Menu

Home ನಲಿಕಲಿ About ☰ Menu


 

ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ.

ಆದಿಕವಿ ಪಂಪ

ಪ್ರತಿ ವರ್ಷ ಪಂಪನ ಬನವಾಸಿಯಲ್ಲಿ ನಡೆಯುವ 'ಕದಂಬೋತ್ಸವ' ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. 1987ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ಕನ್ನಡ & ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.
    ಈ ಪ್ರಶಸ್ತಿಯು ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆಗೆ ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

 ಸಾಹಿತಿ ಹೆಸರು   -    ಕೃತಿ    -   ಪಡೆದ  ವರ್ಷ

1. ಕುವೆಂಪು - ಶ್ರೀ ರಾಮಾಯಣ ದರ್ಶನಂ - 1987

2. ತೀ.ನಂ.ಶ್ರೀ - ಭಾರತೀಯ ಕಾವ್ಯಮೀಮಾಂಸೆ-1988

3. ಶಿವರಾಮ ಕಾರಂತ - ಮೈಮನಗಳ ಸುಳಿಯಲ್ಲಿ - 1989

4. ಸಂ.ಶಿ.ಭೂಸನೂರಮಠ - ಶೂನ್ಯ ಸಂಪಾದನೆ ಪರಾಮರ್ಶೆ - 1990

5. ಪು.ತಿ.ನ. - ಹರಿಚರಿತೆ - 1991

6. ಎ.ಎನ್.ಮೂರ್ತಿರಾವ್ - ದೇವರು - 1992

7. ಗೋಪಾಲಕೃಷ್ಣ ಅಡಿಗ - ಸುವರ್ಣ ಪುತ್ಥಳಿ - 1993

8. ಸೇಡಿಯಾಪು ಕೃಷ್ಣಭಟ್ಟ - ವಿಚಾರ ಪ್ರಪಂಚ - 1994

9. ಕೆ.ಎಸ್.ನರಸಿಂಹಸ್ವಾಮಿ - ದುಂಡು ಮಲ್ಲಿಗೆ - 1995

10. ಎಂ.ಎಂ.ಕಲಬುರ್ಗಿ - ಸಮಗ್ರ ಸಾಹಿತ್ಯ - 1996

11. ಜಿ.ಎಸ್.ಶಿವರುದ್ರಪ್ಪ - ಸಮಗ್ರ ಸಾಹಿತ್ಯ - 1997

12. ದೇಜಗೌ - ಸಮಗ್ರ ಸಾಹಿತ್ಯ - 1998

13. ಚನ್ನವೀರ ಕಣವಿ - ಕವಿತೆಗಳು - 1999

14. ಡಾ. ಎಲ್.ಬಸವರಾಜು - ಸಮಗ್ರ ಸಾಹಿತ್ಯ (ಸಂಶೋಧನೆ ) - 2000

15. ಪೂರ್ಣಚಂದ್ರ ತೇಜಸ್ವಿ - ಸಮಗ್ರ ಸಾಹಿತ್ಯ - 2001

16. ಚಿದಾನಂದಮೂರ್ತಿ - ಸಮಗ್ರ ಸಾಹಿತ್ಯ - 2002

17. ಡಾ. ಚಂದ್ರಶೇಖರಕಂಬಾರ - ಸಮಗ್ರ ಸಾಹಿತ್ಯ - 2003

18. ಹೆಚ್.ಎಲ್.ನಾಗೇಗೌಡ - ಸಮಗ್ರ ಸಾಹಿತ್ಯ - 2004

19. ಎಸ್.ಎಲ್.ಭೈರಪ್ಪ - ಸಮಗ್ರ ಸಾಹಿತ್ಯ - 2005

20. ಜಿ.ಎಸ್.ಆಮೂರ್ - ಸಮಗ್ರ ಸಾಹಿತ್ಯ - 2006

21. ಯಶವಂತ ಚಿತ್ತಾಲ - ಸಮಗ್ರ ಸಾಹಿತ್ಯ - 2007

22. ಟಿ.ವಿ.ವೆಂಕಟಾಚಲಶಾಸ್ತ್ರಿ - ಸಮಗ್ರ ಸಾಹಿತ್ಯ - 2008

23. ಚಂದ್ರಶೇಖರ ಪಾಟೀಲ - ಸಮಗ್ರ ಸಾಹಿತ್ಯ - 2009

24. ಜಿ.ಹೆಚ್.ನಾಯಕ - ಸಮಗ್ರ ಸಾಹಿತ್ಯ - 2010

25. ಬರಗೂರು ರಾಮಚಂದ್ರಪ್ಪ - ಸಮಗ್ರ ಸಾಹಿತ್ಯ - 2011

26. ಡಾ.ಡಿ.ಎನ್.ಶಂಕರ ಭಟ್ಟ - ಸಮಗ್ರ ಸಾಹಿತ್ಯ - 2012

27. ಕಯ್ಯಾರ ಕಿಞ್ಞಣ್ಣ ರೈ - ಸಮಗ್ರ ಸಾಹಿತ್ಯ - 2013

28. ಪ್ರೊ.ಜಿ.ವೆಂಕಟಸುಬ್ಬಯ್ಯ - ಕನ್ನಡ ನಿಘಂಟು - 2014

29. ಬಿ. ಎ. ಸನದಿ - ಸಮಗ್ರ ಸಾಹಿತ್ಯ - 2015

30. ಡಾ. ಹಂ.ಪ. ನಾಗರಾಜಯ್ಯ - ಸಮಗ್ರಸಾಹಿತ್ಯ - 2016

31. ಕೆ.ಎಸ್.ನಿಸಾರ್ ಅಹಮದ್ -  ಸಮಗ್ರ ಸಾಹಿತ್ಯ - 2017

32. ಷ.ಶೆಟ್ಟರ್‌  -  ಸಂಶೋಧನೆ  -  2018

33. ಸಿದ್ದಲಿಂಗಯ್ಯ  -  ಸಮಗ್ರ ಸಾಹಿತ್ಯ  -  2019


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post