ಸೌರವ್ಯೂಹ
ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ, ಉಪಗ್ರಹ, ಧೂಮಕೇತು, ಕ್ಷುದ್ರ ಗ್ರಹಗಳ ಸಮೂಹವನ್ನು ಸೌರವ್ಯೂಹ ಅಥವಾ ಸೌರಮಂಡಲ ಎನ್ನುವರು.
☞ ಸೌರವ್ಯವಸ್ಥೆಯು ಸೂರ್ಯನ ಸುತ್ತ ಕೇಂದ್ರಿಕೃತವಾಗಿದೆ.
☞ ಸೂರ್ಯನು ಸೌರವ್ಯವಸ್ಥೆಯ ಅತ್ಯಂತ ದೊಡ್ಡ ಸದಸ್ಯ.
☞ ಸೌರವ್ಯೂಹದ ಎಲ್ಲಾ ಗ್ರಹಗಳೂ ಇವನ ಸುತ್ತ ಪ್ರದಕ್ಷಿಣೆ ಹಾಕುತ್ತವೆ.
☞ ಸೂರ್ಯ ತನ್ನ ಅಕ್ಷದ ಸುತ್ತ ಪಸೌರವ್ಯೂಹಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿದ್ದಾನೆ.
☞ ಸಂಪೂರ್ಣ ಸೌರವ್ಯವಸ್ಥೆಯ ಶಾಖ ಮತ್ತು ಬೆಳಕಿಗೆ ಸೂರ್ಯನೇ ಏಕೈಕ ಆಧಾರ.
☞ ಸೂರ್ಯನ ಕಿರಣವು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ 8 ನಿಮಿಷ.
ಗ್ರಹಗಳು
☞ ಸೂರ್ಯನ ಸುತ್ತ ಸುತ್ತುತ್ತಿರುವ ಆಕಾಶಕಾಯಗಳೇ 'ಗ್ರಹಗಳು'.
☞ ಸೌರವ್ಯೂಹದಲ್ಲಿ 8 ಗ್ರಹಗಳಿವೆ, ಅನುಕ್ರಮವಾಗಿ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.
☞ ಮೊದಲು 9 ಗ್ರಹಗಳನ್ನು ಗುರುತಿಸಲಾಗಿತ್ತು. ಆದರೆ ಸಾ.ಶ 2006 ರಲ್ಲಿ ನಡೆದ ವಿಶ್ವ ಖಗೋಳಶಾಸ್ತ್ರಜ್ಞರ ಸಮ್ಮೇಳನದಲ್ಲಿ 9 ನೇ ಗ್ರಹವಾದ "ಪ್ಲೂಟೋ"ವು ಗ್ರಹ ಎನಿಸಿಕೊಳ್ಳಬಹುದಾದ ಕೆಲ ಲಕ್ಷಣಗಳನ್ನು ಹೊಂದಿಲ್ಲವಾದ್ದರಿಂದ ಅದನ್ನು ಗ್ರಹ ಸ್ಥಾನದಿಂದ ಕೈಬಿಡಲಾಯಿತು.
1.ಬುಧ ಗ್ರಹ :
☞ ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ.
☞ ಸೌರವ್ಯವಸ್ಥೆಯ ಅತ್ಯಂತ ಸಣ್ಣ ಗ್ರಹವಾಗಿದೆ.
☞ ಬುಧ ಗ್ರಹಕ್ಕೆ ಉಪಗ್ರಹಗಳು ಇಲ್ಲ.
☞ ಬುಧ ಗ್ರಹದ ಪರಿಭ್ರಮಣ ಅವಧಿ 88 ದಿನಗಳು.
☞ ಬುಧ ಗ್ರಹದ ಭ್ರಮಣ ಅವಧಿ 176 ದಿನಗಳು.
☞ ಬುಧ ಗ್ರಹದ ಮೆಲೆ ಯಾವುದೇ ಜೀವಿಗಳಿಲ್ಲ.
2. ಶುಕ್ರ ಗ್ರಹ :
☞ ಶುಕ್ರವು ಸೂರ್ಯನಿಂದ ಎರಡನೆಯ ಗ್ರಹವಾಗಿದೆ.
