ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಪರಿಣಾಮಕಾರಿ ಅನುಷ್ಠಾನ | Kalika Habba 2025-26
ಹಿನ್ನೆಲೆ:
ಉದ್ದೇಶಗಳು:
ಮಕ್ಕಳು, ಶಿಕ್ಷಕರು, ಪೋಷಕರು ಮತ್ತು ಸಮುದಾಯದ ಸದಸ್ಯರನ್ನು ಒಗ್ಗೂಡಿಸಿ ಸಂತಸದಾಯಕ ಕಲಿಕಾ ವಾತಾವರಣ ನಿರ್ಮಿಸುವುದು
3 .ಮಕ್ಕಳಲ್ಲಿನ ಸೃಜನಶೀಲತೆ, ಕಲೆ, ಸಂಗೀತ ಮತ್ತು ದೈಹಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು
4 .ವಿಭಿನ್ನ ಕಲಿಕಾ ಶೈಲಿಯುಳ್ಳ ಮಕ್ಕಳಿಗೆ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಕಲಿಯಲು ಅವಕಾಶ ಕಲ್ಪಿಸುವುದು
5 .
ಕಲಿಕಾ ಹಬ್ಬದ ಚಟುವಟಿಕೆಗಳು
ಒಟ್ಟು ಚಟುವಟಿಕೆಗಳಲ್ಲಿ 1 ರಿಂದ 4 ಕಡ್ಡಾಯವಾಗಿವೆ. 5 ರಿಂದ 11 ರವರೆಗಿನ ಚಟುವಟಿಕೆಗಳಲ್ಲಿ ಯಾವುದಾದರೂ 3 ನ್ನು ಆಯ್ಕೆ ಮಾಡಿಕೊಳ್ಳಬೇಕು.
Kalika habba-2025 ಕಡ್ಡಾಯವಾಗಿ ನಿರ್ವಹಿಸಬೇಕಾದ ಚಟುವಟಿಕೆಗಳು
1. ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ :
ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ ಕಥೆಗಳನ್ನು ಬರೆಯುವುದು, ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಸಣ್ಣ ಕಥೆಗಳನ್ನು ಕಟ್ಟುವುದು, ಮೋಜಿನ ಆಟಗಳನ್ನು ರೂಪಿಸುವುದು ಇತ್ಯಾದಿ. ಈ ಬಗ್ಗೆ ಪೋಷಕರೊಂದಿಗೆ ಪೂರ್ವಭಾವಿಯಾಗಿ ಸಮಾಲೋಚಿಸಿ ಕಾರ್ಯಪ್ರವೃತ್ತರಾಗುವಂತೆ ನೋಡಿಕೊಳ್ಳುವುದು. ಈ ವಲಯಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಇಬ್ಬರಿಗೂ ಒದಗಿಸುವುದು. ಉದಾ:- ಫ್ಲಾಶ್‌ಕಾರ್ಡ್, ಪೇಪರ್, ಪೆನ್ನು, ಪೆನ್ಸಿಲ್, ಬಣ್ಣ ಇತ್ಯಾದಿ.
2. ಕಥೆ ಹೇಳುವುದು :
ಮಕ್ಕಳು ಶಾಲಾ ಭಾಷೆಯಾದ ಕನ್ನಡ ಮತ್ತು ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಅಥವಾ ತಮ್ಮ ಮಾತೃ ಭಾಷೆಯಲ್ಲಿ ಆಕರ್ಷಕವಾದ ಕಥೆಗಳನ್ನು ಹೇಳಲು ಪ್ರೇರೇಪಿಸುವುದು. ಇದರಿಂದಾಗಿ ಮಕ್ಕಳಲ್ಲಿ ಹಾಗೂ ಸಮುದಾಯದ ಸದಸ್ಯರಲ್ಲಿ ಕುತೂಹಲವನ್ನು ಸೃಷ್ಟಿಸಲು ಸಾಧವಾಗುತ್ತದೆ. ನೈತಿಕ ಹಾಗೂ ಕಾಲ್ಪನಿಕವಾಗಿ ಕಥೆಗಳನ್ನು ಸೃಜಿಸುವುದರಿಂದ ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳವಣಿಗೆಗೆ ಅವಕಾಶ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಅಥವಾ ಇತರೆ ಭಾಷೆಗಳ ಅನಿಮೆಟೆಡ್ ಕಥೆಗಳನ್ನು ಪ್ರದರ್ಶಿಸಲು ಟ್ಯಾಬ್ಲೆಟ್ ಅಥವಾ ಪ್ರೊಜೆಕ್ಟರ್‌ಗಳನ್ನು ಬಳಸಿಕೊಳ್ಳುವುದು.
