ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಸೌರವ್ಯೂಹ ಮತ್ತು ಗ್ರಹಗಳು | Solar System and Planets

ಸೌರವ್ಯೂಹ
ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ, ಉಪಗ್ರಹ, ಧೂಮಕೇತು,  ಕ್ಷುದ್ರ ಗ್ರಹಗಳ ಸಮೂಹವನ್ನು ಸೌರವ್ಯೂಹ ಅಥವಾ ಸೌರಮಂಡಲ ಎನ್ನುವರು.
☞ ಸೌರವ್ಯವಸ್ಥೆಯು ಸೂರ್ಯನ ಸುತ್ತ ಕೇಂದ್ರಿಕೃತವಾಗಿದೆ.
☞ ಸೂರ್ಯನು ಸೌರವ್ಯವಸ್ಥೆಯ ಅತ್ಯಂತ ದೊಡ್ಡ ಸದಸ್ಯ.
☞ ಸೌರವ್ಯೂಹದ ಎಲ್ಲಾ ಗ್ರಹಗಳೂ ಇವನ ಸುತ್ತ ಪ್ರದಕ್ಷಿಣೆ ಹಾಕುತ್ತವೆ.
☞ ಸೂರ್ಯ ತನ್ನ ಅಕ್ಷದ ಸುತ್ತ ಪಸೌರವ್ಯೂಹಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿದ್ದಾನೆ.
☞ ಸಂಪೂರ್ಣ ಸೌರವ್ಯವಸ್ಥೆಯ ಶಾಖ ಮತ್ತು ಬೆಳಕಿಗೆ ಸೂರ್ಯನೇ ಏಕೈಕ ಆಧಾರ.
☞ ಸೂರ್ಯನ ಕಿರಣವು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ 8 ನಿಮಿಷ.

 ಗ್ರಹಗಳು
☞ ಸೂರ್ಯನ ಸುತ್ತ ಸುತ್ತುತ್ತಿರುವ ಆಕಾಶಕಾಯಗಳೇ 'ಗ್ರಹಗಳು'.
☞ ಸೌರವ್ಯೂಹದಲ್ಲಿ 8 ಗ್ರಹಗಳಿವೆ, ಅನುಕ್ರಮವಾಗಿ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.
☞ ಮೊದಲು 9 ಗ್ರಹಗಳನ್ನು ಗುರುತಿಸಲಾಗಿತ್ತು. ಆದರೆ ಸಾ.ಶ 2006 ರಲ್ಲಿ ನಡೆದ ವಿಶ್ವ ಖಗೋಳಶಾಸ್ತ್ರಜ್ಞರ ಸಮ್ಮೇಳನದಲ್ಲಿ 9 ನೇ ಗ್ರಹವಾದ "ಪ್ಲೂಟೋ"ವು ಗ್ರಹ ಎನಿಸಿಕೊಳ್ಳಬಹುದಾದ ಕೆಲ ಲಕ್ಷಣಗಳನ್ನು ಹೊಂದಿಲ್ಲವಾದ್ದರಿಂದ ಅದನ್ನು ಗ್ರಹ ಸ್ಥಾನದಿಂದ ಕೈಬಿಡಲಾಯಿತು. 

1.ಬುಧ ಗ್ರಹ :
☞ ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. 
☞ ಸೌರವ್ಯವಸ್ಥೆಯ ಅತ್ಯಂತ ಸಣ್ಣ ಗ್ರಹವಾಗಿದೆ.
☞ ಬುಧ ಗ್ರಹಕ್ಕೆ ಉಪಗ್ರಹಗಳು ಇಲ್ಲ.
☞ ಬುಧ ಗ್ರಹದ ಪರಿಭ್ರಮಣ ಅವಧಿ 88 ದಿನಗಳು.
☞ ಬುಧ ಗ್ರಹದ ಭ್ರಮಣ ಅವಧಿ 176 ದಿನಗಳು.
☞ ಬುಧ ಗ್ರಹದ ಮೆಲೆ ಯಾವುದೇ ಜೀವಿಗಳಿಲ್ಲ.

2. ಶುಕ್ರ ಗ್ರಹ :
☞ ಶುಕ್ರವು ಸೂರ್ಯನಿಂದ ಎರಡನೆಯ ಗ್ರಹವಾಗಿದೆ.
☞ ಇದು ಭೂಮಿಗೆ ಅತ್ಯಂತ ಸಮೀಪದಲ್ಲಿರು ಗ್ರಹವಾಗಿದೆ.
☞ ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹ. 
☞ ಅತಿ ಹೆಚ್ಚು ಪ್ರಕಾಶಮಾನವಾದ ಗ್ರಹವಾಗಿದ್ದು, ರಾತ್ರಿ ಆಕಾಶದಲ್ಲಿ ಚಂದ್ರನನ್ನು ಬಿಟ್ಟರೆ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಕಾಯವೆಂದರೆ ಶುಕ್ರಗ್ರಹ.
☞ ಶುಕ್ರ ಗ್ರಹವನ್ನು ಬೆಳಗಿನ ನಕ್ಷತ್ರ ಅಥವಾ ಸಂಜೆ ನಕ್ಷತ್ರ ಎಂದು ಕರೆಯಲಾಗುತ್ತದೆ.
☞ ಈ ಗ್ರಹದ ಮೇಲೆ "ಮ್ಯಾಕ್ಸ್ವೆಲ್ ಮೊಂಟಾಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಅದರ ಎತ್ತರ ಮೌಂಟ್ ಎವರೆಸ್ಟ್ ನಷ್ಟಿದೆ.
☞  ಗ್ರೀಕರ ಸೌಂದರ್ಯ ದೇವತೆಯಾದ "ವೀನಸ್" ಳ ಹೆಸರನ್ನು ಈ ಗ್ರಹಕ್ಕೆ ಇಡಲಾಗಿದೆ.
☞  ಶುಕ್ರ ಗ್ರಹದಲ್ಲಿ  ಇಂಗಾಲದ  ಡೈ ಆಕ್ಸೈಡ್ ಹೆಚ್ಚಿದ್ದ ಕಾರಣ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ, ಆದ್ದರಿಂದ  ತಾಪ 400 ಡಿಗ್ರಿ ಸೆಲ್ಸಿಯಸ್‍ಗಿಂತ ಅಧಿಕವಾಗಿದೆ. ಆದ್ದರಿಂದ ಇದು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ.
☞ ಈ ಗ್ರಹದ ಪರಿಭ್ರಮಣ ಅವಧಿ 224 ದಿನಗಳು.
☞ ಈ ಗ್ರಹದ ಭ್ರಮಣೆಯ ಅವಧಿ 243 ದಿನಗಳು.
☞ ಶುಕ್ರ ಗ್ರಹಕ್ಕೆ ಯಾವುದೇ ಉಪಗ್ರಹಗಳಿಲ್ಲ.

3. ಭೂಮಿ :
☞ ಜೀವಿಗಳಿರುವ ಏಕೈಕ ಗ್ರಹ ಭೂಮಿ.
☞ ಭೂಮಿಯನ್ನು ನೀಲಿ ಗ್ರಹವೆಂದು ಕರೆಯುತ್ತಾರೆ. (ಕಾರಣ 70 ಶೇಕಡಾ ಭಾಗ ನೀರಿನಿಂದ ಆವೃತ್ತವಾಗಿದ್ದು ಮೇಲಿನಿಂದ ನೋಡಿದಾಗ ನೀಲಿಬಣ್ಣದಲ್ಲಿ ಕಾಣುತ್ತದೆ)
☞ಭೂಮಿಯ ಪರಿಭ್ರಮಣ ಅವಧಿ 365 ದಿನ 6 ಗಂಟೆ 9 ನಿಮಿಷ 9.54 ಸೆಕೆಂಡ್‍ಗಳು.
☞ ಭೂಮಿಯ ಭ್ರಮಣ ಅವಧಿ 23 ಗಂಟೆ 56 ನಿಮಿಷ 4.09 ಸೆಕೆಂಡ್‍ಗಳು.
☞ ಭೂಮಿಯ ಏಕೈಕ ಉಪಗ್ರಹ "ಚಂದ್ರ".
☞ ಭೂಮಿಯ ವಾತಾವರಣದಲ್ಲಿ  21% ಆಮ್ಲಜನಕವಿದೆ.