☞ ಇದು ಭೂಮಿಗೆ ಅತ್ಯಂತ ಸಮೀಪದಲ್ಲಿರು ಗ್ರಹವಾಗಿದೆ.
☞ ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹ.
☞ ಅತಿ ಹೆಚ್ಚು ಪ್ರಕಾಶಮಾನವಾದ ಗ್ರಹವಾಗಿದ್ದು, ರಾತ್ರಿ ಆಕಾಶದಲ್ಲಿ ಚಂದ್ರನನ್ನು ಬಿಟ್ಟರೆ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಕಾಯವೆಂದರೆ ಶುಕ್ರಗ್ರಹ.
☞ ಶುಕ್ರ ಗ್ರಹವನ್ನು ಬೆಳಗಿನ ನಕ್ಷತ್ರ ಅಥವಾ ಸಂಜೆ ನಕ್ಷತ್ರ ಎಂದು ಕರೆಯಲಾಗುತ್ತದೆ.
☞ ಈ ಗ್ರಹದ ಮೇಲೆ "ಮ್ಯಾಕ್ಸ್ವೆಲ್ ಮೊಂಟಾಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಅದರ ಎತ್ತರ ಮೌಂಟ್ ಎವರೆಸ್ಟ್ ನಷ್ಟಿದೆ.
☞ ಗ್ರೀಕರ ಸೌಂದರ್ಯ ದೇವತೆಯಾದ "ವೀನಸ್" ಳ ಹೆಸರನ್ನು ಈ ಗ್ರಹಕ್ಕೆ ಇಡಲಾಗಿದೆ.
☞ ಶುಕ್ರ ಗ್ರಹದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಿದ್ದ ಕಾರಣ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ, ಆದ್ದರಿಂದ ತಾಪ 400 ಡಿಗ್ರಿ ಸೆಲ್ಸಿಯಸ್‍ಗಿಂತ ಅಧಿಕವಾಗಿದೆ. ಆದ್ದರಿಂದ ಇದು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ.
☞ ಈ ಗ್ರಹದ ಪರಿಭ್ರಮಣ ಅವಧಿ 224 ದಿನಗಳು.
☞ ಈ ಗ್ರಹದ ಭ್ರಮಣೆಯ ಅವಧಿ 243 ದಿನಗಳು.
☞ ಶುಕ್ರ ಗ್ರಹಕ್ಕೆ ಯಾವುದೇ ಉಪಗ್ರಹಗಳಿಲ್ಲ.
3. ಭೂಮಿ :
☞ ಜೀವಿಗಳಿರುವ ಏಕೈಕ ಗ್ರಹ ಭೂಮಿ.
☞ ಭೂಮಿಯನ್ನು ನೀಲಿ ಗ್ರಹವೆಂದು ಕರೆಯುತ್ತಾರೆ. (ಕಾರಣ 70 ಶೇಕಡಾ ಭಾಗ ನೀರಿನಿಂದ ಆವೃತ್ತವಾಗಿದ್ದು ಮೇಲಿನಿಂದ ನೋಡಿದಾಗ ನೀಲಿಬಣ್ಣದಲ್ಲಿ ಕಾಣುತ್ತದೆ)
☞ಭೂಮಿಯ ಪರಿಭ್ರಮಣ ಅವಧಿ 365 ದಿನ 6 ಗಂಟೆ 9 ನಿಮಿಷ 9.54 ಸೆಕೆಂಡ್‍ಗಳು.
☞ ಭೂಮಿಯ ಭ್ರಮಣ ಅವಧಿ 23 ಗಂಟೆ 56 ನಿಮಿಷ 4.09 ಸೆಕೆಂಡ್‍ಗಳು.
☞ ಭೂಮಿಯ ಏಕೈಕ ಉಪಗ್ರಹ "ಚಂದ್ರ".
☞ ಭೂಮಿಯ ವಾತಾವರಣದಲ್ಲಿ 21% ಆಮ್ಲಜನಕವಿದೆ.
4. ಮಂಗಳ :
☞ ಮಂಗಳ ಗ್ರಹ ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹ.
