ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಶಿಕ್ಷಕರಿಗಾಗಿ 'ಶಿಕ್ಷಕ ಮಿತ್ರ ಆ್ಯಪ್‌' | Shiksha Mitra App

ಶಿಕ್ಷಕರಿಗಾಗಿ 'ಶಿಕ್ಷಕ ಮಿತ್ರ ಆ್ಯಪ್‌' | Shiksha Mitra App

                    ಶಿಕ್ಷಕರಿಗೆ ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಸಹಾಯ ಮಾಡಲು ಮತ್ತು ಅವರ ಕೆಲಸದ ಹೊರೆ ಕಡಿಮೆ ಮಾಡಲು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ 2019-20ರ ಆಯವ್ಯಯದಲ್ಲಿ ಪ್ರಕಟಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆ್ಯಪ್‌ ತಯಾರಿಸಲಾಗಿದೆ.

                ಶಿಕ್ಷಕರು ಮೊಬೈಲ್‍ನಲ್ಲಿ ಈ ಆ್ಯಪ್‌ ಅನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಅಲ್ಲದೆ,ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನಗಳಲ್ಲಿ ಬಗೆಹರಿಸುವ ಬಗ್ಗೆ ಕಾಲಾವಧಿಯನ್ನೂ ನಿರ್ಧರಿಸಲಾಗಿದೆ.

ಶಿಕ್ಷಕರ ಮಿತ್ರ ಆ್ಯಪ್‌ ನಲ್ಲಿ ಶಿಕ್ಷಕರಿಗಾಗಿ ಸೇವೆಗಳು :

  1. ರಜಾ ಅರ್ಜಿ.
  2. ನಿಯಮ 32 ಮತ್ತು ನಿಯಮ 68 ರ ಅಡಿಯಲ್ಲಿ ಶುಲ್ಕ ಭತ್ಯೆ ಮಂಜೂರಾತಿ.
  3. ದೈಹಿಕ ಅಂಗವಿಕಲ ಭತ್ಯೆಯ ಮಂಜೂರಾತಿ.
  4. ಸಣ್ಣ ಕುಟುಂಬ ನಿಯಮಗಳ ಭತ್ಯೆಯ ಮಂಜೂರಾತಿ.
  5. ಮುಂಗಡಗಳನ್ನು ಪಡೆಯಲು ಅನುಮತಿ, ಭಾಗಶಃ ಹಿಂತೆಗೆದುಕೊಳ್ಳುವಿಕೆ ಅಥವಾ ಸಾಮಾನ್ಯ ಭವಿಷ್ಯ ನಿಧಿಯ ಅಂತಿಮ ಇತ್ಯರ್ಥ.
  6. ಹಬ್ಮುಂಬದ ಮುಂಗಡವನ್ನು ಪಡೆಯಲು ಅನುಮತಿ.
  7. ನಿಯಮ 247A/248/252B/224A ಅಡಿಯಲ್ಲಿ ಪಿಂಚಣಿ ಪ್ರಯೋಜನಗಳಿಗಾಗಿ ಉದ್ಯೋಗಿ ಅರ್ಹತಾ ಸೇವೆ.
  8. ಇತರೆ ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿ.
  9. ಉನ್ನತ ಶಿಕ್ಷಣ ಪಡೆಯಲು ಅನುಮತಿ.
  10. ಮನೆ ನಿರ್ಮಿಸಲು ಅಥವಾ ನಿವೇಶನ/ಮನೆ/ವಾಹನ ಅಥವಾ ಇತರೆ ಯಾವುದೇ ಚರ ಅಥವಾ ಸ್ಥಿರ ಆಸ್ತಿಗಳನ್ನು ಖರೀದಿಸಲು ಅನುಮತಿ.
  11. ಉದ್ಯೋಗಿ ಸಂಖ್ಯೆ - ಪಾಸ್‌ಪೋರ್ಟ್ ಮಾಡ್ಯೂಲ್‌ಗೆ ಅರ್ಜಿ ಸಲ್ಲಿಸಲು ಆಕ್ಷೇಪಣೆ ಪ್ರಮಾಣಪತ್ರ.
  12. ವಿದೇಶಿ ಪ್ರವಾಸ ಕೈಗೊಳ್ಳಲು ಅನುಮತಿ

  1. ಶಿಕ್ಷಕರ ವರ್ಗಾವಣೆ ಅರ್ಜಿಯನ್ನು ಕೂಡ ಈ ಆ್ಯಪ್‌ ನಲ್ಲಿಯೇ ಸಲ್ಲಿಸಬಹುದಾಗಿದೆ.



Click For ಶಿಕ್ಷಕ ಮಿತ್ರ Website


ಶಿಕ್ಷಕಮಿತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ನೀವು ಮಾಡಬೇಕಾದದ್ದು
  1. ಮೊದಲು ನಿಮ್ಮ ಕೆ.ಜಿ.ಐ.ಡಿ ನಮೂದಿಸಿ.
  2. ರಿಜಿಸ್ಟರ್ ನ ಮೇಲೆ ಕ್ಲಿಕ್ ಮಾಡಿ.
  3. ಬಂದ ಒ.ಟಿ.ಪಿ ನಮೂದಿಸಿ.
  4. ನಂತರ ಪಾಸ್ವರ್ಡ ಸೆಟ್ ಮಾಡಿಕೊಳ್ಳಿ. (ಪಾಸ್ವರ್ಡ ಕನಿಷ್ಠ ಎಂಟು ಅಕ್ಷರ ಹೊಂದಿರಬೇಕು ಅದರಲ್ಲಿ ಒಂದು ಕ್ಯಾಪಿಟಲ್ ಅಕ್ಷರ ಒಂದು ಸಂಖ್ಯೆ ಒಂದು ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರಬೇಕು)
  5. ನಂತರ KGID Number ಹಾಗೂ PASSWORD ಹಾಕಿದಾಗ ನಿಮ್ಮ ಮಾಹಿತಿ ತೆರೆದುಕೊಳ್ಳುತ್ತದೆ.
  6.  ನಿಮ್ಮ ಭಾವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.

