ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗
ಶಾಲಾ ಸಂಸತ್ತು ರಚನೆ, ಉದ್ದೇಶ ಮತ್ತು ಅವಶ್ಯ ನಮೂನೆಗಳ PDF
ಶಾಲಾ ಸಂಸತ್ತು ಚುನಾವಣೆಗೆ ಅವಶ್ಯವಿರುವ ನಮೂನೆಗಳು ಅಥವಾ ದಸ್ತಾವೇಜುಗಳು.
ಸೂಚನೆ: ನಮೂನೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ Download ಮಾಡಿ ಮಾದರಿಯಾಗಿ ಬಳಸಿ.
1. ಶಾಲಾ ಸಂಸತ್ತು ಚುನಾವಣಾ ಅಧಿಸೂಚನೆ.
4. ಪಿ. ಆರ್. ಓ ಡೈರಿ (PRO Dairy)
6. ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ ನಮೂನೆ.
10. ಮತದಾರರ ಪಟ್ಟಿ.
11. ಚುನಾಯಿತ ಅಭ್ಯರ್ಥಿಗಳ ಪಟ್ಟಿ.
12. ಶಾಲಾ ಸಂಸತ್ತು ಮಂತ್ರಿಗಳ ಪಟ್ಟಿ.
ಶಾಲಾ ಸಂಸತ್ತು ಚುನಾವಣೆ ವಿಡಿಯೋ
- ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು.
- ಜವಬ್ದಾರಿಯುತ ನಾಗರಿಕರಾಗಲು ತರಬೇತು ನೀಡುವುದು.
- ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ತೆಗೆದುಕೊಳ್ಳುವುದು.
- ಶಾಲೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ ಮತ್ತು ಕಾರ್ಯಕ್ರಮಗಳಿಗೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವುದು.
- ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು.
- ಮಕ್ಕಳ ಸಮಸ್ಯೆಗಳ ಚರ್ಚೆಗೆ ಸೂಕ್ತ ವೇದಿಕೆ ನಿರ್ಮಿಸುವುದು.
- ಶಾಲಾ ಆಡಳಿತದಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ಅವಕಾಶ ನೀಡುವುದು.
- ಚುನಾವಣೆಯ ಪ್ರಕ್ರಿಯೆಯನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸುವುದು.
- ಶಾಲೆ ಮತ್ತು ಸಮುದಾಯದ ನಡುವಿನ ಸೂಕ್ತ ಪ್ರಾತಿನಿಧ್ಯವನ್ನು ಸಕ್ರಿಯಗೊಳಿಸುವುದು.
- ಮಕ್ಕಳಲ್ಲಿ ಪರಸ್ಪರ ಐಕ್ಯತೆ, ಒಗ್ಗಟ್ಟು ಮತ್ತು ಸಹೋದರತ್ವ ಭಾವನೆ ಬೆಳೆಸುವುದು.
- ದೇಶ ಕಟ್ಟುವ ಕಾರ್ಯದಲ್ಲಿ ಜವಾಬ್ದಾರಿ ನಾಯಕತ್ವ ಬೆಳೆಸುವುದು.
- ಸೈದ್ದಾಂತಿಕ ತತ್ವಗಳನ್ನು ಪ್ರಾಯೋಗಿಕವಾಗಿ ತಿಳಿಯುವುದು.
- ಸುವ್ಯವಸ್ಥಿತ ಶಾಲೆಯ ನಿರ್ವಹಣೆ.
- ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸುಧಾರಣೆ.
- ಶಿಸ್ತಿನ ಪರಿಸರ ನಿರ್ಮಾಣವಾಗುತ್ತದೆ.
- ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ.
- ನಿರ್ದಿಷ್ಟ ಅವಧಿಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಆಯೋಜನೆ.
- ಕಲಿಕೆಯಲ್ಲಿ ಹಿಂದುಳಿಗೆ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲ.
- ಶಾಲಾ ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಿಕೆ.
- ಮಕ್ಕಳಲ್ಲಿ ಅಭಿವ್ಯಕ್ತಿ ಹಾಗೂ ಸಂವಹನ ಕೌಶಲಗಳ ಅಭಿವೃದ್ದಿ.
