ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

GPT ನೇಮಕಾತಿ 2026: Graduate Primary Teachers – ಅರ್ಹತೆ, ಪರೀಕ್ಷೆ, ಮೆರಿಟ್, Notification PDF

ಕರ್ನಾಟಕ GPT ನೇಮಕಾತಿ 2026 – Graduate Primary School Teacher ಹುದ್ದೆಗಳ ಅರ್ಹತೆ, TET, ಪರೀಕ್ಷಾ ಮಾದರಿ, ಮೆರಿಟ್ ಮತ್ತು ಜಿಲ್ಲೆವಾರು Notification PDF ಮಾಹಿತಿ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 6 ರಿಂದ 8ನೇ ತರಗತಿಗಳಿಗೆ Graduate Primary School Teacher (GPT)

ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2026ರ ವಿಶೇಷ ನೇಮಕಾತಿ ನಿಯಮಗಳನ್ನು ಪ್ರಕಟಿಸಿದೆ.

ಈ ನೇಮಕಾತಿಯಲ್ಲಿ Language Teacher, Mathematics and Science, Biological Science ಹಾಗೂ Social Studies ವಿಭಾಗಗಳ GPT ಹುದ್ದೆಗಳು ಒಳಗೊಂಡಿವೆ.

ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಪೋಸ್ಟ್‌ನಲ್ಲಿ ಅರ್ಹತೆ, ವಿಷಯವಾರು ವಿದ್ಯಾರ್ಹತೆ, TET, ವಯೋಮಿತಿ, ಪರೀಕ್ಷಾ ಮಾದರಿ, ಮೆರಿಟ್ Weightage, Syllabus PDF, Reference Book PDF ಮತ್ತು ಜಿಲ್ಲೆವಾರು Gazette Notification PDFಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ನೀಡಲಾಗಿದೆ.

೧. GPT ನೇಮಕಾತಿ 2026 – ಪ್ರಮುಖ ಮಾಹಿತಿ

ವಿವರ ಮಾಹಿತಿ
ನೇಮಕಾತಿ Graduate Primary School Teacher (GPT)
ತರಗತಿಗಳು 6ರಿಂದ 8ನೇ ತರಗತಿ
ಹುದ್ದೆಗಳ ವೇತನ ಶ್ರೇಣಿ ₹44,425 – ₹83,700
ಮುಖ್ಯ ವಿಷಯ ವಿಭಾಗಗಳು Language, Mathematics & Science, Biological Science ಮತ್ತು Social Studies
TET TET Paper-II
ಪರೀಕ್ಷಾ ಮಾಧ್ಯಮ ಕನ್ನಡ ಮತ್ತು ಇಂಗ್ಲಿಷ್

೨. ನೇಮಕಾತಿ ಅಧಿಸೂಚನೆ ಮತ್ತು ಪ್ರಮುಖ ಮಾಹಿತಿ

ವಿವರ ಮಾಹಿತಿ
ಅಂತಿಮ ವಿಶೇಷ ನಿಯಮಗಳ ಅಧಿಸೂಚನೆ 10-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-09-2026
ನೇಮಕಾತಿ ಪ್ರಾಧಿಕಾರ ಶಾಲಾ ಶಿಕ್ಷಣ ಇಲಾಖೆ / Centralised Admission Cell
ಪರೀಕ್ಷೆ ದಿನಾಂಕ ಅಧಿಸೂಚನೆ ಗಮನಿಸಿ

ಸೂಚನೆ: ಅರ್ಜಿ ಸಲ್ಲಿಕೆಯ ಆರಂಭ ಮತ್ತು ಕೊನೆಯ ದಿನಾಂಕಗಳನ್ನು ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ ಪರಿಶೀಲಿಸಿ.

