ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

2026-27ನೇ ಸಾಲಿನ ಪ್ರಮುಖ ಆದೇಶಗಳು & ಸುತ್ತೋಲೆಗಳು | Karnataka School Orders

Karnataka School Education Department Orders and Circulars PDF - Viveka Jyothi

      ​ಶೈಕ್ಷಣಿಕ ವರ್ಷ 2026-27ರ ಪ್ರಮುಖ ಇಲಾಖಾ ಆದೇಶಗಳು ಮತ್ತು ಸುತ್ತೋಲೆಗಳು

ಗೌರವಾನ್ವಿತ ಶಿಕ್ಷಕರೇ ಮತ್ತು ಶಿಕ್ಷಣ ಆಸಕ್ತರೇ, ವಿವೇಕ ಜ್ಯೋತಿ ಶೈಕ್ಷಣಿಕ ಜಾಲತಾಣಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ.

​ಶಾಲಾ ಆಡಳಿತ ವ್ಯವಸ್ಥೆ, ದಾಖಲಾತಿ ಪ್ರಕ್ರಿಯೆ ಹಾಗೂ ದೈನಂದಿನ ಶೈಕ್ಷಣಿಕ ಚಟುವಟಿಕೆಗಳನ್ನು ನಿಯಮಾನುಸಾರ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊರಡಿಸುವ ಅಧಿಕೃತ ಆದೇಶಗಳು ಹಾಗೂ ಸುತ್ತೋಲೆಗಳು ಅತ್ಯಂತ ಪ್ರಮುಖವಾಗಿವೆ.

​ಶಿಕ್ಷಕರ ಅನುಕೂಲಕ್ಕಾಗಿ ಪ್ರಸ್ತುತ ಸಾಲಿನ (2026-27) ಹೊಸ ಸುತ್ತೋಲೆಗಳ ಜೊತೆಗೆ, ರೆಫರೆನ್ಸ್‌ಗಾಗಿ ಕಳೆದ ವರ್ಷದ (2025-26) ಪ್ರಮುಖ ಆದೇಶಗಳ ಅಧಿಕೃತ PDF ಲಿಂಕ್‌ಗಳನ್ನು ಸಹ ಇಲ್ಲಿ ವರ್ಷಾವಾರು ಕ್ರೋಡೀಕರಿಸಿ ನೀಡಲಾಗಿದೆ.

1. ಶೈಕ್ಷಣಿಕ ವರ್ಷ 2026-27ರ ಆದೇಶ ಹಾಗೂ ಸುತ್ತೋಲೆಗಳು (ಪ್ರಸ್ತುತ ಸಾಲು)

ಇಲಾಖೆಯು ಹೊರಡಿಸುವ ಈ ವರ್ಷದ ನೂತನ ಆದೇಶಗಳನ್ನು ಇಲ್ಲಿ ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ.

ಕ್ರ.ಸಂ ಆದೇಶ / ಸುತ್ತೋಲೆಯ ವಿವರ
(2026-27)
ಡೌನ್‌ಲೋಡ್
01 DSERT ಸೇತುಬಂಧ ಅನುಷ್ಠಾನ ಆದೇಶ 19/05/2026  ( BridgeCourse, LO, SAP) Download
02 ಅಪಾರ ID ಸೃಜಿಸುವ ಕುರಿತು SSK ಆದೇಶ ( Class 1- 12) Download
03 ಅತಿಥಿ ಶಿಕ್ಷಕರ ನೇಮಕಾತಿ ಆದೇಶ (22/05/2026) Download
04 1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ 2026-27 Download
05 ಶ್ಯೂ  ಸಾಕ್ಷ್ ಆದೇಶ 2026-27 Download
06 DSERT VC PDF 22/05/2026 Download
07 ಶಾಲಾ ಪ್ರಾರಂಭೋತ್ಸವ ವಿದ್ಯಾ ಪ್ರವೇಶ ದಾಖಲಾತಿ ಆಂದೋಲನ ಆದೇಶ 25/05/2026 Download
08 ದ್ವಿಭಾಷಾ ತರಗತಿ ಬೋಧನೆ ಅನುಕೂಲಿಸಲು Transition ಯೋಜನೆ ಸಂಬಂಧಿತ ತರಬೇತಿ ಆಯೋಜನೆ ಆದೇಶ. 25/05/2026 Download
09 ಮೌಲ್ಯಾಂಕನ ಸುತ್ತೋಲೆ 1 ರಿಂದ 10ನೇ ತರಗತಿ (LBA,FA,SA Exams)2026-27 -  16/06/2026 Download
10 2026-27ನೇ Download

2. ಶೈಕ್ಷಣಿಕ ವರ್ಷ 2025-26ರ ಆದೇಶ ಹಾಗೂ ಸುತ್ತೋಲೆಗಳು (ಹಳೆಯ ದಾಖಲೆಗಳು)

ಕಳೆದ ಶೈಕ್ಷಣಿಕ ವರ್ಷದ ಪ್ರಮುಖ ಆದೇಶಗಳು ಹಳೆಯ ದಾಖಲೆಗಳ ಪರಿಶೀಲನೆಗಾಗಿ ಇಲ್ಲಿ ಲಭ್ಯವಿವೆ.

