. 'Registration' ಆದ ನಂತರ 'Login' ವಿವರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸುವುದು. ಆನ್‌ಲೈನ್ ಅರ್ಜಿಯನ್ನು ಪೂರ್ಣ

3. User ID ಮತ್ತು Password ಅನ್ನು ಅಭ್ಯರ್ಥಿಗಳು ಇತರರಿಗೆ ಸಿಗದಂತೆ/ ಗೊತ್ತಾಗದಂತೆ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಕೊಳ್ಳತಕ್ಕದ್ದು, ಒಂದು ವೇಳೆ ತಮ್ಮ User ID ಮತ್ತು Password ಇತರೆ ಯಾರಿಗಾದರೂ ಲಭ್ಯವಾದಲ್ಲಿ ತಮ್ಮ ಹೆಸರಿನಿಂದ ಲಾಗಿನ್ ಆಗಿ ತಮ್ಮ ಮಾಹಿತಿಯನ್ನು ವ್ಯತ್ಯಾಸ ಮಾಡುವ ಅಥವಾ ವಿರೂಪಗೊಳಿಸುವ ಸಾಧ್ಯತೆಯಿರುತ್ತದೆ. ಇದಕ್ಕೆ ಸಿ.ಎ.ಸಿ ಜವಾಬ್ದಾರಿಯಾಗಿರುವುದಿಲ್ಲ.

4. ಅಭ್ಯರ್ಥಿಯು Passport ಅಳತೆಯ (ಎದುರು ಭಂಗಿಯಲ್ಲಿ ಇರುವಂತಹ) ಭಾವಚಿತ್ರವನ್ನು 50KB ಗೆ ಮೀರದಂತೆ ಹಾಗೂ ಕಪ್ಪು ಶಾಹಿಯಲ್ಲಿ ಮಾಡಿರುವ ಸಹಿಯನ್ನು 40KB ಗೆ ಮೀರದಂತೆ ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್‌ ಲೋಡ್ ಮಾಡುವುದು.

5. ಅಭ್ಯರ್ಥಿಯ ಭಾವಚಿತ್ರ, ಸಹಿ ಹಾಗೂ ಹೆಸರು ತಾಳೆ ಆಗದಿದ್ದಲ್ಲಿ, ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.

6. Internet Banking / Debit Card/ Credit Card ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ) ಮೂಲಕವೇ ಪಾವತಿಸತಕ್ಕದ್ದು.

7. ಅಭ್ಯರ್ಥಿಗಳು ಒಮ್ಮೆ ಪಾವತಿಸಿರುವ ಪರೀಕ್ಷಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿಯೂ ಮಾಡುವುದಿಲ್ಲ ಅಥವಾ ಮುಂದಿನ ಪರೀಕ್ಷೆಗಳಿಗೆ ಹೊಂದಾಣಿಕೆ ಮರುಪಾವತಿ ಮಾಡಲಾಗುವುದಿಲ್ಲ.

8. INTERNET /SERVER ನ ಒತ್ತಡವನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು.

9. ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಇಲಾಖಾ ವೆಬ್‌ಸೈಟ್ ಮೂಲಕ login ಆಗಿ ಡೌನ್‌ಲೋಡ್ ಮಾಡಿಕೊಳ್ಳುವುದು. ಶುಲ್ಕ ಪಾವತಿಯಾದ ಎರಡು ದಿನಗಳ ನಂತರದಲ್ಲೂ ಪೇಮೆಂಟ್ ಸ್ಟೇಟಸ್ (Payment Status) ಪೆಂಡಿಂಗ್ ಎಂದು ಕಂಡುಬಂದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕವನ್ನು ಸಂಪರ್ಕಿಸುವುದು.

10. ಅಭ್ಯರ್ಥಿಗಳು ಡೌನ್‌ಲೋಡ್ ಮಾಡಲಾದ ತಮ್ಮ ಅನ್‌ಲೈನ್ ಅರ್ಜಿಯನ್ನು ಮುಂದಿನ ದಿನಗಳಲ್ಲಿ ಯಾವುದೇ ಕಛೇರಿ ಸಂಬಂಧಿತ ಪತ್ರವ್ಯವಹಾರಕ್ಕಾಗಿ ತಮ್ಮ ಬಳಿ ಕಡ್ಡಾಯವಾಗಿ ಇರಿಸಿಕೊಳ್ಳುವುದು.

11. ಅಭ್ಯರ್ಥಿಗಳು ಅತ್ಯಂತ ಜಾಗರೂಕತೆಯಿಂದ ಆನ್‌ಲೈನ್ ಅರ್ಜಿಯನ್ನು ಭರ್ತಿಮಾಡಬೇಕು. ಅರ್ಜಿಯನ್ನು Submit ಮಾಡುವ ಮೊದಲು, ಭರ್ತಿ ಮಾಡಲಾದ ವಿವರಗಳನ್ನು ಇನ್ನೊಮ್ಮೆ ಪರಿಶೀಲಿಸಿಕೊಳ್ಳಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿ/ ಬದಲಾವಣೆಗೆ ಅವಕಾಶ ಇರುವುದಿಲ್ಲ.

12. ಅರ್ಜಿಯನ್ನು ಸಲ್ಲಿಸಿದ ನಂತರ ಅಭ್ಯರ್ಥಿಯ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಅದರಿಂದ ಉಂಟಾಗುವ ಪರಿಣಾಮಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.

13. ಅಭ್ಯರ್ಥಿಗಳು ಒಮ್ಮೆ ಮಾಹಿತಿ ತುಂಬಿ ಅಂತಿಮವಾಗಿ ಅರ್ಜಿ ಸಲ್ಲಿಸಿದ ಮೇಲೆ ಯಾವುದೇ ತಿದ್ದುಪಡಿಗೆ, ಹೊಸ ವಿವರಗಳನ್ನು ಅರ್ಜಿಯಲ್ಲಿ ಸೇರಿಸಲು ಅಥವಾ ತೆಗೆಯಲು (Edit ಗೆ) ಅವಕಾಶವಿರುವುದಿಲ್ಲ. ಈ ಸಂಬಂಧ ಉದ್ಭವಿಸುವ ಸಮಸ್ಯೆಗಳಿಗೆ ಕೇಂದ್ರೀಕೃತ ದಾಖಲಾತಿ ಘಟಕವು ಜವಾಬ್ದಾರಿಯಾಗಿರುವುದಿಲ್ಲ.