೩. GPT ಹುದ್ದೆಗಳ ವಿಧಗಳು

ಕ್ರ.ಸಂ. GPT ಹುದ್ದೆ ತರಗತಿ
1 GPT – Language(Kan, Eng) 6–8
2 GPT – Mathematics & Science 6–8
3 GPT – Biological Science 6–8
4 GPT – Social Studies 6–8
5 GPT – Computer Science 1–8

೪. ಶೈಕ್ಷಣಿಕ ಅರ್ಹತೆ

GPT ಹುದ್ದೆಗೆ ಸಾಮಾನ್ಯವಾಗಿ ಕೆಳಗಿನ ಅರ್ಹತೆಗಳಲ್ಲಿ ನಿಗದಿಪಡಿಸಿದ ಯಾವುದಾದರೂ ಮಾನ್ಯವಾದ ಅರ್ಹತೆಯನ್ನು ಹೊಂದಿರಬೇಕು.

  • ಕನಿಷ್ಠ 50% ಅಂಕಗಳೊಂದಿಗೆ Graduate Degree ಮತ್ತು 2 ವರ್ಷದ Diploma in Elementary Education;
  • ಅಥವಾ ಕನಿಷ್ಠ 50% ಅಂಕಗಳೊಂದಿಗೆ Graduate Degree ಮತ್ತು B.Ed / B.Ed (Special Education);
  • ಅಥವಾ ಕನಿಷ್ಠ 50% ಅಂಕಗಳೊಂದಿಗೆ PUC ಮತ್ತು 4 ವರ್ಷದ B.El.Ed / B.Ed;
  • SC / ST / Category-I / OBC ಅಥವಾ PwD ಅಭ್ಯರ್ಥಿಗಳಿಗೆ ಸಂಬಂಧಿಸಿದ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 45% ಅಂಕ ಅನ್ವಯಿಸುವ ವಿಧಾನವನ್ನು ನಿಯಮಗಳಲ್ಲಿ ನೀಡಲಾಗಿದೆ.
  • ಅಭ್ಯರ್ಥಿಯು Teacher Eligibility Test (TET) ಉತ್ತೀರ್ಣರಾಗಿರಬೇಕು.
  • CST 1-8 ಹುದ್ದೆಗೆ - ಬ್ಯಾಚುಲರ್ ಆಫ್ ಸೈನ್ಸ್ (ಕಂಪ್ಯೂಟರ್ ಸೈನ್ಸ್) ಅಥವಾ
  • ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ಅಥವಾ
  • ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಸೈನ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್) ಅಥವಾ
  • ಬ್ಯಾಚುಲರ್ ಆಫ್ ಟೆಕ್ನಾಲಜಿ (ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಸೈನ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್).
  • ಮತ್ತು: ಹುದ್ದೆಗೆ ಆಯ್ಕೆಯಾದ 5ವರ್ಷಗಳೊಳಗೆ TET ಮತ್ತು B.Ed ಅರ್ಹತೆ ಹೊಂದಬೇಕು.

D.El.Ed / B.Ed ಮತ್ತು ಇತರೆ ಶಿಕ್ಷಕರ ಶಿಕ್ಷಣ ಕೋರ್ಸ್‌ಗಳು ಸಂಬಂಧಿತ ನಿಯಂತ್ರಣ ಸಂಸ್ಥೆಗಳಿಂದ ಮಾನ್ಯತೆ ಪಡೆದಿರಬೇಕು.