☞ ಬರಿಗಣ್ಣಿಗೆ ಕಾಣುವ ಕೆಂಪು ಬಣ್ಣದ ಗ್ರಹ ಮಂಗಳ.
☞ ಮಂಗಳಗ್ರಹವನ್ನು ಅಂಗಾರಕ, ಕುಜ, ಕೆಂಪುಗ್ರಹ ಎಂದು ಕರೆಯುತ್ತಾರೆ.
☞ ಮಂಗಳ ಗ್ರಹಕ್ಕೆ 2 ಉಪಗ್ರಹಗಳಿವೆ. "ಪೋಬೋಸ್" ಮತ್ತು "ಡೈಮೋಸ್".
☞ ಮಂಗಳಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಶೇಕಡ 95 ರಷ್ಟು ಕಾರ್ಬನ್ ಡೈ ಆಕ್ಸೈಡ್ ಹಾಗೂ ಶೇಕಡ 5 ರಷ್ಟು ನೈಟ್ರೋಜೆನ್ ಇದೆ.
☞ ಈ ಗ್ರಹದ ಮೇಲೆ "ಒಲಂಪಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು, ಸೌರ ಮಂಡಲದಲ್ಲಿಯೇ ಅತ್ಯಂತ ದೊಡ್ಡ ಪರ್ವತವಾಗಿದೆ.
☞ ತನ್ನ ಸುತ್ತ ತಾನು ತಿರುಗುವ ಅಕ್ಷವು ಪರಿಭ್ರಮಣಾ ಪಥದಿಂದ 24 ಡಿಗ್ರಿ ಕೊನದಲ್ಲಿ ವಾಲಿದೆ. ಹೀಗಾಗಿ ಅದು ಭೂಮಿಯಲ್ಲಿ ಇರುವ ಹಾಗೇಯೇ ಋತುಗಳನ್ನು ಹೊಂದಿದೆ.
☞ ಮಂಗಳದ ಧ್ರುವಗಳಲ್ಲಿನ ಹಿಮದ ಹೊದಿಕೆಗಳು ಅದರ ಅತ್ಯಂತ ಪ್ರಮುಖ ಲಕ್ಷಣಗಳು. ಇವುಗಳ ಆಕಾರ ಮತ್ತು ಚಹರೆಗಳು ಋತುಮಾನಗಳೊಂದಿಗೆ ಬದಲಾಗುವುದು ಕಂಡುಬಂದಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 687 ದಿನಗಳು.
☞ ಈ ಗ್ರಹದ ಭ್ರಮಣ ಅವಧಿ 24 ಗಂಟೆ, 37 ನಿಮಿಷ 23 ಸೆಕೆಂಡ್‍ಗಳು.
5. ಗುರು :
☞ ಗುರು ಗ್ರಹ ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹವಾಗಿದೆ.
☞ ಇದೊಂದು ದೈತ್ಯಾಕಾರದ ಅನಿಲಗ್ರಹವಾಗಿದೆ.
☞ ಸೌರ ಮಂಡಲದಲ್ಲಿ ಸೃಷ್ಟಿಯಾದ ಮೊಟ್ಟಮೊದಲ ಗ್ರಹವೆಂದರೆ ಗುರು ಗ್ರಹ.
☞ ಸೂರ್ಯನಿಂದ ಬರೋಬ್ಬರಿ 778.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಸೌರವ್ಯೂಹದಲ್ಲಿರುವ ಒಟ್ಟು ದ್ರವ್ಯದ 2/3 ಅಂಶ ಗುರು ಗ್ರಹದಲ್ಲಿದೆ. ಇಷ್ಟೊಂದು ದ್ರವ್ಯರಾಶಿ ಮತ್ತು ಗಾತ್ರ ಇದ್ದರೂ ಇದು ಗ್ರಹಗಳಲ್ಲೆ ಅತ್ಯಂತ ವೇಗವಾಗಿ ಪರಿಭ್ರಮಿಸುವ ಗ್ರಹ.
