Menu

Home ನಲಿಕಲಿ About ☰ Menu


 

🔍

7th ಪಾಠ - ೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು

 ಗದ್ಯಭಾಗ

೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು 

#ಲೇಖಕರ ಪರಿಚಯ:

ಲೇಖಕರ ಹೆಸರು :   ಡಾ. ನಾಬರ್ಟ್ ಡಿಸೋಜ

ಜನನ : 1937 ಜೂನ್ 6

ತಂದೆ : ಎಫ್. ಪಿ. ಡಿಸೋಜ
ತಾಯಿ : ರೂಪಿಕಾ ಡಿಸೋಜ

ಪ್ರಮುಖ ಕೃತಿಗಳು :
37 ಕಾದಂಬರಿಗಳು, 4 ನಾಟಕಗಳು & 28 ಮಕ್ಕಳ ಕೃತಿಗಳನ್ನು ನೂರಾರು ಕತೆಗಳನ್ನು ಬರೆದಿದ್ದಾರೆ. ಕಾದಂಬರಿಗಳು - 'ಕಾಡಿನ ಬೆಂಕಿ',  'ದ್ವೀಪ',  'ಬಳುವಳಿ' 
ಕಿರು ಕಾದಂಬರಿ - 'ಮುಳುಗಡೆಯ ಊರಿಗೆ ಬಂದವರು'

ಪಡೆದ ಪ್ರಶಸ್ತಿಗಳು :
ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ-2011,
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಮುಂತಾದವು

*2014 ರ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 



ಅಭ್ಯಾಸ 

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದುಕೇಳಿದ? 

ಉತ್ತರ : ಪುಟ್ಟಜ್ಜಿಯ ಬಳಿ ಹುಡುಗ ಹಾಡ್ಗತೆ ಹೇಳಬೇಕೆಂದು ಕೇಳಿದ.

೨. ಯುವಕ ಮನೆಯ ಮುಂದೆ ಏನು ಮಾಡಿದ?

ಉತ್ತರ : ಯುವಕ ಮನೆಯ ಮುಂದೆ ತೋಟ ಮಾಡಿದ.

೩. ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು? 

ಉತ್ತರ : ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ಇತ್ತು.

೪. ಹುಲಿ ಸೋತು ಏನು ಮಾಡಿತು? 

ಉತ್ತರ : ಹುಲಿ ಸೋತು ಓಡಿ ಹೋಯಿತು.

೫. ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿ ಏನು ಮಾಡಿತು? 

ಉತ್ತರ : ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿಯು ಯುವಕನ ಮನೆಯೊಳಗೆ ಅವಿತುಕೊಂಡಿತು. 

೬. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು? 

ಉತ್ತರ : ಹಳ್ಳದ ದಂಡೆಯ ಮೇಲಿನ ಊರು ಬೆಳೆಯಿತು.

ಆ. ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಎರಡು-ಮಾರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ? 

ಉತ್ತರ : ಹಳ್ಳ ಹರಿದು ಊರ ಜನರನ್ನು ರಕ್ಷಿಸಿದೆ ಮತ್ತು ಎಲ್ಲ ಕಡೆಗೆ ಹಸಿರು ಬೆಳೆದು ಊರಿಗೆ ಸೊಬಗು ನೀಡಿದೆ.


೨. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದ? 

ಉತ್ತರ : ಯುವಕ ಹಳ್ಳದ ಬಳಿಗೆ ಬಂದು ಅಲ್ಲಿಯ ಸೊಬಗಿನ ದೃಶ್ಯವನ್ನು ಕಂಡು ಆಕರ್ಷಿತನಾಗಿ  ಅಲ್ಲಿಯೇ ಉಳಿಯುಲು ನಿರ್ಧರಿಸಿದ. ಹಳ್ಳದ ಪಕ್ಕದಲ್ಲಿ ಮನೆಯನ್ನು ಕಟ್ಟಿ, ಮನೆಯ ಮುಂದೆ ಒಂದು ತೋಟ ಮಾಡಿ ತನಗೆ ಬೇಕಾದುದ್ದನ್ನು ಬೆಳೆದ.


೩. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು?

