Menu

Home ನಲಿಕಲಿ About ☰ Menu


 

🔍

8th ಅಧ್ಯಾಯ - 1. ಆಧಾರಗಳು

ಅಧ್ಯಾಯ - 1

ಆಧಾರಗಳು

8th ಅಧ್ಯಾಯ - 1. ಆಧಾರಗಳು

ನೋಟ್ಸ್ | Notes

 ಚರಿತ್ರೆ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳೇ ಆಧಾರಗಳು.

☞ ದೇಹಕ್ಕೆ ಅಸ್ಥಿಪಂಜರವಿದ್ದಂತೆ, ಇತಿಹಾಸಕ್ಕೆ ಆಧಾರಗಳು.

☞ ಆಧಾರಗಳಲ್ಲಿ 2 ವಿಧಗಳು..
1) ಸಾಹಿತ್ಯ ಆಧಾರ   2) ಪ್ರಾಕ್ತನ ಆಧಾರ

I. ದೇಶೀಯ ಸಾಹಿತ್ಯ  I. ಶಾಸನಗಳು

II. ವಿದೇಶೀ ಸಾಹಿತ್ಯ   II. ನಾಣ್ಯಗಳು
                               III. ಸ್ಮಾರಕಗಳ

☞ ಭಾರತೀಯರಿಂದ ರಚನೆಯಾದ ಸಾಹಿತ್ಯ ದೇಶೀಯ ಸಾಹಿತ್ಯ.

☞ ದೇಶೀಯ ಸಾಹಿತ್ಯಕ್ಕೆ ಉದಾಹರಣೆ :
ವಿಶಾಖದತ್ತನ  - 'ಮುದ್ರಾರಾಕ್ಷಸ'.
ಕಲ್ಹಣನ          - 'ರಾಜತರಂಗಿಣಿ'.
ಅಶ್ವಘೋಷನ  - 'ಬುದ್ಧ ಚರಿತ'.
ಕೌಟಿಲ್ಯನ        -  'ಅರ್ಥಶಾಸ್ತ್ರ'.
ಶ್ರೀವಿಜಯನ   -  'ಕವಿರಾಜಮಾರ್ಗ'.
ಬೌದ್ಧ ಸಾಹಿತ್ಯಗಳು - ತ್ರಿಪಿಟಕಗಳು('ವಿನಯ ಪಿಟಕ',  'ಸುತ್ತ ಪಿಟಕ' ಮತ್ತು 'ಅಭಿಧಮ್ಮ ಪಿಟಕ').

☞ ವಿದೇಶೀಯರಿಂದ ರಚನೆಯಾದ ಸಾಹಿತ್ಯ ವಿದೇಶೀ ಸಾಹಿತ್ಯ.

☞ ವಿದೇಶೀ ಸಾಹಿತ್ಯಕ್ಕೆ ಉದಾಹರಣೆ :
ಮೆಗಸ್ತನೀಸನ          - 'ಇಂಡಿಕಾ'
ಹುಯನ್ ತ್ಸಾಂಗ್ ನ - 'ಸಿ.ಯು.ಕಿ'
ಫಾಹಿಯಾನನ.         - 'ಘೋ-ಕೋ-ಕಿ'
ಸಿಲೋನಿನ - 'ದೀಪವಂಶ ಮತ್ತು ಮಹಾವಂಶ'

☞ ವಿದೇಶೀ ಬರಹಗಾರರು : ಫರ್ನಿಯೋ ನ್ಯೂನಿಜ್, ಬಾರ್ಬೋಸ್, ನಿಕೋಲೋ ಕೊಂಟಿ etc..

☞ ಸಂಶೋಧನೆ ಮತ್ತು ಉತ್ಖನನಗಳಿಂದ ದೊರೆತ ಆಧಾರಗಳು ಪ್ರಾಕ್ತನ ಆಧಾರಗಳು.
ಉದಾ: ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮಡಿಕೆ-ಕುಡಿಕೆ ಹಾಗೂ ಇನ್ನಿತರ ಪಳೆಯುಳಿಕೆಗಳು.

☞ ಭಾರತದಲ್ಲಿ ದೊರೆತ ಅತ್ಯಂತ ಪ್ರಾಚೀನ ಶಾಸನ ಚಕ್ರವರ್ತಿ ಅಶೋಕ ಹೊರಡಿಸಿದ ಶಾಸನವಾಗಿದೆ.

☞ ಅಶೋಕನ ಹೆಚ್ಚು ಶಾಸನಗಳು ಬ್ರಾಹ್ಮಿ ಲಿಪಿ ಹಾಗೂ ಪ್ರಾಕೃತ ಭಾಷೆಗಳಲ್ಲಿವೆ.(ಗ್ರೀಕ್, ಅರಮಿಕ್, ಖರೋಷ್ಟಿ ಲಿಪಿಗಳಲ್ಲು ದೊರೆತಿವೆ).

☞ ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು - ಮಸ್ಕಿ ಹಾಗೂ ಬ್ರಮ್ಮಗಿರಿ.

☞ ಕನ್ನಡ ಭಾಷೆಯಲ್ಲಿ ದೊರೆತ ಮೊದಲ ಶಾಸನ - ಹಲ್ಮಿಡಿ.