14. KARTET-2025 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಳಕೆಯಲ್ಲಿರುವಂತಹ ತಮ್ಮ ಸ್ವಂತ ಮೊಬೈಲ್‌ನ ಸಂಪರ್ಕ ಸಂಖ್ಯೆಯನ್ನು ಹಾಗೂ ಇ-ಮೇಲ್ ವಿಳಾಸವನ್ನು ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸುವುದು.

15. ಹೆಚ್ಚುವರಿ ಮಾಹಿತಿಗಳನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ಆಗಿಂದಾಗ್ಗೆ ಇಲಾಖಾ ವೆಬ್‌ಸೈಟ್ https://schooleducation.karnataka.gov.in ಅನ್ನು ಸಂಪರ್ಕಿಸುವುದು.

KARTETಯು  ಎರಡು ಪತ್ರಿಕೆಗಳನ್ನು ಒಳಗೊಂಡಿದೆ:

ಪತ್ರಿಕೆ 1: 
1 ರಿಂದ 5 ನೇ ತರಗತಿಗಳಿಗೆ ಬೋಧಿಸಲು ಬಯಸುವ ಅಭ್ಯರ್ಥಿಗಳಿಗೆ

ಪತ್ರಿಕೆ 2: 
6 ರಿಂದ 8 ನೇ ತರಗತಿಗಳಿಗೆ ಬೋಧಿಸಲು ಬಯಸುವ ಅಭ್ಯರ್ಥಿಗಳಿಗೆ

ಪ್ರತಿಯೊಂದು ಪತ್ರಿಕೆಯು 150 ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಹೊಂದಿದ್ದು, ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ, ಒಟ್ಟು 150 ಅಂಕಗಳು.

ರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳು ಮತ್ತು ಯಾವುದೇ ಋಣಾತ್ಮಕ ಅಂಕಗಳಿಲ್ಲ.

KARTET 2025 ಪೇಪರ್ 1 ಪಠ್ಯಕ್ರಮ (1–5 ತರಗತಿಗಳಿಗೆ)

6 ವಿಷಯಗಳು ಒಳಗೊಂಡಿರುವ ವಿಷಯಗಳು

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರ (CDP) ಕಲಿಕಾ ಸಿದ್ಧಾಂತಗಳು, ಮಕ್ಕಳ ಅಭಿವೃದ್ಧಿ (6–11 ವರ್ಷಗಳು), ಅಂತರ್ಗತ ಶಿಕ್ಷಣ, ಬೋಧನಾ ತಂತ್ರಗಳು, ಕಲಿಕೆಗಾಗಿ ಮೌಲ್ಯಮಾಪನ.

ಭಾಷೆ I ಭಾಷಾ ಗ್ರಹಿಕೆ, ಭಾಷಾ ಬೆಳವಣಿಗೆಯ ಶಿಕ್ಷಣಶಾಸ್ತ್ರ, ವ್ಯಾಕರಣ, ಕಾಣದ ವಾಕ್ಯವೃಂದಗಳು.

ಭಾಷೆ II ಭಾಷಾ ಕೌಶಲ್ಯಗಳು, ಸಂವಹನ, ಭಾಷಾ ಬೋಧನೆಯ ಶಿಕ್ಷಣಶಾಸ್ತ್ರ.

ಗಣಿತ ಸಂಖ್ಯೆಗಳು, ಭಿನ್ನರಾಶಿಗಳು, ರೇಖಾಗಣಿತ, ಮಾಪನ, ದತ್ತಾಂಶ ನಿರ್ವಹಣೆ, ಸಮಸ್ಯೆ ಪರಿಹಾರ ಮತ್ತು ಗಣಿತದ ಶಿಕ್ಷಣಶಾಸ್ತ್ರ.

ಪರಿಸರ ಅಧ್ಯಯನಗಳು (ಇವಿಎಸ್) ಕುಟುಂಬ, ಆಹಾರ, ವಸತಿ, ನೀರು, ಪ್ರಯಾಣ, ಸಸ್ಯಗಳು, ಪ್ರಾಣಿಗಳು, ನೈಸರ್ಗಿಕ ಸಂಪನ್ಮೂಲಗಳು, ಪರಿಸರ ಶಿಕ್ಷಣ.

KARTET 2025 ಪೇಪರ್ 2 ಪಠ್ಯಕ್ರಮ (6–8 ತರಗತಿಗಳಿಗೆ)

5 ವಿಷಯಗಳು ಒಳಗೊಂಡಿರುವ ವಿಷಯಗಳು

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರ (CDP) ಮನೋವಿಜ್ಞಾನ ಕಲಿಕೆ, ಅಂತರ್ಗತ ಶಿಕ್ಷಣ, ಮಕ್ಕಳ ಕೇಂದ್ರಿತ ಬೋಧನೆ, ಪ್ರೇರಣೆ ಮತ್ತು ತರಗತಿ ನಿರ್ವಹಣೆ.

 ★ಭಾಷೆ I ಭಾಷಾ ಕಲಿಕೆಯ ವ್ಯಾಕರಣ, ಗ್ರಹಿಕೆ, ಶಿಕ್ಷಣಶಾಸ್ತ್ರ.

 ಭಾಷೆ II ಭಾಷಾ ಸಂವಹನ, ಕಾಣದ ವಾಕ್ಯವೃಂದಗಳು, ವ್ಯಾಕರಣ, ಎರಡನೇ ಭಾಷೆಯ ಶಿಕ್ಷಣಶಾಸ್ತ್ರ.

ಗಣಿತ ಮತ್ತು ವಿಜ್ಞಾನ (ಗಣಿತ/ವಿಜ್ಞಾನ ಶಿಕ್ಷಕರಿಗೆ) ಬೀಜಗಣಿತ, ರೇಖಾಗಣಿತ, ಸಂಖ್ಯಾ ವ್ಯವಸ್ಥೆಗಳು, ಬಲ, ಚಲನೆ, ಕಾಂತೀಯತೆ, ಜೀವಿಗಳು, ನೈಸರ್ಗಿಕ ವಿದ್ಯಮಾನಗಳು, ಬೋಧನಾ ವಿಧಾನಗಳು.