ಉತ್ತರ : ಹುಲಿ -  ಈ ಜಿಂಕೆ ನನ್ನ ಆಹಾರ, ಅದನ್ನು ನೀನು ರಕ್ಷಿಸಿದರೆ  ಅರಣ್ಯ ನಿಯಮಕ್ಕೆ ವಿರೋಧವಾಗುತ್ತದೆ,  ಆದುದರಿಂದ ಜಿಂಕೆಯನ್ನು ಬಿಟ್ಟುಕೊಡು.

ಯುವಕ -  ಇದು ಅರಣ್ಯದ ಜಿಂಕೆಯಲ್ಲ,   ಯಾರೂ ಸಾಕಿದ ಪ್ರಾಣಿ,  ಅದರ ಕುತ್ತಿಗೆಯಲ್ಲಿ  ಗೆಜ್ಜೆ  ಇದೆ.  ಇದನ್ನು ತಿನ್ನಲು ನಿನಗೆ ಅಧಿಕಾರವಿಲ್ಲ  ನಾನು ಇದನ್ನು ಬಿಟ್ಟುಕೊಡುವುದಿಲ್ಲ ಎಂದನು.


೪. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು? 

ಉತ್ತರ : ಜಿಂಕೆಯನ್ನು ನೋಡಿದ ಯುವತಿ ಓಡಿ ಬಂದು ಜಿಂಕೆಯನ್ನು ತಬ್ಬಿಕೊಳ್ಳುತ್ತಾಳೆ , ಜಿಂಕೆ ಅವಳ ಕೈಯನ್ನು ನೆಕ್ಕುತ್ತದೆ. ಮೈಗೆ ಮೈ ತಾಗಿಸಿ ತಿಕ್ಕುತ್ತದೆ. ಯುವತಿ ಮುಖಕ್ಕೆ ಮುಖ ತಾಗಿಸಿ ಅಳುತ್ತಿದ್ದಾಳೆ.  


೫. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದ?

ಉತ್ತರ : ಯುವಕ ತಾನು ಚುಕ್ಕಿಯನ್ನು ಹುಲಿಯ ಕೈಯಿಂದ ರಕ್ಷಣೆ  ಕತೆಯನ್ನು ಹೇಳಿದ. ಹುಲಿಗೂ ತನಗೂ ಆದ ಹೋರಾಟದ ಗಾಯದ ಗುರುತುಗಳನ್ನು ತೋರಿಸಿದ. ಮದ್ದು ಮಾಡಿದ ರೀತಿಯನ್ನು ತಿಳಿಸಿದ.


ಇ. ಈ ವಾಕ್ಯಗಳನ್ನು ಯಾರು - ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ.

೧. "ಯಾವುದಾದರೊಂದು ಹಾಡ್ಗತೆ ಹೇಳು."

ಉತ್ತರ : ಈ ಮಾತನ್ನು ಹುಡುಗನು ಪುಟ್ಟಜ್ಜಿಗೆ ಹೇಳಿದನು.

೨. "ಏಯ್ ಯುವಕ, ಈ ಜಿಂಕೆ ನನ್ನ ಆಹಾರ."

ಉತ್ತರ : ಈ ಮಾತನ್ನು ಹುಲಿಯು ಯುವಕನಿಗೆ ಹೇಳಿತು.

೩. "ಇದು ನಾವು ಸಾಕಿಕೊಂಡ ಜಿಂಕೆ."

ಉತ್ತರ : ಈ ಮಾತನ್ನು ಯುವತಿ ಯುವಕನಿಗೆ ಹೇಳುತ್ತಾಳೆ.

೪.  "ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ."

ಉತ್ತರ : ಈ ಮಾತನ್ನು ಯುವತಿ ಯುವಕನಿಗೆ ಹೇಳಿದಳು.


ಈ. ಕೆಳಗೆ ನೀಡಿದ ಸೂಚನೆಯಂತೆ ಉತ್ತರ ಬರೆಯಿರಿ.

೧. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.

 ಹುಲಿ, ಚಿರತೆ, ಕಾಡುಕೋಣ, ಆನೆ, ಜಿಂಕೆ.


೨. ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ.

ಪುಟ್ಟಜಿ, ಹುಡುಗ, ಯುವಕ, ಯುವತಿ,  ಹುಡುಗ,  ಹುಡುಗಿ.