4. ಮಂಗಳ :
☞ ಮಂಗಳ ಗ್ರಹ  ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹ.
☞ ಬರಿಗಣ್ಣಿಗೆ ಕಾಣುವ ಕೆಂಪು ಬಣ್ಣದ ಗ್ರಹ ಮಂಗಳ.
☞ ಮಂಗಳಗ್ರಹವನ್ನು ಅಂಗಾರಕ, ಕುಜ, ಕೆಂಪುಗ್ರಹ ಎಂದು ಕರೆಯುತ್ತಾರೆ.
☞ ಮಂಗಳ ಗ್ರಹಕ್ಕೆ 2 ಉಪಗ್ರಹಗಳಿವೆ. "ಪೋಬೋಸ್" ಮತ್ತು "ಡೈಮೋಸ್".
☞ ಮಂಗಳಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಶೇಕಡ 95 ರಷ್ಟು ಕಾರ್ಬನ್ ಡೈ ಆಕ್ಸೈಡ್  ಹಾಗೂ ಶೇಕಡ 5 ರಷ್ಟು ನೈಟ್ರೋಜೆನ್ ಇದೆ.
☞ ಈ ಗ್ರಹದ ಮೇಲೆ "ಒಲಂಪಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು, ಸೌರ ಮಂಡಲದಲ್ಲಿಯೇ ಅತ್ಯಂತ ದೊಡ್ಡ ಪರ್ವತವಾಗಿದೆ. 
☞ ತನ್ನ ಸುತ್ತ ತಾನು ತಿರುಗುವ ಅಕ್ಷವು ಪರಿಭ್ರಮಣಾ ಪಥದಿಂದ 24 ಡಿಗ್ರಿ ಕೊನದಲ್ಲಿ ವಾಲಿದೆ. ಹೀಗಾಗಿ ಅದು ಭೂಮಿಯಲ್ಲಿ ಇರುವ ಹಾಗೇಯೇ ಋತುಗಳನ್ನು ಹೊಂದಿದೆ.
☞ ಮಂಗಳದ ಧ್ರುವಗಳಲ್ಲಿನ ಹಿಮದ ಹೊದಿಕೆಗಳು ಅದರ ಅತ್ಯಂತ ಪ್ರಮುಖ ಲಕ್ಷಣಗಳು. ಇವುಗಳ ಆಕಾರ ಮತ್ತು ಚಹರೆಗಳು ಋತುಮಾನಗಳೊಂದಿಗೆ ಬದಲಾಗುವುದು ಕಂಡುಬಂದಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 687 ದಿನಗಳು.
☞ ಈ ಗ್ರಹದ ಭ್ರಮಣ ಅವಧಿ 24 ಗಂಟೆ, 37 ನಿಮಿಷ 23 ಸೆಕೆಂಡ್‍ಗಳು.

5. ಗುರು :
☞  ಗುರು ಗ್ರಹ ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹವಾಗಿದೆ.
☞ ಇದೊಂದು ದೈತ್ಯಾಕಾರದ ಅನಿಲಗ್ರಹವಾಗಿದೆ.
☞ ಸೌರ ಮಂಡಲದಲ್ಲಿ ಸೃಷ್ಟಿಯಾದ ಮೊಟ್ಟಮೊದಲ ಗ್ರಹವೆಂದರೆ ಗುರು ಗ್ರಹ.
☞ ಸೂರ್ಯನಿಂದ ಬರೋಬ್ಬರಿ 778.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಸೌರವ್ಯೂಹದಲ್ಲಿರುವ ಒಟ್ಟು ದ್ರವ್ಯದ 2/3 ಅಂಶ ಗುರು ಗ್ರಹದಲ್ಲಿದೆ. ಇಷ್ಟೊಂದು ದ್ರವ್ಯರಾಶಿ ಮತ್ತು ಗಾತ್ರ ಇದ್ದರೂ ಇದು ಗ್ರಹಗಳಲ್ಲೆ ಅತ್ಯಂತ ವೇಗವಾಗಿ ಪರಿಭ್ರಮಿಸುವ ಗ್ರಹ.
☞ ಈ ಗ್ರಹದ ದಕ್ಷಿಣ ಗೋಳಾರ್ಧದಲ್ಲಿ ಸಮಭಾಜಕವೃತ್ತದ ಸಮೀಪದಲ್ಲಿರುವ 'ದೊಡ್ಡ ಕೆಂಪು ಮಚ್ಚೆ' ಯು ಗುರುವಿನ ಅತ್ಯಂತ ಪ್ರಮುಖ ಮೇಲ್ಮೈ ಲಕ್ಷಣ.
☞ ಗುರುಗ್ರಹವು ಉಂಗುರವ್ಯವಸ್ಥೆಯನ್ನು ಹೊಂದಿದೆ.
☞ ಗೆಲಿಲಿಯೋ ಗೆಲಿಲಿ ಗುರುಗ್ರಹದ ನಾಲ್ಕು ಉಪಗ್ರಹಗಳನ್ನು ಮೊತ್ತಮೊದಲ ಬಾರಿಗೆ ದೂರದರ್ಶಕದ ಮೂಲಕ ಕಂಡುಹಿಡಿದನು. ಇವುಗಳನ್ನು "ಗೆಲಿಲಿಯನ್" ಉಪಗ್ರಹಗಳು ಎನ್ನುವರು.
☞ ಈ ನಾಲ್ಕು ಉಪಗ್ರಹಗಳೆಮದರೆ- ಐಯೋ, ಯುರೋಪ, ಗ್ಯಾನಿಮೇಡ್ ಮತ್ತು ಕ್ಯಾಲಿಸ್ಟೋ.
☞ ಗ್ಯಾನಿಮೆಡ್ ಉಪಗ್ರಹವು ಸೌರವ್ಯೂಹದ ಅತ್ಯಂತ ದೊಡ್ಡ ಉಪಗ್ರಹವಾಗಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 12 ವರ್ಷಗಳು.


6. ಶನಿ :
☞ ಈ ಗ್ರಹವು ನಮ್ಮ ಸೌರ ಮಂಡಲದಲ್ಲಿ ಎರಡನೆಯ ದೊಡ್ಡ ಗ್ರಹ.
☞ ಸೌರವ್ಯೂಹದ ಅತ್ಯಂತ ಸುಂದರವಾದ ಗ್ರಹ ಶನಿ.
☞  ಶನಿಗ್ರಹವು ಅತ್ಯಂತ ಸುಂದರವಾಗಿರಲು ಕಾರಣ ಅದರ ಸುತ್ತಲೂ ಇರುವ ಉಂಗುರ ವ್ಯವಸ್ಥೆ.
☞ ಶನಿ ಗ್ರಹಕ್ಕೆ ಎರಡು ಉಂಗುರಗಳಿದ್ದು, ಈ ಉಂಗುರಗಳ ಮಧ್ಯದಲ್ಲಿರುವ ಖಾಲಿ ಜಾಗವನ್ನು " ಕ್ಯಾಸಿನಿ ವಿಭಾಜಕ"ಎಂದು ಕರೆಯುವರು.
☞ ಈ ಗ್ರಹವು ಸೂರ್ಯನಿಂದ 1.43 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಶನಿ ಗ್ರಹಕ್ಕೆ ಸುಮಾರು 18 ಕ್ಕಿಂತಲೂ ಹೆಚ್ಚಿನ ಉಪಗ್ರಹಗಳಿವೆ. ಇವುಗಳ ಪೈಕಿ ಅತ್ಯಂತ ಪ್ರಮುಖವಾದದ್ದು "ಟೈಟಾನ್"
☞ ಟೈಟಾನ್ ಉಪಗ್ರಹವು ಸ್ವತ: ವಾತಾವರಣವನ್ನು ಹೊಂದಿದೆ. ಇದು ಸೌರವ್ಯೂಹದಲ್ಲಿ ವಾತಾವರಣವನ್ನು ಹೊಂದಿರುವ ಏಕೈಕ ಉಪಗ್ರಹವಾಗಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ  29 ವರ್ಷಗಳು.