ಕ್ರ.ಸಂ ಆದೇಶ / ಸುತ್ತೋಲೆಯ ವಿವರ
(2025-26)
ಡೌನ್‌ಲೋಡ್
01 FLN  ಕಲಿಕಾ ಫಲಗಳು(17 LAKSHYAS) Download
02 ಸಮಾಲೋಚನಾ ಸಭೆ 2025-26 ಸುತ್ತೋಲೆ  (22/05/2025) Download
03 FLN DSERT ಸುತ್ತೋಲೆ 2025-26 (21/05/2025) Download
04 ಶಾಲಾ ಪ್ರಾರಂಭೋತ್ಸವ ಸುತ್ತೋಲೆ 2025-26 (20/05/2025) Download
05 2025-26 ನೇ ಸಾಲಿಗೆ ನಲಿ ಕಲಿಗೆ ಸಂಬಂಧಿಸಿದ ಸುತ್ತೋಲೆ (28/04/2025) Download
06 ಪಠ್ಯ ಪುಸ್ತಕಗಳನ್ನು ವಿತರಿಸುವ ಕುರಿತು ಸುತ್ತೋಲೆ 2025-26 (22/04/2025) Download
07 2025-26 ನೇ ಸಾಲಿಗೆ 1 ನೇ ತರಗತಿಗೆ ವಯೋಮಿತಿ ಸಡಿಲಿಕೆ ಆದೇಶ  Download
08 2025-26 ನೇ ಸಾಲಿನ ಶೈಕ್ಷಣಿಕ ಅವಧಿಗಳು & ರಜಾ ಅವಧಿಗಳು (02/04/2025) Download

​📢 ಗಮನಿಸಿ: ಶಾಲಾ ಶಿಕ್ಷಣ ಇಲಾಖೆಯಿಂದ ಹೊರಬೀಳುವ ಪ್ರತಿಯೊಂದು ಹೊಸ ಸುತ್ತೋಲೆ ಮತ್ತು ಆದೇಶಗಳನ್ನು ಈ ಪಟ್ಟಿಗೆ ನಿರಂತರವಾಗಿ ಅಪ್‌ಡೇಟ್ (Live Update) ಮಾಡಲಾಗುತ್ತದೆ. ನಿಖರ ಮಾಹಿತಿಗಾಗಿ ಈ ಪುಟವನ್ನು ನಿಯಮಿತವಾಗಿ ವೀಕ್ಷಿಸುತ್ತಿರಿ.

​💡 PDF ಫೈಲ್ ಡೌನ್‌ಲೋಡ್ ಮಾಡುವುದು ಹೇಗೆ?

  • ​ಮೇಲಿನ ಕೋಷ್ಟಕದಲ್ಲಿ ನಿಮ್ಮ ಶಾಲೆಗೆ ಅಗತ್ಯವಿರುವ ಸುತ್ತೋಲೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ.
  • ​ಅದರ ಎದುರಿಗಿರುವ Download ಎಂಬ ಲಿಂಕ್ ಮೇಲೆ ಒತ್ತಿ.
  • ​ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯ ಮೇಲೆ ಅಧಿಕೃತ PDF ಓಪನ್ ಆಗುತ್ತದೆ. ಅಲ್ಲಿ ಕಾಣಿಸುವ ಡೌನ್‌ಲೋಡ್ ಐಕಾನ್ ಬಳಸಿ ಫೈಲ್ ಅನ್ನು ಸೇವ್ ಮಾಡಿಕೊಳ್ಳಿ
​🤝 ಶಿಕ್ಷಕ ಮಿತ್ರರಲ್ಲಿ ವಿನಂತಿ: ಶಾಲಾ ದಾಖಲಾತಿ ಮತ್ತು ಆಡಳಿತ ಪ್ರಕ್ರಿಯೆಗಳು ಸರಾಗವಾಗಿ ನಡೆಯಲು ಇಲಾಖೆಯ ಆದೇಶಗಳು ಪ್ರತಿಯೊಬ್ಬ ಶಿಕ್ಷಕರಿಗೂ ತಲುಪುವುದು ಅತ್ಯಗತ್ಯ. ಆದ್ದರಿಂದ, ಈ ಪ್ರಮುಖ ಮಾಹಿತಿಯ ಲಿಂಕ್ ಅನ್ನು ನಿಮ್ಮ ಎಲ್ಲಾ ಶಿಕ್ಷಕರ ವಾಟ್ಸಾಪ್ (WhatsApp) ಗ್ರೂಪ್‌ಗಳಲ್ಲಿ ಶೇರ್ ಮಾಡಿ.
        ನಿರಂತರ ಶೈಕ್ಷಣಿಕ ಅಪ್‌ಡೇಟ್‌ಗಳು, ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಡಿಜಿಟಲ್ ಸಂಪನ್ಮೂಲಗಳಿಗಾಗಿ ನಮ್ಮ ವಿವೇಕ ಜ್ಯೋತಿ ಬ್ಲಾಗ್ ಅನ್ನು ಪ್ರತಿದಿನ ಸಂದರ್ಶಿಸಿ ಹಾಗೂ ನಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ.

ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಪರಿಣಾಮಕಾರಿ ಅನುಷ್ಠಾನ | Kalika Habba 2025-26

Cluster FLN Kalika Habba 2025-26

ಕ್ಲಸ್ಟರ್ ಮಟ್ಟದ FLN  ಕಲಿಕಾ ಹಬ್ಬ ಪರಿಣಾಮಕಾರಿ ಅನುಷ್ಠಾನ | Kalika Habba 2025-26

ಪೋಷಕ-ಶಿಕ್ಷಕರ ಮಹಾಸಭೆ (PTM)ಯ ಚಟುವಟಿಕೆಗಳ ಸಂಪೂರ್ಣ ಮಾಹಿತಿ.

 ಪೋಷಕ ಶಿಕ್ಷಕರ ಮಹಾಸಭೆ (Parent-Teacher Meet)ಯ ಚಟುವಟಿಕೆಗಳು

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಶೀಘ್ರದಲ್ಲಿ ಆರಂಭ‌‌ : ಸಂಪೂರ್ಣ ವಿವರ.

               ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ಸಮುದಾಯದ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಪ್ರಮಾಣದ ಸಮೀಕ್ಷೆಯನ್ನು ನಡೆಸಲಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ  ಶಿಘ್ರದಲ್ಲಿ  ಆರಂಭ‌‌ : ಸಂಪೂರ್ಣ ವಿವರ.

ಈ ಸಮೀಕ್ಷೆ ಏತಕ್ಕಾಗಿ ನಡೆಯಲಿದೆ?:
                ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳ ಮೀಸಲಾತಿಯನ್ನು ನೀಡಬಹುದು ಎಂದು 2024ರ ಆಗಸ್ಟ್, 01 ರಂದು ತೀರ್ಪು ನೀಡಿದೆ.

                 ಈ ಸಮೀಕ್ಷೆಯನ್ನು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ನಡೆಸಲಿದೆ. ಇದರಲ್ಲಿ ಸುಮಾರು 70,000 ಶಿಕ್ಷಕರು ಭಾಗವಹಿಸಲಿದ್ದಾರೆ.

ಸಮೀಕ್ಷೆಯ ಮುಖ್ಯ ಅಂಶಗಳು:

  1.  ಸಮಯಾವಧಿ: ಮೇ 5 ರಿಂದ 17 ರವರೆಗೆ (12 ದಿನಗಳ ಕಾಲ)
  2.  ಗಣತಿದಾರರು: ಪ್ರತಿ ಮತದಾನ ಕೇಂದ್ರಕ್ಕೆ (ಬೂತ್) ಒಬ್ಬ ಶಿಕ್ಷಕ ನಿಯೋಜಿತರಾಗುತ್ತಾರೆ.
  3. ಆನ್ಲೈನ್ ಸಮೀಕ್ಷೆ: ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ದತ್ತಾಂಶ ಸಂಗ್ರಹ.
  4. ಮೇಲ್ವಿಚಾರಣೆ: ಪ್ರತಿ 10-12 ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ.

ಸಮೀಕ್ಷೆಯ ವಿವರಗಳು
I. ಶಿಕ್ಷಕರ ಪಾತ್ರ
  • 58,932 ಶಿಕ್ಷಕರು ಪ್ರಾಥಮಿಕ ಗಣತಿದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
  • 10% ಹೆಚ್ಚುವರಿ ಶಿಕ್ಷಕರು (ಸುಮಾರು 5,900) ರಿಜರ್ವ್‌ಗೆ ಇರಲಿದ್ದಾರೆ.
  • 5,000 ಮೇಲ್ವಿಚಾರಕರು (ಶಾಲಾ ಮುಖ್ಯೋಪಾಧ್ಯಾಯರು) ನಿಯೋಜಿತರಾಗುತ್ತಾರೆ.
II. ಸಮೀಕ್ಷೆ ಹೇಗೆ ನಡೆಯುತ್ತದೆ?
  • ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ ಪ್ರಶ್ನೆಯನ್ನು ಕೇಳುತ್ತಾರೆ.
  • ಆನ್ಲೈನ್ ಡೇಟಾ ಎಂಟ್ರಿ: ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿ ನಮೂದಿಸಲಾಗುತ್ತದೆ.
  • ಪ್ರತಿ ಮತಗಟ್ಟೆಗೆ ಒಬ್ಬ ಶಿಕ್ಷಕ ನೇಮಕವಾಗುತ್ತಾರೆ.
III. ಸಾರ್ವಜನಿಕರ ಸಹಕಾರ
  • ಜಿಲ್ಲಾಧಿಕಾರಿಗಳು ನಾಗರಿಕರನ್ನು ಸಮೀಕ್ಷೆಗೆ ಸಹಕರಿಸಲು ಮನವಿ ಮಾಡಿದ್ದಾರೆ.
  • ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ ಮೂಲ, ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ಸ್ಥಿತಿ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು.
ಸಮೀಕ್ಷೆಯ ಉದ್ದೇಶ ಮತ್ತು ಪ್ರಾಮುಖ್ಯತೆ
  • ಪರಿಶಿಷ್ಟ ಜಾತಿಗಳ ನಿಜವಾದ ಜನಸಂಖ್ಯೆ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿ ಅರ್ಥಮಾಡಿಕೊಳ್ಳಲು.
  • ಸರ್ಕಾರಿ ಯೋಜನೆಗಳು ಯೋಗ್ಯರಿಗೆ ತಲುಪುವಂತೆ ಮಾಡಲು.
  • ಮೀಸಲಾತಿ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು.