ಶಿಕ್ಷಕರ ಕಲ್ಯಾಣ ನಿಧಿ & ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಸೇವೆಗಳು Online..

ಇತ್ತೀಚೆಗೆ ಶಿಕ್ಷಕರ ಕಲ್ಯಾಣ ನಿಧಿಯ 7 ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುವ ತಂತ್ರಾಂಶಕ್ಕೆ ಮಾನ್ಯ ಶಿಕ್ಷಣ ಸಚಿವರು ಚಾಲನೆ ನೀಡಿದ್ದು, ಶಿಕ್ಷಕರು ತಾವು ಕುಳಿತ ಸ್ಥಳದಿಂದಲೇ ಅರ್ಜಿ ಸಲ್ಲಿಸುವ ಮೂಲಕ ಸೇವೆ ಪಡೆದುಕೊಳ್ಳಬಹುದು. 
  

ಶಿಕ್ಷಕರ ಕಲ್ಯಾಣ ನಿಧಿ online ಸೇವೆಗೆ ಇಲ್ಲಿ ಕ್ಲಿಕ್ ಮಾಡಿ 


ಶಿಕ್ಷಕರ ಕಲ್ಯಾಣ ನಿಧಿ ಆಜೀವ ಸದಸ್ಯತ್ವ ಪಡೆಯಲು Online ಅರ್ಜಿ ಸಲ್ಲಿಸಲು ಕೆಳಗಿನ Life Membership Card ಮೇಲೆ Click ಮಾಡಿ...   



ಆಜೀವ ಸದಸ್ಯತ್ವಕ್ಕೆ ಆನ್ ಲೈನ್  ಅರ್ಜಿ ಸಲ್ಲಿಸುವ ಶಿಕ್ಷಕರು ಸಿದ್ಧವಿಟ್ಟುಕೊಳ್ಳಬೇಕಾದ ಮಾಹಿತಿ & ಅರ್ಜಿ ಸಲ್ಲಿಸುವ ವಿಧಾನ

☞ ಕೆಜಿಐಡಿ ಸಂಖ್ಯೆ 

☞ ಫೋಟೋ( ಸ್ಕ್ಯಾನ್ ) 

☞ ಬ್ಯಾಂಕ್ ಅಕೌಂಟ್ ನಂಬರ್ 

☞ ಬ್ಯಾಂಕ್ ಐಎಫ್ ಎಸ್ ಸಿ ಕೋಡ್ 

☞ ಸೇವೆಗೆ ಸೇರಿದ ದಿನಾಂಕ

 ☞ ಈಗಾಗಲೇ ಕಾರ್ಡ್ ಹೊಂದಿದ್ದರೆ ಕಾರ್ಡ್ ಸಂಖ್ಯೆ 

☞ ಕಾರ್ಡ್ ನ ಮುಖಪುಟದ ಫೋಟೋ (ಸ್ಕ್ಯಾನ್ )

☞ ಸಹಿ (ಸ್ಕ್ಯಾನ್ )

☞ ಎಚ್ ಆರ್ ಎಂಎಸ್ ಪೇ ಸ್ಲಿಪ್        

☞ ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರ (ಸ್ಕ್ಯಾನ್ )                                              

☞ ಅಪ್ ಲೋಡ್ ಮಾಡುವ ಡಾಕ್ಯುಮೆಂಟ್ ಗಳು 2MB ಗಿಂತ ಕಡಿಮೆ ಇರಬೇಕು.

☞ ಅಪ್ ಲೋಡ್ ಮಾಡುವ ಡಾಕ್ಯುಮೆಂಟುಗಳು PDF ನಲ್ಲಿ ಇರಬಹುದು ಅಥವಾ JPEG ಫಾರ್ಮೆಟ್ ನಲ್ಲಿ ಇರಬಹುದು.

☞ ಈಗಾಗಲೇ ಕಾರ್ಡ್ ಹೊಂದಿರುವವರು ಯಾವುದೇ ಶುಲ್ಕ ಕಟ್ಟುವ ಅಗತ್ಯವಿಲ್ಲ.

☞ ಹೊಸದಾಗಿ ಕಾರ್ಡ್ ಪಡೆಯುವವರು ₹3000/- ಶುಲ್ಕ ಕಟ್ಟಬೇಕು.

☞ ಸಂಗಾತಿ (spouse)ಯವರು ಸೇವೆಯಲ್ಲಿದ್ದರೆ ಅವರ ಕೆಜಿಐಡಿ ಸಂಖ್ಯೆ ಹಾಗೂ ಅವರು ಕಾರ್ಡ್ ಹೊಂದಿದ್ದರೆ ಅವರ ಆಜೀವ ಸದಸ್ಯತ್ವ ಕಾರ್ಡ್ ಸಂಖ್ಯೆ.

ಶಿಕ್ಷಕರ ಕಲ್ಯಾಣ ನಿಧಿ user manual