Menu

Home ನಲಿಕಲಿ About ☰ Menu


 

13. ಹಚ್ಚೇವು ಕನ್ನಡದ ದೀಪ - ಡಿ. ಎಸ್‌. ಕರ್ಕಿ

#ಲೇಖಕರ ಪರಿಚಯ:
ಲೇಖಕರ ಹೆಸರು : ಡಿ.ಎಸ್.‌ ಕರ್ಕಿ (ಪೂರ್ಣ ಹೆಸರು: ದುಂಡಪ್ಪ ಸಿದ್ದಪ್ಪ ಕರ್ಕಿ)

ಜನನ : 1907 ನವೆಂಬರ್ 15, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪ.

ತಂದೆ : ಸಿದ್ದಪ್ಪ
ತಾಯಿ : ದುಂಡವ್ವ

ವಿದ್ಯಾಭ್ಯಾಸ : ಕನ್ನಡದಲ್ಲಿ ಸ್ನಾತಕೋತ್ತರ ಪದವಿ.
ವೃತ್ತಿ : ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರಾಗಿ ಕೆಲಸ ನಿರ್ವಣೆ
ಪ್ರವೃತ್ತಿ : ಸಾಹಿತಿ ಭಾಷಾಂತರಕಾರ , ಗಮಕಿ

ಪ್ರಮುಖ ಕವನ ಸಂಕಲನಗಳು :
ನಕ್ಷತ್ರಗಾನ, ಭಾವತೀರ್ಥ, ಗೀತ ಗೌರವ, ನಮನ, ಕರಿಕೆ ಕಣಗಿಲು, ಬಣ್ಣದ ಚೆಂಡು, ತನನ ತೋಂ. 
ಛಂದೋವಿಕಾಸ - ಸಂಶೋಧನಾ ಪ್ರಬಂಧ

ಪಡೆದ ಪ್ರಶಸ್ತಿಗಳು :
'ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪದ್ಯದ ಆಯ್ಕೆ : ನಕ್ಷತ್ರಗಾನ.

ಪದಗಳ ಅರ್ಥ : 
ಹಚ್ಚೇವು – ಹಚ್ಚುವೆವು 
ಕರುನಾಡು – ಕನ್ನಡನಾಡು
ಕೊಚ್ಚೇವು – ಕತ್ತರಿಸುತ್ತೇವೆ 
ಸೂಸು – ಹರಡು , ಚಿಮುಕಿಸು
ಕರಣ – ಒಡಲು, ಶರೀರ 
ಕಳೆ – ಕಾಂತಿ, ತೇಜಸ್ಸು 
ಎರೆ – ಹೊಯ್ಯು 
ಹುರಿಗೊಳಿಸು – ಹಗ್ಗ ಮಾಡು, ಬಲಪಡಿಸು 
ಕೆಚ್ಚು – ಕೂಡುವಿಕೆ, ಬೆಸುಗೆ, ಸೇರಿಸು
ಅಚ್ಚಳಿಯದೆ – ಅಂದಗೆಡದಂತೆ, ರೂಪುಗೆಡದಂತೆ
ಒಂದುಗೂಡೇವು – ಒಂದಾಗಿ ಸೇರುತ್ತೇವೆ
ತೀಡು – ಬೀಸು, ಹೊರಹೊಮ್ಮು
ಮಾಂಗಲ್ಯಗೀತೆ – ಮಂಗಳಕರವಾದ ಹಾಡು 
ಮರುಳು – ಹುಚ್ಚು
ಕಡೆ – ನಿವಾರಿಸು 
ಮೈಮರೆವು – ದೇಹದ ಅರಿವು ಇಲ್ಲವಾಗು, ಮೂರ್ಛ
ಮಾತೆ – ತಾಯಿ, ಜನನಿ
ಕೊಳೆ– ಹೊಲಸು
ಕಂಪು – ಸುಂಗಂಧ, ಪರಿಮಳ 
ಹೊಸೆ – ಹುರಿ ಮಾಡು, ಹೆಣೆ
ಹರಿವು – ಪ್ರವಹಿಸು, ಹರಿಯುವಿಕೆ
ಬೀರು – ಹರಡು
ಅಚ್ಚಳಿ – ಅಂದಕೆಡು
ತೋರು – ಕಾಣುವಂತೆ ಮಾಡು
ಒಡಲು – ಹೊಟ್ಟೆ 
ತೂರು – ಎಸೆ

ಅಭ್ಯಾಸಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಕನ್ನಡದ ಕಂಪನ್ನು ಸೂಸುವಲ್ಲಿ ಏನನ್ನು ಚಾಚುತ್ತೇವೆ? 
ಉತ್ತರ : ಕನ್ನಡದ ಕಂಪನ್ನು ಸೂಸುವಲ್ಲಿ ನಮ್ಮ ದೇಹವನ್ನು ಚಾಚುತ್ತೇವೆ.

