ಅಭ್ಯಾಸಗಳು
I. ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ,
1. ಚಾಣಕ್ಯನು ಕೌಟಿಲ್ಯ ಎಂದು ಪ್ರಖ್ಯಾತನಾದವನು.
2. ಮೌರ್ಯರ ರಾಜಧಾನಿ ಪಾಟಲಿಪುತ್ರ .
3. ಕುಶಾಣ ರಾಜ ಮನೆತನದ ಸಂಸ್ಥಾಪಕ ಕುಜಲಕಡ್ ಫೀಸಸ್.
4. ಕನಿಷ್ಠನ ರಾಜಾಳ್ವಿಕೆಯ ಹೊಸ ಯುಗವನ್ನು ಶಕ ಯುಗ ಎಂದು ಕರೆಯುತ್ತಾರೆ.
II. ಸಂಕ್ಷಿಪ್ತವಾಗಿ ಉತ್ತರಿಸಿ.
5. ಆಶೋಕನ ಕಾಲದ ಪ್ರಮುಖ ನಗರಗಳನ್ನು ಹೆಸರಿಸಿ.
ಉತ್ತರ:- ಅಶೋಕನ ಕಾಲದ ಪ್ರಮುಖ ನಗರಗಳು ಪಾಟಲಿಪುತ್ರ, ತಕ್ಷಶಿಲ, ಉಜ್ಜಯಿನಿ, ಕಳಿಂಗ, ಸುವರ್ಣ ಗಿರಿ.
6. ಆಶೋಕನ ಆಡಳಿತದ ಬಗ್ಗೆ ವಿವರಣೆ ಕೊಡಿರಿ.
ಉತ್ತರ:- ವಿವಿಧ ಕೇಂದ್ರಗಳಿಂದ ವಿಶಾಲವಾದ ಭೂ ಪ್ರದೇಶದ ಆಡಳಿತವನ್ನು ಅಶೋಕನು ನಡೆಸಿದನು. ಅವನ ಆಶೋತ್ತರಗಳನ್ನು ಶಾಸನಗಳ ಮೂಲಕ ವ್ಯಕ್ತಪಡಿಸಲಾಯಿತು. ಧರ್ಮ ಮಹಾಮಾತ್ರರನ್ನು ನೇಮಿಸಿದನು.
ಕೃಷಿಯನ್ನು ಹೆಚ್ಚಿಸಲು ಅಶೋಕನ ಸರಕಾರ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿಶೇಷ ತೆರಿಗೆ ವಿನಾಯಿತಿಗಳನ್ನು ಈ ಹಿನ್ನೆಲೆಯಲ್ಲಿ ನೀಡಲಾಗಿತ್ತು. ವಿಶಾಲ ಭೂ ಪ್ರದೇಶದ ಆಳ್ವಿಕೆಯನ್ನು ನಡೆಸಲು ವಿವಿಧ ಅಧಿಕಾರಿಗಳಿದ್ದರು. ಇವೆಲ್ಲವನ್ನು ನೆರವೇರಿಸಲು ತೆರಿಗೆ ಬೇಕಾಗಿತ್ತು. ಇದೇ ಅಲ್ಲದೆ ಭೂ ಕಂದಾಯವು ಸಹ ರಾಜನ ಮೂಲ ಆದಾಯವಾಗಿತ್ತು. ಕಂದಾಯ ಸಂಗ್ರಹಣೆಯಲ್ಲಿಯು ವಿವಿಧ ಅಧಿಕಾರಿಗಳು ಶ್ರಮಿಸುತ್ತಿದ್ದರು. ಗೂಢಚಾರ ವ್ಯವಸ್ಥೆ ಇತ್ತು. ನದಿ ಹಾಗೂ ಭೂ ಹಾದಿಗಳನ್ನು ನಿಯಂತ್ರಿಸುವ ಮೂಲಕ ವ್ಯಾಪಾರ ಹಾಗೂ ವಾಣಿಜ್ಯದ ಮೇಲೆ ಹತೋಟಿಯನ್ನು ಹೊಂದಿದ್ದರು. ಇವುಗಳ ಮೇಲೆ ವಿವಿಧ ತೆರಿಗೆಗಳನ್ನು ವಿಧಿಸಲಾಗಿತ್ತು.
7. ಕುಶಾಣರು ಯಾವ ಸಂತತಿಗೆ ಸೇರಿದವರು ?
ಉತ್ತರ:- ಕುಶಾಣರು ಯುಚಿ ಸಂತತಿಗೆ ಸೇರಿದವರು.
8. ಕನಿಷ್ಕನ ಸಾಮ್ರಾಜ್ಯದ ವಿಸ್ತರಣೆ’ ಎಲ್ಲಿಯವರೆಗೆ ಹರಡಿತ್ತು?
ಉತ್ತರ:- ಭಾರತದಲ್ಲಿ ಕನಿಷ್ಕನ ಆಳ್ವಿಕೆಯ ವ್ಯಾಪ್ತಿಯು ದಕ್ಷಿಣದ ಸಾಂಚಿ ಹಾಗೂ ಪೂರ್ವದ ಬನಾರಸ್ಸಿನವರೆಗೆ ಹರಡಿತ್ತು. ಮಧ್ಯ ಏಷ್ಯಾವನ್ನು ಒಳಗೊಂಡ ಇವನ ಆಳ್ವಿಕೆಯು ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿತ್ತು. ಪುರುಷಪುರವು ಕನಿಷ್ಕನ ರಾಜಧಾನಿಯಾಗಿತ್ತು.
*ಪ್ರಮುಖ ನಕಾಶೆ & ಚಿತ್ರಗಳು*



No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.