Menu

Home ನಲಿಕಲಿ About ☰ Menu


 

🔍

ವಿಶ್ವದ ಹೊಸ 7 ಅಧಿಕೃತ ಅದ್ಭುತಗಳು

The New 7 Official Wonders of the World

1. ಕೊಲೊಸಿಯಮ್ 

ರೋಮ್ನ ಕೊಲೊಸಿಯಮ್ (70 - 82 ಸಾ.ಶ) ರೋಮ್, ಇಟಲಿ

ರೋಮ್‌ನ ಮಧ್ಯಭಾಗದಲ್ಲಿ ಈ ಪ್ರಸಿದ್ಧ ಬಯಲು ರಂಗ ಮಂದಿರವನ್ನು ಯಶಸ್ವಿ ಸೈನಿಕದಳಗಳಿಗೆ ಪ್ರಶಸ್ತಿ ನೀಡಲು ಮತ್ತು ರೋಮ್ ಸಾಮ್ರಾಜ್ಯದ ವೈಭವವನ್ನು ಪ್ರದರ್ಶೀಸಲು ನಿರ್ಮಿಸಲಾಯಿತು. ಇದರ ವಿನ್ಯಾಸದ ಪರಿಕಲ್ಪನೆಯೂ ಇಂದಿಗೂ ಪ್ರಸ್ತುತವಾಗಿದೆ ಮತ್ತು ಪ್ರತಿ ಅಧುನಿಕ ಕ್ರೀಡಾ ಮೈದಾನವು ಸುಮಾರು 2000 ವರ್ಷಗಳ ನಂತರವೂ ಅಂತಿಮವಾಗಿ ಕೊಲೊಸಿಯಮ್‌ನ ಮೂಲ ವಿನ್ಯಾಸದ ಸಮ್ಮೋಹಕ ಮುದ್ರೆಯನ್ನು ಹೊಂದಿರುತ್ತದೆ. ವೀಕ್ಷಕರ ಸಂತೋಷಕ್ಕಾಗಿ, ಈ ಅಂಗಣದಲ್ಲಿ ನೆಡೆದ ಕ್ರೂರ ಹೋರಾಟ ಮತ್ತು ಪಂದ್ಯಾಟಗಳ ಬಗ್ಗೆ ಚಲನಚಿತ್ರ ಮತ್ತು ಇತಿಹಾಸದ ಪುಸ್ತಕಗಳ ಮೂಲಕ ಇಂದು,ನಾವು ಇನ್ನೂ ಹೆಚ್ಚು ಅರಿವನ್ನು ಹೊಂದಿದ್ದೇವೆ.

2. ಕ್ರಿಸ್ಟ್ ದಿ ರಿಡೀಮರ್ 

ಕ್ರಿಸ್ಟ್ ದಿ ರಿಡೀಮರ್ (1931) ರಿಯೊ ಡಿ ಜನೇರೋ, ಬ್ರೆಜಿಲ್

ಏಸು ಕ್ರಿಸ್ತನ ಈ ವಿಗ್ರಹವು ಸುಮಾರು 38 ಮೀಟರ್ ಎತ್ತರವಾಗಿದೆ, ಕೊರ್ಕೊವಾಡೊ ಪರ್ವತದ ಶಿಖರದ ಮೇಲಿದ್ದು ರಿಯೊ ಡಿ ಜನೇರೋವನ್ನು ಮೇಲಿನಿಂದ ಗಮನಿಸುವಂತಿದೆ. ಇದನ್ನು ಬ್ರೆಜಿಲ್‌ನ ಹೆಯಿಟರ್ ಡಾ ಸಿಲ್ವ ಕೊಸ್ಟಾ ವಿನ್ಯಾಸಗೊಳಿಸಿದರು ಮತ್ತು ಪ್ರೆಂಚ್ ಶಿಲ್ಪಿ ಪೌಲ್ ಲಾಂಡೊವ್ಸ್‌ಕಿ ರಚಿಸಿದರು, ಇದು ಪ್ರಪಂಚದ ಅತ್ಯಂತ ಜನಪ್ರಿಯ ಸ್ಮಾರಕಗಳಲ್ಲಿ ಒಂದಾಗಿದೆ. ಈ ವಿಗ್ರಹವನ್ನು ನಿರ್ಮಿಸಲು ಐದು ವರ್ಷಗಳ ಕಾಲ ತೆಗೆದುಕೊಳ್ಳಲಾಯಿತು ಮತ್ತು ಆಕ್ಟೋಬರ್, 12, 1931ರಲ್ಲಿ ಉದ್ಘಾಟಿಸಲಾಯಿತು. ಇದು ನಗರದ ಮತ್ತು ತೆರೆದ ಬಾಹುಗಳಿಂದ ಪ್ರವಾಸಿಗರನ್ನು ಸ್ವೀಕರಿಸುವ, ಬ್ರೆಜಿಲಿನ ಜನರ ಪ್ರೀತಿಯ ಒಂದು ಲಾಂಛನವಾಗಿದೆ.