7. ಯುರೇನಸ್
☞ ಸೂರ್ಯನಿಂದ 2.87 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಸೌರ ಮಂಡಲದಲ್ಲಿಯೇ ಕಡಿಮೆ ಉಷ್ಣಾಂಶ ಹೊಂದಿರುವ ಗ್ರಹವಾಗಿದೆ.
☞ ದೂರದರ್ಶಕದ ಸಹಾಯದಿಂದ ಕಂಡುಹಿಡಿಯಲಾದ ಮೊದಲ ಗ್ರಹ ಯುರೇನಸ್.
☞ ಸಾ.ಶ 1781 ರಲ್ಲಿ ವಿಲಿಯಂ ಹರ್ಷಲ್ ಎಂಬ ವಿಜ್ಞಾನಿಯು ಈ ಗ್ರಹ ಕಂಡುಹಿಡಿದನು.
☞  ಇದರ ಪ್ರಮುಖ ಉಪಗ್ರಹಗಳೆಂದರೆ- ಟೈಟಾನಿಯಾ ಮತ್ತು ಒಬೆರನ್.
☞ ಶನಿ ಮತ್ತು ಗುರು ಗ್ರಹಗಳಿಗಿರುವಂತೆ ಯುರೇನಸ್ ಗ್ರಹವು ಉಂಗುರ ವ್ಯವಸ್ಥೆಯನ್ನು ಹೊಂದಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 84.3 ವರ್ಷಗಳು.

8. ನೆಪ್ಚೂನ್ :
☞ ಸೂರ್ಯನಿಂದ 4.5 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ನ್ಯೂಟನ್ ಚಲನೆಯ ನಿಯಮ ಮತ್ತು ಗುರುತ್ವ ನಿಯಮಗಳ ಅನ್ವಯದ ಫಲವೇ ನೆಪ್ಚೂನ್ ಗ್ರಹದ ಸಂಶೋಧನೆ.
☞ ಯುರೇನಸ್ ಗ್ರಹದ ಕಕ್ಷೆಯಲ್ಲಿ ಉಂಟಾದ ಪಲ್ಲಟವು ನೆಪ್ಚೂನ್ ಗ್ರಹದ ಇರುವಿಕೆಯನ್ನು ಮುನ್ಸೂಚಿಸಿತು.
☞ ಸಾ.ಶ 1846 ರಲ್ಲಿ ದೂರದರ್ಶಕದ ಸಹಾಯದಿಂದ ಜೋಹಾನ್‍ಗಾಲಿ ಎಂಬ ವಿಜ್ಞಾನಿ ಇದನ್ನು ಪತ್ತೆಹಚ್ಚಿದನು.
☞ ನೆಪ್ಚೂನ್ ಗ್ರಹದ ಉಪಗ್ರಹಗಳೆಂದರೆ- ಟ್ರೈಟನ್ ಮತ್ತು ನೆರೈಡ್.
☞ ಈ ಗ್ರಹದ ವಾತಾವರಣದಲ್ಲಿ ಹೈಡ್ರೋಜನ್ ಮತ್ತು ಹೀಲಿಯಮ್ ಅನಿಲಗಳಿವೆ.
☞ ಈ ಗ್ರಹದ ಪರಿಭ್ರಮಣ ಅವಧಿ 164.8 ವರ್ಷಗಳು.


ಈ ಮೇಲಿನ ವಿಷಯದಲ್ಲಿ ಹೊಸ ಪದಗಳ ಅರ್ಥ :
ಪರಿಭ್ರಮಣ ಅವಧಿ :- ಗ್ರಹವು ತನ್ನ ಅಕ್ಷದ ಮೇಲೆ ಸುತ್ತುತ್ತಾ ಸೂರ್ಯನನ್ನು ಒಂದು ಸುತ್ತು ಸುತ್ತಲೂ ತೆಗೆದುಕೊಳ್ಳುವ ಅವಧಿ(ವಾರ್ಷಿಕ ಚಲನೆ)
ಭ್ರಮಣ ಅವಧಿ :- ಗ್ರಹವು ತನ್ನ ಅಕ್ಷದ ಮೇಲೆ ಒಂದು ಸುತ್ತು ಸುತ್ತಲೂ ತೆಗೆದುಕೊಳ್ಳುವ ಅವಧಿ(ದೈನಂದಿನ ಚಲನೆ)

ಕರ್ನಾಟಕದ 7 ಅದ್ಭುತಗಳು | Seven Wonders of Karnataka

             'ವಿಶ್ವದ 7 ಅದ್ಭುತಗಳು’ ಇರುವ ರೀತಿಯಲ್ಲೇ ‘ಕರ್ನಾಟಕದ 7 ಅದ್ಭುತಗಳ'ನ್ನು ಗುರುತಿಸಲು ರಾಜ್ಯದ ನೆಲ, ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ‘ಕರ್ನಾಟಕದ 7 ಅದ್ಭುತಗಳ’ ಆಯ್ಕೆಗೆ ಮಹಾ ಅಭಿಯಾನ ಕೈಗೊಂಡಿತ್ತು. 

               ಈ  ಆಯ್ಕೆಯನ್ನು  ವೈಜ್ಞಾನಿಕ ವಿಧಾನದಿಂದ ಮಾಡಲಾಗಿದೆ. ಕರ್ನಾಟಕದ ಮೂಲೆ ಮೂಲೆಯ ಜನರಿಂದ 5000ಕ್ಕೂ ಹೆಚ್ಚು ನಾಮನಿರ್ದೇಶನ, 82 ಲಕ್ಷಕ್ಕೂ ಅಧಿಕ ಜನಮತ ಚಲಾವಣೆ, 1 ವರ್ಷದ ಸುದೀರ್ಘ ಸ್ಥಳ ಸಮೀಕ್ಷೆ, ಜಾಗತಿಕ ಪ್ರವಾಸೋದ್ಯಮ ಹಾಗೂ ಇತಿಹಾಸ ತಜ್ಞರನ್ನು ಒಳಗೊಂಡ 7 ಮಂದಿ ತೀರ್ಪುಗಾರರ ಸಮಿತಿಯ ವಿಚಾರ ಮಂಥನಗಳ ಮೂಲಕ  ‘ಕರ್ನಾಟಕದ 7 ಅದ್ಭುತಗಳ'ನ್ನು ಆಯ್ಕೆ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನಾಂಕ : 25/02/2023 ರಂದು ಶನಿವಾರ ಕರ್ನಾಟಕದ 7 ಅದ್ಭುತಗಳ ಪಟ್ಟಿ ಘೋಷಿಸಿದರು. ಅವುಗಳು ಈ ಕೆಳಗಿನಂತಿವೆ.

ಕರ್ನಾಟಕದ 7 ಅದ್ಭುತಗಳು | Seven Wonders of Karnataka

1. ಹಿರೇಬೆಣಕಲ್ ಶಿಲಾಸಮಾಧಿಗಳು : ಕ್ರಿ.ಪೂ.800ರಿಂದ 200ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನು ‘ಬೃಹತ್ ಶಿಲಾಯುಗದ ಅದ್ಭುತ’ ಎಂದು ಘೋಷಿಸಲಾಗಿದೆ.

2. ಹಂಪಿ : 14ರಿಂದ 16ನೇ ಶತಮಾನದ ನಡುವೆ ನಿರ್ಮಾಣಗೊಂಡ ‘ಭವ್ಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ ‘ಹಂಪಿ’ಯನ್ನು ‘ಪುರಾತತ್ವ ಅದ್ಭುತ’ ಎಂದು ಘೋಷಿಸಲಾಗಿದೆ.

3. ಗೊಮ್ಮಟೇಶ್ವರ : ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯ ನೆತ್ತಿಯಲ್ಲಿ 10ನೇ ಶತಮಾನದಲ್ಲಿ ಸ್ಥಾಪನೆಯಾದ 57 ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆಯನ್ನು ‘ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.

4. ಗೋಲಗುಮ್ಮಟ : 17ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್ ಆದಿಲ್ ಶಾಹ್ ನಿರ್ಮಿಸಿದ ಬೃಹತ್ ಗೋಲಗುಮ್ಮಟವು ‘ವಾಸ್ತು ವಿಜ್ಞಾನ ಅದ್ಭುತ’ವೆಂಬ ಗೌರವಕ್ಕೆ ಪಾತ್ರವಾಗಿದೆ.

5. ಮೈಸೂರು ಅರಮನೆ : 19-20ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು ‘ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.

6. ಜೋಗ ಜಲಪಾತ : ಭಾರತದಲ್ಲೇ ಅತಿ ಸುಂದರ ಎನಿಸಿರುವ, 830 ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ‘ನೈಸರ್ಗಿಕ ಅದ್ಭುತ-ನೆಲ’ ಎಂದು ಘೋಷಿಸಲಾಗಿದೆ.