- ಮಾನವೀಯ ಮೌಲ್ಯಗಳ ಜಾಗೃತಿಯಾಗುತ್ತದೆ.
- ಮಕ್ಕಳಲ್ಲಿ ವಿಷಯಾಧಾರಿತ ಕೌಶಲ್ಯಗಳ ಅಭಿವೃದ್ದಿಯಾಗುತ್ತದೆ.
- ಮಕ್ಕಳಲ್ಲಿ ನಾಯಕತ್ವದ ಗುಣಗಳ ಅಭಿವೃದ್ದಿ.
- ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಾಯೋಗಿಕ ಪರಿಚಯ.
- ಮಕ್ಕಳಲ್ಲಿ ಆರೋಗ್ಯಕರ ಪೈಪೋಟಿಯ ಬೆಳವಣಿಗೆ.
ಅನ್ನಭಾಗ್ಯದ ಹಣ ನಿಮಗೆ ಬಂದಿದೆಯೇ? ಎಂದು ಈಗಲೇ ಚೆಕ್ ಮಾಡಿ..
ಅನ್ನಭಾಗ್ಯದ ಹಣವು ಬಂದಿದೆಯೇ ಎಂದು ಈಗಲೇ ಚೆಕ್ ಮಾಡಿ :
ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ :
STEP - 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ
ಆಗ ಮುಖ ಪುಟ ತೆರೆದುಕೊಳ್ಳುತ್ತದೆ, ಅದರಲ್ಲಿ e-Status ಎಂಬ ಆಯ್ಕೆಯನ್ನು ಒತ್ತಿ, ನಂತರ DBT Status ಮೇಲೆ ಕ್ಲಿಕ್ ಮಾಡಿ.

STEP - 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.
STEP - 3 : ನಂತರ ಕೆಳಗಿನ ಭಾಗದಲ್ಲಿರುವ DBT Status ಮೇಲೆ ಕ್ಲಿಕ್ ಮಾಡಿ.
STEP - 4: ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ(Type ಮಾಡಿ), GO ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ UID ಮತ್ತು ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬ ಮಾಹಿತಿಯನ್ನು ನೋಡಬಹುದಾಗಿದೆ.
ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣ ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು
✅ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾದ ತಕ್ಷಣ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ ಹಣ ಜಮಾ ಆಗಿರುವುದರ ಬಗ್ಗೆ ಸಂದೇಶ(Message) ಕೂಡ ಬರುತ್ತದೆ.
ಗೃಹ ಜ್ಯೋತಿಗೆ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಿ | Apply for Gruha Jyothi on mobile
- OTP ಯನ್ನು ನಮೂದಿಸಿ(Type ಮಾಡಿ)(ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಗೆ OTP ಬರುತ್ತದೆ)
- ಅಲ್ಲಿ ನಿಮ್ಮ ಎಸ್ಕಾಂ ಆಯ್ಕೆ ಮಾಡಿ / Select ESCOM.
- ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ / Account id/Connection id ನಮೂದಿಸಿ.
- ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ / Applicant Name (Auto Fill ಆಗುತ್ತದೆ)
- ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ / Applicant Address (Auto Fill ಆಗುತ್ತದೆ)
- ನಿವಾಸಿ ವಿಧ / Occupancy Type ಆಯ್ಕೆ ಮಾಡಿ.(ಮಾಲಿಕ/ಬಾಡಿಗೆದಾರ/ಕುಟುಂಬದ ಸದಸ್ಯ)
- ಸಂವಹನಕ್ಕಾಗಿ ದೂರವಾಣಿ ಸಂಖ್ಯೆ / Mobile Number ನಮೂದಿಸಿ. Get OTP ಬಟನ್ ಮೇಲೆ ಕ್ಲಿಕ್ ಮಾಡಿ.
- ಕೆಳಗೆ OTP ಯನ್ನು ನಮೂದಿಸಿ.
- Check Box ✅ ಮೇಲೆ ಕ್ಲಿಕ್ ಮಾಡಿ.
