Home ವಿವೇಕ ಜ್ಯೋತಿ ನಲಿಕಲಿ About Me ☰ Menu

ತಾಯಿ ಶಾರದೆ ಲೋಕ ಪೂಜಿತೆ

ಪ್ರಾರ್ಥನಾ ಗೀತೆ
ತಾಯಿ ಶಾರದೆ ಲೋಕ ಪೂಜಿತೆ 
ಜ್ಞಾನದಾತೆ ನಮೋಸ್ತುತೇ ॥ಪ॥
ಪ್ರೇಮದಿಂದಲಿ ಸಲಹು ಮಾತೆ 
ನೀಡು ಸನ್ಮತಿ ಸೌಖ್ಯದಾತೆ ॥ಅ. ಪ.॥

ಆಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು  
ಹೃದಯ ಮಂದಿರದಲ್ಲಿ ನೆಲೆಸು 
ಚಿಂತೆಯ ಅಳಿಸು ಶಾಂತಿಯ ಉಳಿಸು ॥೧॥

ನಿನ್ನ ಮಡಿಲಿನ ಮಕ್ಕಳಮ್ಮ 
ನಿನ್ನ ನಂಬಿದ ಕಂದರಮ್ಮ 
ನಿನ್ನ ಕರುಣೆಯ ಬೆಳಕಲೆಮ್ಮ 
ಬಾಳನು ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ ॥೨॥ 

ಒಳ್ಳೆ ಮಾತುಗಲಾಡಿಸು 
ಒಳ್ಳೆ ಕೆಲಸವ ಮಾಡಿಸು 
ಒಳ್ಳೆ ದಾರಿಯಲೆಮ್ಮ ನಡೆಸು 
ವಿದ್ಯೆಯ ಕಲಿಸು ಆಸೆ ಪೂರೈಸು ॥೩॥


ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ರಾಜನ್ ಮತ್ತು ನಾಗೇಂದ್ರ
ಗಾಯನ : ಪಿ. ಬಿ. ಶ್ರೀನಿವಾಸ್

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.