☞ ಈ ಗ್ರಹದ ದಕ್ಷಿಣ ಗೋಳಾರ್ಧದಲ್ಲಿ ಸಮಭಾಜಕವೃತ್ತದ ಸಮೀಪದಲ್ಲಿರುವ 'ದೊಡ್ಡ ಕೆಂಪು ಮಚ್ಚೆ' ಯು ಗುರುವಿನ ಅತ್ಯಂತ ಪ್ರಮುಖ ಮೇಲ್ಮೈ ಲಕ್ಷಣ.
☞ ಗುರುಗ್ರಹವು ಉಂಗುರವ್ಯವಸ್ಥೆಯನ್ನು ಹೊಂದಿದೆ.
☞ ಗೆಲಿಲಿಯೋ ಗೆಲಿಲಿ ಗುರುಗ್ರಹದ ನಾಲ್ಕು ಉಪಗ್ರಹಗಳನ್ನು ಮೊತ್ತಮೊದಲ ಬಾರಿಗೆ ದೂರದರ್ಶಕದ ಮೂಲಕ ಕಂಡುಹಿಡಿದನು. ಇವುಗಳನ್ನು "ಗೆಲಿಲಿಯನ್" ಉಪಗ್ರಹಗಳು ಎನ್ನುವರು.
☞ ಈ ನಾಲ್ಕು ಉಪಗ್ರಹಗಳೆಮದರೆ- ಐಯೋ, ಯುರೋಪ, ಗ್ಯಾನಿಮೇಡ್ ಮತ್ತು ಕ್ಯಾಲಿಸ್ಟೋ.
☞ ಗ್ಯಾನಿಮೆಡ್ ಉಪಗ್ರಹವು ಸೌರವ್ಯೂಹದ ಅತ್ಯಂತ ದೊಡ್ಡ ಉಪಗ್ರಹವಾಗಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 12 ವರ್ಷಗಳು.
6. ಶನಿ :
☞ ಈ ಗ್ರಹವು ನಮ್ಮ ಸೌರ ಮಂಡಲದಲ್ಲಿ ಎರಡನೆಯ ದೊಡ್ಡ ಗ್ರಹ.
☞ ಸೌರವ್ಯೂಹದ ಅತ್ಯಂತ ಸುಂದರವಾದ ಗ್ರಹ ಶನಿ.
☞ ಶನಿಗ್ರಹವು ಅತ್ಯಂತ ಸುಂದರವಾಗಿರಲು ಕಾರಣ ಅದರ ಸುತ್ತಲೂ ಇರುವ ಉಂಗುರ ವ್ಯವಸ್ಥೆ.
☞ ಶನಿ ಗ್ರಹಕ್ಕೆ ಎರಡು ಉಂಗುರಗಳಿದ್ದು, ಈ ಉಂಗುರಗಳ ಮಧ್ಯದಲ್ಲಿರುವ ಖಾಲಿ ಜಾಗವನ್ನು " ಕ್ಯಾಸಿನಿ ವಿಭಾಜಕ"ಎಂದು ಕರೆಯುವರು.
☞ ಈ ಗ್ರಹವು ಸೂರ್ಯನಿಂದ 1.43 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಶನಿ ಗ್ರಹಕ್ಕೆ ಸುಮಾರು 18 ಕ್ಕಿಂತಲೂ ಹೆಚ್ಚಿನ ಉಪಗ್ರಹಗಳಿವೆ. ಇವುಗಳ ಪೈಕಿ ಅತ್ಯಂತ ಪ್ರಮುಖವಾದದ್ದು "ಟೈಟಾನ್"
☞ ಟೈಟಾನ್ ಉಪಗ್ರಹವು ಸ್ವತ: ವಾತಾವರಣವನ್ನು ಹೊಂದಿದೆ. ಇದು ಸೌರವ್ಯೂಹದಲ್ಲಿ ವಾತಾವರಣವನ್ನು ಹೊಂದಿರುವ ಏಕೈಕ ಉಪಗ್ರಹವಾಗಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 29 ವರ್ಷಗಳು.
7. ಯುರೇನಸ್
☞ ಸೂರ್ಯನಿಂದ 2.87 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ಸೌರ ಮಂಡಲದಲ್ಲಿಯೇ ಕಡಿಮೆ ಉಷ್ಣಾಂಶ ಹೊಂದಿರುವ ಗ್ರಹವಾಗಿದೆ.