7. ನೇತ್ರಾಣಿ ದ್ವೀಪ : ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪವನ್ನು ‘ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.


ಕರ್ನಾಟಕದ 7 ಅದ್ಭುತಗಳ ಪರಿಚಯ


1. ಹಿರೇಬೆಣಕಲ್ ಶಿಲಾ ಸಮಾಧಿಗಳು (ಬೃಹತ್ ಶಿಲಾಯುಗದ ಅದ್ಭುತ)

ಬಹುತೇಕ ಕನ್ನಡಿಗರಿಗೇ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು. ಸುಮಾರು 3000-4000 ವರ್ಷಗಳಷ್ಟು ಹಳೆಯ ಇತಿಹಾಸ ಇರುವ ತಾಣ. ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದ ಹಿರೇಬೆಣಕಲ್ ಗ್ರಾಮದ ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್ ಹೆಂಜಸ್, ಈಜಿಪ್ಟಿನ ಪಿರಮಿಡ್ಡುಗಳು, ಬಹರೈನಿನ ದಿಲ್ಮನ್ ಸಮಾಧಿ ದಿಬ್ಬಗಳಂತೆ - ಸಾವಿನ ಗೌರವ ಸೂಚಕಗಳು - ಈ ಶಿಲಾಸಮಾಧಿ ಡೋಲ್ಮನ್ ಗಳು. ವಿಶ್ವದ ಹಲವೆಡೆ ಇಂಥ ಡೋಲ್ಮನ್ ಗಳು ಇದ್ದು, ಕೊರಿಯಾ ಒಂದರಲ್ಲೇ ವಿಶ್ವದ ಶೇ.40ರಷ್ಟು ಡೋಲ್ಮನ್ ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10 ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ. ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.


2. ಹಂಪಿ (ಪುರಾತತ್ವ ಅದ್ಭುತ)
ರೋಮ್ ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು, ಜಗತ್ಪ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್ ನಿದರ್ಶನಗಳಿವೆ. ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ. ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.


3. ಗೋಲ ಗುಮ್ಮಟ (ವಾಸ್ತು ವಿಜ್ಞಾನ ಅದ್ಭುತ)

ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಶ್ವೇತ ಸುಂದರಿಯಾದರೆ, ಕರ್ನಾಟಕದ ಗೋಲ ಗುಮ್ಮಟ ಕೃಷ್ಣ ಸುಂದರಿ. ಜಗತ್ತಿನ ಅತಿ ದೊಡ್ಡ ಗುಮ್ಮಟಗಳಲ್ಲಿ ಒಂದು ವಿಜಯಪುರದ ಗೋಲ ಗುಮ್ಮಟ. ಇಂಡೋ-ಸಾರ್ಸೆನಿಕ್ ಶೈಲಿಯ ಈ ಬೃಹತ್ ಸ್ಮಾರಕ ಆದಿಲ್ ಶಾಹಿ ರಾಜಮನೆತನದ ಮಹಾನ್ ಸಮಾಧಿಯಾದರೂ ಪುರಾತತ್ವ ವಾಸ್ತುಶಾಸ್ತ್ರ, ರೇಖಾಗಣಿತ ಮತ್ತು ಶಬ್ದವಿಜ್ಞಾನಕ್ಕೂ ಅತ್ಯುತ್ತಮ ಉದಾಹರಣೆ. ನಾಲ್ಕು ಗೋಡೆಗಳ ಮೇಲೆ, ನಡುವೆ ಯಾವುದೇ ಆಧಾರಗಳಿಲ್ಲದೆ ಬಹುದೊಡ್ಡ ಗುಮ್ಮಟವೊಂದನ್ನು ನಿರ್ಮಿಸಿರುವುದು ವಾಸ್ತುಶಾಸ್ತ್ರಜ್ಞರ ಅಪ್ರತಿಮ ಕೌಶಲ್ಯಕ್ಕೆ ಸಾಕ್ಷಿ. ಅದಕ್ಕಿಂತ ಈ ಗುಮ್ಮಟದ ಶಬ್ದಚಾತುರ್ಯ ಅಮೋಘವಾದುದು. ಗುಮ್ಮಟದ ಒಂದು ಬದಿಯಲ್ಲಿ ಪಿಸುಮಾತನ್ನಾಡಿದರೂ ಅಷ್ಟು ದೂರದ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುಮ್ಮಟದಲ್ಲಿ ಒಂದು ಕೂಗು ಏಳು ಬಾರಿ ಮಾರ್ದನಿಸುತ್ತದೆ. ಈ ಶಬ್ದವೈಚಿತ್ರ್ಯವನ್ನು, ರೇಖಾಗಣಿತ ಆಧಾರಿತ ಕಟ್ಟಡ ವೈವಿಧ್ಯವನ್ನು ಪ್ರತಿನಿಧಿಸುವ ಕರ್ನಾಟಕದ ಅದ್ಭುತವೇ ಗೋಲ ಗುಮ್ಮಟ. ಅಷ್ಟೇ ಅಲ್ಲದೆ, ಕರ್ನಾಟಕದ ಅನೇಕ ಪ್ರಾಚೀನ ಹಾಗೂ ಆಧುನಿಕ ವಾಸ್ತು ವಿಜ್ಞಾನದ ಪ್ರಾತಿನಿಧಿಕವೂ ಹೌದು ಈ ಅದ್ಭುತ.


4. ಶ್ರವಣಬೆಳಗೊಳದ ಗೊಮ್ಮಟೇಶ್ವರ  (ತಾತ್ವಿಕ ಅದ್ಭುತ)

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ರಿಯೋ-ಡಿ-ಜನೈರೋದ ಕಿಸ್ತನ ಪ್ರತಿಮೆ ಹೇಗೋ, ನಮಗೆ ಕರ್ನಾಟಕದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಹಾಗೆ. ಇತ್ತೀಚೆಗೆ ರಾಜ್ಯದಲ್ಲಿ ಅತಿ ಎತ್ತರದ ಅನೇಕ ಏಕಶಿಲಾ ಪ್ರತಿಮೆಗಳು ರಚನೆಯಾಗುತ್ತಿದ್ದರೂ ಶ್ರವಣಬೆಳಗೊಳದ ಗೊಮ್ಮಟನ ನೂರಾರು ವರ್ಷದ ಇತಿಹಾಸಕ್ಕೆ ಅದ್ಯಾವುದೂ ಸಮವಾಗಲಾರದು. ಶ್ರವಣಬೆಳಗೊಳದ ಬಾಹುಬಲಿ - ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಆಯ್ಕೆಯಾಗಲು ಈ ಪ್ರತಿಮೆ ಜಗತ್ತಿನಾದ್ಯಂತ ಪ್ರಸಿದ್ಧ ಎನ್ನುವುದಷ್ಟೇ ಕಾರಣವಲ್ಲ. ಈ ಪ್ರತಿಮೆ ಕನ್ನಡನಾಡಿನ ಸಮರ-ಶಾಂತಿ ತತ್ವದ ಪ್ರಾತಿನಿಧಿಕ ಕುರುಹು. ಭರತ-ಬಾಹುಬಲಿಯ ಕಥೆಯನ್ನೊಮ್ಮೆ ಅವಲೋಕಿಸಿ. ನಾವು ಕನ್ನಡಿಗರೂ ಅಷ್ಟೇ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ. ನಮ್ಮ ಅಪಾರ ಶಕ್ತಿ ಸಾಮರ್ಥ್ಯ ಯಾರ ಮೇಲೋ ದಬ್ಬಾಳಿಕೆ ನಡೆಸಲು ಅಲ್ಲ. ಭರತನಂತೆ ಯಾರಾದರೂ ನಮ್ಮ ಮೇಲೆ ಹೋರಾಟಕ್ಕೆ ಇಳಿದಾಗ ಬಾಹುಬಲಿಯಾಗಿ ಅವರನ್ನು ಹೊಸಕಿ ಹಾಕುವುದು ನಮಗೆ ಕಷ್ಟವಲ್ಲ. ಆದರೂ ನಮ್ಮಷ್ಟಕ್ಕೆ ನಾವು ಗೊಮ್ಮಟನಂತೆ ಶಾಂತಿ ಪ್ರಿಯರು. ನಮ್ಮ ಈ "ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ" ತತ್ವದ ಪ್ರಾತಿನಿಧಿಕ ಅದ್ಭುತವೇ ಶ್ರವಣಬೆಳಗೊಳದ ಗೊಮ್ಮಟೇಶ್ವರ. ಅಷ್ಟೇ ಅಲ್ಲ, ಜಗತ್ತಿಗೆ ಅನೇಕ ತತ್ವಾದರ್ಶಗಳನ್ನು ನೀಡಿದ ಕನಕ, ಪುರಂದರ, ಬಸವ, ಮಧ್ವ, ಶಿಶುನಾಳ ಶರೀಫ ಮುಂತಾದ ಎಲ್ಲ ಕನ್ನಡನಾಡಿನ ಮಹನೀಯರ ತಾತ್ವಿಕ ಪ್ರತಿನಿಧಿಯೂ ಹೌದು ಈ ಅದ್ಭುತ.