3. ಸಂತೋಷದಾಯಕ ಗಣಿತ :
ಸುತ್ತಮುತ್ತಲಿನ ಭೌತಿಕ ಪರಿಸರದಲ್ಲಿ ಲಭ್ಯವಾಗುವ ಮೂರ್ತ ವಸ್ತುಗಳ ಎಣಿಕೆ, ಶಾಲೆಯ ಒಳಗಾಂಣ/ಹೊರಾಂಗಣ ವಸ್ತುಗಳ ಎಣಿಕೆ, ಸ್ಥಳೀಯ ಸನ್ನಿವೇಶದ ವಸ್ತುಗಳ ಸಂಖ್ಯೆಗಳ ಎಣಿಕೆ, ವಿವಿಧ ಮಾದರಿಗಳ ಗುರುತಿಸುವಿಕೆ ಮತ್ತು ಸಮಸ್ಯೆ ಪರಿಹರಿಸುವಿಕೆಯೊಂದಿಗೆ ಸಂಖ್ಯಾ ಜ್ಞಾನದ ಆಟಗಳನ್ನು ಆಯೋಜಿಸುವುದು ಮತ್ತು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವುದು.
4. ಆರೋಗ್ಯ ಮತ್ತು ಪೌಷ್ಟಿಕಾಂಶ :
ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಉತ್ತಮ ಪೌಷ್ಟಿಕ ಆಹಾರದ ಅಗತ್ಯತೆ ಇದೆ. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಆಹಾರ ವಿಂಗಡಣೆ ಮತ್ತು ಪೌಷ್ಟಿಕಾಂಶದ ಮಹತ್ವಗಳನ್ನು ಒಳಗೊಂಡ ಪೋಸ್ಟರ್ ತಯಾರಿಕೆ, ಮಾದರಿ ತಯಾರಿಕೆ, ಹಣ್ಣು ತರಕಾರಿ ಧಾನಗಳಿಂದ ತಯಾರಿಸಿದ ರಂಗೋಲಿ, ಮತ್ತು ಸಲಾಡ್ ತಯಾರಿಕೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುವರು ಮತ್ತು ತಮ್ಮ ಸಹಪಾಠಿಗಳೊಂದಿಗೆ ಹಂಚಿಕೊಳ್ಳುವರು. ಮನೆಯಲ್ಲಿ ಸಿಗುವ ತರಕಾರಿಗಳಲ್ಲಿ, ಕ್ರಿಯೇಟಿವ್ ಸ್ಟಾಕ್ ಚಾಲೆಂಜ್, ಹಣ್ಣುಗಳು ಮತ್ತು ತರಕಾರಿಗಳನ್ನು ಪರೀಕ್ಷಿಸಲು ಭೂತಗನ್ನಡಿಯನ್ನು ಬಳಸುವುದು ಹಾಗೂ, ಅವುಗಳ ನೋಟ, ಭಾವನೆ ಮತ್ತು ವಾಸನೆಯನ್ನು ವಿವರಿಸುವುದು.
