Menu

Home ನಲಿಕಲಿ About ☰ Menu


 

🔍

ಶಿಕ್ಷಕಿಯೊಬ್ಬರು ಭಾರತದ ರಾಷ್ಟ್ರಪತಿಯಾದ ಸತ್ಯ ಕಥೆ.

 ಶ್ರೀಮತಿ ದ್ರೌಪದಿ ಮುರ್ಮು 

     ಸಾಮಾನ್ಯ ಶಿಕ್ಷಕಿಯಾಗಿ ಭಾರತದ 15ನೇ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು, ನಿನ್ನೆ ಮೊನ್ನೆಯವರೆಗೂ ಅಷ್ಟಾಗಿ ಪರಿಚಿತರಲ್ಲದ ದ್ರೌಪದಿ ಮುರ್ಮು ಅವರ ಹೆಸರು ಇಂದು ಬಹಳ ಜನಪ್ರಿಯವಾಗಿದೆ. ರಾಷ್ಟಾಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆ ಘೋಷಣೆಯಾಗುವವರೆಗೂ ಅವರ ಹೆಸರು ಗೊತ್ತಿರಲಿಲ್ಲ. ಒಡಿಶಾದಲ್ಲಿ ಕೌನ್ಸಿಲರ್ ಆಗಿ ರಾಜಕೀಯ ಜೀವನ ಪ್ರಾರಂಭಿಸಿದ ಮತ್ತು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ದ್ರೌಪತಿ ಮುರ್ಮು. ಇನ್ನು ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.


ವೈಯಕ್ತಿಕ ಜೀವನ  :

ದ್ರೌಪದಿ ಮುರ್ಮು ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗ್‌ಪುರದ ಬೈದಪೋಸಿ ಪ್ರದೇಶದಲ್ಲಿ ಬಿರಾಂಚಿ ನಾರಾಯಣ ತುಡುಗೆ ಸಂತಾಲಿ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಮತ್ತು ಅಜ್ಜ ಗ್ರಾಮಸಭೆಯ ಸಾಂಪ್ರದಾಯಿಕ ಮುಖ್ಯಸ್ಥರಾಗಿದ್ದರು.

             ಅವರು 2014 ರಲ್ಲಿ ನಿಧನರಾದ ಬ್ಯಾಂಕರ್ ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣುಮಗಳು ಇದ್ದರು. 2009 ರಲ್ಲಿ 25 ವರ್ಷದ ಮಗ ತೀರಿಹೋದರು. ಅವರಿಗೆ ಈ ಆಘಾತವನ್ನು ಸಹಿಸಲಾಗಲಿಲ್ಲ ಅವರು ಖಿನ್ನತೆಗೆ ಒಳಗಾದರು. ಬದುಕಿನ ಆಸಕ್ತಿಗಳೆಲ್ಲ ಮಾಯವಾಗಿ, ದುಃಖದಿಂದ ನೊಂದು, ಅದೇ ಸಮಯಕ್ಕೆ ಪ್ರಜಾಪಿತಾ ಬ್ರಹ್ಮಕುಮಾರಿ ಎಂಬ ಆಧ್ಯಾತ್ಮಿಕ ಸಂಸ್ಥೆಗೆ ಹೋದರು. ಆ ಆಧ್ಯಾತ್ಮಿಕತೆಗೆ ಶರಣಾದರು, ಮತ್ತೆ ಎರಡನೇ ಮಗ 2013ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿ. ಅದೇ ತಿಂಗಳಲ್ಲಿ ಆವರ ತಾಯಿ ತೀರಿಕೊಂಡಿದ್ದು, ಸಹೋದರನೂ ಸಾವನ್ನಪ್ಪಿದ್ದ. ಈ ನಾಲ್ಕು ವರ್ಷಗಳಲ್ಲಿ ಹತ್ತಿರದ ಸಂಬಂಧಿಕರನ್ನು ಕಳೆದುಕೊಂಡರು, ಮತ್ತು 2014 ರಲ್ಲಿ ಅವರ ಪತಿ ಶಾಮ್ ಚರಣ್ ನಿಧನರಾದರು.


ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭ :

ಓದಿನಲ್ಲಿ ತುಂಬಾ ಚುರುಕು ಇದ್ದ ದ್ರೌಪದಿ ಮುರ್ಮು ಪ್ರಾರಂಭದಲ್ಲಿ ಶಿಕ್ಷಕಿ ವೃತ್ತಿಯನ್ನು ಮಾಡುತ್ತಾರೆ. ಪ್ರಸಿದ್ದ 'ಶ್ರೀ ಅರಬಿಂದೋ ಸಮಗ್ರ ಶಿಕ್ಷಣ' ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿ ಕೂಡ ಸ್ವಲ್ಪ ಸಮಯ ಕಾರ್ಯನಿರ್ವಹಿಸಿದ್ದರು.

