ಪ್ರಪಂಚದ 4 ಮಹಾಸಾಗರಗಳ ನಕಾಶೆ |
ಭೂಮಿಯ ಮೇಲೆ 361ದಶಲಕ್ಷ ಚದರ ಕಿ.ಮೀ ಭಾಗ ನೀರಿನಿಂದ ಆವರಿಸಿದ್ದು, ಭೂಮಿಯ ಮೇಲೆ ನೀರಿನ ಪ್ರಮಾಣ 70.78% ಆಗಿದೆ. ಭೂಮಿಯ ಮೇಲಿನ ವಿಸ್ತಾರವಾದ ಜಲರಾಶಿಯನ್ನು ಮಹಾಸಾಗರಗಳೆಂದು ಕರೆಯುತ್ತಾರೆ. ಅವುಗಳನ್ನು ನಾಲ್ಕು ಮಹಾಸಾಗರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ ಸಾಗರ.
ಪೆಸಿಫಿಕ್ ಸಾಗರವು ಅತಿ ದೊಡ್ಡದು ಹಾಗೂ ಹೆಚ್ಚು ಆಳವಾಗಿದೆ ಆರ್ಥಿಕ ಸಾಗರ ಅತಿ ಚಿಕ್ಕದು ಮತ್ತು ಕಡಿಮೆ ಆಳ ಹೊಂದಿದೆ.
1.ಪೆಸಿಫಿಕ್ ಮಹಾಸಾಗರ :
✯ಪ್ರಪಂಚದ ಅತ್ಯಂತ ದೊಡ್ಡ ಸಾಗರವಾಗಿದೆ.
✯ಈ ಮಹಾಸಾಗರ ಅತ್ಯಂತ ಆಳವಾಗಿದೆ.
✯ಈ ಮಹಾಸಾಗರದಲ್ಲಿ ಅತಿ ಹೆಚ್ಚು ಸಂಖ್ಯೆಯ ದ್ವೀಪ ಸಮೂಹಗಳಿವೆ.
✯ಸಾ.ಶ 1521 ರಲ್ಲಿ ಪೋರ್ಚುಗೀಸ್ ಪರಿಶೋಧಕ ಫರ್ನಾಂಡೊ ಮ್ಯಾಗೆಲ್ಲನ್ ಈ ಮಹಾಸಾಗರಕ್ಕೆ (ಫೆಸಿಫಿಕ್ ಮಹಾಸಾಗರ) ನಾಮಕರಣ ಮಾಡಿದರು.
✯ಅಮೆರಿಕಾ ಭೂಖಂಡಗಳ ಪಶ್ಚಿಮಕ್ಕೆ ಹಾಗೂ ಏಷ್ಯಾ ಮತ್ತು ಆಸ್ಟ್ರೇಲಿಯಾ ಭೂಖಂಡಗಳ ಪೂರ್ವದ ಪ್ರದೇಶದಲ್ಲಿ ಕಂಡುಬರುತ್ತದೆ.
✯ಇದನ್ನು 'ಶಾಂತಮಹಾಸಾಗರ' ಎಂದು ಕರೆಯುತ್ತಾರೆ.
✯ಫೆಸಿಫಿಕ್ ಸಾಗರ ಎನ್ನುವ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದೆ.
2. ಅಟ್ಲಾಂಟಿಕ್ ಸಾಗರ :
✯ಎರಡನೇ ಅತಿ ದೊಡ್ಡ ಮಹಾಸಾಗರವಾಗಿದೆ.
✯ಭೂಖಂಡಗಳ ಪೂರ್ವಕ್ಕೆ ಮತ್ತು ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ಪಶ್ಚಿಮಕ್ಕೆ ಈ ಮಹಾಸಾಗರ ವ್ಯಾಪಿಸಿದೆ.
✯ಇಂಗ್ಲೀಷ್ ಹೊಸ ನ S ಅಕ್ಷರ ಹೋಲುವ ಮಹಾಸಾಗರವಾಗಿದೆ.
3. ಹಿಂದೂ ಮಹಾಸಾಗರ :
✯ಭೂಮಿಯ ಮೂರನೇ ದೊಡ್ಡ ಮಹಾಸಾಗರ.
✯ದೇಶವೊಂದರ ಹೆಸರಿನಿಂದ ಕರೆಯಲ್ಪಡುವ ಏಕೈಕ ಸಾಗರ.
✯ಹಿಂದೂ ಮಾಹಾಸಾಗರದಲ್ಲಿ ಅತ್ಯಂತ ಉದ್ದವಾದ ಕಡಲ ತೀರವನ್ನು ಹೊಂದಿರುವ ದೇಶ ಭಾರತ.
✯ಏಷ್ಯ ಖಂಡದ ದಕ್ಷಿಣ ಭಾಗ ಮತ್ತು ಆಸ್ಟ್ರೇಲಿಯ ಖಂಡದ ಉತ್ತರದಲ್ಲಿ ಕಂಡುಬರುತ್ತದೆ.
4. ಆರ್ಕ್ಟಿಕ್ ಸಾಗರ :
✯ಈ ಮಹಾಸಾಗರ ಅತಿ ಶೀತಲ ಮಹಾಸಾಗರವಾಗಿದೆ.
✯ಪ್ರಪಂಚದ ಅತ್ಯಂತ ಚಿಕ್ಕ ಸಾಗರವಾಗಿದೆ.
ಮಹಾಸಾಗರ.
✯ಅರ್ಕ್ಟಿಕ್ ಮಹಾಸಾಗರವು ಉತ್ತರಧ್ರುವ ಪ್ರದೇಶದ ಸುತ್ತಲೂ ಆವರಿಸಿಕೊಂಡಿದೆ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.