5. ಮೈಸೂರು ಅರಮನೆ (ರಾಜಪರಂಪರಾ ಅದ್ಭುತ)

ಭಾರತದ ಅತ್ಯಂತ ಸುಂದರ ಅರಮನೆಗಳಲ್ಲಿ ಒಂದು ಮೈಸೂರಿನ ಅರಮನೆ ಎಂದೇ ಖ್ಯಾತವಾದ ಮೈಸೂರಿನ ಅಂಬಾವಿಲಾಸ ಅರಮನೆ. ಕರ್ನಾಟಕದ ಗತವೈಭವವನ್ನು ಭವ್ಯವಾಗಿ ಬಿಂಬಿಸುವ ಈ ಅರಮನೆ ದೀಪಾಲಂಕಾರಗೊಂಡಾಗಲಂತೂ ಬಂಗಾರದ ಅರಮನೆಯಂತೆಯೇ ಭಾಸವಾಗುತ್ತದೆ. ತಾಜ್ ಮಹಲಿನಷ್ಟೇ ಪ್ರವಾಸಿಗರನ್ನು ಸೆಳೆಯುವ ಈ ಅರಮನೆ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯೂ ಹೌದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇಷ್ಟೇ ಕಾರಣವಲ್ಲ. ಸುಮಾರು 400 ವರ್ಷಗಳ ಇತಿಹಾಸ ಇರುವ ರಾಜಪರಂಪರೆಯ ಮೈಸೂರು ದಸರಾ ಹಬ್ಬ ಇಂದಿಗೂ ಸಜೀವ ಸಂಸ್ಕೃತಿಯಾಗಿ ವಿಜ್ರಂಭಣೆಯಿಂದ ಆಚರಣೆಯಾಗುತ್ತಿದೆ. ಅಲ್ಲದೆ, ಮೈಸೂರಿನ ಒಡೆಯರು, ಅಭಿವೃದ್ಧಿ, ಆಧುನಿಕತೆ, ಆಡಳಿತದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅಣೆಕಟ್ಟೆ, ನೀರಾವರಿ, ವಿದ್ಯುತ್, ಬೀದಿದೀಪ, ಚಿನ್ನದ ಗಣಿ, ರೈಲ್ವೆಯಂತಹ ಅನೇಕ ಪ್ರಗತಿಪರ ಕೈಂಕರ್ಯದಲ್ಲಿ ಅಗ್ರಗಣ್ಯರಾಗಿದ್ದ ಮೈಸೂರು ಅರಸರು ದೇಶದ ಸ್ವಾತಂತ್ರ್ಯಕ್ಕೂ ಮುನ್ನವೇ ಪ್ರಜಾಪ್ರತಿನಿಧಿ ಸಭೆಯನ್ನೂ ನಡೆಸಿ ದೇಶಕ್ಕೇ ಮಾದರಿಯಾಗಿದ್ದರು. ಕರ್ನಾಟಕದಲ್ಲಿ ವಿಜಯನಗರ ಅರಸರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು... ಹೀಗೆ ಅನೇಕ ಹಿರಿ-ಕಿರಿಯ ಸಂಸ್ಥಾನಗಳ ಶ್ರೇಷ್ಠ ರಾಜಪರಂಪರೆಯಿದೆ. ಈ ಎಲ್ಲ ರಾಜ-ರಾಣಿಯರ ಕೊಡುಗೆ, ದಿಟ್ಟ, ಭವ್ಯ ಪರಂಪರೆಯ ಪ್ರಾತಿನಿಧಿಕ ಅದ್ಭುತವೇ ಮೈಸೂರು ಅರಮನೆ.


6. ಜೋಗ ಜಲಪಾತ (ನೈಸರ್ಗಿಕ ಅದ್ಭುತ - ನೆಲ)

ಭಾರತದ ಅತ್ಯಂತ ಸುಂದರ ಹಾಗೂ ಬೃಹತ್ ಜಲಪಾತಗಳಲ್ಲಿ ಜೋಗ ಜಲಪಾತ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. 830 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತ ಮಳೆಗಾಲದಲ್ಲಂತೂ ನೀರಿನಿಂದ ತುಂಬಿ ರಾಜಗಾಂಭೀರ್ಯವನ್ನು ಪಡೆಯುತ್ತದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜೋಗ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯಲ್ಲಿ ಒಂದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇವಿಷ್ಟೇ ಕಾರಣವಲ್ಲ. ಜೀವವೈವಿಧ್ಯಗಳಿಂದ ಶ್ರೀಮಂತವಾಗಿರುವ ಪಶ್ಚಿಮ ಘಟ್ಟಗಳು ಭೂಮಿಯ ಅತಿ ಅಪರೂಪದ ಕಾಡುಗಳಲ್ಲಿ ಒಂದು. ಅಂತಹ ಅದ್ಭುತ ನಿಸರ್ಗದಲ್ಲಿರುವ ಜೋಗದ ಪರಿಸರಲ್ಲಿ ಕರ್ನಾಟಕದ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲಗಳೂ ಇವೆ. ಶೋಲಾ ಕಾಡುಗಳಿಂದ ಹಿಡಿದು ದಟ್ಟ ನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದಲ್ಲಿ 6 ವೈವಿಧ್ಯ ಕಾಡುಗಳಿವೆ. ನಾಗರಹೊಳೆ, ದಾಂಡೇಲಿಯಂಥ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. ಕುದುರೆಮುಖ, ಕೊಡಗು, ಕೊಡಚಾದ್ರಿಯಂಥ ಹಸಿರು ಗಿರಿಧಾಮಗಳಿವೆ. ಶರಾವತಿಯಲ್ಲದೆ ಕಾವೇರಿ, ಕೃಷ್ಣೆ, ತುಂಗಭದ್ರಾದಂಥ ಅನೇಕ ಹಿರಿ-ಕಿರಿಯ ನದಿಗಳಿವೆ. ಹೆಬ್ಬೆ, ಗೋಕಾಕ್ ಫಾಲ್ಸ್, ಗಗನಚುಕ್ಕಿ, ಭರಚುಕ್ಕಿ, ಉಂಚಳ್ಳಿಯಂಥ ಹಲವಾರು ಸುಂದರ ಜಲಪಾತಗಳಿವೆ. ಈ ಎಲ್ಲ ಕರ್ನಾಟಕದ ನೆಲದ ಸೌಂದರ್ಯ ಮತ್ತು ಮಹತ್ವಗಳ ಪ್ರಾತಿನಿಧಿಕ ಅದ್ಭುತವೇ ಜೋಗ ಜಲಪಾತ.