2. ಕಲ್ಪನೆಯ ಕಣ್ಣು ಹರಿವ ತನಕ ಯಾವ ದೀಪಗಳನ್ನು ಹಚ್ಚುತ್ತೇವೆ? 
ಉತ್ತರ : ಕಲ್ಪನೆಯ ಕಣ್ಣು ಹರಿವ ತನಕ ಸಾಲು ದೀಪಗಳನ್ನು ಹಚ್ಚುತ್ತೇವೆ.

3. ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲರೂ ಏನು ಮಾಡಬೇಕು? 
ಉತ್ತರ : ನಮ್ಮವರು ಗಳಿಸಿದ ಹೆಸರುಳಿಸಲು ಕನ್ನಡಿಗರೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸಬೇಕು. 

4. ನಮ್ಮುಸಿರು ತೀಡುವ ನಾಡಿನಲ್ಲಿ ಯಾವ ಗೀತೆ ಹಾಡುತ್ತೇವೆ? 
ಉತ್ತರ : ನಮ್ಮುಸಿರು ತೀಡುವ ನಾಡಿನಲ್ಲಿ ಮಂಗಳಕರವಾದ ಗೀತೆಯನ್ನು ಹಾಡುತ್ತೇವೆ.

5. ಕರುಳೆಂಬ ಕುಡಿಗೆ ಏನನ್ನು ಮುಡಿಸುತ್ತೇವೆ? 
ಉತ್ತರ : ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸುತ್ತೇವೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ.
1. ಕನ್ನಡಿಗರು ಯಾವ ದೀಪವನ್ನು ಹಚ್ಚುತ್ತಾರೆ?
ಉತ್ತರ : ಕನ್ನಡಿಗರು ಕನ್ನಡದ ಶ್ರೀಮಂತಿಕೆಯನ್ನು ತೋರುವ ಒಲವನ್ನು ಬೆಳಗುವ ದೀಪವನ್ನು ಹಚ್ಚುತ್ತಾರೆ. 

2 . ಮರೆವನ್ನು ಮರೆತು, ಒಲವನ್ನು ಎರೆದು, ಹೇಗೆ ಕನ್ನಡದ ದೀಪ ಹಚ್ಚುತ್ತಾರೆ? 
ಉತ್ತರ : ಕನ್ನಡಿಗರೆಲ್ಲರೂ ಈ ನಾಡಿಗಾಗಿ ಶ್ರಮಿಸುತ್ತ ಕಹಿಯನ್ನು ಮರೆತು ವಿಶಾಲವಾದ ಮನಸ್ಸಿನಿಂದ ನಾಡಿಗಾಗಿ ಒಲವನ್ನು ಎರೆದು ಕನ್ನಡದ ದೀಪವನ್ನು ಹಚ್ಚಿ ಅದರ ಕಾಂತಿಯನ್ನು ಎಲ್ಲೆಡೆ ಬೆಳಗುತ್ತಾರೆ .

3. ಕನ್ನಡ ಮಾತೆಯನ್ನು ಹೇಗೆ ಆದರಿಸುತ್ತಾರೆ? 
ಉತ್ತರ : ಕನ್ನಡಿಗರು ಗಳಿಸಿದ ಹೆಸರನ್ನು ಉಳಿಸಲು ಕನ್ನಡಿಗರೆಲ್ಲರೂ ನಾವೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸುತ್ತ ಕೆಟ್ಟದ್ದನ್ನು ನಾಶಮಾಡುವ ಸಂಕಲ್ಪದಿಂದ ಮಂಗಳಗೀತೆಯನ್ನು ಹಾಡುತ್ತಾ ಕನ್ನಡದ ಕಾಂತಿಯನ್ನು ಬೆಳಗುವುದರ ಮೂಲಕ ಕನ್ನಡ ಮಾತೆಯನ್ನು ಆದರಿಸುತ್ತಾರೆ

ಇ. ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
  1. ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು.
  2. ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು.
  3. ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೇವು.
  4. ಕರುಳೆಂಬ ಕುಡಿಗೆ ಮಿಂಚನೇ ಮುಡಿಸಿ ಹಚ್ಚೇವು ಕನ್ನಡದ ದೀಪ.