- ಕೊನೆಯಲ್ಲಿ Submit button ಮೇಲೆ ಕ್ಲಿಕ್ ಮಾಡಿ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :
- ಆಧಾರ್ ಕಾರ್ಡ್ ಪ್ರತಿ
- ವಿದ್ಯುತ್ ಸಂಪರ್ಕ ದಾಖಲಾತಿ / ವಿದ್ಯುತ್ ಬಿಲ್ ಪ್ರತಿ
- ಕರ್ನಾಟಕ ಖಾಯಂ ನಿವಾಸಿ ಪುರಾವೆ
- ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆಯ ಕರಾರು ಪತ್ರ ಇರಬೇಕು.
ಗೃಹ ಜ್ಯೋತಿ ಯೋಜನೆಯ ಷರತ್ತುಗಳು :
- ಗೃಹ ಜ್ಯೋತಿ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ ಹಾಗೂ ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
- ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
- ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮಿಟರ್ ಗಳಿದ್ದಲ್ಲಿ, ಒಂದು ಮಿಟರ್ ಗೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರು.
- ಈ ಯೋಜನೆಯ ಸೌಲಭ್ಯ ಪಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
- ಗ್ರಾಹಕರು Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.
ನಿಮ್ಮ ಗೃಹ ಜ್ಯೋತಿ ಅರ್ಜಿ ಸ್ವೀಕೃತಿ ಡೌನ್ಲೋಡ್ ಮಾಡಿ | Download Your Gruha Jyothi Acknowledgement
ಈಗಾಗಲೇ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ನಿಮ್ಮ “ಅರ್ಜಿ ಸ್ವೀಕೃತಿ - (Application Acknowledgement)” ಅನ್ನು ಡೌನ್ಲೋಡ್ ಮಾಡಬಹುದು.
ನಿಮ್ಮ ಗೃಹ ಜ್ಯೋತಿ ಅರ್ಜಿ ಸ್ಥಿತಿ ತಿಳಿಯಿರಿ | Check Your Gruha Jyothi Apply Status
ಈಗಾಗಲೇ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ನಿಮ್ಮ “ಅರ್ಜಿ ಸ್ಥಿತಿ - (Application Status)” ಅನ್ನು ಪರೀಕ್ಷಿಸಿಕೊಳ್ಳಬಹು.
PAN-AADHAAR Link, Check Status | ಪ್ಯಾನ್-ಆಧಾರ ಲಿಂಕ್ ಮಾಡುವ ವಿಧಾನ.
ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದ ವಿತ್ತ ಸಚಿವಾಲಯವು PAN Card ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ ಎಂದು ಗಡುವು ನೀಡಿತ್ತು. ಹೊಸ ಆದೇಶದ ಪ್ರಕಾರ ಜೂನ್ 30, 2023ರ ತನಕ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ. Link ಮಾಡದಿದ್ದರೆ ಅಂಥವರ PAN Card ಏಪ್ರಿಲ್ 1ರಿಂದ ನಿಷ್ಕ್ರಿಯವಾಗಲಿದೆ.
Step - 1: ಮೇಲಿನ ಲಿಂಕ್ ಕ್ಲಿಕ್ ಮಾಡಿ ನಂತರ ಮೇಲಿನ ರೀತಿ ಒಂದು ಪೇಜ್ ತೆರೆದುಕೊಳ್ಳುತ್ತದೆ.
Step - 2 : ಅಲ್ಲಿ ನಿಮ್ಮ PAN ನಂಬರ್ ನಮೂದಿಸಿ.
Step - 3 : ನಿಮ್ಮ Aadhaar ನಂಬರ್ ನಮೂದಿಸಿ.
Step - 4 : ಕೆಳಗೆ ಕಾಣುವ “View Link Aadhaar Status” ಮೇಲೆ ಕ್ಲಿಕ್ ಮಾಡಿ.