7. ನೇತ್ರಾಣಿ ದ್ವೀಪ (ನೈಸರ್ಗಿಕ ಅದ್ಭುತ - ಜಲ) 
ಕರ್ನಾಟಕದ ಅದ್ಭುತಗಳೆಂದರೆ ಬರೀ ನೆಲದ ಮೇಲಿನ ಅದ್ಭುತಗಳಷ್ಟೇ ಅಲ್ಲ. ಕರ್ನಾಟಕದ ಅರಬ್ಬಿ ಸಮುದ್ರದ ಕಡಲಗರ್ಭವೂ ಕೂಡ ಅದ್ಭುತವೇ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ಇರುವ ನೇತ್ರಾಣಿ ದ್ವೀಪ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿದೆ. ಈ ದ್ವೀಪದ ಸುತ್ತ ಇರುವ ಸಮುದ್ರ ಗರ್ಭ ಎಷ್ಟು ಅದ್ಭುತವಾಗಿದೆಯೆಂದರೆ, ಸ್ಕೂಬಾ ಡೈವಿಂಗ್ ಮಾಡಲು ಭಾರತದಲ್ಲಿ ನೇತ್ರಾಣಿ ದ್ವೀಪ ಎರಡನೇ ಅತ್ಯುತ್ತಮ ಪ್ರದೇಶ. ಒಂದನೇ ಅತ್ಯುತ್ತಮ ಪ್ರದೇಶ ಅಂಡಮಾನ್ ದ್ವೀಪ. ನೇತ್ರಾಣಿ ದ್ವೀಪದ ಕಡಲ ಗರ್ಭದಲ್ಲಿ ಆರೋಗ್ಯಕರ ಹವಳದ ಬಂಡೆಗಳಿವೆ. ಅಪರೂಪದ ಜಲಚರಗಳಿವೆ. ಸಾಗರ ಸಸ್ಯಗಳಿವೆ. ಇನ್ನೊಂದು ಗಮನೀಯ ವಿಚಾರ ಎಂದರೆ, ದೇಶದ ಎಲ್ಲ ರಾಜ್ಯಗಳಿಗೂ ಸಮುದ್ರ ಸೌಂದರ್ಯವಿಲ್ಲ. ಆದರೆ, ಕರ್ನಾಟಕದಲ್ಲಿ 310 ಕಿ.ಮೀ.ಯಷ್ಟು ಅದ್ಭುತ ಸಮುದ್ರ ಕಿನಾರೆಯಿದೆ. ನೇತ್ರಾಣಿ ಬಳಿ ಇರುವ ಮುರುಡೇಶ್ವರ ಈಗಾಗಲೇ ಕರ್ನಾಟಕದ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ರಾಜ್ಯದ ಸಾಗರ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೇರಳ ಅವಕಾಶಗಳನ್ನು ಹೊಂದಿದೆ. ಇದರಿಂದ ಕರ್ನಾಟಕದ ಎಲ್ಲ ಸಮುದ್ರ ಕಿನಾರೆಗಳ ಪ್ರಾತಿನಿಧಿಕ ಅದ್ಭುತವೇ ನೇತ್ರಾಣಿ ದ್ವೀಪದ ಕಡಲಗರ್ಭ.

ಪ್ರಪಂಚದ 4 ಮಹಾಸಾಗರಗಳು | 4 Oceans of the-World

ಪ್ರಪಂಚದ 4 ಮಹಾಸಾಗರಗಳ ನಕಾಶೆ
        ಭೂಮಿಯ ಮೇಲೆ 361ದಶಲಕ್ಷ ಚದರ ಕಿ.ಮೀ ಭಾಗ ನೀರಿನಿಂದ ಆವರಿಸಿದ್ದು, ಭೂಮಿಯ ಮೇಲೆ ನೀರಿನ ಪ್ರಮಾಣ 70.78% ಆಗಿದೆ. ಭೂಮಿಯ ಮೇಲಿನ ವಿಸ್ತಾರವಾದ ಜಲರಾಶಿಯನ್ನು ಮಹಾಸಾಗರಗಳೆಂದು ಕರೆಯುತ್ತಾರೆ. ಅವುಗಳನ್ನು ನಾಲ್ಕು ಮಹಾಸಾಗರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ ಸಾಗರ.
           ಪೆಸಿಫಿಕ್ ಸಾಗರವು ಅತಿ ದೊಡ್ಡದು ಹಾಗೂ ಹೆಚ್ಚು ಆಳವಾಗಿದೆ ಆರ್ಕ್ಟಿಕ್ ಸಾಗರ ಅತಿ ಚಿಕ್ಕದು ಮತ್ತು ಕಡಿಮೆ ಆಳ ಹೊಂದಿದೆ. 

1. ಪೆಸಿಫಿಕ್ ಮಹಾಸಾಗರ  : 
✯ಪ್ರಪಂಚದ ಅತ್ಯಂತ ದೊಡ್ಡ ಸಾಗರವಾಗಿದೆ.  
✯ಈ ಮಹಾಸಾಗರ ಅತ್ಯಂತ ಆಳವಾಗಿದೆ. 
✯ಈ ಮಹಾಸಾಗರದಲ್ಲಿ ಅತಿ ಹೆಚ್ಚು ಸಂಖ್ಯೆಯ ದ್ವೀಪ ಸಮೂಹಗಳಿವೆ. 
✯ಸಾ.ಶ 1521 ರಲ್ಲಿ ಪೋರ್ಚುಗೀಸ್ ಪರಿಶೋಧಕ ಫರ್ನಾಂಡೊ ಮ್ಯಾಗೆಲ್ಲನ್ ಈ ಮಹಾ‌ಸಾಗರಕ್ಕೆ (ಫೆಸಿಫಿಕ್ ಮಹಾಸಾಗರ)  ನಾಮಕರಣ ಮಾಡಿದರು.
✯ಅಮೆರಿಕಾ ಭೂಖಂಡಗಳ ಪಶ್ಚಿಮಕ್ಕೆ ಹಾಗೂ ಏಷ್ಯಾ ಮತ್ತು ಆಸ್ಟ್ರೇಲಿಯಾ ಭೂಖಂಡಗಳ ಪೂರ್ವದ ಪ್ರದೇಶದಲ್ಲಿ ಕಂಡುಬರುತ್ತದೆ.
✯ಇದನ್ನು 'ಶಾಂತಮಹಾಸಾಗರ' ಎಂದು ಕರೆಯುತ್ತಾರೆ. 
✯ಫೆಸಿಫಿಕ್ ಸಾಗರ ಎನ್ನುವ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದೆ.

2. ಅಟ್ಲಾಂಟಿಕ್ ಸಾಗರ : 
✯ಎರಡನೇ ಅತಿ ದೊಡ್ಡ ಮಹಾಸಾಗರವಾಗಿದೆ. 
✯ಭೂಖಂಡಗಳ ಪೂರ್ವಕ್ಕೆ ಮತ್ತು ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ಪಶ್ಚಿಮಕ್ಕೆ ಈ ಮಹಾಸಾಗರ ವ್ಯಾಪಿಸಿದೆ.
✯ಇಂಗ್ಲೀಷ್ ನ S ಅಕ್ಷರ ಹೋಲುವ ಮಹಾ‌ಸಾಗರವಾಗಿದೆ. 

3. ಹಿಂದೂ ಮಹಾಸಾಗರ : 
✯ಮೂರನೇ ದೊಡ್ಡ ಮಹಾಸಾಗರ. 
✯ದೇಶವೊಂದರ ಹೆಸರಿನಿಂದ ಕರೆಯಲ್ಪಡುವ ಏಕೈಕ ಸಾಗರ. 
✯ಹಿಂದೂ ಮಾಹಾಸಾಗರದಲ್ಲಿ ಅತ್ಯಂತ ಉದ್ದವಾದ ಕಡಲ ತೀರವನ್ನು ಹೊಂದಿರುವ ದೇಶ ಭಾರತ.
✯ಏಷ್ಯ ಖಂಡದ ದಕ್ಷಿಣ ಭಾಗ ಮತ್ತು ಆಸ್ಟ್ರೇಲಿಯ ಖಂಡದ ಉತ್ತರದಲ್ಲಿ ಕಂಡುಬರುತ್ತದೆ.

4. ಆರ್ಕ್ಟಿಕ್ ಸಾಗರ : 
✯ಈ ಮಹಾಸಾಗರ ಅತಿ ಶೀತಲ ಮಹಾಸಾಗರವಾಗಿದೆ. 
✯ಪ್ರಪಂಚದ ಅತ್ಯಂತ ಚಿಕ್ಕ ಸಾಗರವಾಗಿದೆ.
ಮಹಾಸಾಗರ.
✯ಅರ್ಕ್ಟಿಕ್ ಮಹಾಸಾಗರವು ಉತ್ತರಧ್ರುವ ಪ್ರದೇಶದ ಸುತ್ತಲೂ ಆವರಿಸಿಕೊಂಡಿದೆ.