ಈ. ʼಹಚ್ಚೇವುʼ ಎಂಬ ಪದಕ್ಕೆ ಸರಿಹೊಂದುವ, ಪದ್ಯದಲ್ಲಿ ಇರುವ ಪ್ರಾಸಪದಗಳನ್ನು ಬರೆಯಿರಿ.

ಕೊಚ್ಚೇವು = ಚಾಚೇವು = ಒಂದುಗೂಡೇವು
ಮರೆತೇವು = ತೆರೆದೇವು = ಎರದೇವು 
ಬೀರೇವು = ತೋರೇವು = ತೂರೇವು 
ಮಾಡೇವು = ಹಾಡೇವು = ತೊರೆದೇವು 
ಕಡೆದೇವು = ಪಡೆದೇವು = ಕೂಡೇವು


ಉ. ʼಬೀರೆವುʼ ಎಂಬ ಪದದಂತೆ ಪದಮಧ್ಯದಲ್ಲಿ ʼರʼ ಅಕ್ಷರ ಬರುವ ಪದಗಳನ್ನು ಪಟ್ಟಿ ಮಾಡಿ. 
ತೊರೆದೇವು, ತೂರೇವು, ತೋರೇವು, ಬೀರೇವು, ಎರೆದೇವು  

ಊ. ಕೈಗೆ ಕಾಲ್ ಮೂಳೆಯ ಜಡಿಯೆ
ಶಿಲುಬೆಗಿಕ್ಕಿ ಸಾಯೆ ಬಡಿಯೆ 
ಅವರ ತಪ್ಪ ಕ್ಷಮಿಸುಯೆಂದು
ಮೊರೆಯನಿಟ್ಟ ತಂದೆಗೆಂದು 
ಕ್ರಿಸ್ತ ಸತ್ತು ಬದುಕಿದ
ಯುಗವೊಂದನು ತೊಡಗಿದ - ಕಯ್ಯಾರ ಕಿಞ್ಞಣ್ಣ ರೈ (ಶತಮಾನದ ಗಾನ) 

ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿ.

ಜಡಿಯೆ = ಬಡಿಯೆ
ಕ್ಷಮಿಸುಯೆಂದು = ತಂದೆಗೆಂದು
ಬದುಕಿದ = ತೊಡಗಿದ
ಕೈಗೆ = ಕಾಲ್ಗೆ 

ಭಾಷಾಭ್ಯಾಸ

ಅ. ಕೆಳಗೆ ನೀಡಿರುವ ಪದ್ಯದ ಪ್ರಾಸಪದಗಳನ್ನು ಜೋಡಿಸಿ ಬರೆಯಿರಿ.
ದೀಪ ಮರುಳು ತೀಡು ಹಾಡು ಮನವ ಹಚ್ಚು ರೂಪ ಕರುಳು ಮನೆ ಇಡೀ ಗೂಡು ನಾಡು ನಾಡು ಸಿಡಿ ಪ್ರೀತಿ ನೀತಿ ಮನ ಕುಡಿ ಇರುಳು ಸೋಂಪು ಪಡೆ ಅಚ್ಚು ತೊಡೆ ಮುಡಿ ಹಿಡಿ ಮರೆವು ಕಂಪು ಮಿಡಿ ಕೆಚ್ಚು ಗಳಿಸು ಮರೆತೇವು ತೊರೆದೇವು ನಡುನಾಡು ಗಡಿನಾಡು
ಗೂಡು = ನಾಡು 
ಪ್ರೀತಿ = ನೀತಿ, 
ಭೀತಿ = ನೀತಿ
ಮನ = ಮನೆ 
ತೊಡೆ = ಪಡೆ 
ಮುಡಿ = ಮಿಡಿ
ಹಿಡಿ = ಸಿಡಿ
ನಡುಗಾಡು = ಗಡಿನಾಡು 
ಮಿಡಿ = ಕುಡಿ 
ನೀಡು = ಹಾಡು 
ಕರುಳು = ಇರುಳು
ಮರೆತೇವು = ತೊರೆದೇವು 
ಮನವ = ಮರೆವ
ಕಂಪು = ಸೊಂಪು 
ಕೆಚ್ಚು = ಅಚ್ಚು
ನಾಡು – ಹಾಡು

ಆ. ಕೆಳಗೆ ನೀಡಿರುವ ಪದಗಳ ಅರ್ಥವ್ಯತ್ಯಾಸವನ್ನು ಗಮನಿಸಿ.
ಹಚ್ಚು – ಹಚ್ಚೇವು – ಹಚ್ಚುವುದಿಲ್ಲ ,
             ಹಚ್ಚೇವು – ಹಚ್ಚುತ್ತೇವೆ.

