Menu

Home ನಲಿಕಲಿ About ☰ Menu


 

🔍

ಪ್ರಪಂಚದ ಏಳು ಖಂಡಗಳು | 7 Continents of the World

ಪ್ರಪಂಚದ ನಕಾಶೆ 

ಭೂಮಿಯು ಒಟ್ಟು 500ದಶಲಕ್ಷ ಚದರ ಕಿ.ಮೀ ಭೌಗೋಳಿಕ ಕ್ಷೇತ್ರ ಹೊಂದಿದ್ದು, 149ದಶಲಕ್ಷ ಚದರ ಕಿ.ಮೀ (29.22%) ಮಾತ್ರ ಭೂ ಭಾಗ ಹೊಂದಿದೆ. ಭೂಮಿಯಲ್ಲಿನ ಭೂಭಾಗಗಳನ್ನು ಖಂಡಗಳೆಂದು ಕರೆಯುತ್ತಾರೆ. ಇಡೀ ಭೂಭಾಗವನ್ನು ಏಳು ಖಂಡಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಏಷಿಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕ, ಯುರೋಪ್ ಮತ್ತು ಆಸ್ಟ್ರೇಲಿಯಾ. 
      ಏಷ್ಯಾ ಅತಿದೊಡ್ಡ ಖಂಡವಾಗಿದ್ದು, ಆಸ್ಟ್ರೇಲಿಯಾ ಅತಿ ಚಿಕ್ಕ ಖಂಡವಾಗಿದೆ.

1. ಏಷ್ಯ : 
ವಿಶ್ವದಲ್ಲಿಯೇ ಭೂಪ್ರದೇಶ ಮತ್ತು ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ಖಂಡ ಏಷ್ಯಾ.  
ಭೂಭಾಗದ ಮೂರನೇಯ ಒಂದು (⅓) ಭಾಗವನ್ನು  ಏಷ್ಯಾ ಖಂಡ ಹೊಂದಿದೆ.  ಏಷ್ಯಾವನ್ನು 'ವೈವಿಧ್ಯಗಳ ಖಂಡ' ಎಂದು ಕರೆಯುತ್ತಾರೆ.
ವಿಶ್ವದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಏಷ್ಯಾ ಖಂಡದಲ್ಲಿದೆ.   
ಈ ಖಂಡದಲ್ಲಿ ಅರೇಬಿಯಾ, ಥಾರ್  ಮರುಭೂಮಿಗಳಿವೆ.
ಬೆಳೆಗಳು: ಧಾನ್ಯಗಳು, ಬೇಳೆಕಾಳು, ಕಾಫಿ, ಚಹ, ಎಣ್ಣೆಬೀಜಗಳು
ಖನಿಜಗಳು: ಕಲ್ಲಿದ್ದಲು, ಕಬ್ಬಿಣ, ಮ್ಯಾಂಗನೀಸ್, ಬಾಕ್ಸೈಟ್, ಪೆಟ್ರೋಲಿಯಂ
ಏಷ್ಯಾ ಖಂಡದಲ್ಲಿ ವಿಸ್ತೀರ್ಣದ ಪ್ರಕಾರ ರಷ್ಯಾ ಅತಿದೊಡ್ಡ ದೇಶವಾದರೆ, ಮಾಲ್ಡೀವ್ಸ್ ಅತ್ಯಂತ ಚಿಕ್ಕ ದೇಶವಾಗಿದೆ.
ಈ ಖಂಡದಲ್ಲಿ ಭಾರತ, ಪಾಕಿಸ್ತಾನ, ಚೀನಾ, ಜಪಾನ್, ಶ್ರೀಲಂಕಾ, ಸೌದಿ ಅರೇಬಿಯಾ, ಇರಾನ್, ಇರಾಕ್, ಮಲೇಷ್ಯಾ, ಫಿಲಿಪೈನ್ಸ್‌ನಂತಹ 50 ದೇಶಗಳಿವೆ.
ಮುಖ್ಯ ನಗರಗಳು : ನವದೆಹಲಿ, ಮುಂಬಯಿ, ಟೋಕಿಯ, ಕೊಲೊಂಬೊ, ಬ್ಯಾಂಕಾಕ್, ತಾಷ್ಕೆಂಟ್,ಸಿಂಗಾಪುರ, ಜಕಾರ್ತ, ಕೌಲಾಲಂಪುರ‌