PAN-ಆಧಾರ್ ಲಿಂಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Step - 1 : ಸಂದೇಶವನ್ನು ಈ ಕೆಳಗಿನಂತೆ ಟೈಪ್ ಮಾಡಿ UIDPAN<SPACE><12 digit Aadhaar Number><Space><10 digit PAN Number>
Step - 2 : ಈ ಸಂದೇಶವನ್ನು Registered ಮೊಬೈಲ್ ನಂಬರ್ ನಿಂದ 56161 ಅಥವಾ 567678 ನಂಬರಿಗೆ send ಮಾಡಿ.
ಡಿಜಿಟಲ್ PAN Card ( E-Pan Card) ಡೌನ್ಲೋಡ್ ಮಾಡುವ ವಿಧಾನ.
Step - 1 : ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.onlineservices.nsdl.com/paam/requestAndDownloadEPAN.html
Step - 2 : ನಿಮ್ಮ PAN Card ನಂಬರ್ ನಮೂದಿಸಿ.
Step - 3 : ನಿಮ್ಮ Aadhaar ನಂಬರ್ ನಮೂದಿಸಿ.
Step - 4 : ನಿಮ್ಮ ಜನನದ ತಿಂಗಳು ನಮೂದಿಸಿ.
Step - 5 : ನಿಮ್ಮ ಜನನದ ವರ್ಷ ನಮೂದಿಸಿ.
Step - 6 : ✅ Right ಕ್ಲಿಕ್ ಮಾಡಿ.
Step - 7 : ಅಲ್ಲಿ ಕಾಣುವ Captcha ಕೋಡ್ ನಮೂದಿಸಿ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ | Karnataka Arogya Sanjeevini Scheme
ಯೋಜನೆಯ ಉದ್ದೇಶಕರ್ನಾಟಕ ಸರ್ಕಾರವು ಆಯವ್ಯಯದಲ್ಲಿ ಘೋಷಿಸಿದಂತೆ, ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತವಾಗಿ ವಿವಿಧ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಎಂಬ ಮಹತ್ವಕಾಂಕ್ಷಿ ಆರೋಗ್ಯ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್) ಮುಖಾಂತರ ಅನುಷ್ಠಾನಗೊಳಿಸುತ್ತಿದೆ.
• ಸರ್ಕಾರಿ ನೌಕರರ ಪತಿ ಅಥವಾ ಪತ್ನಿ, ಅವಲಂಬಿತ ಮಕ್ಕಳು ಮತ್ತು ತಂದೆ-ತಾಯಿ.
• ವೈದ್ಯರು / ತಜ್ಞ ವೈದ್ಯರೊಂದಿಗೆ ಸಮಾಲೋಚನೆ.
• ಶಸ್ತ್ರ ಚಿಕಿತ್ಸಾ ವಿಧಾನಗಳು.
• ವೈದ್ಯಕೀಯ ಚಿಕಿತ್ಸಾ ವಿಧಾನಗಳು - ಮೆಡಿಕಲ್ ಮ್ಯಾನೆಜ್‌ಮೆಂಟ್.
• ರೋಗ ನಿರ್ಧಾರ ವಿಧಾನಗಳು - ವಿವಿಧ ಬಗೆಯ ವೈದ್ಯಕೀಯ ತಪಾಸಣಿಗಳು, ಇಮೇಜಿಂಗ್ ಸೌಲಭ್ಯಗಳು - ಕ್ಷ-ಕಿರಣ, ಸಿ.ಟಿ ಸ್ಥಾನ್, ಇ.ಸಿ.ಜಿ, ಎಂ.ಆರ್.ಐ, ಆಂಜಿಯೋಗ್ರಾಮ್, ಅಲ್ಬಸೌಂಡ್ ಇತ್ಯಾದಿ.
• ಕಣ್ಣು ಹಾಗೂ ದಂತ ಚಿಕಿತ್ಸೆಗಳು.
• ಹಗಲು ಚಿಕಿತ್ಸೆಗಳು Day-care - ಕಿಮೋಥೆರಪಿ, ಹಿಮೊಡಯಾಲಿಸಿಸ್, ಲಘು ವೈದ್ಯಕೀಯ ವಿಧಾನಗಳು, ಬಯಾಸ್ಸಿ, ಲಘು ಶಸ್ತ್ರ ಚಿಕಿತ್ಸೆಗಳು, ಕಣ್ಣಿನ ಮೊರೆ ಶಸ್ತ್ರ ಚಿಕಿತ್ಸೆ, ಇತ್ಯಾದಿ.