ಬೀರು – ಬೀರೇವು – ಬೀರುವುದಿಲ್ಲ,
              ಬೀರೇವು – ಬೀರುತ್ತೇವೆ.

ಮಾಡು – ಮಾಡೆವು – ಮಾಡುವುದಿಲ್ಲ ,
             ಮಾಡೇವು- ಮಾಡುತ್ತೇವೆ .

ಇ. ಇದೇ ರೀತಿಯಲ್ಲಿ ನೋಡು , ಹಾಡು , ನಿಲ್ಲು , ಮೆಚ್ಚು ಮೊದಲಾದ ಪದಗಳನ್ನು ಕೆಳಗಿನ ವಾಕ್ಯದಲ್ಲಿ ಬಳಸಿ ವಾಕ್ಯ ಪೂರ್ಣಗೊಳಿಸಿ. 
  • ನಾವು ಕನ್ನಡ ಚಲನ ಚಿತ್ರಗಳನ್ನು ನೋಡುತ್ತೇವೆ.
  • ನಾವು ಕನ್ನಡ ಗೀತೆಗಳನ್ನು ಹಾಡುತ್ತೇವೆ.
  • ನಿಮಗಾಗಿ ನಾಳೆ ನಾವು ಕಾಯುತ್ತಾ ನಿಲ್ಲುತ್ತೇವೆ.
  • ನಿಮ್ಮೆಲ್ಲ ಚಿತ್ರಗಳನ್ನು ಮೆಚ್ಚೇವು.

ಈ. ಒಂದೇ ಪದವನನ್ನು ನಾಮಪದ ಮತ್ತು ಕ್ರಿಯಾಪದ ಅರ್ಥದಲ್ಲಿ ಮಾದರಿಯಂತೆ ಬಳಸಿ ವಾಕ್ಯ ರಚಿಸಿ. 
ಮಾದರಿ : 

ಕಳೆ : ನಮ್ಮ ಶಾಲಾ ಕೈತೋಟದಲ್ಲಿ ತುಂಬಾ ಕಳೆ ಬೆಳೆದಿದೆ. ರಾಜು ಬೆಲೆ ಬಾಳುವ ಉಂಗುರವನ್ನು ಕಳೆದನು.
ಹಂಚು : ನಮ್ಮ ಮನೆ ಹಂಚಿನದು. ನಾನು ಎಲ್ಲರಿಗೂ ಸಿಹಿ ಹಂಚಿದೆ.
ಕುಡಿ : ಮಾವಿನ ಸಸಿ ಕುಡಿ ಬಿಟ್ಟಿದೆ. ಸಾಹಿತ್ಯ ದಿನಾಲೂ ಹಾಲು ಕುಡಿಯುತ್ತಾಳೆ.
ಪಡೆ : ಭಾರತದ ಸೇನಾಪಡೆ ತುಂಬಾ ಬಲಿಷ್ಠವಾಗಿದೆ. ಶ್ರೀತಿಕನು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದಾನೆ.


ಉ. ಮೊದಲೆರಡು ಪದಗಳ ಸಂಬಂಧ ಗ್ರಹಿಸಿ ಖಾಲಿ ಜಾಗದಲ್ಲಿ ಸೂಕ್ತ ಪದ ಭರ್ತಿಮಾಡಿ.
1. ಆಂಧ್ರಪ್ರದೇಶ : ಹೈದರಾಬಾದ್ : : ಕೇರಳ : ತಿರುವನಂತಪುರ
2. ಶತ್ರು : ಮಿತ್ರ : : ರಾತ್ರಿ : ಹಗಲು 
3. ಮಾತಾ : ತಾಯಿ : : ಪಿತಾ : ತಂದೆ
4. ದಾವಣಗೆರೆ : ನಡುನಾಡು : : ಬೆಳಗಾವಿ : ಗಡಿನಾಡು

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post