# ಕೆಳಗಿನ Link ಮೂಲಕ ಈ ಸಮೀಕ್ಷೆಗೆ ಸಂಬಂಧಿಸಿದ ಕೈಪಿಡಿ Download ಮಾಡಿ.

Kalika Habba | ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬ 2025

ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬ (Kalika Habba)ವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕುರಿತು.

Kalika Habba | ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬ 2025

ಪರಿಚಯ :
      ಕಲಿಕಾ ಹಬ್ಬ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ‘ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ ಕಥೆಗಳನ್ನು ಹೇಳುವುದು, ಒಳಾಂಗಣ ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ / ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಸಂಯೋಜಿಸಲು ನೆರವಾಗುತ್ತವೆ. ಇಂತಹ ಸಂದರ್ಭಗಳು ಕಾಲ ಕ್ರಮೇಣ ಮಕ್ಕಳ ಕಲಿಕೆಯ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತವೆ.

ಕಲಿಕಾ ಹಬ್ಬ ಆಯೋಜನೆಯ ಉಪಯುಕ್ತ ಅಂಶಗಳು:

1. ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು, ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸಲು ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆ ಕ್ಲಸ್ಟರ್ ಒಳಗಿನ ಶಾಲೆಗಳು ತಮ್ಮೊಳಗಿರುವ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಿದಂತಾಗುತ್ತದೆ.

2. ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಹಾಗೂ ಒಂದು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತವೆ. ಮೋಜಿನ ಮತ್ತು ಆಕರ್ಷಕವೆನಿಸುವ ಕಾರ್ಯಕ್ರಮಗಳು ಶಾಲೆಗೆ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ ಮಾತ್ರವಲ್ಲದೆ, ವಿಶೇಷವಾಗಿ ಮೊದಲ ತಲೆಮಾರಿನ ಕಲಿಕಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಎದುರು ನೋಡುತ್ತಿರುತ್ತಾರೆ.

3. ಸೃಜನಶೀಲತೆಯ ಮೂಲಕ ಸಾಂಘಿಕ ಸಾಮರ್ಥ್ಯದೊಂದಿಗೆ ಮಕ್ಕಳು ಸಮಾಜೀಕರಣವಾಗುವುದನ್ನು ಕಲಿಕಾ ಹಬ್ಬವು ಪ್ರೋತ್ಸಾಹಿಸುತ್ತದೆ. ಕಲೆ, ಸಂಗೀತ ಮತ್ತು ದೈಹಿಕ ಆಟಗಳೊಂದಿಗೆ ಸಂಯೋಜಿಸಲ್ಪಟ್ಟ FLN ಚಟುವಟಿಕೆಗಳು ಮನೋಜನ್ಯ, ಭಾವನಾತ್ಮಕ ಮತ್ತು ದೈಹಿಕವಾದ ಕೌಶಲ್ಯಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಲು ಒಂದು ಸಾಧನವಾಗಿ ಕೆಲಸ ಮಾಡುವುದು.

4. ವಿಭಿನ್ನ ಕಲಿಕೆಯ ವೇಗ ಅಥವಾ ಶೈಲಿಯನ್ನು ಹೊಂದಿರುವ ಮಕ್ಕಳು ಇಂತಹ ಕಲಿಕಾ ಉತ್ಸವಗಳಲ್ಲಿ ತೊಡಗಿಕೊಂಡಾಗ ವೈವಿಧ್ಯಮಯವಾದ ವಿಧಾನಗಳಿಂದ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಪ್ರಯೋಜನವನ್ನು ಪಡೆಯುತ್ತಾರೆ.
1 ರಿಂದ 5 ನೇ ತರಗತಿಯ ಮಕ್ಕಳನ್ನು ವಿವಿಧ ಕಲಿಕಾ ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ತರಗತಿ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಕಲಿಕಾ ಫಲಶೃತಿಯನ್ನು ಪಡೆಯಲು ಸಾಧ್ಯವಿದೆ. ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಸಹಯೋಗದ ಕಲಿಕೆಗೆ ಸ್ಥಳಾವಕಾಶವನ್ನು ನೀಡುವ ಮೂಲಕ, ಸಮುದಾಯದೊಳಗಿನ ವಿವಿಧ ಭಾಗೀದಾರರ ಭಾಗವಹಿಸುವಿಕೆಯನ್ನು ಉತ್ತೇಚಿಸಬೇಕನ್ನುವುದು ಇಲಾಖೆಯ ಪ್ರಮುಖ ಆಶಯವಾಗಿದೆ.