ಪ್ರಪಂಚದ ಏಳು ಖಂಡಗಳು | 7 Continents of the World

ಪ್ರಪಂಚದ ನಕಾಶೆ 

ಭೂಮಿಯು ಒಟ್ಟು 500ದಶಲಕ್ಷ ಚದರ ಕಿ.ಮೀ ಭೌಗೋಳಿಕ ಕ್ಷೇತ್ರ ಹೊಂದಿದ್ದು, 149ದಶಲಕ್ಷ ಚದರ ಕಿ.ಮೀ (29.22%) ಮಾತ್ರ ಭೂ ಭಾಗ ಹೊಂದಿದೆ. ಭೂಮಿಯಲ್ಲಿನ ಭೂಭಾಗಗಳನ್ನು ಖಂಡಗಳೆಂದು ಕರೆಯುತ್ತಾರೆ. ಇಡೀ ಭೂಭಾಗವನ್ನು ಏಳು ಖಂಡಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಏಷಿಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕ, ಯುರೋಪ್ ಮತ್ತು ಆಸ್ಟ್ರೇಲಿಯಾ. 
      ಏಷ್ಯಾ ಅತಿದೊಡ್ಡ ಖಂಡವಾಗಿದ್ದು, ಆಸ್ಟ್ರೇಲಿಯಾ ಅತಿ ಚಿಕ್ಕ ಖಂಡವಾಗಿದೆ.

1. ಏಷ್ಯ : 
✯ವಿಶ್ವದಲ್ಲಿಯೇ ಭೂಪ್ರದೇಶ ಮತ್ತು ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ಖಂಡ ಏಷ್ಯಾ.  
✯ಭೂಭಾಗದ ಮೂರನೇಯ ಒಂದು (⅓) ಭಾಗವನ್ನು  ಏಷ್ಯಾ ಖಂಡ ಹೊಂದಿದೆ.  ✯ಏಷ್ಯಾವನ್ನು 'ವೈವಿಧ್ಯಗಳ ಖಂಡ' ಎಂದು ಕರೆಯುತ್ತಾರೆ.
✯ವಿಶ್ವದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಏಷ್ಯಾ ಖಂಡದಲ್ಲಿದೆ.   
✯ಈ ಖಂಡದಲ್ಲಿ ಅರೇಬಿಯಾ, ಥಾರ್  ಮರುಭೂಮಿಗಳಿವೆ.
✯ಬೆಳೆಗಳು: ಧಾನ್ಯಗಳು, ಬೇಳೆಕಾಳು, ಕಾಫಿ, ಚಹ, ಎಣ್ಣೆಬೀಜಗಳು
✯ಖನಿಜಗಳು: ಕಲ್ಲಿದ್ದಲು, ಕಬ್ಬಿಣ, ಮ್ಯಾಂಗನೀಸ್, ಬಾಕ್ಸೈಟ್, ಪೆಟ್ರೋಲಿಯಂ
✯ಏಷ್ಯಾ ಖಂಡದಲ್ಲಿ ವಿಸ್ತೀರ್ಣದ ಪ್ರಕಾರ ರಷ್ಯಾ ಅತಿದೊಡ್ಡ ದೇಶವಾದರೆ, ಮಾಲ್ಡೀವ್ಸ್ ಅತ್ಯಂತ ಚಿಕ್ಕ ದೇಶವಾಗಿದೆ.
✯ಈ ಖಂಡದಲ್ಲಿ ಭಾರತ, ಪಾಕಿಸ್ತಾನ, ಚೀನಾ, ಜಪಾನ್, ಶ್ರೀಲಂಕಾ, ಸೌದಿ ಅರೇಬಿಯಾ, ಇರಾನ್, ಇರಾಕ್, ಮಲೇಷ್ಯಾ, ಫಿಲಿಪೈನ್ಸ್‌ನಂತಹ 50 ದೇಶಗಳಿವೆ.
✯ಮುಖ್ಯ ನಗರಗಳು : ನವದೆಹಲಿ, ಮುಂಬಯಿ, ಟೋಕಿಯ, ಕೊಲೊಂಬೊ, ಬ್ಯಾಂಕಾಕ್, ತಾಷ್ಕೆಂಟ್,ಸಿಂಗಾಪುರ, ಜಕಾರ್ತ, ಕೌಲಾಲಂಪುರ‌


2. ಆಫ್ರಿಕ :
✯ಪ್ರಪಂಚದ ಎರಡನೇ ದೊಡ್ಡ ಖಂಡವಾಗಿದೆ.
✯ಈ ಖಂಡದಲ್ಲಿ 52 ದೇಶಗಳಿವೆ.
✯ಉಷ್ಟ್ರ ಪಕ್ಷಿ ಕಂಡುಬರುತ್ತದೆ.
✯ನೈಲ್ ನದಿ ಈ ಖಂಡದಲ್ಲಿದೆ.
✯ ಈ ಖಂಡವನ್ನು 'ಕತ್ತಲೆಯ ಖಂಡ' ಎಂದು ಕರೆಯಲಾಗುತ್ತಿತ್ತು.
✯ವಜ್ರಗಳು ಮತ್ತು ಚಿನ್ನದ ಉತ್ಪಾದನೆಗೆ ಹೆಸರುವಾಸಿಯಾದ ಖಂಡ.
✯ಈ ಖಂಡದ ಮೂರನೇ ಒಂದು ಭಾಗ(⅓) ಮರುಭೂಮಿ ಹೊಂದಿದೆ. 
✯ವಿಷಯವೆಂದರೆ ಇಲ್ಲೇ ಮೊದಲ ಮಾನವ ಜನನ ಮತ್ತು ಬೆಳವಣಿಗೆಯಾಗಿದೆ.
✯ಬೆಳೆಗಳು: ಗೋಧಿ, ಕೋಕೋ, ತಾಳೆ, ನೆಲಗಡಲೆ, ಕಾಫಿ, ಹತ್ತಿ, ಮೆಕ್ಕೆಜೋಳ.
✯ ಮುಖ್ಯ ನಗರಗಳು: ಕೈರೊ, ಲುಸಾಕ, ಕೇಪ್ ಟೌನ್, ಮೊಂಬಾಸ, ನೈರೋಬಿ, ಹರಾರೆ, ಪ್ರಿಟೋರಿಯಾ. 


3. ಉತ್ತರ ಅಮೇರಿಕ :
✯ವಿಶ್ವದ ಮೂರನೇಯ ದೊಡ್ಡ  ಖಂಡವಾಗಿದೆ.  
✯ಇದು ವಿಶ್ವದ 16% ನಷ್ಟು ಭಾಗವನ್ನು ಹೊಂದಿದೆ.
✯ಈ ಖಂಡದಲ್ಲಿ 24 ದೇಶಗಳಿವೆ.
✯ ಈ ಖಂಡದ 79% ನಷ್ಟು  ಭೂಭಾಗವನ್ನು ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್  ದೇಶಗಳು ಹೊಂದಿವೆ.
✯ಈ ಖಂಡವು ಅತ್ಯಂತ ಉದ್ದದ ಕಡಲತೀರವನ್ನು ಹೊಂದಿದೆ.
✯ಪಶ್ಚಿಮಾರ್ಧಗೋಳದ ಉತ್ತರದಲ್ಲಿರುವ ಈ ಖಂಡ ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಮಧ್ಯ ಅಮೇರಿಕಾ ಇವುಗಳನ್ನು ಒಳಗೊಂಡಿರುತ್ತದೆ.
✯ಬೆಳೆಗಳು: ಬೇಳೆಕಾಳುಗಳು , ಹೊಗೆಸೊಪ್ಪು, ಆಲೂಗೆಡ್ಡೆ ಇತ್ಯಾದಿ.
✯ಖನಿಜಗಳು: ಚಿನ್ನ,  ಕಲ್ಲಿದ್ದಲು, ಪೆಟ್ರೋಲಿಯಂ, ಕಬ್ಬಿಣ, ಮ್ಯಾಂಗನೀಸ್, ತಾಮ್ರ ಇತ್ಯಾದಿ
✯ಮುಖ್ಯ ನಗರಗಳು: ನ್ಯೂಯಾರ್ಕ್‌, ವಾಷಿಂಗ್ಟನ್  ಡಿ.ಸಿ, ಸ್ಯಾನ್ ಫ್ರಾನ್ಸಿಸ್ಕೊ, ಷಿಕಾಗೊ, ಮೆಕ್ಸಿಕೋ,  ಮಾಂಟ್ರಿಯಲ್, ಒಟ್ಟಾವ, ಜಮೈಕಾ.