೫. 📚 ವಿಷಯವಾರು ಅರ್ಹತೆ

GPT ವಿಭಾಗ ಮುಖ್ಯ ವಿಷಯ ಅರ್ಹತೆ
GPT – Kannada ಕನ್ನಡವನ್ನು ಪದವಿ ಹಂತದಲ್ಲಿ ಸಂಬಂಧಿತ ವಿಷಯವಾಗಿ ವ್ಯಾಸಂಗ ಮಾಡಿರಬೇಕು ಮತ್ತು ನಿಯಮಾನುಸಾರ ಅಗತ್ಯವಿರುವ ಮತ್ತೊಂದು ವಿಷಯದ ಅರ್ಹತೆ ಹೊಂದಿರಬೇಕು.
GPT – English ಇಂಗ್ಲಿಷ್‌ನ್ನು ಪದವಿ ಹಂತದಲ್ಲಿ ಸಂಬಂಧಿತ ವಿಷಯವಾಗಿ ವ್ಯಾಸಂಗ ಮಾಡಿರಬೇಕು ಮತ್ತು ನಿಯಮಾನುಸಾರ ಅಗತ್ಯವಿರುವ ಮತ್ತೊಂದು ವಿಷಯದ ಅರ್ಹತೆ ಹೊಂದಿರಬೇಕು.
GPT – Mathematics & Science ಗಣಿತ ಮತ್ತು ಭೌತಶಾಸ್ತ್ರ ಸೇರಿದಂತೆ ನಿಯಮಗಳಲ್ಲಿ ಸೂಚಿಸಿರುವ ವಿಷಯ ಸಂಯೋಜನೆಯೊಂದಿಗೆ ಪದವಿ ಅರ್ಹತೆ.
GPT – Biological Science ರಸಾಯನಶಾಸ್ತ್ರವನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿ, ನಿಯಮಗಳಲ್ಲಿ ಸೂಚಿಸಿರುವ ಸಂಬಂಧಿತ ಎರಡು ವಿಷಯಗಳಲ್ಲಿ ಅರ್ಹತೆ ಹೊಂದಿರಬೇಕು.
GPT – Social Studies ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ನಿಯಮದಲ್ಲಿ ಸೂಚಿಸಿರುವ ವಿಷಯ ಸಂಯೋಜನೆ.
GPT – Computer Science ರಸಾಯನಶಾಸ್ತ್ರವನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿ, ನಿಯಮಗಳಲ್ಲಿ ಸೂಚಿಸಿರುವ ಸಂಬಂಧಿತ ಎರಡು ವಿಷಯಗಳಲ್ಲಿ ಅರ್ಹತೆ ಹೊಂದಿರಬೇಕು.

೬. 📝 TET ಅರ್ಹತೆ

GPT ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು Teacher Eligibility Test – Paper II ಉತ್ತೀರ್ಣರಾಗಿರಬೇಕು.  

TET Paper-II ಅಂಕಗಳನ್ನು GPT ಮೆರಿಟ್ ಲೆಕ್ಕಾಚಾರದಲ್ಲಿಯೂ ಪರಿಗಣಿಸಲಾಗುತ್ತದೆ.

೭. ವಯೋಮಿತಿ

ವರ್ಗ ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗ 40 ವರ್ಷ
2A / 2B / 3A / 3B 43 ವರ್ಷ
SC / ST / Category-I / PwD 45 ವರ್ಷ

ಗಮನಿಸಿ: ವಯೋಮಿತಿಯನ್ನು ಸಂಬಂಧಿತ ನೇಮಕಾತಿ ಅಧಿಸೂಚನೆಯಲ್ಲಿ ನಿಗದಿಪಡಿಸಿದ Cut-off date ಆಧರಿಸಿ ಪರಿಶೀಲಿಸಬೇಕು.

೮. ಅರ್ಜಿ ಶುಲ್ಕ

ಅಭ್ಯರ್ಥಿ ಶುಲ್ಕ
ಸಾಮಾನ್ಯ / 2A / 2B / 3A / 3B 750
SC / ST / Category-I / Ex-Servicemen /
 PwD / Transgender
500

೯. GPT ಪರೀಕ್ಷಾ ಮಾದರಿ

ಪತ್ರಿಕೆ ವಿಷಯ (ಅಂಕ) ಅಂಕಗಳು ಸ್ವರೂಪ
Paper-I General Kannada(15),
General English (10),
General Knowledge(10),
Current Affairs (15),
Educational Psychology & Human Development(15),
Value Education & Health Education(20),
Computer Literacy (15)
100 Objective / OMR
Paper-II ಆಯ್ಕೆ ಮಾಡಿದ GPT ವಿಷಯ 100 Objective / OMR
ಒಟ್ಟು 200 —

Paper-IIಯಲ್ಲಿ ಆಯ್ಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದ 100 ಅಂಕಗಳ ವಿಷಯಜ್ಞಾನ ಪ್ರಶ್ನೆಗಳು ಇರುತ್ತವೆ.

