Menu

Home ನಲಿಕಲಿ About ☰ Menu


 

🔍

8th ಅಧ್ಯಾಯ-17. ಗುಪ್ತರು ಮತ್ತು ವರ್ಧನರು

ಅಭ್ಯಾಸಗಳು

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಗುಪ್ತರು ತಮ್ಮ ನೆಲೆಯನ್ನು ಮಗಧ ಪ್ರದೇಶದಿಂದ ಕಂಡುಕೊಂಡರು.

2. ಮೊದಲನೆಯ ಚಂದ್ರಗುಪ್ತನು ಮಹಾರಾಜಾಧಿರಾಜ ಎಂದು ಕರೆಸಿಕೊಂಡನು.

3. ಕಾಳಿದಾಸನ ಶ್ರೇಷ್ಠ ನಾಟಕಗಳಲ್ಲಿ ಅಭಿಜ್ಞಾನ ಶಾಕುಂತಲ ಒಂದು.

4. ವಿಶಾಖದತ್ತನ ಕೃತಿ ಮುದ್ರಾರಾಕ್ಷಸ.

5. ಶೂದ್ರಕನು ಬರೆದ ಕೃತಿ ಮೃಚ್ಛಕಟಿಕ.

6. ವರ್ಧನ ವಂಶದ ಸ್ಥಾಪಕ ಪುಷ್ಯಭೂತಿ.

II. ಕೆಳಕಂಡ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

7) ಎರಡನೆ ಚಂದ್ರಗುಪ್ತನ ಬಗ್ಗೆ ವಿವರಿಸಿ.
ಉತ್ತರ : ಸಮುದ್ರಗುಪ್ತನ ಸಾಮ್ರಾಜ್ಯವನ್ನು ಎರಡನೆ ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು ತಂದನು. ಇವನು ಶಕರನ್ನು ಸೋಲಿಸಿ ಪಶ್ಚಿಮ ಭಾರತವನ್ನು ಗುಪ್ತರ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ಭಾರತದ ಅನೇಕ ರಾಜ ಮನೆತನಗಳೊಂದಿಗೆ ಈತನು ಮದುವೆ ಮೂಲಕ ಸಂಬಂಧವನ್ನು ಬೆಳೆಸಿ ಪ್ರಭಾವಿಯಾಗಿ ವಿಕ್ರಮಾದಿತ್ಯನೆಂಬ ಬಿರುದನ್ನು ಪಡೆದನು. ಇವನ ಕಾಲದಲ್ಲಿ ಯುದ್ಧಗಳಿಗಿಂತ ಸಾಹಿತ್ಯ ಹಾಗೂ ಕಲೆಗೆ ನೀಡಿದ ಪೋಷಣೆಯು ಸ್ಮರಣೀಯವಾಗಿದೆ. ಸುಪ್ರಸಿದ್ಧ ಸಂಸ್ಕೃತ ಕವಿ ಹಾಗೂ ನಾಟಕಕಾರ ಕಾಳಿದಾಸನು ಇದೇ ಕಾಲಕ್ಕೆ ಸೇರಿದವನು.

8. ಗುಪ್ತರ ಸಾಮ್ರಾಜ್ಯದ ಪತನಕ್ಕೆ ಕಾರಣಗಳೇನು?
ಉತ್ತರ : ಹೂಣರ ದಾಳಿಗೆ ನಿರಂತರವಾಗಿ ಒಳಗಾಗಿ ಗುಪ್ತರ ಸಾಮ್ರಾಜ್ಯವು ಪತನ ಕಂಡಿತು. ಗುಪ್ತರು ಬೃಹತ್‌ ಸುಸಜ್ಜಿತ ಸೇನೆಯನ್ನೇನು ಹೊಂದಿರಲಿಲ್ಲ. ಸಾಮಂತರು, ಅಮಾತ್ಯರು, ಪುರೋಹಿತರು ತಮಗೆ ನೀಡಿದ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡು ರಾಜ್ಯಕ್ಕೆ ದ್ರೋಹ ಬಗೆದರು. ಅವರ ಕೈ ಕೆಳಗೆ ಇದ್ದ ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಘೋಷಿಸಿಕೊಂಡರು. ಕ್ರಮೇಣವಾಗಿ ಆ ಪ್ರದೇಶದ ನಿವಾಸಿಗಳು, ಕೃಷಿಕರು, ಕುಶಲಕರ್ಮಿಗಳು,ಭೂಮಾಲೀಕರ ಕಟ್ಟುಪಾಡಿಗೆ ಅಧೀನರಾದರು. ಹೀಗೆ ಸಮಾಜವು ಸಂಕೀರ್ಣ ಹಾದಿಯತ್ತ ಸಾಗಿತ್ತು.

            ಈ ಕಾಲದಲ್ಲಿ ಪಾಶ್ಚಾತ್ಯರೊಂದಿಗೆ ಗುಪ್ತರಿಗಿದ್ದ ವ್ಯಾಪಾರ ಕುಸಿಯಿತು. ಇದರಿಂದಾಗಿ ಗುಪ್ತರ ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿತು. ಸಾಮ್ರಾಜ್ಯದ ಮೇಲೆ ಹೇರಲಾದ ನಿರ್ಬಂಧಗಳು ಆಂತರಿಕ ವ್ಯಾಪಾರವನ್ನು ಸಹ ಸ್ಥಗಿತಗೊಳಿಸಿತು. ವ್ಯಾಪಾರವು ಈಗ ಗ್ರಾಮಗಳಿಗೆ ಸೀಮಿತಗೊಂಡಿತು. ವ್ಯಾಪಾರಗಳಲ್ಲಿ ಕಂಡ ಕುಸಿತವು ನಗರಕೇಂದ್ರಗಳ ಅವನತಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಪಾಟಲೀಪುತ್ರವು ಕೇವಲ ಒಂದು ಗ್ರಾಮವಾಗಿ ಬದಲಾಯಿತು.