ನಂತರ ಸ್ವಲ್ಪ ಸಮಯ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗದು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ ಮೊದಲ ಅನುಭವ.

1997ರಲ್ಲಿ ದ್ರೌಪದಿ ಮುರ್ಮು ಬಿಜೆಪಿ ಸೇರುತ್ತಾರೆ, ಕೂಡಲೇ ಅವರಿಗೆ ಕೌನ್ಸಿಲರ್ ಹುದ್ದೆ ನೀಡಲಾಗುವುದು. ತಮ್ಮ ಕಾರ್ಯವೈಖರಿಯಿಂದಾಗಿ ದ್ರೌಪದಿ ಮುರ್ಮು ಒಳ್ಳೆಯ ಹೆಸರು ಗಳಿಸುತ್ತಾರೆ. 2000ನೇ ಇಸವಿಯಲ್ಲಿ ರಾಯರಂಗಪುರ ಪಂಚಾಯತಿನಲ್ಲಿ ಅಧ್ಯಕ್ಷರಾಗುತ್ತಾರೆ, ಹೀಗೆ ರಾಜಕೀಯದಲ್ಲಿ ಬೆಳೆಯಲಾರಂಭಿಸುತ್ತಾರೆ. 2000 ಮಾರ್ಚ್‌ 2002ರವರೆಗೆ ಸ್ವತಂತ್ರ ಶುಲ್ಕದ ವಾಣಿಜ್ಯ ಹಾಗೂ ಸಾರಿಗೆ ಮಂತ್ರಿಯಾಗಿದ್ದರು. ನಂತರ ಮೀನು ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿಯಲ್ಲಿ 2022ರಿಂದ 2014ರವರೆಗೆ ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಜಾರ್ಖಂಡ್‌ನ ಗರ್ವನರ್‌ ಆಗ ಕೂಡ ಕಾರ್ಯನಿರ್ವಹಿಸಿದ್ದಾರೆ.


ಬುಡಕಟ್ಟು ಸಮುದಾಯದ ಮಹಿಳೆ :

ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದ್ರೌಪದಿ ಒಡಿಶಾದ ಮಾಜಿ ಸಚಿವೆ ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದವರು. ಕೇಂದ್ರ ಸಚಿವೆಯಾಗಿದ್ದವರು. ಉತ್ತಮ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರು ರಾಷ್ಟ್ರಪತಿಯಾದರೆ ಹಲವು ಪ್ರಥಮಗಳಿಗೆ ನಾಂದಿ ಹಾಡಲಿದ್ದಾರೆ.ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ, ಒಡಿಶಾ/ಜಾರ್ಖಂಡ್ ಮೂಲದಿಂದ ಉನ್ನತ ಹುದ್ದೆಗೆ ಅಲಂಕರಿಸುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.


ದ್ರೌಪದಿ ಮುರ್ಮು ಅವರ ಶಿಕ್ಷಣ :

ಬಿ.ಎ ಪದವೀಧರರಾದ ದ್ರೌಪದಿ, ರಾಯ್ ರಂಗಪುರ್ ದಲ್ಲಿರುವ ಶ್ರೀ ಅರಬಿಂದೋ ಕಾಲೇಜಿನಲ್ಲಿ ಗೌರವಾನ್ವಿತ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಒಡಿಶಾದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 1997ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಪತಿ ಶ್ಯಾಮ್ ಚರಣ ಮುರ್ಮು ದಿವಂಗತರಾಗಿದ್ದು, ಇಬ್ಬರು ಪುತ್ರರು ದ್ರೌಪದಿ ಅವರನ್ನು ಅಗಲಿದ್ದಾರೆ. ಪುತ್ರಿ ಇತಿಶ್ರೀ ಮುರ್ಮು ಮಾತ್ರ ಜೊತೆಗಿದ್ದಾರೆ. 2017ರಲ್ಲಿ ದ್ರೌಪದಿ ವೈಯಕ್ತಿಕ 9. 5 ಲಕ್ಷ ರು ಆಸ್ತಿ ಘೋಷಿಸಿಕೊಂಡಿದ್ದರು.


