Menu

Home ನಲಿಕಲಿ About ☰ Menu


 

🔍

ಐದು ಬೆರಳು ಕೂಡಿ ಒಂದು ಮುಷ್ಟಿಯು - "ಎಚ್ ಎಸ್ ವೆಂಕಟೇಶ ಮೂರ್ತಿ"

'ಐದು ಬೆರಳು ಕೂಡಿ ಒಂದು ಮುಷ್ಟಿಯು'
ಐದು ಬೆರಳು ಕೂಡಿ ಒಂದು ಮುಷ್ಟಿಯು
ಹಲವು ಮಂದಿ ಸೇರಿ ಈ ಸಮಷ್ಟಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತ ಮಾತೆಗೆ ಭರತ ಮಾತೆಗೆ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ||

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಬಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿಯುರಿವ ಬೆಂಕಿಯಾರಿ ತಣ್ಣಗಾಗಲಿ
ಬಂಜರಲ್ಲೂ ಹಚ್ಚ ಹಸಿರು ಬೆಳೆದು ತೂಗಲಿ
ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||

ಲಡಾಕ್ ಖನೆಫಾ ಗಡಿಗಳಲ್ಲಿ ಯಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ
ದುಡಿವ ಹಿಂದು ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣ ಗೂಡಲಿ
ಎದೆಯ ಕೊಳೆಗಳನ್ನು ಅಶೄ ಧಾರೆ ತೊಳೆಯಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||
                             ----------೦----------

ರಚನೆ : ಎಚ್. ಎಸ್. ವೆಂಕಟೇಶ ಮೂರ್ತಿ

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post