೩. ಅಜ್ಜಿ ಮತ್ತು ಕತೆ ಕೇಳುವ ಹುಡುಗನ ಸಂಭಾಷಣೆ ಬರೆಯಿರಿ.

ಹುಡುಗ : ಪುಟ್ಟಜ್ಜಿ  ಪುಟ್ಟಜ್ಜಿ  ಕತೆ ಹೇಳುತೀಯಾ? 

ಅಜ್ಜಿ : ಬಾ ಮಗ ಹೇಳ್ತೀನಿ ಒಳ್ಳೇಯದೊಂದು ಕತೆಯಾ. ಯಾವ ಕತೆ ಹೇಳಲಿ?

ಹುಡುಗ : ಯಾವದಾದರೂ ಒಂದು ಹಾಡ್ಗತೆ ಹೇಳು.


೪. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆಯನ್ನು ಬರೆಯಿರಿ. 

ಯುವತಿ : ಇದು ನಾವು ಸಾಕಿಕೊಂಡ ಜಿಂಕೆ, ಇದರ ಮೇಲಿನ ಚುಕ್ಕೆಯ ಗುರುತಿಗೆ ಇದಕ್ಕೆ ನಾವು ಚುಕ್ಕಿ ಎಂದು ಕರೆದೆವು. ಕೆಲ ದಿನಗಳ ಹಿಂದೆ ಹುಲಿ ಅಟ್ಟಿಸಿಕೊಂಡು ಬಂದಿದ್ದನ್ನು ಹಳ್ಳಿ  ಜನ ನೋಡಿದ್ದರು. ಇದರ ಕತೆ ಮುಗಿಯಿತು ಎಂದುಕೊಂಡಿದ್ದೆವು. ಆದರೆ ನನಗೆ ನಂಬಿಕೆ ಇತ್ತು ಇಂದು ಇದು ನನಗೆ ಸಿಕ್ಕಿದೆ.

ಯುವಕ : ಹುಲಿಗೂ ತನಗೂ ಹೋರಾಟ ನಡೆಯಿತು, ಅದರಲ್ಲಿ ನಾನು ಗಾಯವಾಗಿದ್ದೆ.

ಯುವತಿ : ಚಿಕ್ಕಂದಿನಿಂದ ಚುಕ್ಕಿ ನಮ್ಮ ಮನೆಯಲ್ಲಿ ದೊಡ್ಡದಾಗಿದೆ. ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ ಇದನ್ನ ಮನೆಗೆ  ಕರೆದುಕೊಂಡು ಹೋಗುತ್ತೇನೆ.

ಯುವಕ : ನಾನೂ ಅದನ್ನು ಬಿಟ್ಟು ಇರಲಾರೆ, ಹುಲಿ ಬಾಯಿಂದ ಕಾಪಾಡಿದ್ದೇನೆ... ಈಗ  ನೀನಗೆ ಕೊಡಲಾರೆ. 

ಯುವತಿ : ಹಾಗಾದರೆ ನಾನೂ ಇಲ್ಲಿಯೇ ಇರುತ್ತೇನೆ, ಚುಕ್ಕಿಯ ಜೋತೆಯಲ್ಲಿ.


ಉ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ.

ಪೊರೆ - ರಕ್ಷಿಸು, ಸಲಹು, ಕಾಪಾಡು.

ಪ್ರಾಣಿಗಿಂಡಿ - ಕಾಡು ಪ್ರಾಣಿಗಳು ನೀರು ಕುಡಿಯೋಕೆ ಹೋಗಲು ಮಾಡಿಕೊಂಡ ಕಿಂಡಿ.

ಭಯ - ಹೆದರಿಕೆ,  ಅಂಜಿಕೆ.

ತೊಗಟೆ - ಮರದ ಮೇಲಿನ ಸಿಪ್ಪೆ .

ಮದ್ದು -  ಔಷಧಿ.

ಯವತ್ತಾರ - ಯಾವತ್ತಾದರೂ ಒಂದು ದಿನ.


ಊ.  ಹೊಂದಿಸಿ ಬರೆಯಿರಿ.