ಸಮಾಜ ವಿಜ್ಞಾನ/ಸಮಾಜ ವಿಜ್ಞಾನ (ಸಮಾಜ ವಿಜ್ಞಾನ ಶಿಕ್ಷಕರಿಗೆ) ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ, ಶಿಕ್ಷಣ ಸಮಸ್ಯೆಗಳು.

ರೀಕ್ಷಾ ಶುಲ್ಕದ ವಿವರ :

ಮಾಧ್ಯಮ ಮತ್ತು ಅರ್ಹತಾ ಅಂಕಗಳು :

KARTET 2025 ಪರೀಕ್ಷೆಯನ್ನು ಇಂಗ್ಲಿಷ್, ಕನ್ನಡ, ಉರ್ದು, ತಮಿಳು, ತೆಲುಗು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ನಡೆಸಲಾಗುವುದು.

KARTET 2025 ಪ್ರಮಾಣಪತ್ರಕ್ಕೆ ಅರ್ಹತೆ ಪಡೆಯಲು:

ಸಾಮಾನ್ಯ ವರ್ಗ: ಕನಿಷ್ಠ 60% ಅಂಕಗಳನ್ನು ಗಳಿಸುವುದು ಕಡ್ಡಾಯ.

ಕಾಯ್ದಿರಿಸಿದ ವರ್ಗ (SC/ST/CI): ಕನಿಷ್ಠ 55% ಅಂಕಗಳನ್ನು ಗಳಿಸುವುದು  ಕಡ್ಡಾಯ.

★Click Below & Download Circular★

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗

 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗

        ಶಿಕ್ಷಕ ಬಂಧುಗಳನ್ನು ಒಳಗೊಂಡಂತೆ ಸಾಕಷ್ಟು ಸಂಖ್ಯೆಯ ಬೇರೆ ಬೇರೆ ನೌಕರರು ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರಲ್ಲಿ ಸಮೀಕ್ಷಾದಾರರಾಗಿ, ಮೇಲ್ವಿಚಾರಕರಾಗಿ ಎಮ್.ಆರ್‌.ಪಿಗಳಾಗಿ ವಿವಿಧ ಕಾರ್ಯಗಳನ್ನು Online ಅಂದರೆ ಮೊಬೈಲ್ ಮೂಲಕ ಸಮೀಕ್ಷೆ ಮಾಡಲು ಸಿದ್ದರಾಗಿದ್ದೇವೆ. 

                 ಸಮೀಕ್ಷೆ ಮಾಡುವ ಸಂದರ್ಭದಲ್ಲಿ  ಹಲವು ಬಾರಿ App Update ಮಾಡುವ ಸಂದರ್ಭ  ಬರುತ್ತದೆ/ಬರಬಹುದು. ಈ ಸಮಯವನ್ನೇ ಬಳಸಿಕೊಂಡು ವಿವಿಧ ರೀತಿಯ Online ಮೋಸಮಡುವ  ಜಾಲ App Update ಮಾಡಲು ಅಥವಾ Update App Install ಮಾಡಲು ಈ link ಅನ್ನು ಕ್ಲಿಕ್ ಮಾಡಿ ಎಂದು; ಬೇರೆ ಬೇರೆ ರೀತಿಯ ಮೋಸದ Link ಗಳು ಮತ್ತು APK ಫೈಲ್ಗಳನ್ನು(APK ಎಂದರೇನು - ".apk" ಎಂದು ಕೊನೆಗೊಳ್ಳುವ ಫೈಲ್ ನೇಮ್ ಇರುತ್ತದೆ. ಇದು ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ ಅಥವಾ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಎಂಬುದರ ಸಂಕ್ಷಿಪ್ತ ರೂಪ) ನಿಮ್ಮ WhatsApp ಗುಂಪುಗಳಲ್ಲಿ/ನಿಮ್ಮ ಸ್ನೇಹಿತರ ವಾಟ್ಸಪ್ (ನಿಮ್ಮ ಆಪ್ತರ ಮೊಬೈಲ್ WhatsApp hact ಮಾಡಿ) ಮೂಲಕವೇ ಈ ರೀತಿಯ ಸಂದೇಶಗಳು ಬರಬಹುದು. 

              ದಯವಿಟ್ಟು ಯಾರು ಅವಸರಕ್ಕೆ ಬಿದ್ದು ಈ ರೀತಿ Link ಅಥವಾ APK ಫೈಲ್ ಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಒಂದು ವೇಳೆ ನೀವು ಈ ತಪ್ಪು ಮಾಡಿದರೆ ನಿಮ್ಮ ಮೊಬೈಲ್ ಅಥವಾ ವಾಟ್ಸಪ್ ಹ್ಯಾಕ್ ಆಗುತ್ತದೆ ಆಗ ನಿಮ್ಮ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವುದಷ್ಟೆ ಅಲ್ಲದೆ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲ ಮಾಹಿತಿ ಕೂಡ ಆನ್ಲೈನ್ ಮೂಲಕ ಮೋಸಗಾರರ ಕೈ ಸೇರುತ್ತದೆ.

             ಹಾಗಾಗಿ ನೀವು ಈ ಸಮೀಕ್ಷಾ ಸಂದರ್ಭದಲ್ಲಿ App ಅನ್ಮು Install ಮಾಡಲು ಹಾಗೂ Update ಮಾಡಲು ಇಲ್ಲವೇ ಯಾವುದೇ  App ಗಳನ್ನು ನಿಮ್ಮ ಮೊಬೈಲ್ ನಲ್ಲಿ Install ಮಾಡುವಾಗ ಕಡ್ಡಾಯವಾಗಿ Google Play Store Appನಲ್ಲಿಯೇ Download ಮಾಡಿ ಅಥವಾ Appಗಳನ್ನು Update ಮಾಡಿಕೊಳ್ಳಿ. 