3. ತಾಜ್ ಮಹಲ್ 

ತಾಜ್ ಮಹಲ್ (1630 ಸಾ.ಶ) ಅಗ್ರಾ, ಭಾರತ

ಈ ಅಗಾದ ಭವ್ಯ ಸಮಾಧಿಯನ್ನು, ಐದನೆ ಮುಸ್ಲಿಂ ಮೊಘಲ್ ರಾಜ, ಷಹಾ ಜಹಾನ್‌ನ ಆದೇಶದ ಮೇರೆಗೆ, ಆತನ ಪ್ರೀತಿಯ ಮಡದಿಯ ನೆನಪಿಗಾಗಿ ಕಟ್ಟಲಾಯಿತು. ಬಿಳಿಯ ಅಮೃತ ಶಿಲೆಯಿಂದ ಕಟ್ಟಲಾಗಿದೆ ಮತ್ತು ಸಾಂಪ್ರದಾಯಿಕವಾಗಿ ನಿರ್ಮಿಸಿದ ಉದ್ಯಾನದ ಆವರಣದಲ್ಲಿ ನಿಂತಿದೆ. ತಾಜ್ ಮಹಲ್ ಅನ್ನು ಭಾರತದಲ್ಲಿ ಮುಸ್ಲಿಂ ಕಲೆಯ ಅತಿಶ್ರೇಷ್ಠ ಆಭರಣ ಎಂದು ಪರಿಗಣಿಸಲಾಗುತ್ತದೆ. ನಂತರ ರಾಜನನ್ನು ಕಾರ ಗೃಹದಲ್ಲಿಡಲಾಯಿತು ಮತ್ತು ಆತ ಆತನ ಜೈಲಿನ ಸಣ್ಣ ಕಿಟಿಕಿಯಿಂದ ಮಾತ್ರ ತಾಜ್ ಮಹಲ್‌ ಅನ್ನು ನೋಡಲು ಸಾಧ್ಯವಾಗುತ್ತಿತ್ತು ಎಂದು ಹೇಳಲಾಗುತ್ತದೆ.

