ಭಾರತದ ಪ್ರಜಾಪ್ರಭುತ್ವದ ಮೂಲಾಧಾರವೇ-‘ಸಂವಿಧಾನ'
ಭಾರತದಲ್ಲಿ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು 'ಸಂವಿಧಾನ ದಿವಸ್' ಎಂದು ಕರೆಯಲ್ಪಡುವ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಇದನ್ನು ''ರಾಷ್ಟ್ರೀಯ ಕಾನೂನು ದಿನ" ಎಂದೂ ಕೂಡ ಕರೆಯುತ್ತಾರೆ.
ನಾಗರಿಕರಲ್ಲಿ ಸಂವಿಧಾನ ಮೌಲ್ಯಗಳನ್ನು ಉತ್ತೇಜಿಸಲು ನವೆಂಬರ್ 26, 2015 ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನವೆಂಬರ್ 26 ಅನ್ನು 'ಸಂವಿಧಾನ ದಿನ' ಎಂದು ಆಚರಿಸಲು ನಿರ್ಧರಿಸಿತು.
ಆಚರಣೆಯ ಹಿನ್ನೆಲೆ :
ಅಕ್ಟೋಬರ್ 12ರಂದು ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ನವೆಂಬರ್ 26ನ್ನು ದೇಶದ ಸಂವಿಧಾನ ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು. ಸಂವಿಧಾನ ದಿನ ಆಚರಿಸುವ ಮುಖ್ಯ ಉದ್ದೇಶವೆಂದರೆ, ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವುದು ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವುದು. ಈ ದಿನದಂದು ಪ್ರತಿ ವರ್ಷ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಬೋಧಿಸಲಾಗುವುದು ಎಂದು ಮೋದಿ ಘೋಷಿಸಿದ್ದರು.
1949ರ ಆ ದಿನ ಸಂವಿಧಾನವನ್ನು ಆಂಗೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಇದು ಭಾರತದ ಇತಿಹಾಸದಲ್ಲಿ ಹೊಸ ಶಖೆಯನ್ನು ಆರಂಭಿಸಿತ್ತು. ಈ ವರ್ಷವನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ವರ್ಷವಾಗಿಯೂ ಆಚರಿಸಲಾಗುತ್ತಿದೆ.
ಭಾರತದ ಸಂವಿಧಾನ ಬಗ್ಗೆ :
✯ಭಾರತದಲ್ಲಿ ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂತು.
✯ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.
✯ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.
✯ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.
✯ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.
✯ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.
ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ.
✯ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್ನಿಂದ ಎರವಲು ಪಡೆಯಲಾಗಿದೆ.
✯ಇದು ವಿಶ್ವದ ಯಾವುದೇ ಸ್ವತಂತ್ರ್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.
✯ಭಾರತದ ಮೂಲ ಸಂವಿಧಾನದವು 395-ವಿಧಿಗಳು, 22- ಭಾಗಗಳು ಮತ್ತು 08 ಅನುಸೂಚಿಗಳನ್ನು ಒಳಗೊಂಡಿತ್ತು. *ಪ್ರಸ್ತುತ 470-ವಿಧಿಗಳು, 25-ಭಾಗಗಳು ಮತ್ತು 12-ಭಾಗಗಳನ್ನು ಒಳಗೊಂಡಿದೆ.
✯ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.
✯ಇದರ ಕರಡನ್ನು 1949ರ ನವೆಂಬರ್ ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು.
✯ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು.
✯1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ ಬಂತು.
✯ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು.
✯ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಅದಕ್ಕೆ ಕೇವಲ 94 ತಿದ್ದುಪಡಿಗಳನ್ನು ತರಲಾಗಿದೆ.
✯1949ರ ನವೆಂಬರ್ 26 ರಂದು ಭಾರತದ ಸಂವಿಧಾನ ಸಭೆ ಔಪಚಾರಿಕವಾಗಿ ಭಾರತದ ಸಂವಿಧಾನವನ್ನು ಅಂಗೀಕರಿಸಿತು.