       ಅ                    ಆ

೧. ಪುಟ್ಟಜ್ಜಿ           -  ಕತೆ 

೨. ಕಾಡು             -  ಹುಲಿ, ಚಿರತೆ, ಕಾಡುಕೋಣ 

೩. ಚುಕ್ಕಿ              -  ಜಿಂಕೆ

೪. ಮದ್ದು            -  ಸೊಪ್ಪುಸದೆ, ಬೇರು, ತೊಗಟೆ

೫. ಹಳ್ಳದ ದಂಡೆ  -  ಊರು ಬೆಳೆಯಿತು

೬.. ಜಗಳ            -  ಹುಲಿಗೂ ಯುವಕನಿಗೂ

('ಆ' ಮತ್ತು  'ಆ' ಪಟ್ಟಿಯ ಪದಗಳನ್ನು ಹೊಂದಿಸಿ ಅನಂತರ ಅವುಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಿರಿ.) 

1. ಪುಟ್ಟಜ್ಜಿ  ಕತೆ ಹೇಳಿದಳು.

2. ಕಾಡಿನಲ್ಲಿ  ಹುಲಿ, ಚಿರತೆ, ಕಾಡುಕೋಣಗಳಿರುತ್ತವೆ.

3. ಚುಕ್ಕಿ ಅನ್ನುವುದು ಜಿಂಕೆಯ ಹೆಸರು.

4. ಮದ್ದಾಗಿ  ಸೊಪ್ಪು , ಸದೆ, ಬೇರು,  ತೊಗಟೆಗಳನ್ನು ಉಪಯೋಗಿಸುತ್ತಿದ್ದರು.

5. ಹಳ್ಳದ ದಂಡೆಯ ಮೇಲೆ ಊರು ಬೆಳೆಯಿತು

6. ಜಗಳ, ಹುಲಿ ಮತ್ತು ಯುವಕನ ಮಧ್ಯೆ ನಡೆಯಿತು.


ಭಾಷಾಭ್ಯಾಸ 

ಅ. ಕೆಳಗೆ ಹಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ. ಇವುಗಳನ್ನು ಸಾಕುಪ್ರಾಣಿಗಳು ಮತ್ತು ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತೇಕ ಪಟ್ಟಿ ಮಾಡಿ.

ಸಾಕು ಪ್ರಾಣಿಗಳು      ಕಾಡು ಪ್ರಾಣಿಗಳು 

   ಕತ್ತೆ                             ಹುಲಿ

   ಎಮ್ಮೆ                         ಸಾರಂಗ

   ಆಡು                           ಕರಡಿ

   ಮೇಕೆ                           ಜಿಂಕೆ 

    ನಾಯಿ                     ಕಾಡುಕೋಣ 

     ಬೆಕ್ಕು                          ಜಿರಾಫೆ

    ಎತ್ತು                           ಮಂಗ

    ಕೋಳಿ                         ಸಿಂಹ 

     ಹಂದಿ                      ಘೆಂಡಾಮೃಗ

                                       ಚಿರತೆ 

                                        ಆನೆ 

                                     

ಆ. ಮೇಲಿನ ಎಲ್ಲ ಪ್ರಾಣಿಗಳ ಹೆಸರನ್ನು ಅಕಾರಾದಿಯಾಗಿ ಬರೆಯಿರಿ.

ಆಡು, ಆನೆ, ಎತ್ತು, ಕತ್ತೆ, ಕರಡಿ,  ಕಾಡುಕೋಣ, ಕೋಳಿ, ಘೆಂಡಾಮೃಗ, ಜಿರಾಫೆ, ಜಿಂಕೆ,  ನಾಯಿ,  ಬೆಕ್ಕು, ಮಂಗ, ಮೇಕೆ, ಸಾರಂಗ, ಹುಲಿ, ಹಂದಿ.


ಇ. ಕೆಳಗೆ ಪ್ರತೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ. ಪ್ರತಿ ಗುಂಪಿನಲ್ಲೂ  ಆ ಗುಂಪಿಗೆ ಸೇರದ ಒಂದೊಂದು ಶಬ್ದವಿದೆ.  ಈ ಶಬ್ದವನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂಬುದಕ್ಕೆ  ಕಾರಣ ನೀಡಿ.