4. ಪಿರಮಿಡ್

ಚಿಚಿನ್ ಇಟ್ಜಾದಲ್ಲಿನ ಪಿರಮಿಡ್ (ಸಾ.ಶ.ಪೂ.800 ಮುನ್ನ) ಯುಕಾಟನ್ ಪರ್ಯಾಯದ್ವೀಪ, ಮೆಕ್ಸಿಕೊ

ಚಿಚಿನ್ ಇಟ್ಜಾವು, ಅತ್ಯಂತ ಜನಪ್ರಿಯ ಮಾಯನ್ ದೇವಾಲಯ ನಗರ, ಇದು ಮಾಯನ್ ನಾಗರಿಕತೆಯ ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿ ಸೇವೆ ಸಲ್ಲಿಸಿದೆ. ಇದರ ವಿವಿಧ ನಿರ್ಮಾಣಗಳು- ಕುಕುಲ್ಕನ್‌ನ ಪಿರಮಿಡ್, ಚಾಕ್ ಮೂಲ್‌ನ ದೇವಾಲಯ, ಸಾವಿರ ಸ್ತಂಬಗಳ ಹಜಾರ, ಮತ್ತು ಕೈದಿಗಳ ಆಟವಾಡುವ ಮೈದಾನ- ಇವುಗಳನ್ನು ಇಂದಿಗೂ ಕಾಣಬಹುದು ಮತ್ತು ಇವುಗಳು ವಾಸ್ತುಶಾಸ್ತ್ರದ ಅವಕಾಶ ಮತ್ತು ಸಂಯೋಜನೆಗೆ ಒಂದು ಅಸಾಮಾನ್ಯವಾದ ಬದ್ಧತೆಯ ಪ್ರದರ್ಶಕವಾಗಿದೆ. ಎಲ್ಲಾ ಮಾಯನ್ ದೇವಾಲಯಗಳಲ್ಲಿ, ಅಂತಿಮವಾದ ಮತ್ತು ಬಹುಮಟ್ಟಿಗೆ ಉತ್ಕೃಷ್ಟವಾಗಿರುವುದು ಪಿರಮಿಡ್‌ ಆಗಿದೆ.

5. ಪೆಟ್ರಾ 

ಪೆಟ್ರಾ (9 ಸಾ.ಶ.ಪೂ - 40 ಸಾ.ಶ) ಜೋರ್ಡಾನ್

ಅರೆಬಿಯನ್ ಮರುಭೂಮಿಯ ಅಂಚಿನಲ್ಲಿ, ಪೆಟ್ರಾವು ನಾಬಾಟಿಯನ್ ಸಾಮ್ರಾಜ್ಯದ ರಾಜ ಅರೆಟಾಸ್‌ IV ನ (9 ಕ್ರಿ.ಪೂ - 40 ಕ್ರಿ.ಶ.) ಮಿನುಗುವ ರಾಜಧಾನಿಯಾಗಿತ್ತು. ಜಲ ತಂತ್ರಜ್ಞಾನದ ಪ್ರವೀಣರಾದ, ನಾಬಾಟಿಯನರು ಶ್ರೇಷ್ಠ ಸುರಂಗ/ಕಾಲುವೆಗಳ ನಿರ್ಮಾಣಗಳ ಮತ್ತು ನೀರು ಕೋಣೆಗಳ ಮೂಲಕ ನಗರಕ್ಕೆ ಒದಗಿಸಿದ್ದರು. ಗ್ರೀಕ್-ರೋಮನ್ ಮಾದರಿಯಲ್ಲಿ ಒಂದು ರಂಗಭೂಮಿಯನ್ನು ವಿನ್ಯಾಸಗೊಳಿಸಲಾಗಿದೆ, ಅದು 4,000 ವೀಕ್ಷರರಿಗೆ ಸ್ಥಳವನ್ನು ಒದಗಿಸುತ್ತದೆ. ಇಂದು ಪೆಟ್ರಾದ ಎಲ್-ಡೆಯರ್ ಮೊನಸ್ಟೆರಿ ಮೇಲೆ ಮುಖಭಾಗದ 42 ಮೀಟರ್ ಎತ್ತರ ಹೆಲ್ಲೆನಿಸ್ಟಿಕ್ ದೇವಾಲಯ ಹೊಂದಿದ ಪ್ಯಾಲೇಸ್ ಟೊಂಬ್ಸ್ ಮಧ್ಯ ಪೂರ್ವದ ಸಂಸ್ಕೃತಿಯ ಹೃದಯಸ್ಪರ್ಶಿ ಉದಾಹರಣೆಗಳು.

