ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ನೌಕರರಿಗೆ ಒಂದು ಸೂಚನೆ/ಎಚ್ಚರಿಕೆ❗
ಶಿಕ್ಷಕ ಬಂಧುಗಳನ್ನು ಒಳಗೊಂಡಂತೆ ಸಾಕಷ್ಟು ಸಂಖ್ಯೆಯ ಬೇರೆ ಬೇರೆ ನೌಕರರು ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರಲ್ಲಿ ಸಮೀಕ್ಷಾದಾರರಾಗಿ, ಮೇಲ್ವಿಚಾರಕರಾಗಿ ಎಮ್.ಆರ್.ಪಿಗಳಾಗಿ ವಿವಿಧ ಕಾರ್ಯಗಳನ್ನು Online ಅಂದರೆ ಮೊಬೈಲ್ ಮೂಲಕ ಸಮೀಕ್ಷೆ ಮಾಡಲು ಸಿದ್ದರಾಗಿದ್ದೇವೆ.
ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಹಲವು ಬಾರಿ App Update ಮಾಡುವ ಸಂದರ್ಭ ಬರುತ್ತದೆ/ಬರಬಹುದು. ಈ ಸಮಯವನ್ನೇ ಬಳಸಿಕೊಂಡು ವಿವಿಧ ರೀತಿಯ Online ಮೋಸಮಡುವ ಜಾಲ App Update ಮಾಡಲು ಅಥವಾ Update App Install ಮಾಡಲು ಈ link ಅನ್ನು ಕ್ಲಿಕ್ ಮಾಡಿ ಎಂದು; ಬೇರೆ ಬೇರೆ ರೀತಿಯ ಮೋಸದ Link ಗಳು ಮತ್ತು APK ಫೈಲ್ಗಳನ್ನು(APK ಎಂದರೇನು - ".apk" ಎಂದು ಕೊನೆಗೊಳ್ಳುವ ಫೈಲ್ ನೇಮ್ ಇರುತ್ತದೆ. ಇದು ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ ಅಥವಾ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಎಂಬುದರ ಸಂಕ್ಷಿಪ್ತ ರೂಪ) ನಿಮ್ಮ WhatsApp ಗುಂಪುಗಳಲ್ಲಿ/ನಿಮ್ಮ ಸ್ನೇಹಿತರ ವಾಟ್ಸಪ್ (ನಿಮ್ಮ ಆಪ್ತರ ಮೊಬೈಲ್ WhatsApp hact ಮಾಡಿ) ಮೂಲಕವೇ ಈ ರೀತಿಯ ಸಂದೇಶಗಳು ಬರಬಹುದು.
ದಯವಿಟ್ಟು ಯಾರು ಅವಸರಕ್ಕೆ ಬಿದ್ದು ಈ ರೀತಿ Link ಅಥವಾ APK ಫೈಲ್ ಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಒಂದು ವೇಳೆ ನೀವು ಈ ತಪ್ಪು ಮಾಡಿದರೆ ನಿಮ್ಮ ಮೊಬೈಲ್ ಅಥವಾ ವಾಟ್ಸಪ್ ಹ್ಯಾಕ್ ಆಗುತ್ತದೆ ಆಗ ನಿಮ್ಮ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವುದಷ್ಟೆ ಅಲ್ಲದೆ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲ ಮಾಹಿತಿ ಕೂಡ ಆನ್ಲೈನ್ ಮೂಲಕ ಮೋಸಗಾರರ ಕೈ ಸೇರುತ್ತದೆ.
ಹಾಗಾಗಿ ನೀವು ಈ ಸಮೀಕ್ಷಾ ಸಂದರ್ಭದಲ್ಲಿ App ಅನ್ಮು Install ಮಾಡಲು ಹಾಗೂ Update ಮಾಡಲು ಇಲ್ಲವೇ ಯಾವುದೇ App ಗಳನ್ನು ನಿಮ್ಮ ಮೊಬೈಲ್ ನಲ್ಲಿ Install ಮಾಡುವಾಗ ಕಡ್ಡಾಯವಾಗಿ Google Play Store Appನಲ್ಲಿಯೇ Download ಮಾಡಿ ಅಥವಾ Appಗಳನ್ನು Update ಮಾಡಿಕೊಳ್ಳಿ.
ಈ ಸಂದರ್ಭದಲ್ಲಿ ಅಷ್ಟೇ ಅಲ್ಲ ಎಲ್ಲಾ ಸಂದರ್ಭಗಳಲ್ಲೂ ಕೂಡ ನಾವು ಮೊಬೈಲ್ ಬಳಸುವಾಗ ಅತ್ಯಂತ ಜಾಗರೂಕರಾಗಿ ಇರಬೇಕಾದ ಅವಶ್ಯಕತೆ ಇದೆ. ಹಾಗಾಗಿ ದಯವಿಟ್ಟು ಈ ವಿಷಯವನ್ನು ನಿಮ್ಮೆಲ್ಲ ಆತ್ಮೀಯರ ಜೊತೆ ಹಂಚಿಕೊಳ್ಳಿ; ಯಾರೂ ಈ Online ಮೋಸದ ಜಾಲಕ್ಕೆ ಒಳಗಾಗದಂತೆ ಜಾಗೃತರಾಗೋಣ.
.... Online ಜಾಗ್ರತೆ ....
ಇಂದ,
ಶ್ರೀ ಶಿವಾನಂದ ಲೋಕಪ್ಪನವರ
ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರು
ಧಾರವಾಡ ಗ್ರಾಮೀಣ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.