Menu

Home ನಲಿಕಲಿ About ☰ Menu


 

🔍

ಶಿಕ್ಷಣದ ಬಗೆಗಿನ ಪ್ರಸಿದ್ಧ ನುಡಿಮುತ್ತುಗಳು.

"ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೆ ಪಡೆದ ಒಟ್ಟು ಅನುಭವವೇ ಶಿಕ್ಷಣ"

"ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ."
- ಸ್ವಾಮಿ ವಿವೇಕಾನಂದರು.

"ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ."
ಮಾಹಾತ್ಮ ಗಾಂಧೀಜಿ.

"ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು. ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು.
ಜಿಡ್ಡು ಕೃಷ್ಣಮೂರ್ತಿ.

"ಮಗುವಿನಲ್ಲಿರುವ ಅಂತಃಶಕ್ತಿಯನ್ನು ಹೊರಗೆಳೆಯುವುದೇ ಶಿಕ್ಷಣ"
- ಸ್ವಾಮಿ ವಿವೇಕಾನಂದರು.

"ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ."
- ಡಾ. ಎಸ್. ರಾಧಾಕೃಷ್ಣನ್.

"ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ. ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ."
- ಬರ್ಕ.

"ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ.
- ಜಾನ್ ಟ್ಯೂಯ್ಲಿ.

"ಸಮನ್ವಯತೆ, ಸಮತೋಲನ, ಉಪಯುಕ್ತತೆ, ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು."
- ರೂಸೋ.

"ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು."
- ಅಜ್ಞಾತ.

"ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು."
- ನೀತಿವಚನ.

"ಶಿಕ್ಷಣವೇ ಜೀವನದ ಬೆಳಕು"
- ಗೊರೂರು.

"ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ."
- ಡಾ: ಎಸ್. ರಾಧಾಕೃಷ್ಣನ್.

"ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ"
- ಸ್ವಾಮಿ ವಿವೇಕಾನಂದರು.

"ವಿದ್ಯೆ ಗುರುಗಳ ಗುರು."
- ಭ್ರತೃ ಹರಿ.

"ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ."

"ಶಿಕ್ಷಣವೆಂದರೆ, ಮನಸ್ಸು, ದೇಹ, ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ."
- ಹರ್ಡೇಕರ್ ಮಂಜಪ್ಪ.

"ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ."
- ಸ್ವಾಮಿ ವಿವೇಕಾನಂದರು.

"ವಿದ್ಯಾಭ್ಯಾಸದಿಂದ ಪ್ರಭುತ್ವ ಬೆಳೆಯದು."
- ಜಾನ್ ಡ್ಯೂಯಿ.

"ಶಿಕ್ಷಣಕ್ಕಿಂತಲೂ ಮನುಷ್ಯರಿಗೆ ಶೀಲ ಚರಿತ್ರೆಗಳು ಹೆಚ್ಚು ಅವಶ್ಯಕ."
- ಸ್ಪೆನ್ಸರ್.

"ಮನುಷ್ಯನು ಕಲಿಯಲು ಬಯಸುವುದಾದರೆ ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ."
- ಚಾರ್ಲ್ಸ್ ಡೆಕ್ಕನ್.

"ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು, ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ."
- ಗಯಟೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post