• ಅತಿ ವಿಶೇಷ, ವಿರಳ ಹಾಗೂ ಭಾರಿ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಚಿಕಿತ್ಸೆಗಳು.
• ಅಂಗಾಂಗ ಕಸಿ.
• ಆಯುರ್ವೇದ / ಪ್ರಕೃತಿ ಚಿಕಿತ್ಸೆ, ಯೋಗ, ಯುನಾನಿ, ಹೋಮಿಯೋಪತಿ ಚಿಕಿತ್ಸೆಗಳು.
• ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳು.
• ಆಂಬ್ಯುಲೆನ್ಸ್ ಸೇವೆಗಳು.
• ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆಯುಷ್ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ಸರ್ಕಾರಿ ವಲಯದ ವೈದ್ಯಕೀಯ ಸಂಸ್ಥೆಗಳು - ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು, ಸಾಮಾನ್ಯ ಆಸ್ಪತ್ರೆಗಳು, ಬಹುತಜ್ಞ ಆಸ್ಪತ್ರೆಗಳು, ಭೋದನಾ ಆಸ್ಪತ್ರೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಇತ್ಯಾದಿ.
• ಸಾರ್ವಜನಿಕ ವಲಯದ ಸ್ವಾಯತ್ತ ಸಂಸ್ಥೆಗಳು.
• ಸ್ಥಳೀಯ ಸಂಸ್ಥೆಗಳಿಗೆ ಒಳಪಟ್ಟ ಆಸ್ಪತ್ರೆಗಳು.
• ಯೋಜನೆಯಡಿ ನೊಂದಾಯಿಸಲ್ಪಟ್ಟ ಖಾಸಗಿ ವಲಯದ ವೈದ್ಯಕೀಯ ತಪಾಸಣಾ ಕೇಂದ್ರಗಳು, ರೋಗ ನಿರ್ಧಾರ ಕೇಂದ್ರಗಳು, ಇಮೇಜಿಂಗ್ ಕೇಂದ್ರಗಳು, ಏಕ ಹಾಗೂ ಬಹುತಜ್ಞ ಆಸ್ಪತ್ರೆಗಳು.
• ಕಣ್ಣು ಹಾಗೂ ದಂತ ಆಸ್ಪತ್ರೆಗಳು.
• ಹಗಲು ಚಿಕಿತ್ಸಾ ಕೇಂದ್ರಗಳು – ಡೇ-ಕೇರ್ ಕೇಂದ್ರಗಳು.
• ಡಯಾಲಿಸಿಸ್ ಕೇಂದ್ರಗಳು.
• ಆಯುರ್ವೇದ, ಯುನಾನಿ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಆಸ್ಪತ್ರೆಗಳು.
• ಕೃತಕ ಗರ್ಭಧಾರಣ (IVF) ಕೇಂದ್ರಗಳು. ವಾಕ್ ಶ್ರವಣ – ಎ.ವಿ.ಟಿ ಕೇಂದ್ರಗಳು.
• ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯಡಿ ನೊಂದಾಯಿಸಲ್ಪಡುತ್ತಾರೆ.
• ಫಲಾನುಭವಿಗಳು ತಮಗೆ ಅನುಕೂಲವಾದ ಯಾವುದೇ ಸಾರ್ವಜನಿಕ ವಲಯದ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ರೆಫರಲ್ ಇಲ್ಲದೆ ತಮ್ಮ ಕೆ.ಎ.ಎಸ್.ಎಸ್ ಆರೋಗ್ಯ ಕಾರ್ಡ್‌ನ್ನು ಹಾಜರುಪಡಿಸಿ ವೈದ್ಯಕೀಯ ಸೌಲಭ್ಯಗಳನ್ನು ನಗದು ರಹಿತವಾಗಿ ಪಡೆಯಬಹುದಾಗಿದೆ.