೧೦. ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳು

ಸ್ಪರ್ಧಾತ್ಮಕ ಪರೀಕ್ಷೆಯ ಪ್ರತಿಯೊಂದು ಪತ್ರಿಕೆಯಲ್ಲಿ ಅಭ್ಯರ್ಥಿಯು ಕನಿಷ್ಠ 35% ಅಂಕ ಗಳಿಸಬೇಕು. ಇದು ಮೀಸಲಾತಿ ವರ್ಗವನ್ನೂ ಲೆಕ್ಕಿಸದೆ ಅನ್ವಯಿಸುತ್ತದೆ.

೧೧. GPT ಮೆರಿಟ್ ಲೆಕ್ಕಾಚಾರ

Diploma / B.Ed / Special Education ಅರ್ಹತೆ ಹೊಂದಿರುವವರಿಗೆ

ಅಂಶ Weightage
ಸ್ಪರ್ಧಾತ್ಮಕ ಪರೀಕ್ಷೆ (CET) 70%
TET – Paper II 20%
Bachelor's Degree 8%
Teacher Education Course 2%
ಒಟ್ಟು 100%

4 ವರ್ಷದ Teacher Education Degree ಹೊಂದಿರುವವರಿಗೆ

ಅಂಶ Weightage
ಸ್ಪರ್ಧಾತ್ಮಕ ಪರೀಕ್ಷೆ (CET) 70%
TET – Paper II 20%
4 ವರ್ಷದ Teacher Education Degree 10%
ಒಟ್ಟು 100%

೧೨. GPT Syllabus PDF

ಕ್ರ.ಸಂ Syllabus / ಪಠ್ಯಕ್ರಮ ವೀಕ್ಷಿಸಿ
1 GPT Paper-I – General Syllabus PDF
2 GPT Paper-II – Kannada PDF
3 GPT Paper-II – English PDF
4 GPT Paper-II – Mathematics & Science PDF
5 GPT Paper-II – Biological Science PDF
6 GPT Paper-II – Social Studies PDF
7 GPT Paper-II – Computer Science PDF
📖 GPT ಪರೀಕ್ಷಾ ತಯಾರಿ:
GPT Old Question Papers

೧೩. GPT Reference Book PDF

ವಿವರ PDF
GPT Recruitment 2026 – Reference Book 📖 PDF

೧೪. GPT ಜಿಲ್ಲೆವಾರು Gazette Notification PDF

GPT ನೇಮಕಾತಿಗೆ ಸಂಬಂಧಿಸಿದಂತೆ ಲಭ್ಯವಿರುವ ಜಿಲ್ಲೆವಾರು / ಪ್ರದೇಶವಾರು ಅಧಿಸೂಚನೆಗಳನ್ನು ಕೆಳಗಿನ Tableನಲ್ಲಿ ನೀಡಬಹುದು. ಪ್ರತಿ PDFನಲ್ಲಿ ಸಂಬಂಧಿತ ಜಿಲ್ಲೆ ಮತ್ತು ವಿಷಯವಾರು ಹುದ್ದೆಗಳ ಸಂಖ್ಯೆಯನ್ನು ಪರಿಶೀಲಿಸಿ.