✯ಭಾರತ ಸಂವಿಧಾನ ಜನವರಿ 26, 1950 ರಿಂದ ಜಾರಿಗೆ ಬಂದಿತು.
✯ಭಾರತ ಸಂವಿಧಾನ ರಚನೆಗೆ ತೆಗೆದುಕೊಂಡ ಅವಧಿ - 2 ವರ್ಷ 11 ತಿಂಗಳು 18 ದಿನ.
✯ಭಾರತೀಯ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ.
✯ದೇಶದ ಅಗ್ರಗಣ್ಯ ಕಾನೂನಾದ ಭಾರತದ ಸಂವಿಧಾನವನ್ನು 1946 ಡಿಸೆಂಬರ್ 9 ರಿಂದ ಡಿಸೆಂಬರ್ 1949 ರ ನಡುವೆ ರಚಿಸಲಾಯಿತು.
✯ಭಾರತ ಸಂವಿಧಾನವನ್ನು ಮುದ್ರಿಸಲಾಗಿಲ್ಲ / ಟೈಪ್ ಮಾಡಲಿಲ್ಲ. ಬದಲಾಗಿ ಡಾಕ್ಯುಮೆಂಟ್ ಅನ್ನು ಕೈಬರಹ ಮತ್ತು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಕ್ಯಾಲಿಗ್ರಾಫ್ ಮಾಡಲಾಗಿದೆ.
✯ಯುಎಸ್, ಐರ್ಲೆಂಡ್, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಯುಎಸ್ಎಸ್ಆರ್, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಜಪಾನ್ ಮತ್ತು ಇತರ ದೇಶಗಳ ಸಂವಿಧಾನಗಳ ಆಧಾರದ ಮೇಲೆ ಇದನ್ನು ರಚಿಸಲಾಗಿದೆ.
✯ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ.
✯10 ಮೇ 1951ರಲ್ಲಿ ಭಾರತ ಸಂವಿಧಾನಕ್ಕೆ ಮೊದಲ ತಿದ್ದುಪಡಿ ಮಾಡಲಾಯಿತು.
✯ಇಲ್ಲಿಯವರೆಗೆ (2020 ಜನವರಿ ತನಕ) ಭಾರತ ಸಂವಿಧಾನಕ್ಕೆ 104 ತಿದ್ದುಪಡಿಗಳನ್ನು ಮಾಡಲಾಗಿದೆ.
@ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳು@
1. ಲಿಖಿತ ಮತ್ತು ವಿಸ್ತೃತ ಸಂವಿಧಾನ
2. ನಮ್ಮ ಮತ್ತು ಅನನ್ಯ ಸಂವಿಧಾನ
3. ಸಂಯುಕ್ತ ಪದ್ಧತಿ.
4. ಸಂಸದೀಯ ಪದ್ಧತಿ ಸರ್ಕಾರ.
5. ಜಾತ್ಯಾತೀತ ರಾಷ್ಟ್ರ
6. ವಯಸ್ಕ ಮತದಾನ.
7. ಏಕಪೌರತ್ವ.
8. ರಾಜ್ಯ ನಿರ್ದೇಶಕ ತತ್ವಗಳು.
9. ಸ್ವತಂತ್ರ್ಯ ನ್ಯಾಯಾಂಗ ವ್ಯವಸ್ಥೆ.
10. ಮೂಲಭೂತ ಹಕ್ಕುಗಳು.
11. ಮೂಲಭೂತ ಕರ್ತವ್ಯಗಳು.
12. ಅಖಿಲ ಭಾರತ ಸೇವೆಗಳು.
=> ಸಂವಿಧಾನ ದಿನದ ಪ್ರಯುಕ್ತ ರಸಪ್ರಶ್ನೆ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.