ದ್ರೌಪದಿ ಮುರ್ಮು ಅವರ ರಾಜಕೀಯ ಜೀವನ :

ಸಂತಾಲಿ ಮತ್ತು ಒಡಿಯಾ ಭಾಷೆಗಳಲ್ಲಿ ಅದ್ಭುತವಾಗಿ ಮಾತನಾಡಬಲ್ಲ ವಾಗ್ಮಿಯಾದ ಇವರು 1997ರಲ್ಲಿ ರಾಜಕೀಯ ಪ್ರವೇಶಿಸುವ ಮುನ್ನ  ಶಿಕ್ಷಕಿಯಾಗಿದ್ದರು.

2000ನೇ ಇಸವಿಯಲ್ಲಿ ಮಯೂರ್‌ಭಂಜ್‌ ಜಿಲ್ಲೆಯ ರಾಯರಂಗ್‌ಪುರದಲ್ಲಿ ಬಿಜೆಪಿ ಟಿಕೆಟ್‌ ಪಡೆದು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. 2009ರಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶಿಸಿದ್ದರು.

 2000ರಿಂದ 2002ರ ಅವಧಿಯಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿ, 2002ರಿಂದ 2004 ಅವಧಿಯಲ್ಲಿ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಒಡಿಶಾ ಬಿಜೆಪಿಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷೆಯಾಗಿ, ಮಯೂರ್‌ಭಂಜ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ 2015ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಇದರೊಂದಿಗೆ ರಾಜ್ಯಪಾಲರಾಗಿ ನೇಮಕಗೊಂಡ ಒಡಿಶಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮತ್ತು ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎಂಬ ಕೀರ್ತಿಯೂ ಅವರದ್ದಾಗಿದೆ. ಅಲ್ಲದೆ, ಜಾರ್ಖಂಡ್‌ನ ರಾಜ್ಯಪಾಲರಾಗಿ ಪೂರ್ಣಾವಧಿ ಸೇವೆ ಸಲ್ಲಿಸಿದ ಮೊದಲಿಗರೂ ಇವರೇ ಎಂಬುದು ವಿಶೇಷ.

13ನೇ ರಾಷ್ಟ್ರಪತಿಯಾಗಿದ್ದ ಪ್ರಣಭ್‌ ಮುಖರ್ಜಿ ಅವರ ಅವಧಿ ಮುಕ್ತಾಯವಾದ (2017ರಲ್ಲಿ) ಸಂದರ್ಭದಲ್ಲಿಯೂ, ಆ ಸ್ಥಾನಕ್ಕೆ ಮುರ್ಮು ಅವರ ಹೆಸರು ಕೇಳಿ ಬಂದಿತ್ತು. ಆದರೆ ಎನ್‌ಡಿಎ ಕೊನೇ ಕ್ಷಣದಲ್ಲಿ ತನ್ನ ಅಭ್ಯರ್ಥಿಯಾಗಿ ರಾಮನಾಥ್‌ ಕೋವಿಂದ್‌ ಅವರನ್ನು ಆಯ್ಕೆ ಮಾಡಿತ್ತು.

ರಾಷ್ಟ್ರಪತಿ ಸ್ಥಾನಕ್ಕೆ ಬುಟ್ಟಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲಿಗರು ದ್ರೌಪದಿ. ಅಲ್ಲದೇ ಈ ಸ್ಥಾನ ಅಲಂಕರಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ. ಪ್ರತಿಭಾ ಪಟೇಲ್‌ ಅವರು ದೇಶದ 12ನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿಯಾಗಿ (2012–2017) ಸೇವೆ ಸಲ್ಲಿಸಿದ್ದಾರೆ.

      ದ್ರೌಪದಿ ಮುರ್ಮುರವರು ಜುಲೈ 25 ರಂದು ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಒಂದು ಸಣ್ಣ ಮನೆಯಿಂದ 350 ಎಕರೆ ಆವರಣ, 190 ಎಕರೆ ಉದ್ಯಾನ ಮತ್ತು 750 ಉದ್ಯೋಗಿಗಳನ್ನು ಹೊಂದಿರುವ ವಿಶಾಲವಾದ ರಾಷ್ಟ್ರಪತಿ ಭವನಕ್ಕೆ ಸ್ಥಳಾಂತರಗೊಳ್ಳುತ್ತಾರೆ. ಒಬ್ಬ ಸಾಮಾನ್ಯ ಶಿಕ್ಷಕಿ ಭಾರತದ ರಾಷ್ಟ್ರಪತಿಯಾಗಿದ್ದಾರೆ ಎಂದರೆ ಇದು ಭಾರತದ ಪ್ರಜಾಪ್ರಭುತ್ವದ ಗೆಲುವು ಎನ್ನಬಹುದು....

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post