ಐಚ್ಚಿಕ ಚಟುವಟಿಕೆಗಳು ಯಾವುದಾದರು ಮೂರು ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಂಡು ನಿರ್ವಹಿಸಬೇಕಾದ ಚಟುವಟಿಕೆಗಳು (ಆಯ್ಕೆ ಮಾಡಿಕೊಳ್ಳಲಾದ ಮೂರು ಚಟುವಟಿಕೆಗಳನ್ನು ಕ್ಲಸ್ಟರ್‌ನಲ್ಲಿರುವ ಎಲ್ಲಾ ಶಾಲೆಗಳಲ್ಲಿಯೂ ಅಭ್ಯಾಸ ಮಾಡುವಂತೆ ಸೂಚಿಸುವುದು)
5. ಛದ್ಮವೇಷ :
ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಜಾಗೃತಿ, ನಮ್ಮ ಸುತ್ತ ಮುತ್ತ ಇರುವ ಪರಿಸರದ ಅರಿವನ್ನು ಮತ್ತು ಉತ್ತಮ ಸೃಜನಾತ್ಮಕ ಅಭಿವ್ಯಕ್ತಿಯನ್ನು ವೇಷಭೂಷಣಗಳ ಮೂಲಕ ಪ್ರದರ್ಶಿಸಲು ಈ ಚಟುವಟಿಕೆಯಲ್ಲಿ ಅವಕಾಶವನ್ನು ಕಲ್ಪಿಸಿದೆ. ಇದರಲ್ಲಿ ವಿದ್ಯಾರ್ಥಿಗಳು ಮರ ಗಿಡ, ಪ್ರಾಣಿಗಳು ಪಕ್ಷಿಗಳು ಇತರೇ ಪರಿಸರದ ಅಂಶಗಳನ್ನು ಪ್ರದರ್ಶಿಸುವ ಹಾಗೂ ಅವುಗಳ ಮೌಲ್ಯವನ್ನು ತಿಳಿಸುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ವೇಷ ಧರಿಸುವ ಮೂಲಕ ಹಾಗೂ ಲಘು ಸಂಭಾಷಣೆಯ ಮೂಲಕ ಭಾಗವಹಿಸುವರು.
6. ಕೈಬರಹ ಮತ್ತು ಕ್ಯಾಲಿಗ್ರಫಿ :
ಉತ್ತಮವಾದ ಸ್ನಾಯುಜನ ಕೌಶಲ್ಯಗಳನ್ನು ಸುಧಾರಿಸಲು, ಅಚ್ಚುಕಟ್ಟಾಗಿ ಮತ್ತು ಸೃಜನಶೀಲವಾಗಿ ಅಕ್ಷರ/ಪದ/ವಾಕ್ಯ/ವಾಕ್ಯ ವೃಂದವನ್ನು ಬರೆಯಲು ಕೈಬರಹಕ್ಕಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿಕೊಳ್ಳುವುದು.
7. ಚಿತ್ರ ನೋಡಿ ವಿವರಿಸು :
ಈ ಚಟುವಟಿಕೆಯ ಮೂಲಕ ಮಕ್ಕಳು ವೀಕ್ಷಣಾ ಕೌಶಲ್ಯ, ಬಾಷಾ ಕೌಶಲ್ಯ ಮತ್ತು ಒಂದು ಚಿತ್ರವನ್ನು ತಾರ್ಕಿಕವಾಗಿ ಹಾಗೂ ಕಾಲ್ಪನಿಕವಾಗಿ ಅರ್ಥೈಸಿಕೊಂಡು ವಿವರಿಸುವ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಗಳಿಸುವರು. ಈ ಚಟುವಟಿಕೆಗೆ ವಿವಿಧ ಪರಿಕಲ್ಪನೆಗಳನ್ನು ಬಿಂಬಿಸುವ ಚಿತ್ರಗಳನ್ನು ಆಯ್ಕೆಮಾಡಿ ಮಕ್ಕಳಿಗೆ ಆಲೋಚಿಸಲು 2 ನಿಮಿಷಗಳ ಕಾಲಾವಕಾಶವನ್ನು ನೀಡಿ ಆಯೋಜಿಸುವುದು.