ಕಲಿಕಾ ಹಬ್ಬದಲ್ಲಿ ಕೈಗೊಳ್ಳುವ 7 ಥೀಮ್ / FLN ಚಟುವಟಿಕೆಗಳು :

1. ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ :
    ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ ಕಥೆಗಳನ್ನು ಬರೆಯುವುದು, ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಸಣ್ಣ ಕತೆಗಳನ್ನು ಕಟ್ಟುವುದು, ಮೋಜಿನ ಆಟಗಳನ್ನು ರೂಪಿಸುವುದು ಇತ್ಯಾದಿ. ಈ ಬಗ್ಗೆ ಪೋಷಕರೊಂದಿಗೆ ಪೂರ್ವಭಾವಿಯಾಗಿ ಸಮಾಲೋಚಿಸಿ ಕಾರ್ಯಪ್ರವೃತ್ತರಾಗುವಂತೆ ನೋಡಿಕೊಳ್ಳುವುದು.ಈ ವಲಯಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಇಬ್ಬರಿಗೂ ಒದಗಿಸುವುದು. ಉದಾ., ಫ್ಲಾಶ್‌ಕಾರ್ಡ್,ಪೇಪರ್, ಪೆನ್ನು, ಪೆನ್ಸಿಲ್, ಬಣ್ಣ ಇತ್ಯಾದಿ.

2. ಕಥೆ ಹೇಳುವ ಚಟುವಟಿಕೆ :
           ಮಕ್ಕಳು ಶಾಲಾ ಭಾಷೆಯಾದ ಕನ್ನಡ ಮತ್ತು ಇತರೆ ಪ್ರಾದೇಶಿಕ ಹಾಗೂ ಅಂಗ್ಲ ಭಾಷೆಗಳಲ್ಲಿ ಅಥವಾ ತಮ್ಮ ಮನೆಯ ಮಾತೃ ಭಾಷೆಯಲ್ಲಿ ಆಕರ್ಷಕವಾದ ಕಥೆಗಳನ್ನು ಹೇಳಲು ಪ್ರೇರೇಪಿಸುವುದು. ಇದರಿಂದಾಗಿ ಮಕ್ಕಳಲ್ಲಿ ಹಾಗೂ ಸಮುದಾಯದ ಸದಸ್ಯರಲ್ಲಿ ಕುತೂಹಲವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ನೈತಿಕ ಹಾಗೂ ಕಾಲ್ಪನಿಕವಾಗಿ ಕಥೆಗಳನ್ನು ಸೃಜಿಸುವುದರಿಂದ ಮಕ್ಕಳಲ್ಲಿ ಕೆಲ್ಪನಾ ಶಕ್ತಿ ಬೆಳವಣಿಗೆಗೆ ಅವಕಾಶ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಅಥವಾ ಇತರೆ ಭಾಷೆಗಳ ಅನಿಮೆಟೆಟ್ ಕಥೆಗಳನ್ನು ಪ್ರದರ್ಶಿಸಲು ಟ್ಯಾಬ್ಲೆಟ್ ಅಥವಾ ಪ್ರೊಜೆಕ್ಟರ್‌ಗಳನ್ನು ಬಳಸಿಕೊಳ್ಳುವುದು.

3. ಸಂತೋಷದಾಯಕ ಗಣಿತ ಚಟುವಟಿಕೆ :
       ಸುತ್ತಮುತ್ತಲಿನ ಭೌತಿಕ ಪರಿಸರದಲ್ಲಿ ಲಭ್ಯವಾಗುವ ಮೂರ್ತ ವಸ್ತುಗಳ ಎಣಿಕೆ, ಶಾಲೆಯ ಒಳಾಂಗಣ/ಹೊರಾಂಗಣ ವಸ್ತುಗಳ ಎಣಿಕೆ, ಸ್ಥಳೀಯ ಸನ್ನಿವೇಶದ ವೆಸ್ತುಗಳ ಸಂಖ್ಯೆಗಳ ಎಣಿಕೆ, ವಿವಿಧ ಮಾದರಿಗಳ ಗುರುತಿಸುವಿಕೆ ಮತ್ತು ಸಮಸ್ಯೆ ಪರಿಹರಿಸುವಿಕೆಯೊಂದಿಗೆ ಸಂಖ್ಯಾ ಜ್ಞಾನದ ಆಟಗಳನ್ನು ಆಯೋಜಿಸುವುದು ಮತ್ತು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವುದು.

