ಶ್ರೀ ಶಿವಾನಂದ ಲೋಕಪ್ಪನವರ
ಸಹಶಿಕ್ಷಕರು (GPT- 6-8)
ನನ್ನೂರು ವಿದ್ಯಾಕಾಶಿ ಪೇಡಾ ನಗರಿ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಸಣ್ಣ ಹಳ್ಳಿ 'ಮುಗಳಿ'. ನನ್ನ ಹಡೆದಪ್ಪ ಪುಂಡಲೀಕ, ಹಡೆದವ್ವ ಪಾರ್ವತಿ.
ಪ್ರಾಥಮಿಕ ಶಿಕ್ಷಣವನ್ನು ಮುಗಳಿ ಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ಬೆಳಗಾವಿ ಜಿಲ್ಲೆಯ ದೇವಗಾಂವ ಮತ್ತು ದೊಡವಾಡ ಗ್ರಾಮದಲ್ಲಿ, ಪಿಯುಸಿ ಶಿಕ್ಷಣವನ್ನು (ವಿದ್ಯಾರಣ್ಯ ಕಾಲೇಜು) ಧಾರವಾಡದಲ್ಲಿ ಮುಗಿಸಿದೆ. ಬಿ.ಇಡಿ ಪದವಿಯನ್ನು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಶಿಕ್ಷಣ ಕಾಲೇಜ ನಲ್ಲಿ ಪೂರೈಸಿದೆ. ದೂರ ಶಿಕ್ಷಣದ ಮೂಲಕ ರಾಜ್ಯಶಾಸ್ತ್ರ ಮತ್ತು ಇತಿಹಾಸ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದೇನೆ.
ಬಾಗಲಕೋಟಿ ಜಿಲ್ಲೆಯ ಹುನಗುಂದನಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಎಸ್.ಡಿ.ಎ.ಎ ಆಗಿ ಒಂದು ವರ್ಷ ಸೇವೆ ಮಾಡಿ, 2016ರಲ್ಲಿ (GPT- 6-8) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ(ಸಾಮಾನ್ಯ ಕನ್ನಡ)ನಾಗಿ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಟ್ಟಿ, ಶಾಲೆಗೆ ನೇಮಕವಾಗಿ ಸುಮಾರು 7 ವರ್ಷ 5 ತಿಂಗಳು ಕಾರ್ಯನಿರ್ವಹಿಸಿ, ಪ್ರಸ್ತುತ 2023ರ ವರ್ಗಾವಣೆಯಲ್ಲಿ ಕಾಶೇನಟ್ಟಿ ಶಾಲೆಗೆ ವರ್ಗಾವಣೆಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.
ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಸಂಪನ್ಮೂಲಗಳು ಒಂದೆಡೆ ದೊರೆಯುವಂತೆ ಮಾಡಲು, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರ, ಮಾಹಿತಿ ಮತ್ತು ಸಂಪನ್ಮೂಲಗಳು ಬೇರೆಯವರಿಗೂ ದೊರಕಲಿ ಮತ್ತು ಶಿಕ್ಷಕರಿಂದ ಮಕ್ಕಳಿಗೆ ಅನುಕೂಲವಾಗಲಿ ಎಂಬುದು ನನ್ನ ಆಶಯ, ಆದ್ದರಿಂದ ಈ ಬ್ಲಾಗ್ ಅನ್ನು ಸಿದ್ದಪಡಿಸಲಾಗಿದೆ. ಈ ಬ್ಲಾಗ್ ನಲ್ಲಿಯ ವಿಷಯಗಳ ಕುರಿತು ಏನಾದರೂ ತಮ್ಮ ಸಲಹೆ ಸೂಚನೆಗಳಿದ್ದರೆ ತಿಳಿಸಬಹುದು....
ಸಂಪರ್ಕಕ್ಕಾಗಿ:
ಮಿಂಚಂಚೆ - slokappanavar@gmail.com
ಜಂಗಮ ವಾಣಿ - 9986889849
Greetings shivanand
ReplyDeleteI liked ur effort
Keep it up
K Thank u
ReplyDeleteVery helpful sir ...
ReplyDeleteBring more information related to school n subjects n department etc it may helpful to new teachers
Thanks to your valuable opinion sir.🤝
Delete