8. ಟ್ರೆಷರ್ ಹಂಟ್/ ಮೆಮೊರಿ ಪರೀಕ್ಷೆ :
ಹಣ್ಣುಗಳು, ತರಕಾರಿಗಳು, ಬಣ್ಣಗಳು, ತರಗತಿಯ ವಸ್ತುಗಳು ಹಾಗೂ ಇತ್ಯಾದಿಗಳ ಕ್ರಿಯಾಶೀಲತೆಯಲ್ಲಿ ಗುರುತಿಸುವಿಕೆ/ಜ್ಞಾಪಕ ಶಕ್ತಿಯ ಚಟುವಟಿಕೆಗಳನ್ನು ಆಯೋಜಿಸಿಕೊಳ್ಳುವುದು.
9. ರಸ ಪ್ರಶ್ನೆ :
ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ, ಆರೋಗ್ಯ ಮತ್ತು ಪರಿಸರ ಹಾಗೂ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು, ಕೌಶಲಾಧಾರಿತ ಸಂಗತಿಗಳನ್ನು ಅಳವಡಿಸಿ ರಸಪ್ರಶ್ನೆಯ ವಿನ್ಯಾಸವನ್ನು ರೂಪಿಸಿಕೊಳ್ಳುವುದು. ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಪ್ರತತಿ ಶಾಲೆಯಿಂದಲೂ ಮಕ್ಕಳು ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸುವುದು. 04 ಸುತ್ತುಗಳಲ್ಲಿ ಸ್ಪರ್ಧೆಯನ್ನು ಮುಗಿಸಬಹುದಾಗಿದ್ದು, ಅಗತ್ಯವಿದ್ದಲ್ಲಿ ಬೋನಸ್ ಸುತ್ತನ್ನು ಅಳವಡಿಸಿಕೊಳ್ಳಬಹುದು.
10. ಪಾತ್ರಾಭಿನಯ/ ಅಭಿನಯ ಕೌಶಲ್ಯ :
ಈ ಚಟುವಟಿಕೆಯಲ್ಲಿ ಮಕ್ಕಳು ವಿವಿಧ ಪಾತ್ರಗಳು, ಸನ್ನಿವೇಶಗಳನ್ನು ಬಳಸಿಕೊಂಡು ಉತ್ತಮ ಸಂಭಾಷಣೆಯ ಮೂಲಕ ಅಭಿವ್ಯಕ್ತಿ/ಅಭಿನಯ ಸಾಮರ್ಥ್ಯ ಮತ್ತು ಸಂಭಾಷಣಾ ಕೌಶಲ್ಯವನ್ನು ಪ್ರದರ್ಶಿಸುವರು. ಈ ಚಟುವಟಿಕೆಗೆ ಪ್ರತಿ ವಿದ್ಯಾರ್ಥಿಗೆ 2 ರಿಂದ 3 ನಿಮಿಷಗಳ ಕಾಲಾವಕಾಶವನ್ನು ನಿಗದಿಪಡಿಸುವುದು ಏಕಪಾತ್ರಾಭಿನಯಕ್ಕೂ ಸಹ ಅವಕಾಶ ನೀಡುವುದು.