           ಈ ಸಂದರ್ಭದಲ್ಲಿ ಅಷ್ಟೇ ಅಲ್ಲ ಎಲ್ಲಾ ಸಂದರ್ಭಗಳಲ್ಲೂ ಕೂಡ ನಾವು ಮೊಬೈಲ್ ಬಳಸುವಾಗ ಅತ್ಯಂತ ಜಾಗರೂಕರಾಗಿ ಇರಬೇಕಾದ ಅವಶ್ಯಕತೆ ಇದೆ. ಹಾಗಾಗಿ ದಯವಿಟ್ಟು ಈ ವಿಷಯವನ್ನು ನಿಮ್ಮೆಲ್ಲ ಆತ್ಮೀಯರ ಜೊತೆ ಹಂಚಿಕೊಳ್ಳಿ; ಯಾರೂ ಈ Online ಮೋಸದ ಜಾಲಕ್ಕೆ ಒಳಗಾಗದಂತೆ ಜಾಗೃತರಾಗೋಣ.

.... Online ಜಾಗ್ರತೆ ....


ಇಂದ,
ಶ್ರೀ ಶಿವಾನಂದ ಪುಂಡಲೀಕ ಲೋಕಪ್ಪನವರ 
ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರು
ಧಾರವಾಡ ಗ್ರಾಮೀಣ 

NMMS ಪರೀಕ್ಷೆಗೆ ಅರ್ಜಿ ಸಲ್ಲಿಸಿ 2025-26

NMMS ಪರೀಕ್ಷೆಗೆ ಅರ್ಜಿ ಸಲ್ಲಿಸಿ 2025-26

@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ 10/09/2025

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 31/10/2025  

ಪರೀಕ್ಷೆ ನಡೆಯುವ ದಿನಾಂಕ 07/12/2025

@ಅರ್ಜಿ ಸಲ್ಲಿಸುವ ವಿಧಾನ@

ಅರ್ಜಿ ಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

ಸ್ವತಃ ಶಾಲೆಗಳ ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು https://kseab.karnataka.gov.in ವೆಬ್ ಸೈಟ್ ನಲ್ಲಿ ತಮ್ಮ ಶಾಲೆಯ U-DISE  Code ಅನ್ನು User Name ಆಗಿ ಬಳಸಿ LOGIN ಆಗುವುದು ಕಡ್ಡಾಯವಾಗಿರುತ್ತದೆ,  ನಂತರ NMMS ಪರೀಕ್ಷೆಗೆ ಅರ್ಜಿ ಸಲ್ಲಿಸುವ Menu Click ಮಾಡುವುದು, ಆಗ ಅರ್ಜಿ ನಮೂನೆ Open ಆಗುತ್ತದೆ.

# ಈ NMMS ಪರೀಕ್ಷೆಗೆ ಅರ್ಜಿ ಸಲ್ಲಿಸುವ Step by Step ಸಂಪೂರ್ಣ ಮಾಹಿತಿಯ ವಿಡಿಯೋ.

ಮಂಡಳಿ ವತಿಯಿಂದ Default Password ನೀಡಲಾಗಿದ್ದು, ಮೊದಲ ಬಾರಿ Login ಆಗುವಾಗ Password ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯ.

ಅರ್ಜಿ ಸಲ್ಲಿಸುವಾಗ ತಾಂತ್ರಿಕ ಅಡಚಣೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ - ಕಛೇರಿ ಕರ್ತವ್ಯದ ಸಮಯದಲ್ಲಿ ದೂರವಾಣಿ ಸಂಖ್ಯೆ :080-23341615 ಕರೆ ಮಾಡುವುದು.

★ ಶಾಲೆಯ ಫೋನ ನಂಬರ್ change ಮಾಡುವುದಿದ್ದರೆ change ಆದ mobile number ಹೊಂದಿರುವ ಮುಖ್ಯ ಶಿಕ್ಷಕರ ದೃಢೀಕರಣ ಮಾಡಿರುವ ಪತ್ರವನ್ನು scan ಮಾಡಿ ಈ ಕೆಳಗಿನ ಮೇಲ್ ID ಗೆ MAIL ಹಾಕುವುದು. ksqaacntsenmms@gmail.com 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ನಂತರ school login ನಲ್ಲಿ challan generate ಆಗುತ್ತವೆ.

@NMMS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು.

ಪೋಷಕರ ವಾರ್ಷಿಕ ವರಮಾನ ಮಿತಿ ರೂ 3,50,000/-

7 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೇ.55 ಅಂಕಗಳನ್ನು or ಪೂರಕ ಗ್ರೇಡ್ ಪಡೆದಿರಬೇಕು.

ಪಂ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳು ಶೇ.50 ರಷ್ಟು ಅಂಕಗಳನ್ನು or ಪೂರಕ ಗ್ರೇಡ್ ಪಡೆದಿರಬೇಕು.

@NMMS ಪರೀಕ್ಷೆಯ ಶುಲ್ಕದ ವಿವರ@

ಸಾಮಾನ್ಯ, ಇತರೆ ಹಿಂದುಳಿದ ವರ್ಗ( ಆರ್ಥಿಕವಾಗಿ ಹಿಂದುಳಿದವರು) ರೂ.20-00

ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ.10-00

How to Download NMMS Nominal Roll ವಿಡಿಯೋ 

 @ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

* NMMS ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳು ಡೌನ್ಲೋಡ್ ಮಾಡಲು Click ಮಾಡಿ.

ಸದರಿ ಪರೀಕ್ಷೆಯು ಕನ್ನಡ, ಇಂಗ್ಲೀಷ್, ಉರ್ದು, ಮರಾಠಿ, ಮತ್ತು ತೆಲುಗು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (MHRD) ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸುವಂತಹ ಪರೀಕ್ಷೆಯಾಗಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ನಡೆಸುತ್ತದೆ.

*ಪತ್ರಿಕೆ 1-

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (MAT) 90 ನಿಮಿಷ, 90 ಪ್ರಶ್ನೆ, 90 ಅಂಕ.

*ಪತ್ರಿಕೆ 2-

ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) 90 ನಿಮಿಷ, 90 ಪ್ರಶ್ನೆ, 90 ಅಂಕ.

ಸೂಚನೆ:- ವಿಕಲಚೇತನ ಮಕ್ಕಳಿಗೆ 30ನಿಮಿಷ ಹೆಚ್ಚುವರಿ ಸಮಯವಿರುತ್ತದೆ.