ಕ್ರ.
ಸಂ
ಜಿಲ್ಲೆ / Notification PDF
1ಬೆಂಗಳೂರು ಉತ್ತರ (NKK)PDF
2ಬೆಂಗಳೂರು ಉತ್ತರ (KK)PDF
3ಬೆಂಗಳೂರು ಕೇಂದ್ರ (NKK)PDF
4ಬೆಂಗಳೂರು ಕೇಂದ್ರ (KK)PDF
5ಬೆಂಗಳೂರು ಗ್ರಾಮೀಣPDF
6ಚಿತ್ರದುರ್ಗPDF
7ದಾವಣಗೆರೆPDF
8ಕೋಲಾರPDF
9ಶಿವಮೊಗ್ಗPDF
10ತುಮಕೂರುPDF
11ಚಿಕ್ಕಬಳ್ಳಾಪುರPDF
12ಮಧುಗಿರಿPDF
13ಬಾಗಲಕೋಟೆPDF
14ಬೆಳಗಾವಿPDF
15ವಿಜಯಪುರPDF
16ಧಾರವಾಡPDF
17ಗದಗPDF
18ಹಾವೇರಿPDF
19ಉತ್ತರ ಕನ್ನಡPDF
20ಚಿಕ್ಕೋಡಿPDF
21ಶಿರಸಿPDF
22ಬಳ್ಳಾರಿ (NKK)PDF
23ಬಳ್ಳಾರಿ (KK)PDF
24ಬೀದರ (NKK)PDF
25ಬೀದರ (KK)PDF
26ಕಲ್ಬುರ್ಗಿ (NKK)PDF
27ಕಲ್ಬುರ್ಗಿ (KK)PDF
28ಕೊಪ್ಪಳ (NKK)PDF
29ಕೊಪ್ಪಳ (KK)PDF
30ಯಾದಗಿರಿ (NKK)PDF
31ಯಾದಗಿರಿ (KK)PDF
32ವಿಜಯನಗರ (NKK)PDF
33ವಿಜಯನಗರ (KK)PDF
34ಚಾಮರಾಜನಗರPDF
35ಚಿಕ್ಕಮಗಳೂರುPDF
36ದಕ್ಷಿಣ ಕನ್ನಡPDF
37ಹಾಸನPDF
38ಕೊಡಗುPDF
39ಮಂಡ್ಯPDF
40ಮೈಸೂರುPDF
41ಉಡುಪಿPDF
42ರಾಮನಗರPDF
43ರಾಯಚೂರು (NKK)PDF
44ರಾಯಚೂರು (KK)PDF

೧೫. 💻 GPT ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  2. ನಿಮ್ಮ GPT ವಿಷಯ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  3. ಅಧಿಕೃತ Online Application Portalಗೆ ಭೇಟಿ ನೀಡಿ.
  4. ಅಭ್ಯರ್ಥಿ Registration / Login ಪೂರ್ಣಗೊಳಿಸಿ.
  5. ವೈಯಕ್ತಿಕ, ಶೈಕ್ಷಣಿಕ ಮತ್ತು TET ಮಾಹಿತಿಯನ್ನು ನಮೂದಿಸಿ.
  6. ಅಗತ್ಯ ದಾಖಲೆಗಳನ್ನು Upload ಮಾಡಿ.
  7. ಸಂಬಂಧಿತ GPT Cadre ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ.
  8. ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸಿ.
  9. ಅರ್ಜಿಯನ್ನು Submit ಮಾಡುವ ಮೊದಲು ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ.
  10. ಅಂತಿಮ ಅರ್ಜಿ ಪ್ರತಿಯನ್ನು Download / Print ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.

❓ ಪದೇ ಪದೇ ಕೇಳಲಾಗುವ ಪ್ರಶ್ನೆಗಳು – (FAQ)

GPT ನೇಮಕಾತಿ 2026 ಯಾವ ತರಗತಿಗಳಿಗೆ ಸಂಬಂಧಿಸಿದೆ?

Graduate Primary School Teacher ಹುದ್ದೆಗಳು 6ರಿಂದ 8ನೇ ತರಗತಿಗಳಿಗೆ ಸಂಬಂಧಿಸಿವೆ.

GPT ಹುದ್ದೆಯ ವೇತನ ಶ್ರೇಣಿ ಎಷ್ಟು?

GPT ಹುದ್ದೆಯ ವೇತನ ಶ್ರೇಣಿ ₹44,425 – ₹83,700 ಆಗಿದೆ.

GPT ಹುದ್ದೆಗೆ TET ಕಡ್ಡಾಯವೇ?