4. ಗಟ್ಟಿ ಓದು ಚಟುವಟಿಕೆ :
            ಮಕ್ಕಳು/ಶಿಕ್ಷಕರು ಸಿದ್ದಪಡಿಸಿದ ಅಥವಾ ಸೃಜನಾತ್ಮಕವಾಗಿ ರಚಿಸಿದ ವಾಕ್ಯ ಅಥವಾ ಪಠ್ಯ ಸಾಮಗ್ರಿಯನ್ನು ಗ್ರಹಿಸಿ ಗಟ್ಟಿಯಾಗಿ ಓದುವುದು. ಗ್ರಂಥಾಲಯದಿಂದ ಪಡೆದ ಓದು ಸಾಮಗ್ರಿಗಳನ್ನು ಗ್ರಹಿಸಿ ಓದುವುದು ವಿಭಾಗದ ಮುಖ್ಯವಾದ ಚಟುವಟಿಕೆಯಾಗಿದ್ದು, ಈ ಬಗ್ಗೆ ಶಾಲೆಯಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ / ಕೊಠಡಿಯ ಓದು ಸಾಮಗ್ರಿಗಳ ಕಾರ್ನ‌್ರನಿಂದ / ಗ್ರಂಥಾಲಯ / ಗ್ರಾಮ ಪಂಚಾಯತ್ ಗ್ರಂಥಾಲಯ / ನಗರ ಕೇಂದ್ರ ಗ್ರಂಥಾಲಯ ಇತ್ಯಾದಿಗಳಿಂದ ವಯಸ್ಸಿಗೆ ಸೂಕ್ತವಾದ (ಕಿರಿಯರಿಂದ ಹಿರಿಯರ ಕಡೆಗೆ) ಪುಸ್ತಕಗಳನ್ನು ಸಂಗ್ರಹಿಸಿ. ವರ್ಣರಂಜಿತ ಓದುವ ಮೂಲೆಗಳನ್ನು ಸ್ಥಾಪಿಸಿಕೊಳ್ಳುವುದು.
ಮಕ್ಕಳು ಕಥೆಯ ಭಾಗಗಳನ್ನು ಕೂಡ ಓದಿ ಓದಿ ಅಭಿನಯಿಸುವಂತಹ ‘ಗಟ್ಟಿಯಾಗಿ ಎಂಬ ಶೀರ್ಷಿಕೆಯ ಅವಧಿಗಳನ್ನು ಇಲ್ಲಿ ನಿರ್ವಹಿಸುವುದು. ಸದರಿ ಚಟುವಟಿಕೆಯನ್ನು ಕನ್ನಡ, ಅಂಗ್ಲ, ಉರ್ದು, ಮರಾಠಿ, ತಮಿಳು, ತೆಲುಗು, ಇತ್ಯಾದಿ ಭಾಷೆಗಳಲ್ಲಿ ನಿರ್ವಹಿಸತಕ್ಕದ್ದು.

5. ಕೈಬರಹ ಮತ್ತು ಕ್ಯಾಲಿಗ್ರಫಿ :
        ಉತ್ತಮವಾದ ಸ್ನಾಯುಜನ್ಯ ಕೌಶಲ್ಯಗಳನ್ನು ಸುಧಾರಿಸಲು, ಅಚ್ಚುಕಟ್ಟಾಗಿ ಮತ್ತು ಸೃಜನಶೀಲವಾಗಿ ಅಕ್ಷರ/ಪದ/ವಾಕ್ಯ/ವಾಕ್ಯವೃಂದವನ್ನು ಬರೆಯಲು ಕೈಬರಹಕ್ಕಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿಕೊಳ್ಳುವುದು.

6. ಟ್ರೆಷರ್ ಹಂಟ್ / ಜ್ಞಾಪಕ (ಮೆಮೊರಿ) ಪರೀಕ್ಷೆ :
      ಹಣ್ಣುಗಳು, ತರಕಾರಿಗಳು, ಬಣ್ಣಗಳು, ತರಗತಿಯ ವಸ್ತುಗಳು ಹಾಗೂ ಇತ್ಯಾದಿಗಳ ಕ್ರಿಯಾಶೀಲತೆಯಲ್ಲಿ ಗುರುತಿಸುವಿಕೆ/ಜ್ಞಾಪಕ ಶಕ್ತಿಯ ಚಟುವಟಿಕೆಗಳನ್ನು ಆಯೋಜಿಸಿಕೊಳ್ಳುವುದು.

7. ರಸ ಪ್ರಶ್ನೆ :
          ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ ಮತ್ತು ಆರೋಗ್ಯ ಮತ್ತು ಪರಿಸರ ಹಾಗೂ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು, ಕೌಶಲಾಧಾರಿತ ಸಂಗತಿಗಳನ್ನು ಅಳವಡಿಸಿ ರಸ ಪ್ರಶ್ನೆಯ ವಿನ್ಯಾಸ ರೂಪಿಸಿಕೊಳ್ಳುವುದು. ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಪ್ರತೀ ಶಾಲೆಯಿಂದಲೂ ಮಕ್ಕಳು ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸುವುದು. 04 ಸುತ್ತುಗಳಲ್ಲಿ ಸ್ಪರ್ಧೆಯನ್ನು ಮುಗಿಸಬಹುದಾಗಿದ್ದು, ಅಗತ್ಯವಿದ್ದಲ್ಲಿ ಬೋನಸ್ ಸುತ್ತನ್ನು ಅಳವಡಿಸಿಕೊಳ್ಳಬಹುದು.