• ಆಸ್ಪತ್ರೆಯಲ್ಲಿ ದಾಖಲಾದ ಕೆಲವೇ ಘಂಟೆಗಳಲ್ಲಿ ಎಸ್.ಎ.ಎಸ್.ಟಿ ಮುಖಾಂತರ ಪ್ರಿ-ಆಥ್ (ಪೂರ್ವ ಅನುಮತಿ) ಅನುಮೋದನೆ ಹಾಗೂ ಚಿಕಿತ್ಸೆಗೆ ಅನುವು ಮಾಡಿ ಕೊಡಲಾಗುವುದು.
• ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಗರಿಷ್ಟ ಮಿತಿ ಇಲ್ಲ.
• ಕೆಲವೇ ದಿನಗಳಲ್ಲಿ ಫಲಾನುಭವಿಗಳ ನೋಂದಣಿ ಹಾಗೂ ಆಸ್ಪತ್ರೆಗಳ ನೋಂದಾವಣೆ ಪ್ರಾರಂಭ.
• ಹಂತ ಹಂತವಾಗಿ ನಗದು ರಹಿತ ಹೊರರೋಗಿ ಚಿಕಿತ್ಸೆ ಹಾಗೂ ಔಷಧೋಪಚಾರ, ವಾರ್ಷಿಕ ಆರೋಗ್ಯ ತಪಾಸಣೆ, ವಿಶೇಷ ಚೇತನರಿಗೆ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಣೆ ಮಾಡಲಾಗುವುದು.
ಶಿಕ್ಷಕರಿಗಾಗಿ 'ಶಿಕ್ಷಕ ಮಿತ್ರ ಆ್ಯಪ್' | Shiksha Mitra App
ಶಿಕ್ಷಕರಿಗೆ ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಸಹಾಯ ಮಾಡಲು ಮತ್ತು ಅವರ ಕೆಲಸದ ಹೊರೆ ಕಡಿಮೆ ಮಾಡಲು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ 2019-20ರ ಆಯವ್ಯಯದಲ್ಲಿ ಪ್ರಕಟಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆ್ಯಪ್ ತಯಾರಿಸಲಾಗಿದೆ.
ಶಿಕ್ಷಕರು ಮೊಬೈಲ್‍ನಲ್ಲಿ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಅಲ್ಲದೆ,ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನಗಳಲ್ಲಿ ಬಗೆಹರಿಸುವ ಬಗ್ಗೆ ಕಾಲಾವಧಿಯನ್ನೂ ನಿರ್ಧರಿಸಲಾಗಿದೆ.
ಶಿಕ್ಷಕರ ಮಿತ್ರ ಆ್ಯಪ್ ನಲ್ಲಿ ಶಿಕ್ಷಕರಿಗಾಗಿ ಸೇವೆಗಳು :
- ರಜಾ ಅರ್ಜಿ.
- ನಿಯಮ 32 ಮತ್ತು ನಿಯಮ 68 ರ ಅಡಿಯಲ್ಲಿ ಶುಲ್ಕ ಭತ್ಯೆ ಮಂಜೂರಾತಿ.
- ದೈಹಿಕ ಅಂಗವಿಕಲ ಭತ್ಯೆಯ ಮಂಜೂರಾತಿ.
- ಸಣ್ಣ ಕುಟುಂಬ ನಿಯಮಗಳ ಭತ್ಯೆಯ ಮಂಜೂರಾತಿ.
- ಮುಂಗಡಗಳನ್ನು ಪಡೆಯಲು ಅನುಮತಿ, ಭಾಗಶಃ ಹಿಂತೆಗೆದುಕೊಳ್ಳುವಿಕೆ ಅಥವಾ ಸಾಮಾನ್ಯ ಭವಿಷ್ಯ ನಿಧಿಯ ಅಂತಿಮ ಇತ್ಯರ್ಥ.
- ಹಬ್ಮುಂಬದ ಮುಂಗಡವನ್ನು ಪಡೆಯಲು ಅನುಮತಿ.