ಈ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಪ್ರತಿವರ್ಷ ₹12000/- ದಂತೆ 9ನೇ ತರಗತಿಯಿಂದ 12ನೇ ತರಗತಿ ವರೆಗೆ ಅಂದರೆ ನಾಲ್ಕು ವರ್ಷ ಶಿಷ್ಯವೇತನ ನೀಡಲಾಗುತ್ತದೆ.

How to Download NMMS Hall Ticket ವಿಡಿಯೋ.


Click Below ಲಿಂಕ್ & Download Circular





*NMMS ನ MAT & SAT ಸಂಪೂರ್ಣ ಅಧ್ಯಯನ ವಸ್ತು/Study Materiaಡೌನ್ಲೋಡ್ ಮಾಡಲು Click ಮಾಡಿ.

ನಾವು ಓದಿ ತಿಳಿದು ಮಕ್ಕಳಿಗೆ ತಿಳಿಸಬೇಕಾದ ನಮ್ಮ ಪರಂಪರೆಯ ಪ್ರಮುಖ ಅಂಶಗಳು

   ನಮ್ಮ ಸಂಸ್ಕೃತಿ-ಪರಂಪರೆಯ ಪ್ರಮುಖ ಅಂಶಗಳನ್ನು ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿ ಕೊಳ್ಳೋಣ.