6. ಮಹಾ ಗೋಡೆ 

ಚೀನಾದ ಮಹಾ ಗೋಡೆ (220 ಸಾ.ಶ.ಪೂ ಮತ್ತು 1368 - 1644 ಸಾ.ಶ) ಚೀನಾ

ಚೀನಾದ ಮಹಾ ಗೋಡೆಯನ್ನು ಅಸ್ತಿತ್ವದಲ್ಲಿರುವ ರಕ್ಷಣಾ ವ್ಯವಸ್ಥೆಯನ್ನು ಒಂದು ಸಂಯುಕ್ತ ರಕ್ಷಣಾ ವ್ಯವಸ್ಥೆಗೆ ಸಂಪರ್ಕಿಸಲು ಮತ್ತು ಆಕ್ರಮಣಮಾಡುವ ಮಂಘೋಲಿಯನ್ ಜನಾಂಗವನ್ನು ಚೀನಾದಿಂದ ಹೊರಗಿಡಲು ಕಟ್ಟಲಾಯಿತು. ಇದು ಇದುವರೆಗೂ ಕಟ್ಟಿರುವ ಅತ್ಯಂತ ದೊಡ್ಡ ಮಾನವ ನಿರ್ಮಿತ ಸ್ಮಾರಕವಾಗಿದೆ ಮತ್ತು ಇದು ಅಂತರಿಕ್ಷದಿಂದ ಕಾಣುವ ಏಕ ಮಾತ್ರ ಸಂರಚನೆಯಾಗಿದೆ ಎಂಬ ಬಗ್ಗೆ ಭಿನ್ನಭಿಪ್ರಾಯವಿದೆ. ಈ ಭಾರಿ ಗಾತ್ರದ ನಿರ್ಮಾಣವನ್ನು ಕಟ್ಟಿ ಮುಗಿಸಲು ಹಲವು ಸಾವಿರ ಜನರು ತಮ್ಮ ಜೀವನವನ್ನೆ ನೀಡಿರಬೇಕು.

7. ಮಾಚು ಪಿಚ್ಚು 

ಮಾಚು ಪಿಚ್ಚು (1460-1470), ಪೆರು 

15ನೆ ಶತಮಾನದಲ್ಲಿ ಇಂಕಾನ್ ಚಕ್ರವರ್ತಿ ಪಚಾಕ್ಯುಟೆಕ್ ಮಾಚು ಪಿಚ್ಚು ("ಪುರಾತನ ಪರ್ವತ") ಎಂಬ ಹೆಸರಿನ ಪರ್ವತದ ಮೇಲೆ ಮೋಡಗಳ ನಡುವೆ ಒಂದು ನಗರವನ್ನು ಕಟ್ಟಿದನು. ಈ ಅಸಾಮಾನ್ಯವಾದ ನಿವಾಸ ಸ್ಥಳವು ಅಮೆಜಾನ್‌ ಕಾಡಿನ ನಡುವೆ, ಅಂಡೆಸ್ ಪ್ರಸ್ಥಭೂಮಿ ಮಧ್ಯಬಾಗದಲ್ಲಿ ಮತ್ತು ಉರುಬಾಂಬ ನದಿಯ ಮೇಲ್ಭಾಗದಲ್ಲಿ ಹರಡಿದೆ. ಸಿಡಿಬು ರೋಗದ ತೀವ್ರತೆಯಿಂದ ಇದನ್ನು ಬಹುಶಃ ಇಂಕಾಸ್‌ ಗಳು ತೊರೆದಿರಬಹುದು.ಮತ್ತು, ಇಂಕಾನ್‌ ಸಾಮ್ರಾಜ್ಯವನ್ನು ಸ್ಪ್ಯಾನಿಷ್ ಸೋಲಿಸಿದ ನಂತರ, ನಗರವು ಸುಮಾರು ಮೂರು ಶತಮಾನಗಳ ವರೆಗೆ ’ಗೋಚರವಾಗದೆ’ಉಳಿದಿತ್ತು. ಇದನ್ನು 1911ರಲ್ಲಿ ಹಿರಾಮ್ ಬಿಂಗಹಂ ಮೂಲಕ ಪುನಃ ಶೋಧಿಸಲಾಯಿತು.

ಮೂಲ : ಕನ್ನಡ ವಿಕಾಸಪೀಡಿಯಾ (https://vikaspedia.in/)

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post