Menu

Home ನಲಿಕಲಿ About ☰ Menu


 

🔍

Mankuthimmana Kagga / ಕಗ್ಗ (ಅ )

ಅಜ್ಞಾತವಾದುದನಭಾವವೆನೆ ನಾಸ್ತಿಕನು ।

ಜ್ಞೇಯವೆಂದದಕೆ ಕೈಮುಗಿಯೆ ಭಕ್ತ ।।          

ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।        

ಸ್ವಜ್ಞಪ್ತಿಶೋಧಿ ಮುನಿ ಮಂಕುತಿಮ್ಮ ।।  


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।      

ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।               

ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।

ತಿನ್ನುವುದದಾತ್ಮವನೆ ಮಂಕುತಿಮ್ಮ ।।


ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।             

ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ।। 

ನಗುವುದೊಂದರೆ ನಿಮಿಷ ನಗಲು ಬಾಳ್ಮುಗಿಯುವುದು ।

ಮುಗುಳು ದುಡಿತಕೆ ತಣಿಸು ಮಂಕುತಿಮ್ಮ ।।  


ಅನ್ನವುಣುವಂದು ಕೇಳ್ ಅದನು ಬೇಯಿಸಿದ ನೀರ್ ।    

ನಿನ್ನ ದುಡಿತದ ಬೆಮರೊ ಪೆರರ ಕಣ್ಣೀರೋ ।। 

ತಿನ್ನು ನೀಂ ಜಗಕೆ ತಿನಲಿತ್ತನಿತ ಮಿಕ್ಕೂಟ ।  

ಜೀರ್ಣಿಸದ ಋಣಶೇಷ ಮಂಕುತಿಮ್ಮ ।।  

 

ಅತ್ಯಂತದುತ್ಕಟದ ಸನ್ನಿವೇಶಗಳ ಭರ ।

ಪ್ರತ್ಯಕ್ಷದರ್ಶನದಿನಲ್ಲದೆಂತಹುದು ।।                

ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ ।

ವಿಸ್ತಾರದದ್ಭುತವ ಮಂಕುತಿಮ್ಮ ।।   


ಅರಿ ಮಿತ್ರ ಸತಿ ಪುತ್ರ ಬಂಧು ಬಳಗವದೆಲ್ಲ ।

ಕರುಮದವತಾರಗಳೊ ಋಣಲತೆಯ ಚಿಗುರೋ ।।

ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ ।

ವುರಿಮಾರಿಯಾದೀತೋ ಮಂಕುತಿಮ್ಮ ।।  


ಅನುಭವದ ಪಾಲೊಳು ವಿಚಾರಮಂಥನವಾಗೆ । 

ಜನಿಯಿಕುಂ ಜ್ಞಾನನವನೀತವದೆ ಸುಖದಂ ।।      

ಗಿಣಿಯೋದು ಪುಸ್ತಕಜ್ಞಾನ ನಿನ್ನನುಭವವೆ ।  

ನಿನಗೆ ಧರುಮದ ದೀಪ ಮಂಕುತಿಮ್ಮ ।।  


ಅಂತೂ ಇಂತೂ ಎಂಟೂ ಜೀವಕಥೆ ಮುಗಿಯುವುದು ।

ಅಂದೂ ಎಂದೂ ಎಂದೂ ಜನುಮ ಕಳೆಯುವುದು ।। 

ಒಂದೇ ಮರುವಿನ ಮುಸುಕು ಮುಸುಕಲಿಹುದೆಲ್ಲವನು 

ಸಂತಸದ ಮಾತಿಷ್ಟೇ - ಮಂಕುತಿಮ್ಮ ।। 

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post