ನಾವು ಓದಿ ತಿಳಿದು ಮಕ್ಕಳಿಗೆ ತಿಳಿಸಬೇಕಾದ  ನಮ್ಮ ಪರಂಪರೆಯ ಪ್ರಮುಖ ಅಂಶಗಳು

ದಿಕ್ಕುಗಳು:-

1. ಪೂರ್ವ /ಮೂಡಣ

2. ದಕ್ಷಿಣ.  /ತೆಂಕಣ

3. ಪಶ್ಚಿಮ /ಪಡುವಣ

4. ಉತ್ತರ /ಬಡಗಣ


ಮೂಲೆಗಳು:-

1. ಆಗ್ನೇಯ 

2. ನೈರುತ್ಯ 

3. ವಾಯುವ್ಯ 

4. ಈಶಾನ್ಯ 


ವೇದಗಳು:-

1. ಋಗ್ವೇದ 

2. ಯಜುರ್ವೇದ 

3. ಸಾಮವೇದ 

4. ಅಥರ್ವಣ ವೇದ 


ಪುರುಷಾರ್ಥಗಳು:-

1. ಧರ್ಮ 

2. ಅರ್ಥ 

3. ಕಾಮ 

4. ಮೋಕ್ಷ 


ಪಂಚಭೂತಗಳು:-

1. ಗಾಳಿ 

2. ನೀರು 

3. ಭೂಮಿ 

4. ಆಕಾಶ 

5. ಅಗ್ನಿ 


ಪಂಚೇಂದ್ರಿಯಗಳು:-

1. ಕಣ್ಣು 

2. ಮೂಗು 

3. ಕಿವಿ 

4. ನಾಲಿಗೆ 

5. ಚರ್ಮ 


ಲಲಿತ ಕಲೆಗಳು:-

1. ಕವಿತ್ವ 

2. ಚಿತ್ರಲೇಖನ 

3. ನಾಟ್ಯ 

4. ಸಂಗೀತ 

5. ಶಿಲ್ಪ ಕಲೆ 


ಪಂಚಗಂಗೆಯರು:-

1. ಗಂಗಾ 

2. ಕೃಷ್ನಾ

3. ಗೋದಾವರಿ 

4. ಕಾವೇರಿ 

5. ತುಂಗಭದ್ರಾ 


ದೇವತಾ ವೃಕ್ಷಗಳು: -

1. ಮಂದಾರ 

2. ಪಾರಿಜಾತ 

3. ಕಲ್ಪವೃಕ್ಷ 

4. ಸಂತಾನ 

5. ಹರಿ ಚಂದನ 


ಪಂಚೋಪಚಾರಗಳು:-

1. ಸ್ನಾನ 

2. ಪೂಜೆ 

3. ನೈವೇದ್ಯ 

4. ಪ್ರದಕ್ಷಿಣೆ 

5. ನಮಸ್ಕಾರ 


ಪಂಚಾಮೃತಗಳು:-

1. ಹಸುವಿನ ಹಾಲು 

2. ಮೊಸರು 

3. ತುಪ್ಪ 

4. ಸಕ್ಕರೆ 

5. ಜೇನುತುಪ್ಪ 


ಪಂಚಲೋಹಗಳು:- 

1. ಚಿನ್ನ 

2. ಬೆಳ್ಳಿ 

3. ತಾಮ್ರ 

4. ಸೀಸ 

5. ತವರ 


ಪಂಚರಾಮರು:-

1. ಅಮರಾವತಿ 

2. ಭೀಮವರಂ 

3. ಪಾಲಕೊಲ್ಲು 

4. ಸಾಮರ್ಲಕೋಟ

5. ದ್ರಾಕ್ಷಾರಾಮಂ 


ಷಡ್ರುಚಿಗಳು:-

1. ಸಿಹಿ 

2. ಹುಳಿ 

3. ಕಹಿ 

4. ಒಗರು 

5. ಕಾರ 

6. ಉಪ್ಪು 


ಅರಿಷಡ್ವರ್ಗಗಳು:-

1. ಕಾಮ 

2. ಕ್ರೋಧ 

3. ಲೋಭ 

4. ಮೋಹ 

5. ಮದ

6. ಮತ್ಸರ 


ಋತುಗಳು:-

1. ವಸಂತ 

2. ಗ್ರೀಷ್ಮ 

3. ವರ್ಷ 

4. ಶರತ್ 

5. ಹೇಮಂತ 

6. ಶಿಶಿರ 


ಸಪ್ತ ಋಷಿಗಳು:-

1. ಕಾಶ್ಯಪ 

2. ಗೌತಮ 

3. ಅತ್ರಿ 

4. ವಿಶ್ವಾಮಿತ್ರ 

5. ಭಾರದ್ವಾಜ 

6. ವಸಿಷ್ಠ 

7. ⁠ಜಮದಗ್ನಿ 


ತಿರುಪತಿಯಲ್ಲಿನ ಸಪ್ತಗಿರಿಗಳು:- 

1. ಶೇಷಾದ್ರಿ 

2. ನೀಲಾದ್ರಿ 

3. ಗರುಡಾದ್ರಿ

4. ಅಂಜನಾದ್ರಿ 

5. ವೃಷಭಾದ್ರಿ

6. ನಾರಾಯಣದ್ರಿ 

7. ವೇಂಕಟಾದ್ರಿ 


ಸಪ್ತ ವ್ಯಸನಗಳು:-

1. ಜೂಜು 

2. ಮದ್ಯಪಾನ 

3. ಕಳ್ಳತನ 

4. ಬೇಟೆ 

5. ವ್ಯಭಿಚಾರ 

6. ದುಂದು ಖರ್ಚು 

7. ಕಠಿಣ ಮಾತು 


ಸಪ್ತ ನದಿಗಳು:-

1. ಗಂಗಾ 

2. ಯಮುನಾ 

3. ಸರಸ್ವತಿ 

4. ಗೋದಾವರಿ 

5. ಸಿಂಧು 

6. ನರ್ಮದಾ 

7. ಕಾವೇರಿ 


ನವ ಧಾನ್ಯಗಳು:- 

1. ಗೋಧಿ 

2. ಭತ್ತ/ನೆಲ್ಲು 

3. ಹೆಸರು 

4. ಕಡಲೆ 

5. ತೊಗರಿ 

6. ನವಣೆ 

7. ಉದ್ದು 

8. ಹುರಳಿ 

9. ಅಲಸಂದೆ 


ನವರತ್ನಗಳು:-

1. ಮುತ್ತು

2. ಹವಳ

3. ಗೋಮೇಧಿಕ

4. ವಜ್ರ 

5. ಕೆಂಪು 

6. ನೀಲಿ 

7. ಕನಕ ಪುಷ್ಯ ರಾಗ 

8. ಪಚ್ಚೆ/ಮರಕತ

9. ವೈಡೂರ್ಯ


ನವ ಧಾತುಗಳು:-

1. ಚಿನ್ನ

2. ಬೆಳ್ಳಿ 

3. ಹಿತ್ತಾಳೆ 

4. ತಾಮ್ರ 

5. ಕಬ್ಬಿಣ 

6. ಕಂಚು 

7. ಸೀಸ

8. ತವರ 

9. ಕಾಂತ ಲೋಹ


ನವರಸಗಳು:-

1. ಹಾಸ್ಯ 

2. ಶೃಂಗಾರ 

3. ಕರುಣ 

4. ಶಾಂತ 

5. ರೌದ್ರ 

6. ಭಯಾನಕ 

7. ಬೀಭತ್ಸ

8. ಅದ್ಭುತ 

9. ವೀರ 


ನವದುರ್ಗೆಯರು:-

1. ಶೈಲ ಪುತ್ರಿ 

2. ಬ್ರಹ್ಮಚಾರಿಣಿ

3. ಚಂದ್ರ ಘಂಟ 

4. ಕೂಷ್ಮಾಂಡ 

5. ಸ್ಕಂದ ಮಾತೆ 

6. ಕಾತ್ಯಾಯನಿ

7. ಕಾಳರಾತ್ರಿ 

8. ಮಹಾಗೌರಿ

9. ಸಿದ್ಧಿದಾತ್ರಿ


ದಶ ಸಂಸ್ಕಾರಗಳು:-

1. ವಿವಾಹ 

2. ಗರ್ಭದಾನ

3. ಪುಂಸವನ

4. ಸೀಮಂತ

5. ಜಾತಕ ಕರ್ಮ 

6. ನಾಮಕರಣ 

7. ಅನ್ನಪ್ರಾಶನ

8. ಚೂಡಕರ್ಮ

9. ಉಪನಯನ 

10. ಸಮವರ್ತನ 


ದಶಾವತಾರಗಳು - ಕ್ಷೇತ್ರಗಳು 

1. ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ. 

2. ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.

3. ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.

4. ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.

5. ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.

6. ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.

7. ಶ್ರೀರಾಮ ಕ್ಷೇತ್ರ -  ಅಯೋಧ್ಯ, ಉತ್ತರ ಪ್ರದೇಶ.

8. ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ. 

9. ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.

10. ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).


ಜ್ಯೋತಿರ್ಲಿಂಗಗಳು:-

1. ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ 

2. ಕಾಶಿ - ಕಾಶಿ ವಿಶ್ವೇಶ್ವರ 

3. ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ 

4. ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ. 

5. ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.

6. ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )

7. ತಮಿಳುನಾಡು - ರಾಮಲಿಂಗೇಶ್ವರ


ವಾರಗಳು:-

1. ಭಾನು 

2. ಸೋಮ 

3. ಮಂಗಳ 

4. ಬುಧ 

5. ಗುರು 

6. ಶುಕ್ರ 

7. ಶನಿ 


ಚಂದ್ರಮಾನ ತಿಂಗಳುಗಳು:-

1. ಚೈತ್ರ 

2. ವೈಶಾಖ 

3. ಜೇಷ್ಠ 

4. ಆಷಾಢ 

5. ಶ್ರಾವಣ 

6. ಭಾದ್ರಪದ 

7. ಆಶ್ವಯುಜ 

8. ಕಾರ್ತೀಕ 

9. ಮಾರ್ಗಶಿರ 

10. ಪುಷ್ಯ

11. ಮಾಘ

12. ಫಾಲ್ಗುಣ


ರಾಶಿಗಳು:-

1. ಮೇಷ 

2. ವೃಷಭ 

3. ಮಿಥುನ 

4. ಕರ್ಕಾಟಕ 

5. ಸಿಂಹ 

6. ಕನ್ಯಾ 

7. ತುಲಾ 

8. ವೃಶ್ಚಿಕ 

9. ಧನಸ್ಸು 

10. ಮಕರ 

11. ಕುಂಭ 

12. ಮೀನ


ತಿಥಿಗಳು: -

1. ಪಾಡ್ಯ 

2. ಬಿದಿಗೆ 

3. ತದಿಗೆ 

4. ಚೌತಿ 

5. ಪಂಚಮಿ 

6. ಷಷ್ಠಿ 

7. ಸಪ್ತಮಿ 

8. ಅಷ್ಟಮಿ 

9. ನವಮಿ 

10. ದಶಮಿ 

11. ಏಕಾದಶಿ 

12. ದ್ವಾದಶಿ 

13. ತ್ರಯೋದಶಿ 

14. ಚತುರ್ದಶಿ 

15. ಅಮಾವಾಸ್ಯೆ/ಹುಣ್ಣಿಮೆ


ನಕ್ಷತ್ರಗಳು:-

1. ಅಶ್ವಿನಿ 

2. ಭರಣಿ 

3. ಕೃತಿಕಾ 

4. ರೋಹಿಣಿ 

5. ಮೃಗಶಿರ 

6. ಆರುದ್ರ 

7. ಪುನರ್ವಸು 

8. ಪುಷ್ಯ 

9. ಆಶ್ಲೇಷ 

10. ಮಖ 

11. ಪುಬ್ಬಾ

12. ಉತ್ತರ 

13. ಹಸ್ತ 

14. ಚಿತ್ತಾ 

15. ಸ್ವಾತಿ 

16. ವಿಶಾಖ 

17. ಅನುರಾಧ 

18. ಜೇಷ್ಠ 

19. ಮೂಲ 

20. ಪೂರ್ವಾಷಾಢ 

21. ಉತ್ತರಾಷಾಢ 

22. ಶ್ರವಣ 

23. ಧನಿಷ್ಠ

24. ಶತಭಿಷಾ 

25. ಪೂರ್ವಾಭಾದ್ರ 

26. ಉತ್ತರಾಭಾದ್ರ 

27. ರೇವತಿ


ಮಾಹಿತಿ ಮೂಲ: ಅಂತರ್ಜಾಲ, ಸಾಮಾಜಿಕ ಮಾಧ್ಯಮ

FLN ಕ್ರಿಯಾ ಯೋಜನೆ | Action Plan PDF Download

            2025-26ನೇ ಸಾಲಿನ ಶೈಕ್ಷಣಿಕ ವರ್ಷದ 3 ರಿಂದ 10ನೇ ತರಗತಿಯ FLN (Foundational Literacy and Numeracy) ಕಲಿಕಾ ಫಲಗಳು ಅಥವಾ LAKSHYAS (ಕನ್ನಡದ 9 ಮತ್ತು ಗಣಿತದ 8 ಒಟ್ಟು 17ಕಲಿಕಾ ಫಲಗಳು)  ಗೆ ಸಂಬಂಧಿಸಿದಂತೆ ತಯಾರಿಸಿದ ಮಾದರಿ ಕ್ರಿಯಾ ಯೋಜನೆಯನ್ನು ವಿವೇಕ ಜ್ಯೋತಿ Blog & YouTube Channel ನಿಂದ ತಯಾರಿಸಲಾಗಿದೆ.
FLN ಕ್ರಿಯಾ ಯೋಜನೆ | Action Plan PDF Download

ಕ್ರಿಯಾ ಯೋಜನೆ PDF ಡೌನ್ಲೋಡ್ ಮಾಡಿ ಮಾದರಿಯಾಗಿ ಬಳಸಿ...

 
Scan below QR code and Pay you get a PDF.
  • Water Mark ಇಲ್ಲದ PDF ಗೆ Rs 100
  • Water Mark ಇರುವ PDF ಗೆ Rs 200

ಮರುಸಿಂಚನ‌ ಸಾಹಿತ್ಯ | Download Marusinchana Material

 ಮರುಸಿಂಚನ ಕಾರ್ಯಕ್ರಮದ ಪರಿಚಯ

ಮರುಸಿಂಚನ‌ ಸಾಹಿತ್ಯ | Download Marusinchana Material
                        ಮರುಸಿಂಚನ ಕಾರ್ಯಕ್ರಮವು 2023-2024, 2024-2025 ಮತ್ತು 2025-26ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ ಟ್ರಾನ್ಸಾರ್ಮ್ ಸ್ಕೂಲ್ಸ್, ಪೀಪಲ್ ಫಾರ್ ಆಕ್ಷನ್ ಸಂಸ್ಥೆಯು ಈ ಕಾರ್ಯಕ್ರಮದ ತಾಂತ್ರಿಕ ಬೆಂಬಲದ ಪಾಲುದಾರರಾಗಿದ್ದಾರೆ. ಇದು ಐದು ಶೈಕ್ಷಣಿಕ ವರ್ಷಗಳಿಗೆ ವಿಸ್ತರಿಸಿ, ಪ್ರತಿ ತರಗತಿಯ, ಪ್ರತಿ ವಿಷಯಕ್ಕೆ ~50 ಘಂಟೆಯ ಕಲಿಕಾ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಕಲಿಕೆಯ ಅಂತರವನ್ನು ಸುಧಾರಿಸಲು ಮೂಲಭೂತ ಮತ್ತು ಪೂರ್ವಾಪೇಕ್ಷಿತ ಕಲಿಕಾ ಫಲಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಗುಣವಾದ ಕಲಿಕಾ ಮಟ್ಟವನ್ನು ಸಾಧಿಸಲು ಹಾಗೂ ಖಖಐಅ ಫಲಿತಾಂಶದ ಗುಣಮಟ್ಟವನ್ನು ಸುಧಾರಿಸುವುದಾಗಿದೆ. 2023-2024 ಮತ್ತು 2024-2025ರ ಶೈಕ್ಷಣಿಕ ವರ್ಷದ ಮೊದಲ ಹಂತದಲ್ಲಿ ಮರುಸಿಂಚನ ಕಾರ್ಯಕ್ರಮವು ಕರ್ನಾಟಕದ 17 ಜಿಲ್ಲೆಗಳ 93 ಮಹತ್ವಾಕಾಂಕ್ಷೆಯ ತಾಲೂಕಿನ ಎಲ್ಲ ಕನ್ನಡ ಮಾಧ್ಯಮ, ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಸಂಯೋಜಿತ ಶಾಲಾ/ಕಾಲೇಜುಗಳನ್ನು ಪ್ರಮುಖ ಆದ್ಯತೆಯಾಗಿ ಜಾರಿಗೊಳಿಸಲಾಗಿದೆ.

