Menu

Home ನಲಿಕಲಿ About ☰ Menu


 

🔍

ಎಂಥ ಅಂದ ಎಂಥ ಚೆಂದ ಶಾರದಮ್ಮ

ಪ್ರಾರ್ಥನಾ ಗೀತೆ 
ಎಂಥ ಅಂದ ಎಂಥ ಚೆಂದ ಶಾರದಮ್ಮ ನೀನು 
ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ 
ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ  ।। ಪ ।।

ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ   ।। ಪ ।।

ಇನ್ನು ಇನ್ನು ನೋಡುವಾಸೆ ತುಂಬಿತಮ್ಮ ಇನ್ನು
ಕೋಟಿ ಜನುಮ ಬರಲಿ ನನಗೆ ಸಾಲದಮ್ಮ  
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ ನಿನ್ನ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ   ।। ೧ ।।

ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡುವಾಸೆ ಬಂದಿತಮ್ಮ
ರತ್ನದಂಥ ಮಾತುಗಳನೆ ಆಡಿಸಮ್ಮ ಒಳ್ಳೆ
ರತ್ನದಂಥ ಮಾತುಗಳನೆ ಆಡಿಸಮ್ಮ
ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ
ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ  ।। ೨ ।।

ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ
ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ
ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ
ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ನನ್ನ
ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ  ।। ೩ ।।

ಎಂಥ ಅಂದ ಎಂಥ ಚೆಂದ ಶಾರದಮ್ಮ ನೀನು
ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ  ।। ಪ ।।
                     ----------೦----------

ಸಾಹಿತ್ಯ : ಚಿ. ಉದಯ್ ಶಂಕರ್.
ಗಾಯಕರು : ಡಾ. ರಾಜ್ ಕುಮಾರ್. 

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post