Menu

Home ನಲಿಕಲಿ About ☰ Menu


 

🔍

ರಕ್ತ ಸಂಬಂಧಗಳು - Blood Relations

      ಪ್ರಸ್ತುತ ದಿನಗಳ ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಕ್ತ ಸಂಬಂಧದ ಪ್ರಶ್ನೆಗಳನ್ನು  ಕೇಳುವುದು ಸಾಮಾನ್ಯವಾಗಿದೆ. ಈ ರೀತಿಯ ಪ್ರಶ್ನೆಗಳು ನಿರ್ದಿಷ್ಟ ಸಮಯದಲ್ಲಿ ನಿಮ್ಮ ತಿಳುವಳಿಕೆಯ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ರಕ್ತ ಸಂಬಂಧದ ಪ್ರಶ್ನೆಗಳನ್ನು ಸುಲಭ ಮತ್ತು ಸರಳ ಟ್ರಿಕ್‌ನೊಂದಿಗೆ  ಬಿಡಿಸಲು, ಮೊದಲು ನೀವು ಎಲ್ಲಾ ರೀತಿಯ ಸಂಬಂಧಗಳನ್ನು ತಿಳಿದಿರಬೇಕು. ಕೆಲವು ಪ್ರಮುಖ ಸಂಬಂಧಗಳನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ಸಂಬಂಧಗಳ ಪಟ್ಟಿ 


ಕ್ರ.ಸಂ

ಸಂಬಂಧ

ವಿವರಣೆ
      1
 ಅಜ್ಜ
Grand Father
ತಂದೆಯ ತಂದೆ,
ತಾಯಿಯ ತಂದೆ,
ಸಹೋದರನ ಅಜ್ಜ,
ಸಹೋದರಿಯ ಅಜ್ಜ,
ತಂದೆಯ ಪತ್ನಿಯ ತಂದೆ,
ತಾಯಿ ಪತಿಯ ತಂದೆ.
      2
ಅಜ್ಜಿ
Grand Mother
ತಂದೆಯ ತಾಯಿ,
ತಾಯಿಯ ತಾಯಿ,
ಸಹೋದರನ ಅಜ್ಜಿ,
ಸಹೋದರಿಯ ಅಜ್ಜಿ,
ತಂದೆಯ ಪತ್ನಿಯ ತಾಯಿ,
ತಾಯಿ ಪತಿಯ ತಾಯಿ.
      3       
ತಂದೆ
Father
ತಾಯಿಯ ಪತಿ,
ಸಹೋದರನ ತಂದೆ,
ಸಹೋದರಿಯ ತಂದೆ,
ಮಡದಿಯ ಮಾವ,
ಪತಿಯ ಮಾವ.
      4       
ತಾಯಿ
Mother
ತಂದೆಯ ಪತ್ನಿ,
ಸಹೋದರನ ತಾಯಿ,
ಸಹೋದರಿಯ ತಾಯಿ,
ಪತಿಯ ಅತ್ತೆ,
ಮಡದಿಯ ಅತ್ತೆ.
      5       
ಸಹೋದರ
Brother
ತಂದೆಯ ಮಗ,
ತಾಯಿಯ ಮಗ,
ಸಹೋದರನ ಸಹೋದರ,
ಸಹೋದರಿಯ ಸಹೋದರ.
      6
ಸಹೋದರಿ
Sister
ತಂದೆಯ ಮಗಳು,
ತಾಯಿಯ ಮಗಳು,
ಸಹೋದರನ ಸಹೋದರಿ,
ಸಹೋದರಿಯ ಸಹೋದರಿ.
      7
ಗಂಡ
Husband
ಮಗನ ತಂದೆ,
ಮಗಳ ತಂದೆ,
ತಾಯಿಯ ಅಳಿಯ,
ತಂದೆಯ ಅಳಿಯ.
      8
ಹೆಂಡತಿ
Wife
ಮಗನ ತಾಯಿ,
ಮಗಳ ತಾಯಿ,
ತಾಯಿಯ ಸೊಸೆ,
ತಂದೆಯ ಸೊಸೆ.
      9
ಮಗ
Son
ಗಂಡನ ಮಗ,
ಹೆಂಡತಿಯ ಮಗ,
ಮಗನ ಸಹೋದರ,
ಮಗಳ ಸಹೋದರ.
     10
ಮಗಳು
Daughter
ಗಂಡನ ಮಗಳು,
ಹೆಂಡತಿಯ ಮಗಳು,
ಮಗನ ಸಹೋದರಿ,
ಮಗಳ ಸಹೋದರಿ.
      11
ಚಿಕ್ಕಪ್ಪ/ದೊಡ್ಡಪ್ಪ
Uncle
ತಂದೆಯ ಸಹೋದರ.
      12
ಸೋದರ ಮಾವ
Uncle
ತಾಯಿಯ ಸಹೋದರ.
     13      
ಸೋದರತ್ತೆ
Aunt
ತಂದೆಯ ಸಹೋದರಿ.      
  