                  ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಎರಡನೇ ಹಂತದ 2025-26ರ, ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದು ಎಲ್ಲಾ ಕನ್ನಡ ಮಾಧ್ಯಮ, ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ/ಕಾಲೇಜುಗಳನ್ನು ಒಳಗೊಂಡಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮರುಸಿಂಚನದ ಉದ್ದೇಶಗಳು ಈ ಕೆಳಗಿನಂತಿವೆ:

  • ಗ್ರೇಡ್-ಹಂತದ ವಿಷಯವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಪೂರ್ವಾಪೇಕ್ಷಿತ ಕಲಿಕಾ ಫಲಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಕಲಿಕೆಯ ಅಂತರವನ್ನು ನಿವಾರಿಸುವುದು.
  • 6 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮೂಲಭೂತ, ಪೂರ್ವಾಪೇಕ್ಷಿತ ಕಲಿಕಾ ಫಲಗಳನ್ನು ಬಲಪಡಿಸುವುದು ಮತ್ತು ಶಾಲೆಯಲ್ಲಿ ಪ್ರಗತಿ ಸಾಧಿಸಲು ಅಗತ್ಯವಾದ ಕೌಶಲ್ಯಗಳನ್ನು ಖಚಿತಪಡಿಸಿಕೊಳ್ಳುವುದು.
  • ಉದ್ದೇಶಿತ ಬೋಧನೆಯ ಪರಿಣಾಮಕಾರಿತ್ವವನ್ನು ಸುಧಾರಿಸಲು ತರಬೇತಿ, ಸಹಪಾಠಿ ಕಲಿಕೆ, ಪ್ರಭುತ್ವ ಮತ್ತು ಕಲಿಕಾ ಫಲಗಳ ಆಧಾರಿತ ಕಲಿಕಾ ವಿಧಾನಗಳನ್ನು ಪರಿಣಾಮಕಾರಿ ಬೋಧನಾ ತಂತ್ರಗಳೊಂದಿಗೆ ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸಿ, ತರಗತಿಯ ಬೋಧನಾ-ಕಲಿಕೆಯನ್ನು ಉತ್ತಮಗೊಳಿಸುವುದು.
  • ಶಿಕ್ಷಕರಿಗೆ ಮಾರ್ಗದರ್ಶನ ನೀಡಲು, ಪರಿಣಾಮಕಾರಿ ತರಗತಿಗೆ ಬೋಧನೆ-ಕಲಿಕೆಯನ್ನು ಬೆಂಬಲಿಸಲು ಮತ್ತು ಕಾರ್ಯಕ್ರಮದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು CRP ಗಳು, BRP ಗಳು ಮತ್ತು ಮುಖ್ಯ ಶಿಕ್ಷಕರು ಸೇರಿದಂತೆ ಶೈಕ್ಷಣಿಕ ಪ್ರಮುಖ ಭಾಗೀದಾರರ ಜವಾಬ್ದಾರಿಗಳನ್ನು ಅರಿತುಕೊಂಡು ಅನುಷ್ಠಾನಗೊಳಿಸುವುದು.
  • ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ/ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆಯ ಮೂಲಕ SSLC ಫಲಿತಾಂಶಗಳನ್ನು ಸುಧಾರಿಸುವುದು.
  • ಶಾಲೆ, ತಾಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ನಿಯಮಿತ ಮೇಲ್ವಿಚಾರಣೆ, ಪ್ರತಿಕ್ರಿಯೆ ಮತ್ತು ದತ್ತಾಂಶಗಳ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಗಾಗಿ ಗುಣಮಟ್ಟದ ಭರವಸೆ ಕಾರ್ಯವಿಧಾನಗಳನ್ನು ಸ್ಥಾಪಿಸುವುದು.
  • ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಲು ಮತ್ತು ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸಲು ಪ್ರಮಾಣೀಕೃತ ಮೌಲ್ಯಮಾಪನ ವಿಧಾನವನ್ನು ಬಳಸುವುದು.

ಸೂಚನೆ: ಕೆಳಗೆ ತಮಗೆ ಬೇಕಾದ ತರಗತಿಯ ವಿಷಯದ ಕೈಪಿಡಿಯ ಮೇಲೆ Click ಮಾಡಿ Download ಮಾಡಿ.

 6ನೇ ತರಗತಿ 
016ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಕನ್ನಡ

026ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಆಂಗ್ಲ

036ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಗಣಿತ

046ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ವಿಜ್ಞಾನ

056ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಸಮಾಜ ವಿಜ್ಞಾನ

066ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಕನ್ನಡ

076ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಆಂಗ್ಲ

086ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಗಣಿತ

096ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ವಿಜ್ಞಾನ

106ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಸಮಾಜ ವಿಜ್ಞಾನ


7ನೇ ತರಗತಿ
017ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಕನ್ನಡ

027ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಆಂಗ್ಲ

027ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಆಂಗ್ಲ

037ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಗಣಿತ

047ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ವಿಜ್ಞಾನ

057ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಸಮಾಜ ವಿಜ್ಞಾನ

067ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಕನ್ನಡ

077ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಆಂಗ್ಲ

087ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಗಣಿತ

097ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ವಿಜ್ಞಾನ

107ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಸಮಾಜ ವಿಜ್ಞಾನ


8ನೇ ತರಗತಿ 
018ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಕನ್ನಡ











9ನೇ ತರಗತಿ 
019ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಕನ್ನಡ

029ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಆಂಗ್ಲ

039ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಗಣಿತ

049ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ವಿಜ್ಞಾನ

059ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಸಮಾಜ ವಿಜ್ಞಾನ

069ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಕನ್ನಡ

079ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಆಂಗ್ಲ

089ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಗಣಿತ

099ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ವಿಜ್ಞಾನ

109ನೇ ತರಗತಿ ಮರುಸಿಂಚನ ಶಿಕ್ಷಕರ ಕೈಪಿಡಿ - ಸಮಾಜ ವಿಜ್ಞಾನ


10ನೇ ತರಗತಿ 
0110ನೇ ತರಗತಿ ಮರುಸಿಂಚನ ವಿದ್ಯಾರ್ಥಿ ಕೈಪಿಡಿ - ಕನ್ನಡ











ವಿವೇಕ ಜ್ಯೋತಿ YouTube Channel


Popular Post