4. ದಕ್ಷಿಣ ಅಮೇರಿಕ :
✯ವಿಶ್ವದ ನಾಲ್ಕನೇ ಅತಿದೊಡ್ಡ ಖಂಡವಾಗಿದೆ.
✯ಈ ಖಂಡದಲ್ಲಿ  13 ದೇಶಗಳಿವೆ.
✯ಈ  ಖಂಡವನ್ನು ಸಾಮಾನ್ಯವಾಗಿ 'ಹುಲ್ಲುಗಾವಲುಗಳ ನಾಡು' ಎಂದು ಕರೆಯುತ್ತಾರೆ.
✯ದಕ್ಷಿಣ ಅಮೆರಿಕಾದಲ್ಲಿ ಬ್ರೆಜಿಲ್ ಅತಿದೊಡ್ಡ ದೇಶ ಮತ್ತು ಫಾಕ್ಲ್ಯಾಂಡ್ ಅತ್ಯಂತ ಚಿಕ್ಕ ದೇಶವಾಗಿದೆ. 
✯ಬೆಳೆಗಳು: ಕೋಕೋ, ಕಾಫಿ, ಕಬ್ಬು, ರಬ್ಬರ್ , ಬೇಳೆಕಾಳುಗಳು ಇತ್ಯಾದಿ
✯ಖನಿಜಗಳು: ಚಿನ್ನ, ಬೆಳ್ಳಿ, ತಾಮ್ರ,ತವರ, ವಜ್ರ, ನೈಟ್ರೇಟ್ ಗಳು.
✯ಮುಖ್ಯ ನಗರಗಳು: ರಿಯೊಡಿ ಜುನೈರೊ, ಟ್ರಿನಿಡಾಡ್, ಬ್ಯೂನಸ್ ಐರಸ್, ಲಾಪಾಜ್, ಬೊಗೋಟ.

5. ಅಂಟಾರ್ಟಿಕ :
✯ವಿಶ್ವದ ಐದನೇ ಅತಿದೊಡ್ಡ ಖಂಡವಾಗಿದೆ.  
✯ಈ ಖಂಡದ 98% ಪ್ರದೇಶವು ಹಿಮದಿಂದ ಆವೃತವಾಗಿದೆ ಆದ್ದರಿಂದ  ಜನ ವಸತಿ ಇಲ್ಲ.
✯ಇಲ್ಲಿ ವಿಜ್ಞಾನಿಗಳು ಸಂಶೋಧನೆ ಕೈಗೊಳ್ಳುವ ಕಾರಣಕ್ಕೆ  ವಿಜ್ಞಾನಿಗಳ ಖಂಡ ಎಂದು ಕರೆಯುತ್ತಾರೆ.
✯ಹೆಚ್ಚು  ಹಿಮದಿಂದ ಆವೃತವಾಗಿದ್ದರಿಂದ 'ಶ್ವೇತ  ಖಂಡ', 'ಹಿಮದ ಮರುಭೂಮಿ' & 'ಶೀತಲ ಖಂಡ' ಎಂದು ಕರೆಯುತ್ತಾರೆ. 
✯ಪ್ರಾಣಿಗಳು : ಪೆಂಗ್ವಿನ್, ಸೀಲ್ ಗಳು
✯ಈ ಖಂಡದಲ್ಲಿರುವ ಭಾರತದ ಸಂಶೋಧನಾ ಕೇಂದ್ರಗಳು : 
1. ದಕ್ಷಿಣ ಗಂಗೋತ್ರಿ
2. ಮೈತ್ರಿ
3. ಭಾರತಿ (ಸ್ಥಾಪಿಸಲು ಯೋಚಿಸಿದೆ)


6. ಯೂರೋಪ್ :
✯ಇದು ವಿಶ್ವದ ಆರನೇ ಅತಿದೊಡ್ಡ ಖಂಡವಾಗಿದೆ. 
✯ಬೆಳೆಗಳು : ಬೇಳೆಕಾಳುಗಳು, ಹಣ್ಣುಗಳು, ಆಲೂಗೆಡ್ಡೆ  ಅರಣ್ಯ ಉತ್ಪನ್ನಗಳು
✯ಕೈಗಾರಿಕೆಗಳು: ಕಬ್ಬಿಣ & ಉಕ್ಕಿನ ಕೈಗಾರಿಕೆ, ಹತ್ತಿ ಬಟ್ಟೆ ಕೈಗಾರಿಕೆ, ಹಡಗು ಕಟ್ಟುವ ಕೈಗಾರಿಕೆ & ಸ್ವಯಂಚಾಲಿತ ವಾಹನ ಕೈಗಾರಿಕೆ.
✯ಮುಖ್ಯ ದೇಶಗಳು : ಹಂಗೇರಿ, ನಾರ್ವೆ, ಸ್ವೀಡನ್, ಆಸ್ಟ್ರಿಯಾ, ರೊಮೇನಿಯಾ, ಯು.ಕೆ, ಪ್ರಾನ್ಸ್, ಜರ್ಮನಿ, ಪೋಲೆಂಡ್. ಒಟ್ಟು 56 ದೇಶ ವಿದೇಶಗಳನ್ನು ಹೊಂದಿದೆ.
✯ಮುಖ್ಯ ನಗರಗಳು: ಲಂಡನ್, ಬಾನ್, ಬರ್ನ್, ಪ್ಯಾರಿಸ್, ಮ್ಯೂನಿಕ್, ಬರ್ಲಿನ್, ಬುಡಾಪೆಸ್ಟ್, ಮಾಸ್ಕೊ, ಓಸೊ.

 7. ಆಸ್ಟ್ರೇಲಿಯ :
✯ಆ‌ಸ್ಟ್ರೇಲಿಯಾ ದ್ವೀಪ ಖಂಡಿತವಾಗಿದೆ.  ವಿಶೇಷವೆಂದರೆ ಏಕಕಾಲದಲ್ಲಿ ಖಂಡ, ರಾಷ್ಟ್ರ ಮತ್ತು ದ್ವೀಪವೆಂದು ಪರಿಗಣಿಸಲ್ಪಟ್ಟ ಏಕೈಕ ಸ್ಥಳ ಆಸ್ಟ್ರೇಲಿಯಾ.
✯ಈ ಖಂಡವನ್ನು 'ಅತ್ಯಂತ ಸಮಟ್ಟಾದ ಭೂಖಂಡ' & 'ಮರಭೂಮಿಯ ಭೂಖಂಡ'  ಎಂದು ಕರೆಯುತ್ತಾರೆ.
✯ಬೆಳೆಗಳು : ಗೋಧಿ, ಕಬ್ಬು, ಹತ್ತಿ, ತಂಬಾಕು ಇತ್ಯಾದಿ.
✯ಖನಿಜಗಳು: ಕಬ್ಬಿಣ, ಬಾಕ್ಸೈಟ್, ನಿಕ್ಕರ್, ತಾಮ್ರ, ಮ್ಯಾಂಗನೀಸ್, ಚಿನ್ನ, ತಾಮ್ರ, ಸೀಸ ಮತ್ತು ಯುರೇನಿಯಂ.
✯ಕೈಗಾರಿಕೆಗಳು: ಉಣ್ಣೆ, ಮರ, ಚಿನ್ನ, ಕಬ್ಬಿಣದ ಆದಿರು
✯ಮುಖ್ಯನಗರಗಳು: ಸಿಡ್ನಿ, ಮೆಲ್ಬೋರ್ನ್,ಅಡಿಲೇಡ್ 

ದಿಕ್ಕುಗಳು - (Directions) ಸಂಪೂರ್ಣ ಮಾಹಿತಿ

    ದಿನನಿತ್ಯ ಜೀವನದಲ್ಲಿ,  ಇತಿಹಾಸ & ಭೂಗೋಳಶಾಸ್ತ್ರದಲ್ಲಿ ಹೆಚ್ಚಾಗಿ ಬಳಸುವ ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನವಾಗಿದೆ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು
     ಕನ್ನಡ           ಸಂಸ್ಕೃತ        ಇಂಗ್ಲೀಷ್ 
ಮೂಡಣ     -    ಪೂರ್ವ     -    East
ಪಡುವಣ     -    ಪಶ್ಚಿಮ      -    West
 ಬಡಗಣ       -    ಉತ್ತರ      -    North
  ತೆಂಕಣ        -    ದಕ್ಷಿಣ       -    South 



ಉಪ ದಿಕ್ಕುಗಳು
 ವಾಯವ್ಯ  -   North West
   ನೈರುತ್ಯ      -   South West  
ಆಗ್ನೇಯ   -   South East
 ಈಶಾನ್ಯ     -   North East