ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ (ಎಂಡಿಆರ್‌ಎಸ್/ ಜಿಎಂಆರ್‌ಎಸ್/ಎಪಿಜೆ ಎಕೆಆರ್ ಎಸ್) 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
☞ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27/04/2023
☞ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 13/05/2023
2023-24ರ ಸಾಲಿಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯಗಳು, ಪಜಾ/ಪಪಂ, ಮತ್ತು ಒಬಿಸಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅಭ್ಯರ್ಥಿಯು ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಿಂದ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಅಂಕಪಟ್ಟಿಯನ್ನು ಹೊಂದಿರಬೇಕು.
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಯು 10 ರಿಂದ 13 ವರ್ಷದ ವಯೋಮಾನದವರಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
- ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ (JPEG / JPG -20KB to 50KB).
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (PDF-500KB to 1MB).
- ಶಾಲಾ ಘೋಷಣಾ ಪ್ರಮಾಣ ಪತ್ರ ( PDF-500KB to 1MB).
- ಹಿಂದಿನ ತರಗತಿಯ ಅಂಕಪಟ್ಟಿ ( PDF-500KB to 1MB).
- ವಿದ್ಯಾರ್ಥಿಯ ಅಂಗವಿಕಲ ಪ್ರಮಾಣ ಪತ್ರ ( PDF-500KB to 1MB).
- ವಿಶೇಷ ವರ್ಗಗಳಿಗೆ ಬೇಕಾಗಿರುವ ಪ್ರಮಾಣ ಪತ್ರ (ಬಾಲ ಕಾರ್ಮಿಕ ಮಕ್ಕಳು/ಅನಾಥ ಮಕ್ಕಳು/ವಿಧವೆಯರ ಮಕ್ಕಳು/ಮಾಜಿ ಸೈನಿಕರ ಮಕ್ಕಳು/ಸಫಾಯಿ ಕರ್ಮಚಾರಿ ಮಕ್ಕಳು/ಅತ್ಮಹತ್ಯೆ ರೈತರ ಮಕ್ಕಳು/ಸ್ಥಳೀಯ ಅಭ್ಯರ್ಥಿ ಮಕ್ಕಳು/ವಿಶೇಷ ದುರ್ಬಲ ವರ್ಗ) ( PDF-500KB to IMB).
ಅರ್ಜಿ ಸಲ್ಲಿಸುವುದು ಎಲ್ಲಿ?
ಸೇವಾಸಿಂಧು ಪೋರ್ಟಲ್ (ಲಿಂಕ್: in) ಮೂಲಕ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು. ಅಥವಾ ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ ಅಥವಾ ಎಂಡಿಆರ್‌ಎಸ್/ ಜಿಎಂಆರ್‌ಎಸ್/ಡಾ.ಎಪಿಜೆಎಕೆಆರ್ (ಸಿಬಿಎಸ್‌ಇ) ಶಾಲೆಗಳು ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಬಹುದು.
ಪ್ರವೇಶ ಪರೀಕ್ಷೆ ವಿಧಾನ:
(1)ಪ್ರವೇಶ ಪರೀಕ್ಷೆ ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ.
ಪ್ರಶ್ನೆಗಳ ಸಂಖ್ಯೆ - 100
ಅಂಕಗಳು - 100
ಸಮಯ - 120ನಿಮಿಷ
(2)ಪ್ರಶ್ನೆ ಪತ್ರಿಕೆಯು ಕನ್ನಡ, ಇಂಗ್ಲೀಷ್ ಮತ್ತು ಉರ್ದು ಭಾಷಾ ಮಾಧ್ಯಮದಲ್ಲಿರುತ್ತದೆ.
(3)ಶೇ.90% ಪ್ರಶ್ನೆಗಳು 4 ಮತ್ತು 5 ನೇ ತರಗತಿಯ ಪಠ್ಯಾಧಾರಿತವಾಗಿರುತ್ತದೆ ಮತ್ತು ಪ್ರವೇಶ ಪರೀಕ್ಷೆಗೆ ನಿಗಧಿಪಡಿಸಿದ ವಿಷಯವಾರು ಅಂಕಗಳು ಈ ಕೆಳಕಂಡಂತಿವೆ
- ಕನ್ನಡ- 20
- ಇಂಗ್ಲೀಷ್-15
- ಗಣಿತ- 15
- ಪರಿಸರ ಅಧ್ಯಯನ/ ಸಾಮಾನ್ಯ ವಿಜ್ಞಾನ-20
- ಸಾಮಾನ್ಯ ಜ್ಞಾನ- 15
- ಮಾನಸಿಕ ಸಾಮರ್ಥ್ಯ-15
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಸಹಾಯವಾಣಿ: 8277799990, 080-22535916.
ಹೆಚ್ಚಿನ ವಿವರಗಳಿಗೆ ಇಲಾಖೆ ವೆಬ್‌ಸೈಟ್: https://dom.karnataka.gov.in ಗೆ ಭೇಟಿ ನೀಡಿ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.