11. ಗಟ್ಟಿಯಾಗಿ ಓದುವುದು:
ಮಕ್ಕಳು/ಶಿಕ್ಷಕರು ಸಿದ್ಧಪಡಿಸಿದ ಅಥವಾ ಸೃಜನಾತ್ಮಕವಾಗಿ ರಚಿಸಿದ ವಾಕ್ಯ.ವಾಕ್ಯವೃಂದ ಅಥವಾ ಪಠ್ಯ ಸಾಮಗ್ರಿಯನ್ನು ಗ್ರಹಿಸಿ ಗಟ್ಟಿಯಾಗಿ ಓದುವುದು. ಗ್ರಂಥಾಲಯದಿಂದ ಪಡೆದ ಓದು ಸಾಮಗ್ರಿಗಳನ್ನು ಗ್ರಹಿಸಿ ಓದುವುದು ಈ ವಿಭಾಗದ ಮುಖ್ಯವಾದ ಚಟುವಟಿಯಾಗಿದ್ದು, ಈ ಬಗ್ಗೆ ಶಾಲೆಯಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ / ಕೊಠಡಿಯ ಓದು ಸಾಮಗ್ರಿಗಳ ಕಾರ್ನ‌್ರನಿಂದ / ಗ್ರಂಥಾಲಯ / ಗ್ರಾಮ ಪಂಚಾಯತ್ ಗ್ರಂಥಾಲಯ / ನಗರ ಕೇಂದ್ರ ಗ್ರಂಥಾಲಯ ಇತ್ಯಾದಿಗಳಿಂದ ವಯಸ್ಸಿಗೆ ಸೂಕ್ತವಾದ (ಕಿರಿಯರಿಂದ ಹಿರಿಯರ ಕಡೆಗೆ ಪುಸ್ತಕಗಳನ್ನು ಸಂಗ್ರಹಿಸಿ. ವರ್ಣರಂಜಿತ ಓದುವ ಮೂಲೆಗಳನ್ನು ಸ್ಥಾಪಿಸಿಕೊಳ್ಳುವುದು. ಮಕ್ಕಳು ಕಥೆಯ ಭಾಗಗಳನ್ನು ಕೂಡ ಓದಿ ಅಭಿನಯಿಸುವಂತಹ ‘ಗಟ್ಟಿಯಾಗಿ ಓದಿ’ ಎಂಬ ಶಿರ್ಷಿಕೆಯ ಅವಧಿಗಳನ್ನು ಇಲ್ಲಿ ನಿರ್ವಹಿಸುವುದು. ಸದರಿ ಚಟುವಟಿಕೆಯನ್ನು ಕನ್ನಡ, ಆಂಗ ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಇತ್ಯಾದಿ ಭಾಷೆಗಳಲ್ಲಿ ನಿರ್ವಹಿಸತಕ್ಕದ್ದು.
ಕಲಿಕಾ ಉತ್ಸವದ ಮಾದರಿ ವೇಳಾಪಟ್ಟಿ :
| ಸಮಯ | ಚಟುವಟಿಕೆ | ವಿವರಣೆ |
| 09:00 - 09:30 | ನೋಂದಣಿ ಮತ್ತು ಸ್ವಾಗತ | ಮಕ್ಕಳ ನೋಂದಣಿ ಮತ್ತು ಸ್ವಾಗತ. |
| 09:30 - 10:00 | ಉದ್ಘಾಟನೆ | ಕಾರ್ಯಕ್ರಮದ ಉದ್ಘಾಟನಾ ಸಮಾರಂಭ. |
| 10:00 - 12:30 | ವಲಯವಾರು ಚಟುವಟಿಕೆಗಳ ಆರಂಭ | ಚಟುವಟಿಕೆಗಳ ವಲಯಗಳಿಗೆ (Learning Corners/Zones) ಚಾಲನೆ ನೀಡುವುದು. |
| 12:30 - 01:30 | ಊಟದ ವಿರಾಮ | ಶುಚಿಯಾದ ಊಟದ ವ್ಯವಸ್ಥೆ. |
| 01:30 - 02:30 | ವಲಯವಾರು ಚಟುವಟಿಕೆಗಳ ಮುಂದುವರಿಕೆ | ಚಟುವಟಿಕೆಗಳ ವಲಯಗಳಲ್ಲಿ ಮಕ್ಕಳ ಕಲಿಕೆ ಮುಂದುವರಿಕೆ. |
| 02:30 - 03:30 | ವಲಯವಾರು ಚಟುವಟಿಕೆಗಳ ಮುಂದುವರಿಕೆ | ಚಟುವಟಿಕೆಗಳ ವಲಯಗಳಲ್ಲಿ ಮಕ್ಕಳ ಕಲಿಕೆ ಮುಂದುವರಿಕೆ. |