ಕಲಿಕಾ ಉತ್ಸವದ ಮಾದರಿ ವೇಳಾಪಟ್ಟಿ 

ಕ್ಲಸ್ಟರ್ ಹಂತದ ಕಲಿಕಾ ಹಬ್ಬಕ್ಕೆ ನಿಗದಿಪಡಿಸಿರುವ ಅನುದಾನದ ಮೊತ್ತ ಮತ್ತು ವೆಚ್ಚ ಭರಿಸುವಿಕೆಯ ಕ್ರಮ : (ಬ್ಲಾಕ್‌ಗಳಿಗೆ ನಿಗದಿಪಡಿಸಿದ ಕಲಿಕಾ ಹಬ್ಬದ ಅನುದಾನವನ್ನು BEO ರವರಿಗೆ ಬಿಡುಗೆಡೆಗೊಳಿಸಲಾಗುವುದು)

 ಪ್ರತಿ ಕ್ಲಸ್ಟರ್‌ಗೆ ರೂ. 25000 /- ಮೊತ್ತದ ವೆಚ್ಚವನ್ನು ನಿಗದಿಪಡಿಸಿದೆ.
ಕಲಿಕಾ ಹಬ್ಬ ಅನುಷ್ಟಾನದ ಮೇಲ್ವಿಚಾರಣೆ ಮತ್ತು ಅನುಪಾಲನೆಯ ಕ್ರಮಗಳು:

  • ದಿನಾಂಕ 01.02.2025 ರಿಂದ 10.02.2025 ರೊಳಗಾಗಿ ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಚಟುವಟಿಕೆಗಳನ್ನು ಹಮ್ಮಿಕೊಂಡು ಪೂರ್ಣಗೊಳಿಸುವುದು.
  • ಎಲ್ಲಾ ಡಯಟ್‌ಗಳ ಉಪನಿರ್ದೇಶಕರು (ಆಭಿವೃದ್ಧಿ) ಇವರು ತಾಲ್ಲೂಕುಗಳ ಕ್ಲಸ್ಟರ್ ಹಬ್ಬದ ಮೇಲ್ವಿಚಾರಣಾಧಿಕಾರಿಯಾಗಿದ್ದು, ದಿನಾಂಕ: 30.01.2025 ರೊಳಗಾಗಿ ತಮ್ಮ ತಾಲ್ಲೂಕುಗಳ ಕ್ಲಸ್ಟರ್ ಹಬ್ಬದ ದಿನಾಂಕಗಳನ್ನು ಜಿಲ್ಲಾವಾರು ತಾಲ್ಲೂಕುವಾರು ಕ್ರೂಡೀಕರಿಸಿ ಎಸ್.ಎಸ್.ಕೆ ಎನ್.ಇ.ಪಿ ಶಾಖೆಗೆ ಇ-ಮೇಲ್ ಮೂಲಕ ಕಡ್ಡಾಯವಾಗಿ ಸಲ್ಲಿಸುವುದು.
  • ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದ ರೂವಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಯಾಗಿರುತ್ತಾರೆ.
  • ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸುವ ಮತ್ತು ಸಂಘಟಿಸುವ ನೋಡಲ್ ಅಧಿಕಾರಿ ಆಯಾಯ ಕ್ಲಸ್ಟರ್‌ನ CRP ಗಳೇ ಆಗಿರುತ್ತಾರೆ.
  • ಒಂದು ಕ್ಲಸ್ಟರ್‌ಗೆ 1 ರಿಂದ 5ನೇ ತರಗತಿವರೆಗಿನ ಮಕ್ಕಳನ್ನು ಒಳಗೊಂಡಂತೆ ಮಿತಿಯನ್ನು 100 ಮಕ್ಕಳಿಗೆ ನಿಗದಿಪಡಿಸಿದೆ. ಒಂದು ವೇಳೆ, ಆ ಕ್ಲಸ್ಟರ್‌ನಲ್ಲಿ ಕಲಿಕಾ ಹಬ್ಬದ ಸಂಘಟನೆಗೆ ಸಮುದಾಯದ ಸದಸ್ಯರು, ಶಿಕ್ಷಣಾಸಕ್ತರು ಪರಸ್ಪರ ಕೈಜೋಡಿಸಿ ಸಹಕರಿಸಿದ್ದಲ್ಲಿ ಮಕ್ಕಳ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೂ ಪ್ರತಿ ಶಾಲೆಯಿಂದ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಭಾಗವಹಿಸಬಹುದಾಗಿದೆ.
  • ಕ್ಲಸ್ಟ‌ರ್ ಹಂತದ ಕಲಿಕಾ ಹಬ್ಬಕ್ಕಾಗಿ ದಿನಾಂಕವನ್ನು ನಿಗದಿಪಡಿಸಿದ ಮೇಲೆ ಸದರಿ ದಿನಾಂಕವನ್ನು ಪೂರ್ವಭಾವಿಯಾಗಿ ಆ ಕ್ಲಸ್ಟರ್‌ನ ಎಲ್ಲಾ ಶಾಲೆಗಳಿಗೆ ತಿಳಿಸುವುದು.
  • ಕ್ಲಸ್ಟ‌ರ್ ಶಾಲೆಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತೀ ಶಾಲೆಗಳಿಂದ ಕಲಿಕಾ ಹಬ್ಬಕ್ಕೆ ಬರಬೇಕಾದ ವಿದ್ಯಾರ್ಥಿಗಳ ಸಂಖ್ಯೆಯ ಮಿತಿಯನ್ನು ನಿಗದಿಪಡಿಸುವುದು ಮತ್ತು ಆ ಶಾಲೆಗೆ ಮುಂಚಿತವಾಗಿ ತಿಳಿಸುವುದು.
  • ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಆಯೋಜಿಸುವ ಚಟುವಟಿಕೆಗಳ ಬಗ್ಗೆ FLN ಶಿಕ್ಷಕರಿಗೆ ಅರಿವು ಮೂಡಿಸುವುದು.
  • ಮಕ್ಕಳ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು. ಕಲಿಕಾ ಹಬ್ಬದಲ್ಲಿ ಮಕ್ಕಳ ಭಾಗವಹಿಸುವಿಕೆ ಮುಖ್ಯವಾಗಿದ್ದು, ಇತರ ಶಿಕ್ಷಣೇತರ ಚಟುವಟಿಕೆಗಳಿಗೆ ಆಸ್ಪದವಿರಬಾರದು.
  • ಹಬ್ಬದ ಕ್ರಿಯಾತ್ಮಕ ವಾತಾವರಣವನ್ನು ಕಿರು ವರದಿಯೊಂದಿಗೆ ದಾಖಲೀಕರಣಗೊಳಿಸುವುದು ಮತ್ತು ರಾಜ್ಯ ಹಂತಕ್ಕೆ ಸಲ್ಲಿಸುವುದು.
  • ಈ ಕಲಿಕಾ ಹಬ್ಬಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಲು ಸ್ಥಳೀಯ ಸಮುದಾಯದ ಹಿರಿಯರನ್ನು/ಸಾಧಕರನ್ನು/ ಜಿಲ್ಲಾ ಹಂತದ FLN/ನಲಿಕಲಿ ನೋಡಲ್ ಅಧಿಕಾರಿಗಳನ್ನು ಕೂಡ ಆಹ್ವಾನಿಸಬಹುದು.
              ಸದರಿ ಸುತ್ತೋಲೆಯೊಂದಿಗೆ ಜಿಲ್ಲೆಗಳಿಗೆ ಕಲಿಕಾ ಹಬ್ಬವನ್ನು ಕ್ಲಸ್ಟರ್ ಮಟ್ಟದಲ್ಲಿ ನಿರ್ವಹಿಸಲು ಪೂರ್ಣ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉಪನಿರ್ದೇಶಕರು(ಆಡಳಿತ) ಈ ಕೂಡಲೇ ಸದರಿ ಅನುದಾನವನ್ನು ತಾಲ್ಲೂಕುಗಳಿಗೆ ಬಿಡುಗಡೆ ಮಾಡಿ ಕಲಿಕಾ ಹಬ್ಬವನ್ನು ಕ್ಲಸ್ಟರ್ ಹಂತದಲ್ಲಿ ಆಯೋಜಿಸಲು ಅನುಕೂಲಿಸುವಂತೆ ಕ್ರಮವಹಿಸಲು ಸೂಚಿಸಿದೆ. ಕಲಿಕಾ ಹಬ್ಬದ ವೆಚ್ಚವನ್ನು ನಿಪುಣ್ ಭಾರತ್ ಚಟುವಟಿಕೆಯಡಿ 5.1.1 – NIPUN Bharat Mission ಚಟುವಟಿಕೆಯಡಿ ಭರಿಸಲಾಗುತ್ತಿದೆ.
          ವೆಚ್ಚದ ಪ್ರಗತಿಯನ್ನು PFMS ನಲ್ಲಿ Line Item No: F.01.13.01-LEP Class 1-11 ರಲ್ಲಿ ಇಂದಿಕರಿಸುವುದು. ಕಲಿಕಾ ಹಬ್ಬ ಕಾರ್ಯಕ್ರಮದ ಜಿಲ್ಲಾವಾರು ಪ್ರಗತಿ ಮಾಹಿತಿಯನ್ನು ಹಾಗೂ ಫೋಟೊ ಸಮೇತ ವರದಿಯನ್ನು ದಿನಾಂಕ 10-02-2025 ರೊಳಗೆ sskpoecell@gmail.com ಗೆ ಸಲ್ಲಿಸುವುದು.

2021-22 ನೇ ಸಾಲಿನ 1 ರಿಂದ 10ನೇ ತರಗತಿಗಳ ಮೌಲ್ಯಾಂಕನ ಕುರಿತು ಆದೇಶ

 ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆಸುವ ಬಗ್ಗೆ ದಿನಾಂಕ 11/08/2021 ರಂದು ಹೊರಡಿಸಿದ ಆದೇಶ.

Click & Download Circulars