2. ಆಫ್ರಿಕ :
ಪ್ರಪಂಚದ ಎರಡನೇ ದೊಡ್ಡ ಖಂಡವಾಗಿದೆ.
ಈ ಖಂಡದಲ್ಲಿ 52 ದೇಶಗಳಿವೆ.
ಉಷ್ಟ್ರ ಪಕ್ಷಿ ಕಂಡುಬರುತ್ತದೆ.
ನೈಲ್ ನದಿ ಈ ಖಂಡದಲ್ಲಿದೆ.
ಈ ಖಂಡವನ್ನು 'ಕತ್ತಲೆಯ ಖಂಡ' ಎಂದು ಕರೆಯಲಾಗುತ್ತಿತ್ತು.
ವಜ್ರಗಳು ಮತ್ತು ಚಿನ್ನದ ಉತ್ಪಾದನೆಗೆ ಹೆಸರುವಾಸಿಯಾದ ಖಂಡ.
ಈ ಖಂಡದ ಮೂರನೇ ಒಂದು ಭಾಗ(⅓) ಮರುಭೂಮಿ ಹೊಂದಿದೆ. 
ವಿಷಯವೆಂದರೆ ಇಲ್ಲೇ ಮೊದಲ ಮಾನವ ಜನನ ಮತ್ತು ಬೆಳವಣಿಗೆಯಾಗಿದೆ.
ಬೆಳೆಗಳು: ಗೋಧಿ, ಕೋಕೋ, ತಾಳೆ, ನೆಲಗಡಲೆ, ಕಾಫಿ, ಹತ್ತಿ, ಮೆಕ್ಕೆಜೋಳ.
 ಮುಖ್ಯ ನಗರಗಳು: ಕೈರೊ, ಲುಸಾಕ, ಕೇಪ್ ಟೌನ್, ಮೊಂಬಾಸ, ನೈರೋಬಿ, ಹರಾರೆ, ಪ್ರಿಟೋರಿಯಾ. 


3. ಉತ್ತರ ಅಮೇರಿಕ :
ವಿಶ್ವದ ಮೂರನೇಯ ದೊಡ್ಡ  ಖಂಡವಾಗಿದೆ.  
ಇದು ವಿಶ್ವದ 16% ನಷ್ಟು ಭಾಗವನ್ನು ಹೊಂದಿದೆ.
ಈ ಖಂಡದಲ್ಲಿ 24 ದೇಶಗಳಿವೆ.
 ಖಂಡದ 79% ನಷ್ಟು  ಭೂಭಾಗವನ್ನು ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್  ದೇಶಗಳು ಹೊಂದಿವೆ.
ಈ ಖಂಡವು ಅತ್ಯಂತ ಉದ್ದದ ಕಡಲತೀರವನ್ನು ಹೊಂದಿದೆ.
ಪಶ್ಚಿಮಾರ್ಧಗೋಳದ ಉತ್ತರದಲ್ಲಿರುವ ಈ ಖಂಡ ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಮಧ್ಯ ಅಮೇರಿಕಾ ಇವುಗಳನ್ನು ಒಳಗೊಂಡಿರುತ್ತದೆ.
ಬೆಳೆಗಳು: ಬೇಳೆಕಾಳುಗಳು , ಹೊಗೆಸೊಪ್ಪು, ಆಲೂಗೆಡ್ಡೆ ಇತ್ಯಾದಿ.
ಖನಿಜಗಳು: ಚಿನ್ನ,  ಕಲ್ಲಿದ್ದಲು, ಪೆಟ್ರೋಲಿಯಂ, ಕಬ್ಬಿಣ, ಮ್ಯಾಂಗನೀಸ್, ತಾಮ್ರ ಇತ್ಯಾದಿ
ಮುಖ್ಯ ನಗರಗಳು: ನ್ಯೂಯಾರ್ಕ್‌, ವಾಷಿಂಗ್ಟನ್  ಡಿ.ಸಿ, ಸ್ಯಾನ್ ಫ್ರಾನ್ಸಿಸ್ಕೊ, ಷಿಕಾಗೊ, ಮೆಕ್ಸಿಕೋ,  ಮಾಂಟ್ರಿಯಲ್, ಒಟ್ಟಾವ, ಜಮೈಕಾ.