- ನಿಯಮ 247A/248/252B/224A ಅಡಿಯಲ್ಲಿ ಪಿಂಚಣಿ ಪ್ರಯೋಜನಗಳಿಗಾಗಿ ಉದ್ಯೋಗಿ ಅರ್ಹತಾ ಸೇವೆ.
- ಇತರೆ ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿ.
- ಉನ್ನತ ಶಿಕ್ಷಣ ಪಡೆಯಲು ಅನುಮತಿ.
- ಮನೆ ನಿರ್ಮಿಸಲು ಅಥವಾ ನಿವೇಶನ/ಮನೆ/ವಾಹನ ಅಥವಾ ಇತರೆ ಯಾವುದೇ ಚರ ಅಥವಾ ಸ್ಥಿರ ಆಸ್ತಿಗಳನ್ನು ಖರೀದಿಸಲು ಅನುಮತಿ.
- ಉದ್ಯೋಗಿ ಸಂಖ್ಯೆ - ಪಾಸ್‌ಪೋರ್ಟ್ ಮಾಡ್ಯೂಲ್‌ಗೆ ಅರ್ಜಿ ಸಲ್ಲಿಸಲು ಆಕ್ಷೇಪಣೆ ಪ್ರಮಾಣಪತ್ರ.
- ವಿದೇಶಿ ಪ್ರವಾಸ ಕೈಗೊಳ್ಳಲು ಅನುಮತಿ
- ಶಿಕ್ಷಕರ ವರ್ಗಾವಣೆ ಅರ್ಜಿಯನ್ನು ಕೂಡ ಈ ಆ್ಯಪ್ ನಲ್ಲಿಯೇ ಸಲ್ಲಿಸಬಹುದಾಗಿದೆ.
Click For ಶಿಕ್ಷಕ ಮಿತ್ರ Website
- ಮೊದಲು ನಿಮ್ಮ ಕೆ.ಜಿ.ಐ.ಡಿ ನಮೂದಿಸಿ.
- ರಿಜಿಸ್ಟರ್ ನ ಮೇಲೆ ಕ್ಲಿಕ್ ಮಾಡಿ.
- ಬಂದ ಒ.ಟಿ.ಪಿ ನಮೂದಿಸಿ.
- ನಂತರ ಪಾಸ್ವರ್ಡ ಸೆಟ್ ಮಾಡಿಕೊಳ್ಳಿ. (ಪಾಸ್ವರ್ಡ ಕನಿಷ್ಠ ಎಂಟು ಅಕ್ಷರ ಹೊಂದಿರಬೇಕು ಅದರಲ್ಲಿ ಒಂದು ಕ್ಯಾಪಿಟಲ್ ಅಕ್ಷರ ಒಂದು ಸಂಖ್ಯೆ ಒಂದು ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರಬೇಕು)
- ನಂತರ KGID Number ಹಾಗೂ PASSWORD ಹಾಕಿದಾಗ ನಿಮ್ಮ ಮಾಹಿತಿ ತೆರೆದುಕೊಳ್ಳುತ್ತದೆ.
- ನಿಮ್ಮ ಭಾವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.
ರಸಪ್ರಶ್ನೆ ಸ್ಪರ್ಧೆ 2022-23 ವೇಳಾಪಟ್ಟಿ ಮತ್ತು ಭಾಗವಹಿಸುವ ಲಿಂಕ್.
5 ರಿಂದ 10ನೇ ತರಗತಿ ಸಕರಾರಿ ಶಾಲಾ ಮಕ್ಕಳ ಬ್ಲಾಕ್ ಮಟ್ಟದ (Block Level) ರಸಪ್ರಶ್ನೆ ಸ್ಪರ್ಧೆ ಈ ಕೆಳಗಿನ ವೇಳಾಪಟ್ಟಿಯಂತೆ ದಿನದ 24 ಗಂಟೆ ನಡೆಯಲಿದೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನ
ಈ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಆಯಾ ತರಗತಿ ಮುಂದೆ ನೀಡಿದ Click Here ಮೇಲೆ ಕ್ಲಿಕ್ ಮಾಡಿ.
