Menu

Home ನಲಿಕಲಿ About ☰ Menu


 

🔍

ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು.

ಕಲಿಸು ಗುರುವೆ ಕಲಿಸು
ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು
ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು    (2 ಸಲ)  
ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು (2 ಸಲ)
ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು  (2 ಸಲ)
ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು || ಪ ||


ಬೆವರಿಳಿಸಿ ಗಳಿಸಿದ ಒಂದು ಕಾಸು ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು (2 ಸಲ)
ಸೋಲು ಗೆಲುವಿನಲಿ ಸಮ ಚಿತ್ತದಿಂದಿರಲು (2 ಸಲ)
ಶತ್ರುಗಳಿಗೂ ಸನ್ಮಿತ್ರ ನಾಗಿರಲು ಕಲಿಸು (2 ಸಲ)
ಹಸಿರು ಮಲೆ ಹೂವಲಿ ನಾ ಧ್ಯಾನಿಸುವುದ ಕಲಿಸು
ಜಾಣನಾಗಲು ಕಲಿಸು, ಜಾಣನಾಗಲು ಕಲಿಸು ||೧||


ಜಗವೆಲ್ಲ ಒಂದಾಗಿ ಜರಿದರು ಸರಿಯೆ ನನ್ನನ್ನೆ ನಾ ನಂಬುವ ಬಗೆ ನೀ ಕಲಿಸು (2 ಸಲ)
ಅಳುವಿನಲಿ ಅವಮಾನ ಇಲ್ಲವೆಂಬುದು ಕಲಿಸು (2 ಸಲ)
ನನ್ನನ್ನೆ ನಾ ನೋಡಿ ನಗುವುದನು ಕಲಿಸು (2 ಸಲ)
ಮಾನವಿಯತೆಯಲಿ ನಾ ಮೆರೆಯುವುದನು ಕಲಿಸು (2 ಸಲ)
ಮಾನವೀಯತೆಯಲಿ ನಾ ಕರಗುವುದನು ಕಲಿಸು
ಜಾಣನಾಗಲು ಕಲಿಸು, ಜಾಣನಾಗಲು ಕಲಿಸು ||೨||
                      ----------೦----------

ರಚನೆ : ಈ ಹಾಡು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಪ್ರಸಿದ್ಧ ಪತ್ರದ ಭಾವಾನುವಾದ. ಎಸ್. ರಾಮನಾಥ ರಚನೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post