ಗುಂಪು – ೧ 

ಹಸು – ಎಮ್ಮೆ 

ಕರಡಿ – ಹಂದಿ 

* ಕರಡಿ – ಗುಂಪಿಗೆ ಸೇರುವುದಿಲ್ಲ , ಏಕೆಂದರೆ ಇದು ಸಾಕು ಪ್ರಾಣಿಯಲ್ಲ .


ಗುಂಪು – ೨

ನಾನು – ನೀನು 

ಅವನು – ರಮ್ಯ 

* ರಮ್ಯ  - ಎಲ್ಲವೂ ಸರ್ವನಾಮಗಳು, ರಮ್ಯ ಅಂಕಿತನಾಮ.


 ಗುಂಪು – ೩

ಯುವಕ – ಯುವತಿ 

ಮುದುಕ  - ಅಣ್ಣ 

* ಯುವತಿ – ಇದು  ಸ್ತ್ರೀಲಿಂಗ  ಪದೇ.


ಗುಂಪು – ೪

ಕತೆ  – ಕವನ

ಪೆನ್ಸಿಲು – ಕಾದಂಬರಿ

* ಪೆನ್ಸಿಲು – ಸಾಹಿತ್ಯ ಪ್ರಕಾರಕ್ಕೆ ಸೇರುವುದಿಲ್ಲ, ಇದು ಬರೆಯುವ ವಸ್ತು.


3. ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳನ್ನು  ಬಿಟ್ಟು ಆ ಜಾಗದಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ. ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ಆವರಣದಲ್ಲಿ  ನೀಡಲಾಗಿದೆ. ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳದಲ್ಲಿ ತುಂಬರಿ.

ಒಂದು ಕಾಗೆ ಹಾರಿ ಬಂದು ಒಂದು ಮರದ ಕೊಂಬೆ ಮೇಲೆ ಕುಳಿತುಕೊಂಡು ರೊಟ್ಟಿ  ತಿನ್ನತೊಡಗಿತು. ಮೋಸಗಾರ ನರಿ ಕಾಗೆಯನ್ನು ಕಂಡು ರೊಟ್ಟಿ ತಿನ್ನಬೇಕೆಂದು ಮರದ ಕೆಳಗೆ ನಿಂತು ಕಾಗೆಯನ್ನು  ಹೊಗಳಿತು. "ಎಲೈ ಕಾಗೆ ನೀನು ಚಂದ ಹಾಡುತ್ತೀಯೆ, ನಿನ್ನ ಹಾಡು ತುಂಬಾ ಚೆಂದ. ನಿನ್ನ ಹಾಡನ್ನು ಕೇಳುವ ಆಸೆ ನನಗೆ ಆಗಿದೆ" ಎಂದು ಹೊಗಳಿತು. ಕಾಗೆ ಅದರ ಹೊಗಳಿಕೆಗೆ ಮಾರು ಹೋಗಿ ಕಾಕಾಕಾ ಎಂದು ಹಾಡತೊಡಗಿತು. ಆಗ ಅದರ ಬಾಯಿಂದ ರೊಟ್ಟಿ ಕೆಳಗೆ ಬಿದ್ದಿತು. ಬಿದ್ದ ರೊಟ್ಟಿ ಯನ್ನು ನರಿ ಕಚ್ಚಿ  ಓಡಿ ಹೋಯಿತು.


 ಅಭ್ಯಾಸ

೧. ಕಥೆಯಲ್ಲಿ ಇರುವ ಯುವಕ,  ಯುವತಿ,  ಕಥೆಗಾರ, ಹಳ್ಳಿ,  ನದಿ,  ಇವುಗಳಿಗೆ ಅಂಕಿತನಾಮಗಳನ್ನು  ಗುರುತಿಸಿ. 

ಯುವಕ  –  ಭಗತ್ ಸಿಂಗ್

ಯುವತಿ  –  ರೇಖಾ

ಕಥೆಗಾರ  –  ಶಿವಾನಂದ   

ಹಳ್ಳಿ        –   ಹೊಸಟ್ಟಿ

ನದಿ        –  ಮಲಪ್ರಭಾ


೨. ಅಂಕಣದಲ್ಲಿರುವ ಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳನ್ನು ಗುರುತಿಸಿ ಪ್ರತೇಕ ಪಟ್ಟಿಮಾಡಿ.