☞ ದೂರದರ್ಶಕದ ಸಹಾಯದಿಂದ ಕಂಡುಹಿಡಿಯಲಾದ ಮೊದಲ ಗ್ರಹ ಯುರೇನಸ್.
☞ ಸಾ.ಶ 1781 ರಲ್ಲಿ ವಿಲಿಯಂ ಹರ್ಷಲ್ ಎಂಬ ವಿಜ್ಞಾನಿಯು ಈ ಗ್ರಹ ಕಂಡುಹಿಡಿದನು.
☞ ಇದರ ಪ್ರಮುಖ ಉಪಗ್ರಹಗಳೆಂದರೆ- ಟೈಟಾನಿಯಾ ಮತ್ತು ಒಬೆರನ್.
☞ ಶನಿ ಮತ್ತು ಗುರು ಗ್ರಹಗಳಿಗಿರುವಂತೆ ಯುರೇನಸ್ ಗ್ರಹವು ಉಂಗುರ ವ್ಯವಸ್ಥೆಯನ್ನು ಹೊಂದಿದೆ.
☞ ಈ ಗ್ರಹದ ಪರಿಭ್ರಮಣ ಅವಧಿ 84.3 ವರ್ಷಗಳು.
8. ನೆಪ್ಚೂನ್ :
☞ ಸೂರ್ಯನಿಂದ 4.5 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
☞ ನ್ಯೂಟನ್ ಚಲನೆಯ ನಿಯಮ ಮತ್ತು ಗುರುತ್ವ ನಿಯಮಗಳ ಅನ್ವಯದ ಫಲವೇ ನೆಪ್ಚೂನ್ ಗ್ರಹದ ಸಂಶೋಧನೆ.
☞ ಯುರೇನಸ್ ಗ್ರಹದ ಕಕ್ಷೆಯಲ್ಲಿ ಉಂಟಾದ ಪಲ್ಲಟವು ನೆಪ್ಚೂನ್ ಗ್ರಹದ ಇರುವಿಕೆಯನ್ನು ಮುನ್ಸೂಚಿಸಿತು.
☞ ಸಾ.ಶ 1846 ರಲ್ಲಿ ದೂರದರ್ಶಕದ ಸಹಾಯದಿಂದ ಜೋಹಾನ್‍ಗಾಲಿ ಎಂಬ ವಿಜ್ಞಾನಿ ಇದನ್ನು ಪತ್ತೆಹಚ್ಚಿದನು.
☞ ನೆಪ್ಚೂನ್ ಗ್ರಹದ ಉಪಗ್ರಹಗಳೆಂದರೆ- ಟ್ರೈಟನ್ ಮತ್ತು ನೆರೈಡ್.
☞ ಈ ಗ್ರಹದ ವಾತಾವರಣದಲ್ಲಿ ಹೈಡ್ರೋಜನ್ ಮತ್ತು ಹೀಲಿಯಮ್ ಅನಿಲಗಳಿವೆ.
☞ ಈ ಗ್ರಹದ ಪರಿಭ್ರಮಣ ಅವಧಿ 164.8 ವರ್ಷಗಳು.
ಈ ಮೇಲಿನ ವಿಷಯದಲ್ಲಿ ಹೊಸ ಪದಗಳ ಅರ್ಥ :
ಪರಿಭ್ರಮಣ ಅವಧಿ :- ಗ್ರಹವು ತನ್ನ ಅಕ್ಷದ ಮೇಲೆ ಸುತ್ತುತ್ತಾ ಸೂರ್ಯನನ್ನು ಒಂದು ಸುತ್ತು ಸುತ್ತಲೂ ತೆಗೆದುಕೊಳ್ಳುವ ಅವಧಿ(ವಾರ್ಷಿಕ ಚಲನೆ)
ಭ್ರಮಣ ಅವಧಿ :- ಗ್ರಹವು ತನ್ನ ಅಕ್ಷದ ಮೇಲೆ ಒಂದು ಸುತ್ತು ಸುತ್ತಲೂ ತೆಗೆದುಕೊಳ್ಳುವ ಅವಧಿ(ದೈನಂದಿನ ಚಲನೆ)
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.