Menu

Home ನಲಿಕಲಿ About ☰ Menu


 

🔍

ಗೃಹ ಜ್ಯೋತಿಗೆ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಿ | Apply for Gruha Jyothi on mobile

        ಕರ್ನಾಟಕ ಸರ್ಕಾರ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುವ ಗೃಹಜ್ಯೋತಿ ಯೋಜನೆಗೆ  ಜೂನ್‌ 18ರಿಂದಲೇ ಅರ್ಜಿ ಸಲ್ಲಿಕೆ ಆರಂಭಿಸಿದೆ. ಈ ಅರ್ಜಿಯನ್ನು ಕಡ್ಡಾಯವಾಗಿ Online ನಲ್ಲಿಯೇ ಸಲ್ಲಿಸಬೇಕು.
                   ಹಾಗಾಗಿ ನಿಮ್ಮ ಮೊಬೈಲ್ ನಲ್ಲಿಯೇ ‌ ಅತ್ಯಂತ  ಸುಲಭವಾಗಿ ಗೃಹ ಜ್ಯೋತಿ ಯೋಜನೆಗೆ Online ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಿಸಿ 


ಮೊಬೈಲ್ ನಲ್ಲಿಯೇ  Online ಅರ್ಜಿ ಸಲ್ಲಿಸುವ ಹಂತಗಳು
Step - 1: ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 
(ಈ Red ಬಟನ್ ಮೇಲೆ ಕ್ಲಿಕ್ ಮಾಡಿ)




ಗೃಹ ಜ್ಯೋತಿಗೆ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಿ | Apply for Gruha Jyothi on mobile
ಈ ಮೇಲಿನ ರೀತಿ ಮುಖಪುಟ ತೆರೆದುಕೊಳ್ಳುತ್ತದೆ.

Step - 2: ಗೃಹ ಜ್ಯೋತಿ ಮೇಲೆ ಕ್ಲಿಕ್ ಮಾಡಿ ಘೋಷಣೆ: / Declaration ಪುಟ ತೆರೆದುಕೊಳ್ಳುತ್ತದೆ.

Step - 3: Check Box ✅ Click ಮಾಡಿ ಮತ್ತು Captcha Code ನಮೂದಿಸಿ(Type ಮಾಡಿ), Agree ಬಟನ್ ಮೇಲೆ ಕ್ಲಿಕ್ ಮಾಡಿ.

Step - 4: ಮುಂದಿನ ಪುಟ ತೆರೆದುಕೊಳ್ಳುತ್ತದೆ ಅಲ್ಲಿ  ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ(Type ಮಾಡಿ), Get Details ಬಟನ್ ಮೇಲೆ ಕ್ಲಿಕ್ ಮಾಡಿ.

Step - 5: DBT Karnataka / EKYC Service ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ಮತ್ತೊಂದು ಬಾರಿ ಆಧಾರ ಕಾರ್ಡ್ ಸಂಖ್ಯೆ ನಮೂದಿಸಿ. Check Box ✅ Click ಮಾಡಿ ಮತ್ತು Generate OTP ಬಟನ್ ಮೇಲೆ ಕ್ಲಿಕ್ ಮಾಡಿ. 
  • OTP ಯನ್ನು ನಮೂದಿಸಿ(Type ಮಾಡಿ)(ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಗೆ OTP ಬರುತ್ತದೆ)
Step - 6: ಅರ್ಜಿದಾರರ ವಿವರಗಳು / Application details ಪುಟ ತೆರೆದುಕೊಳ್ಳುತ್ತದೆ. 
  • ಅಲ್ಲಿ  ನಿಮ್ಮ ಎಸ್ಕಾಂ ಆಯ್ಕೆ ಮಾಡಿ / Select ESCOM.
  • ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ / Account id/Connection id ನಮೂದಿಸಿ.
  • ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ / Applicant Name (Auto Fill ಆಗುತ್ತದೆ)
  • ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ / Applicant Address (Auto Fill ಆಗುತ್ತದೆ)
  • ನಿವಾಸಿ ವಿಧ / Occupancy Type ಆಯ್ಕೆ ಮಾಡಿ.(ಮಾಲಿಕ/ಬಾಡಿಗೆದಾರ/ಕುಟುಂಬದ ಸದಸ್ಯ)
  • ಸಂವಹನಕ್ಕಾಗಿ ದೂರವಾಣಿ ಸಂಖ್ಯೆ / Mobile Number ನಮೂದಿಸಿ. Get OTP ಬಟನ್ ಮೇಲೆ ಕ್ಲಿಕ್ ಮಾಡಿ.
  • ಕೆಳಗೆ OTP ಯನ್ನು ನಮೂದಿಸಿ.
  • Check Box ✅ ಮೇಲೆ ಕ್ಲಿಕ್ ಮಾಡಿ.
  • ಕೊನೆಯಲ್ಲಿ Submit button ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಗೃಹ ಜ್ಯೋತಿ ಅರ್ಜಿಯ ಸ್ವೀಕೃತಿ ಪತ್ರದ ಪುಟ ತೆರೆದುಕೊಳ್ಳುತ್ತದೆ ಅಲ್ಲಿ Download/print ಬಟನ್ ಮೇಲೆ ಕ್ಲಿಕ್ ಮಾಡಿ download ಮಾಡಿಕೊಳ್ಳಿ.





ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

  1. ಆಧಾರ್ ಕಾರ್ಡ್ ಪ್ರತಿ
  2. ವಿದ್ಯುತ್ ಸಂಪರ್ಕ ದಾಖಲಾತಿ / ವಿದ್ಯುತ್ ಬಿಲ್ ಪ್ರತಿ
  3. ಕರ್ನಾಟಕ ಖಾಯಂ ನಿವಾಸಿ ಪುರಾವೆ
  4. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆಯ ಕರಾರು ಪತ್ರ ಇರಬೇಕು.

ಗೃಹ ಜ್ಯೋತಿ ಯೋಜನೆಯ ಷರತ್ತುಗಳು :

  1. ಗೃಹ ಜ್ಯೋತಿ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ ಹಾಗೂ ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
  2. ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
  3. ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮಿಟರ್ ಗಳಿದ್ದಲ್ಲಿ, ಒಂದು ಮಿಟರ್ ಗೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರು.
  4. ಈ ಯೋಜನೆಯ ಸೌಲಭ್ಯ ಪಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
  5. ಗ್ರಾಹಕರು Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post