ವಿದ್ಯಾರ್ಥಿ ಗುಪ್ತಪದ (Student Password)
ನೀವು Set ಮಾಡಿಕೊಂಡ Password ನಮೂದಿಸಿ.
ಶಾಲಾ ಮುಖ್ಯೋಪಾಧ್ಯಾಯರ ವಿದ್ಯಾವಾಹಿನಿ ಪಾಸ್‌ವರ್ಡ್ ನಮೂದಿಸಿ (Enter School HM Vidyavahini Password)
Submit ಮೇಲೆ ಕ್ಲಿಕ್ ಮಾಡಿ ರಸಪ್ರಶ್ನೆ ಪ್ರಾರಂಭವಾಗುತ್ತದೆ...
(ಸೂಚನೆ : 15ನಿಮಿಷ 30 ಪ್ರಶ್ನೆಗಳು)
| ಕ್ರ. ಸಂ | ತರಗತಿ | ದಿನಾಂಕ | ರಸಪ್ರಶ್ನೆಯಲ್ಲಿ ಭಾಗವಹಿಸುವ ಲಿಂಕ್ |
|---|---|---|---|
| 1 | 5ನೇ ತರಗತಿ | 13 Feb 2023 | CLICK HERE |
| 2 | 6ನೇ ತರಗತಿ | 14 Feb 2023 | CLICK HERE |
| 3 | 7ನೇ ತರಗತಿ | 15 Feb 2023 | CLICK HERE |
| 4 | 8ನೇ ತರಗತಿ | 16 Feb 2023 | CLICK HERE |
| 5 | 9ನೇ ತರಗತಿ | 17 Feb 2023 | CLICK HERE |
| 6 | 10ನೇ ತರಗತಿ | 20 Feb 2023 | CLICK HERE |
ನಿಷ್ಠಾ 4.0 ತರಬೇತಿ - ಒಳಗೊಳ್ಳುವ / ಸಮನ್ವಯ ಶಿಕ್ಷಣ
ರಾಜ್ಯದ ಎಲ್ಲಾ ಶಿಕ್ಷಕರು ದೀಕ್ಷಾ ಪೋರ್ಟಲ್ ನಲ್ಲಿ ಒಳಗೊಳ್ಳುವ ಶಿಕ್ಷಣ / ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ನಿಷ್ಠಾ (NISHTHA) 4.0 ತರಬೇತಿಯ 7 ಮಾಡ್ಯೂಲ್ ಗಳನ್ನು ದಿನಾಂಕ 15/03/2023 ರೊಳಗೆ ಪೂರ್ಣಗೊಳಿಸಬೇಕು.
DIKSHA App ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕ್ರ. ಸಂ. | ಒಳಗೊಳ್ಳುವ ಶಿಕ್ಷಣದ ಮಾಡ್ಯೂಲ್ ಗಳು | Download ಮಾಡಲು ಕ್ಲಿಕ್ ಮಾಡಿ |
1 | ||
2 | ಸಮನ್ವಯ ತೆಯನ್ನು ಉತ್ತೇಜಿಸುವ ನೀತಿಗಳು : ಐತಿಹಾಸಿಕ ಸಂದರ್ಭ | |
3 | ||
4 | ||
5 | ||
6 | ಸಮನ್ವಯತೆಯನ್ನು ಉತ್ತೇಜಿಸಲು ತರಗತಿಯ ತಂತ್ರಗಳು | |
7 |
ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು 15ನೇ ಮಾರ್ಚ್ 2023ರ ಒಳಗಾಗಿ ಎಲ್ಲಾ ನಿಷ್ಠಾ 4.0 ತರಬೇತಿ ಮಾಡೆಲ್ ಗಳನ್ನು ಪೂರ್ಣಗೊಳಿಸಿ, ಮಾಡಲ್ ನ ಕೊನೆಯಲ್ಲಿ ರಸಪ್ರಶ್ನೆಗೆ 70% ರಷ್ಟು ಅಂಕಗಳನ್ನು ಪಡೆದರೆ ಮಾತ್ರ ಪ್ರಮಾಣ ಪತ್ರ ದೊರೆಯುತ್ತದೆ.






.png)
.png)