ಹೌದು. GPT ಹುದ್ದೆಗೆ TET Paper-II ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

GPT ಪರೀಕ್ಷೆಯಲ್ಲಿ ಎಷ್ಟು ಪತ್ರಿಕೆಗಳಿವೆ?

GPT ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳು ಇವೆ. Paper-I ಸಾಮಾನ್ಯ ಪತ್ರಿಕೆ ಮತ್ತು Paper-II ವಿಷಯಾಧಾರಿತ ಪತ್ರಿಕೆಯಾಗಿದೆ.

GPT Paper-I ಎಷ್ಟು ಅಂಕಗಳಿಗೆ ಇರುತ್ತದೆ?

GPT Paper-I 100 ಅಂಕಗಳ Objective Type OMR ಪರೀಕ್ಷೆ ಆಗಿರುತ್ತದೆ.

GPT Paper-II ಎಷ್ಟು ಅಂಕಗಳಿಗೆ ಇರುತ್ತದೆ?

GPT Paper-II ಆಯ್ಕೆ ಮಾಡಿದ ವಿಷಯದ 100 ಅಂಕಗಳ Objective Type OMR ಪರೀಕ್ಷೆ ಆಗಿರುತ್ತದೆ.

GPT ಮೆರಿಟ್‌ನಲ್ಲಿ CETಗೆ ಎಷ್ಟು Weightage ಇದೆ?

GPT ಮೆರಿಟ್ ಲೆಕ್ಕಾಚಾರದಲ್ಲಿ CETಗೆ 70% Weightage ನೀಡಲಾಗುತ್ತದೆ.

GPT ಮೆರಿಟ್‌ನಲ್ಲಿ TET Paper-IIಗೆ ಎಷ್ಟು Weightage ಇದೆ?

TET Paper-IIಗೆ 20% Weightage ನೀಡಲಾಗುತ್ತದೆ.

GPT ಹುದ್ದೆಗೆ ಯಾವ ವಿಷಯಗಳಲ್ಲಿ ನೇಮಕಾತಿ ನಡೆಯುತ್ತದೆ?

ಮುಖ್ಯವಾಗಿ Language, Mathematics & Science, Biological Science ಮತ್ತು Social Studies ವಿಭಾಗಗಳಲ್ಲಿ GPT ಹುದ್ದೆಗಳು ಇವೆ.

GPT ಜಿಲ್ಲೆವಾರು Notification PDFಗಳನ್ನು ಎಲ್ಲಿ ಪಡೆಯಬಹುದು?

ಈ ಪೋಸ್ಟ್‌ನ GPT ಜಿಲ್ಲೆವಾರು Gazette Notification PDF ವಿಭಾಗದಲ್ಲಿ ಲಭ್ಯವಿರುವ ಜಿಲ್ಲೆವಾರು Notification PDFಗಳ ಲಿಂಕ್‌ಗಳನ್ನು Table ರೂಪದಲ್ಲಿ ನೀಡಲಾಗಿದೆ.

⚠️ Disclaimer: ಈ ಪೋಸ್ಟ್ ಅಭ್ಯರ್ಥಿಗಳ ಮಾಹಿತಿಗಾಗಿ ಸಿದ್ಧಪಡಿಸಲಾಗಿದೆ. ಅರ್ಹತೆ, ಹುದ್ದೆಗಳ ಸಂಖ್ಯೆ, ವಯೋಮಿತಿ, ಶುಲ್ಕ, ಜಿಲ್ಲೆವಾರು ಹುದ್ದೆ ಹಂಚಿಕೆ, ಪರೀಕ್ಷಾ ದಿನಾಂಕ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕೃತ ಅಧಿಸೂಚನೆಯನ್ನೇ ಅಂತಿಮ ಮೂಲವಾಗಿ ಪರಿಗಣಿಸಿ.

📢 ಈ ಮಾಹಿತಿಯನ್ನು GPT ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳೊಂದಿಗೆ Share ಮಾಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.