     14      
ಚಿಕ್ಕಮ್ಮ/ದೊಡ್ಡಮ್ಮ
Aunt
ತಾಯಿಯ ಸಹೋದರಿ.    
     15      
ದಾಯಾದಿ (ಸೋದರ ಸಂಬಂಧಿ)
Cousin
ಚಿಕ್ಕಪ್ಪ / ದೊಡ್ಡಪ್ಪನ ಮಗ/ಮಗಳು,
ಚಿಕ್ಕಮ್ಮ / ದೊಡ್ಡಮ್ಮನ ಮಗ/ಮಗಳು.
     
     16      
ಸೊಸೆ
Sister-in-law
ಮಗನ ಪತ್ನಿ,
ಹೆಂಡತಿಯ ಸಹೋದರಿ.
     
     17
ಭಾವ / ಅಳಿಯ
Brother-in-law
ಹೆಂಡತಿಯ ಸಹೋದರ,
ಸಹೋದರಿಯ ಗಂಡ.
     18
ಅಳಿಯ
Son-in-law
ಮಗಳ ಪತಿ
     19
ಮೈದುನ / ಭಾವ
Brother-in-law
ಗಂಡನ ಸಹೋದರ
      20
ನಾದಿನಿ
Sister-in-law
ಗಂಡನ ಸಹೋದರಿ
     21
ಅತ್ತಿಗೆ
Sister-in-law
ಸಹೋದರನ ಹೆಂಡತಿ
     22
ಸೋದರಳಿಯ
Nephew
ಸಹೋದರ / ಸಹೋದರಿಯ ಮಗ
     23
ಸೋದರಸೊಸೆ
Niece
ಸಹೋದರ / ಸಹೋದರಿಯ ಮಗಳು
     24
ಮಾವ
Father-in-law
ಗಂಡನ / ಹೆಂಡತಿಯ ತಂದೆ
     25
ಅತ್ತೆ
Mother-in-law
ಗಂಡನ / ಹೆಂಡತಿಯ ತಾಯಿ


 ರಕ್ತ ಸಂಬಂಧ ಪ್ರಶ್ನೆಗಳ ವಿ
1. ಏಕವ್ಯಕ್ತಿ ರಕ್ತ ಸಂಬಂಧಗಳು
2. ಮಿಶ್ರ ರಕ್ತ ಸಂಬಂಧಗಳು
3. ಕೋಡೆಡ್ ರಕ್ತ ಸಂಬಂಧಗಳು

*ರಕ್ತ ಸಂಬಂಧಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಆದಷ್ಟು ಬೇಗ Update ಮಾಡಲಾಗುವುದು ಮತ್ತೆ ಬ್ಲಾಗ್ ಗೆ ಭೇಟಿ ನೀಡಿ....

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post