☞ ಪ್ರಾಕ್ತನ ಆಧಾರಗಳಿಂದ ತಿಳಿಯಬಹುದಾದ ಮಾಹಿತಿಗಳು - ಅಂದಿನ ಕಾಲದ ಧರ್ಮ, ಸಂಸ್ಕೃತಿ, ಆರ್ಥಿಕ, ರಾಜಕೀಯ, ಸಾಮಾಜಿಕ ಸ್ಥಿತಿ ಮತ್ತು ತಂತ್ರಜ್ಞಾನ.

☞ ಮೌಖಿಕ ಆಧಾರಗಳು - ಹಾಡು, ಕಾವ್ಯ, ಲಾವಣಿ, ಗೀಗೀ ಪದ etc..

☞ ಸ್ಥಳ ಪುರಾಣಗಳನ್ನು ಐತಿಹ್ಯಗಳೆಂದು ಕರೆಯುತ್ತಾರೆ.

 ಐತಿಹ್ಯಗಳು ಇತಿಹಾಸ ರಚನೆಗೆ ಪರೋಕ್ಷ ಮಾಹಿತಿಗಳನ್ನು ಒದಗಿಸುತ್ತವೆ.

  ಅಭ್ಯಾಸಗಳು

I. ಕೆಳಕಂಡ ವಾಕ್ಯಗಳನ್ನು  ಸೂಕ್ತ ಪದಗಳಿಂದ ಪೂರ್ಣಗೊಳಿಸಿ.

1. ಸಾಹಿತ್ಯ ಆಧಾರಗಳಲ್ಲಿ ದೇಶೀಯ ಮತ್ತು ವಿದೇಶೀ ಎಂಬ ಎರಡು ವಿಧಗಳಿವೆ.

2. ಅಶ್ವಘೋಷನ ಬುದ್ಧ ಚರಿತ ವು ಸಾಹಿತ್ಯಿಕ ಆಧಾರವಾಗಿದೆ.

3. ಕನ್ನಡ ಭಾಷೆಯಲ್ಲಿ ದೊರೆತಿರುವ ಮೊದಲ ಶಾಸನ ಹಲ್ಮಿಡಿ.

II. ಸಂಕ್ಷಿಪ್ತವಾಗಿ ಉತ್ತರಿಸಿ.

1. ಆಧಾರ ಎಂದರೇನು ?

ಉತ್ತರ : ಚರಿತ್ರೆಯ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳನ್ನು ಆಧಾರ ಎನ್ನುತ್ತಾರೆ.

2. ಇತಿಹಾಸಕ್ಕೆ ಸಂಬಂಧಿಸಿದ ದೇಶೀ ಮತ್ತು ವಿದೇಶೀ ಸಾಹಿತ್ಯಿಕ ಆಧಾರಗಳಿಗೆ ಎರಡೆರಡು ಉದಾಹರಣೆಗಳನ್ನು ನೀಡಿ.

ಉತ್ತರ : ದೇಶೀ ಸಾಹಿತ್ಯಕ್ಕೆ ಉದಾಹರಣೆ - ಕಲ್ಹಣನ 'ರಾಜತರಂಗಿಣಿ',  ಕೌಟಿಲ್ಯನ - 'ಅರ್ಥಶಾಸ್ತ್ರ', ವಿಶಾಖದತ್ತನ - 'ಮುದ್ರಾರಾಕ್ಷಸ', ಅಶ್ವಘೋಷನ - 'ಬುದ್ಧ ಚರಿತ'

ವಿದೇಶೀ ಸಾಹಿತ್ಯಕ್ಕೆ ಉದಾಹರಣೆ - ಹುಯನ್ ತ್ಸಾಂಗ್ ನ - 'ಸಿ. ಯು. ಕಿ', ಪಾಹಿಯಾನನ - 'ಘೋ-ಕೋ-ಕಿ',  ಮೆಗಸ್ತನೀಸನ - 'ಇಂಡಿಕಾ', ಸಿಲೋನಿನ - 'ದೀಪವಂಶ ತ್ತು ಮಹಾವಂಶ'

3. ಪ್ರಾಕ್ತನ ಆಧಾರ ಎಂದರೇನು ? ಉದಾಹರಣೆ ಸಹಿತ ವಿವರಿಸಿ.

ಉತ್ತರ : ಸಂಶೋಧನೆ ಮತ್ತು ಉತ್ಖನನಗಳಿಂದ ದೊರೆತಿರುವ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮಡಿಕೆ-ಕುಡಿಕೆ ಹಾಗೂ ಇನ್ನಿತರ ಪಳೆಯುಳಿಕೆಗಳನ್ನು ಪ್ರಾಕ್ತನ ಆಧಾರ ಎಂದು ಕರೆಯುತ್ತಾರೆ.

ಉದಾಹರಣೆ: ಮೌರ್ಯ ವಂಶದ ರಾಜ ಅಶೋಕ ಕಲ್ಲು ಬಂಡೆಗಳ ಮೇಲೆ, ಕಲ್ಲು ಹಾಸಿನ ಮೇಲೆ ಶಾಸನಗಳನ್ನು ಕೆತ್ತಿಸಿದ್ದಾನೆ. ಈ ಶಾಸನಗಳಿಂದ ಅನೇಕ ಸಂಗತಿಗಳು ತಿಳಿದು ಬರುತ್ತವೆ.

ಮುಂದಿನ ಅಧ್ಯಾಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ -->> 

ಅಧ್ಯಾಯ - 2. ಭರತವರ್ಷ - ಭೌಗೋಳಿಕ ಲಕ್ಷಣಗಳು,  ಪ್ರಾಗೈತಿಹಾಸಿಕ ಕಾಲ.

More Updates Join below Group





No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post