ರೂಢನಾಮ      ಅಂಕಿತನಾಮ 

ಅಟ್ಟ                   ಅಮರ್ 

ಅತೆ                   ಅರುಣ್

ಅಕ್ಕಿ                    ಆರತಿ 

ಆಟ                  ಊರ್ವಶಿ

ಆಡು                  ಕಮಲ                  

ಆಕಾರ               ಕಪಿಲ್ 

ಊಟ                ಗಣೇಶ 

ಉಪ್ಪು                ಸಮೀರ್

ಓತಿಕೇತ             ಸ್ವರೂಪ್

 ಕೋತಿ               ಫಾತಿಮಾ 

ಕಮಲ               ಇಕ್ವಾಲ್

ಗಂಟೆ                 ಶಾಂತಿ

 ಸಂತೆ                ವಿಜಯ

ಬೆಂಚು 

ಪುಸ್ತಕ 

ಕಾವ್ಯ 

ಕವಿ 

           

೩. ಕೆಳಗಿನ ಪದಗಳಲ್ಲಿ ಅಂಕಿತನಾಮ ಮತ್ತು ಸರ್ವನಾಮಗಳನ್ನು ಗುರುತಿಸಿ ಪಟ್ಟಿಮಾಡಿ.

ರೂಢನಾಮ  ಅಂಕಿತನಾಮ  ಸರ್ವನಾಮ 

     ಅಜ್ಜ            ಅರುಣ್           ನಾನು

    ಆಡು            ಆರಿಫ್            ತಾವು

    ಬೆಳಗು          ನಾವು             ಅದು

                       ಡೇವಿಡ್         ಅವನು

                     ಮಮ್ತಾಜ್         ನೀನು

                      ಕಾರ್ತಿಕ್          ಅವರು

                       ಕಪಿಲ್            ಅವಳು

                      ಗಣೇಶ್             ನೀವು

                      ಸಮೀರ್            ಅವು

                      ಸ್ವರೊಪ್

                      ಫಾತಿಮಾ

                       ಇಕ್ಬಾಲ್

                       ಶಾಂತಿ

                      ರಾಜೇಶ್

                       ಕಾವ್ಯ 


೪. ಕೆಳಗಿನ ವಾಕ್ಯಗಳಲ್ಲಿ ಕಾಣುವ ಸರ್ವನಾಮಗಳ ಬದಲಿಗೆ ನಿಮಗಿಷ್ಟವಾದ ಹೆಸರಿಟ್ಟು ವಾಕ್ಯವನ್ನು ರಚಿಸಿ.

✯ ನಾನು ಏಳನೆಯ ತರಗತಿಯ ವಿದ್ಯಾರ್ಥಿ. 

ವಿವೇಕ ಏಳನೆಯ ತರಗತಿಯ ವಿದ್ಯಾರ್ಥಿ.

✯ ನೀನು ಎಂಟನೆಯ ತರಗತಿಯಲ್ಲಿ ಓದುತ್ತಿ. 

ಶಾರದಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ.

✯ ನಾವು ಸಂಜೆಯ ವೇಳೆ ಆಡುತ್ತೇವೆ.

ಶಿವಾಜಿ ಮತ್ತು ಸ್ನೇಹಿತರು ಸಂಜೆಯ ವೇಳೆ ಆಡುತ್ತಾರೆ.

✯ ಅವನು ನನ್ನ ಸ್ನೇಹಿತ.

ರಮೇಶ್ ಆತ್ಮಾನಂದನ ಸೇಹಿತ. 

✯ ಅವಳು ನನ್ನ ತಂಗಿ.

ಸುಭದ್ರೆ ಕೃಷ್ಣನ ತಂಗಿ.

✯ ಅವರು ನನ್ನ ತಂದೆ.  

ಅರ್ಜುನ ಅಭಿಮನ್ಯುವಿನ ತಂದೆ. 

✯ ಅದು ಹಣ್ಣನ್ನು ತಿನ್ನುತ್ತದೆ. 

ಅಳಿಲು ಹಣ್ಣನ್ನು ತಿನ್ನುತ್ತದೆ.

✯ ಅವು ಕಾಳನ್ನು ತಿನ್ನುತ್ತವೆ.

ಕೋಳಿಗಳು ಕಾಳನ್ನು ತಿನ್ನುತ್ತವೆ.


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post