| 03:30 - 04:00 | TLM / ಸೃಜನಾತ್ಮಕ ಚಟುವಟಿಕೆಗಳ ಪ್ರದರ್ಶನ & ಪ್ರತಿಕ್ರಿಯೆ | ಮಕ್ಕಳ ಸೃಜನಾತ್ಮಕ ಚಟುವಟಿಕೆಗಳ ಪ್ರದರ್ಶನ ಮತ್ತು ಭಾಗೀದಾರರಿಂದ (ಪೋಷಕರು/ಸಮುದಾಯ) ಪ್ರತಿಕ್ರಿಯೆ ಸಂಗ್ರಹಣೆ. |
| 04:00 - 04:30 | ಸಮಾರೋಪ ಸಮಾರಂಭ | ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮದ ಮುಕ್ತಾಯ. |
ಅನುದಾನದ ವಿವರ (Budget) :
| ಕ್ರಮ ಸಂಖ್ಯೆ | ವಿವರ | ಮೊತ್ತ (ರೂಗಳಲ್ಲಿ) |
| 1 | ಕಲಿಕಾ ಸಾಮಗ್ರಿಗಳು (ಪ್ರತಿ ಮಗುವಿಗೆ ರೂ. 50 ರಂತೆ 110 ಮಕ್ಕಳಿಗೆ) | 5,500.00 |
| 2 | ಅಲಂಕಾರ ಮತ್ತು ಪ್ರದರ್ಶನ (ಚಾರ್ಟ್, ಬ್ಯಾನರ್) | 1,050.00 |
| 3 | ಬಹುಮಾನಗಳು ಮತ್ತು ಪ್ರಮಾಣ ಪತ್ರಗಳು | 2,450.00 |
| 4 | ಉಪಹಾರ/ಊಟ (220 ಜನರಿಗೆ ರೂ. 60 ರಂತೆ) | 13,200.00 |
| 5 | ಇತರೆ ವೆಚ್ಚ (ಶಾಮಿಯಾನ, ಕುರ್ಚಿ, ಸ್ವಚ್ಛತೆ) | 2,300.00 |
| 6 | ಫೋಟೋ ಮತ್ತು ವರದಿ ದಾಖಲೀಕರಣ | 500.00 |
| ಒಟ್ಟು | 25,000.00 |
ಪ್ರಮುಖ ಸೂಚನೆಗಳು ಮತ್ತು ದಿನಾಂಕಗಳು :
ದಿನಾಂಕ: ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನು ದಿನಾಂಕ 10.12.2025 ರಿಂದ 20.12.2025 ರೊಳಗೆ ಪೂರ್ಣಗೊಳಿಸಬೇಕು.
ವರದಿ ಸಲ್ಲಿಕೆ: ದಿನಾಂಕ 31.12.2025 ರೊಳಗೆ ವರದಿ ಸಲ್ಲಿಸಬೇಕು.
ಮಕ್ಕಳ ಮಿತಿ : ಪ್ರತಿ ಕ್ಲಸ್ಟರ್‌ಗೆ 1 ರಿಂದ 5 ನೇ ತರಗತಿಯ 100 ಮಕ್ಕಳ ಮಿತಿಯನ್ನು ನಿಗದಿಪಡಿಸಲಾಗಿದೆ (ಸಮುದಾಯದ ಸಹಕಾರವಿದ್ದರೆ ಹೆಚ್ಚಿಸಿಕೊಳ್ಳಬಹುದು).
ನೋಡಲ್ ಅಧಿಕಾರಿ: ಕ್ಲಸ್ಟರ್ ಮಟ್ಟದಲ್ಲಿ CRP (ಸಿ.ಆರ್.ಪಿ) ಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ.

No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.