4. ದಕ್ಷಿಣ ಅಮೇರಿಕ :
ವಿಶ್ವದ ನಾಲ್ಕನೇ ಅತಿದೊಡ್ಡ ಖಂಡವಾಗಿದೆ.
ಈ ಖಂಡದಲ್ಲಿ  13 ದೇಶಗಳಿವೆ.
ಈ  ಖಂಡವನ್ನು ಸಾಮಾನ್ಯವಾಗಿ 'ಹುಲ್ಲುಗಾವಲುಗಳ ನಾಡು' ಎಂದು ಕರೆಯುತ್ತಾರೆ.
ದಕ್ಷಿಣ ಅಮೆರಿಕಾದಲ್ಲಿ ಬ್ರೆಜಿಲ್ ಅತಿದೊಡ್ಡ ದೇಶ ಮತ್ತು ಫಾಕ್ಲ್ಯಾಂಡ್ ಅತ್ಯಂತ ಚಿಕ್ಕ ದೇಶವಾಗಿದೆ. 
ಬೆಳೆಗಳು: ಕೋಕೋ, ಕಾಫಿ, ಕಬ್ಬು, ರಬ್ಬರ್ , ಬೇಳೆಕಾಳುಗಳು ಇತ್ಯಾದಿ
ಖನಿಜಗಳು: ಚಿನ್ನ, ಬೆಳ್ಳಿ, ತಾಮ್ರ,ತವರ, ವಜ್ರ, ನೈಟ್ರೇಟ್ ಗಳು.
ಮುಖ್ಯ ನಗರಗಳು: ರಿಯೊಡಿ ಜುನೈರೊ, ಟ್ರಿನಿಡಾಡ್, ಬ್ಯೂನಸ್ ಐರಸ್, ಲಾಪಾಜ್, ಬೊಗೋಟ.

5. ಅಂಟಾರ್ಟಿಕ :
ವಿಶ್ವದ ಐದನೇ ಅತಿದೊಡ್ಡ ಖಂಡವಾಗಿದೆ.  
ಈ ಖಂಡದ 98% ಪ್ರದೇಶವು ಹಿಮದಿಂದ ಆವೃತವಾಗಿದೆ ಆದ್ದರಿಂದ  ಜನ ವಸತಿ ಇಲ್ಲ.
ಇಲ್ಲಿ ವಿಜ್ಞಾನಿಗಳು ಸಂಶೋಧನೆ ಕೈಗೊಳ್ಳುವ ಕಾರಣಕ್ಕೆ  ವಿಜ್ಞಾನಿಗಳ ಖಂಡ ಎಂದು ಕರೆಯುತ್ತಾರೆ.
ಹೆಚ್ಚು  ಹಿಮದಿಂದ ಆವೃತವಾಗಿದ್ದರಿಂದ 'ಶ್ವೇತ  ಖಂಡ', 'ಹಿಮದ ಮರುಭೂಮಿ' & 'ಶೀತಲ ಖಂಡ' ಎಂದು ಕರೆಯುತ್ತಾರೆ. 
✯ಪ್ರಾಣಿಗಳು : ಪೆಂಗ್ವಿನ್, ಸೀಲ್ ಗಳು
ಈ ಖಂಡದಲ್ಲಿರುವ ಭಾರತದ ಸಂಶೋಧನಾ ಕೇಂದ್ರಗಳು : 
1. ದಕ್ಷಿಣ ಗಂಗೋತ್ರಿ
2. ಮೈತ್ರಿ
3. ಭಾರತಿ (ಸ್ಥಾಪಿಸಲು ಯೋಚಿಸಿದೆ)