9. ಗುಪ್ತರ ಕಾಲದ ಶ್ರೇಷ್ಠ ವಿಜ್ಞಾನಿಗಳನ್ನು ಹೆಸರಿಸಿ.
ಉತ್ತರ : ವರಾಹಮಿಹಿರ, ಭಾಸ್ಕರ, ಆರ್ಯಭಟ, ಚರಕ ಹಾಗೂ ಸುಶ್ರುತ ಗುಪ್ತರ ಕಾಲದ ಶ್ರೇಷ್ಠ ವಿಜ್ಞಾನಿಗಳು,
10. ವರ್ಧನರ ಆಡಳಿತವು ಯಾವ ರೀತಿ ನಡೆಯುತ್ತಿತ್ತು ?
ಉತ್ತರ : ರಾಜನ ಆಳ್ವಿಕೆಯಲ್ಲಿ ಮಂತ್ರಿಮಂಡಲವು ಸಹಕರಿಸುತ್ತಿತ್ತು. ಮಹಾಸಂಧಿವಿಗ್ರಹ (ಅನುಸಂಧಾನಗಳನ್ನು ಮಾಡುವವ), ಮಹಾಬಲಾಧಿಕೃತ (ಮಹಾಸೇನಾಪತಿ), ಭೋಗಪತಿ (ಕಂದಾಯ ಅಧಿಕಾರಿ), ದೂತ ಮುಂತಾದವರಿಂದ ಅಧಿಕಾರ ವರ್ಗವು ಕೂಡಿತ್ತು. ರಾಜ್ಯವು ಪ್ರಾಂತ್ಯಗಳಾಗಿ ವಿಂಗಡಿಸಲ್ಪಟ್ಟಿತ್ತು.
                                     ಭೂಕಂದಾಯವೇ ರಾಜ್ಯದ ಮುಖ್ಯ ಆದಾಯವಾಗಿತ್ತು. ಸಾಮಂತ ರಾಜರುಗಳು ಇವನಿಗೆ ಕಪ್ಪವನ್ನು ಕೊಡುತ್ತಿದ್ದರು. ರಾಜನು ಇವರಿಗೆ ಭೂಮಿಯನ್ನು ಕೊಡುಗೆಯಾಗಿ ಕೊಟ್ಟು ಪ್ರತಿಯಾಗಿ ಸೈನ್ಯದ ಸಹಾಯವನ್ನು ಪಡೆಯುತ್ತಿದ್ದನು.
11. ನಳಂದ ವಿಶ್ವವಿದ್ಯಾಲಯದ ಬಗ್ಗೆ ಬರೆಯಿರಿ.
ಉತ್ತರ : ನಳಂದ ವಿಶ್ವವಿದ್ಯಾಲಯವು ಭಾರತದಲ್ಲಿದ್ದ ವಿಶ್ವವಿಖ್ಯಾತ ಪ್ರಾಚೀನ ವಿದ್ಯಾಲಯವಾಗಿದೆ. ಇಲ್ಲಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಶೋಕ, ಗುಪ್ತರ ದೊರೆಗಳು ಹಾಗೂ ಹರ್ಷವರ್ಧನ ಈ ವಿದ್ಯಾಲಯದ ಸುಪ್ರಸಿದ್ಧ ಪೋಷಕರು.
                                         ಇಲ್ಲಿ ನಾಗಾರ್ಜುನ, ವಿಙ್ನಾದ ಮತ್ತು ಧರ್ಮಪಾಲರೆಂಬ ಪ್ರಸಿದ್ಧ ವಿದ್ವಾಂಸರು ಬೋಧಿಸಿದ್ದರು. ಚೀನಾದ ಪ್ರವಾಸಿಗ ಹೂಯನ್‌ ತ್ಸಾಂಗನು ಇಲ್ಲಿಗೆ ಭೇಟಿ ನೀಡಿ, ಕೆಲಕಾಲವಿದ್ದು ಈ ಪ್ರದೇಶದ ಬಗ್ಗೆ ಸವಿವರವಾದ ಬಣ್ಣನೆಯನ್ನು ಮಾಡಿದ್ದಾನೆ. ಈ ಪ್ರದೇಶದಲ್ಲಿ ಅನೇಕ ಸ್ತೂಪಗಳು, ಚೈತ್ಯ- ವಿಹಾರಗಳು, ವಿಶ್ರಾಂತಿಗೃಹಗಳು, ಅಲ್ಲಲ್ಲಿ ಕುಳಿತು ವಿಶ್ರಮಿಸಲು ಮೆಟ್ಟಿಲುಗಳು, ಧ್ಯಾನ ಕೊಠಡಿಗಳು, ಬೋಧನಾ ಕೊಠಡಿಗಳು ಹಾಗೂ ಇಲ್ಲಿನ ಇನ್ನಿತರ ಕಟ್ಟಡಗಳು ಇದರ ವೈಭವವನ್ನು ಸಾರುತ್ತವೆ.ಭಕ್ತಿಯಾರ್ ಖಿಲ್ಜಿಯ ಪೈಶಾಚಿಕ ದಾಳಿಯಿಂದಾಗಿ ನಳಂದ ತನ್ನ ವೈಭವವನ್ನು ಕಳೆದುಕೊಂಡು ಪಾಳು ಕಟ್ಟಡವಾಯಿತು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post