6. ಯೂರೋಪ್ :
ಇದು ವಿಶ್ವದ ಆರನೇ ಅತಿದೊಡ್ಡ ಖಂಡವಾಗಿದೆ. 
ಬೆಳೆಗಳು : ಬೇಳೆಕಾಳುಗಳು, ಹಣ್ಣುಗಳು, ಆಲೂಗೆಡ್ಡೆ  ಅರಣ್ಯ ಉತ್ಪನ್ನಗಳು
ಕೈಗಾರಿಕೆಗಳು: ಕಬ್ಬಿಣ & ಉಕ್ಕಿನ ಕೈಗಾರಿಕೆ, ಹತ್ತಿ ಬಟ್ಟೆ ಕೈಗಾರಿಕೆ, ಹಡಗು ಕಟ್ಟುವ ಕೈಗಾರಿಕೆ & ಸ್ವಯಂಚಾಲಿತ ವಾಹನ ಕೈಗಾರಿಕೆ.
ಮುಖ್ಯ ದೇಶಗಳು : ಹಂಗೇರಿ, ನಾರ್ವೆ, ಸ್ವೀಡನ್, ಆಸ್ಟ್ರಿಯಾ, ರೊಮೇನಿಯಾ, ಯು.ಕೆ, ಪ್ರಾನ್ಸ್, ಜರ್ಮನಿ, ಪೋಲೆಂಡ್. ಒಟ್ಟು 56 ದೇಶ ವಿದೇಶಗಳನ್ನು ಹೊಂದಿದೆ.
ಮುಖ್ಯ ನಗರಗಳು: ಲಂಡನ್, ಬಾನ್, ಬರ್ನ್, ಪ್ಯಾರಿಸ್, ಮ್ಯೂನಿಕ್, ಬರ್ಲಿನ್, ಬುಡಾಪೆಸ್ಟ್, ಮಾಸ್ಕೊ, ಓಸೊ.

 7ಆಸ್ಟ್ರೇಲಿಯ :
ಆ‌ಸ್ಟ್ರೇಲಿಯಾ ದ್ವೀಪ ಖಂಡಿತವಾಗಿದೆ.  ವಿಶೇಷವೆಂದರೆ ಏಕಕಾಲದಲ್ಲಿ ಖಂಡ, ರಾಷ್ಟ್ರ ಮತ್ತು ದ್ವೀಪವೆಂದು ಪರಿಗಣಿಸಲ್ಪಟ್ಟ ಏಕೈಕ ಸ್ಥಳ ಆಸ್ಟ್ರೇಲಿಯಾ.
ಈ ಖಂಡವನ್ನು 'ಅತ್ಯಂತ ಸಮಟ್ಟಾದ ಭೂಖಂಡ' & 'ಮರಭೂಮಿಯ ಭೂಖಂಡ'  ಎಂದು ಕರೆಯುತ್ತಾರೆ.
ಬೆಳೆಗಳು : ಗೋಧಿ, ಕಬ್ಬು, ಹತ್ತಿ, ತಂಬಾಕು ಇತ್ಯಾದಿ.
ಖನಿಜಗಳು: ಕಬ್ಬಿಣ, ಬಾಕ್ಸೈಟ್, ನಿಕ್ಕರ್, ತಾಮ್ರ, ಮ್ಯಾಂಗನೀಸ್, ಚಿನ್ನ, ತಾಮ್ರ, ಸೀಸ ಮತ್ತು ಯುರೇನಿಯಂ.
ಕೈಗಾರಿಕೆಗಳು: ಉಣ್ಣೆ, ಮರ, ಚಿನ್ನ, ಕಬ್ಬಿಣದ ಆದಿರು
ಮುಖ್ಯನಗರಗಳು: ಸಿಡ್ನಿ, ಮೆಲ್ಬೋರ್ನ್,ಅಡಿಲೇಡ್ 

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post