Menu

Home ನಲಿಕಲಿ About ☰ Menu


 

ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಚಿತ್ರ : 'ಕರುಳಿನ ಕರೆ'   
ರಚನೆ : ಆರ್. ಎನ್. ಜಯಗೋಪಾಲ್ 
ಸಂಗೀತ : ಎಂ. ರಂಗರಾವ್ 
ಗಾಯನ : ಎಸ್. ಜಾನಕಿ, ಬಿ. ಕೆ. ಸುಮಿತ್ರ ಮತ್ತು ಸಂಗಡಿಗರು.

ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ ಕರುಳಿನ ಕರೆಯೋಲೆ ||ಪ||

ಆ ಆ ಆಟ ಊಟ ಓಟ ಕನ್ನಡ ಒಂದನೇ ಪಾಠ

ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ||1||

ಇ ಇ ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು

ಈ ಈ ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು||2||

ಉ ಉ ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ

ಊ ಊ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ ||3||

ಋ ಋ ಎ ಏ ಐ ಭಾರತ ಮಾತೆಗೆ ಜೈ

ಒ ಒ ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು

ಓ ಓ ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು||4||

ಔ ಅಂ ಅ: ಅಹ ಆಹಾ ಆಅಹ್ಹ ||5||

ಭಗವದ್ಗೀತೆ ಕುರಿತು ರಸಪ್ರಶ್ನೆ ಭಾಗ - ೪

ಭಗವದ್ಗೀತೆ ೪ನೇ ಅಧ್ಯಾಯದ ಕುರಿತು ರಸಪ್ರಶ್ನೆಗಳು

1➤ ವಿವಸ್ವಾನನು ಯಾರು?

2➤ ಭಗವದ್ಗೀತೆ ಬೋಧನೆಯ ಜ್ಞಾನವನ್ನು ಮೊದಲು ಪಡೆದವರು ಯಾರು?

3➤ ಯಾರು ಇಕ್ಷ್ವಾಕುವಿಗೆ ಭಗವದ್ಗೀತೆಯನ್ನು ಹೇಳಿದರು?

4➤ ಸರ್ವೋಚ್ಚವಾದ ಭಗವದ್ಗೀತೆಯ ಜ್ಞಾನವನ್ನು __________ ರಿಂದ ಪಡೆಯಬೇಕು?

5➤ ಭಗವಾನ್ ಶ್ರೀಕೃಷ್ಣನ ಶಾಶ್ವತವಾದ ರೂಪ ಯಾವುದು?

6➤ ಭೌತಿಕ ಪ್ರಪಂಚದಲ್ಲಿ ಯಾವಾಗ ಮತ್ತು ಏಕೆ ಭಗವಂತನು ಪ್ರತ್ಯಕ್ಷಗೊಳ್ಳುತ್ತಾನೆ?

7➤ ಈ ಶರೀರವನ್ನು ಬಿಟ್ಟ ಮೇಲೆ ಒಬ್ಬರು ಭಗವಂತನ ಶಾಶ್ವತ ಧಾಮವನ್ನು ಹೇಗೆ ಪಡೆಯುತ್ತಾರೆ?

8➤ ಶೀಘ್ರ ಫಲಾಪೇಕ್ಷೆಯಿಂದ ಜನರು ಯಾರ ಪೂಜೆ ಮಾಡುತ್ತಾರೆ?

9➤ ಚತುರ್ವರ್ಣಗಳ ಸೃಷ್ಟಿಕರ್ತ ಯಾರು?

10➤ ಗುರುವನ್ನು ಸಂಪರ್ಕಿಸಲು ಉತ್ತಮ ಮಾರ್ಗವೆಂದರೆ?

Your score is

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು

  ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ ರಲ್ಲಿ ಪ್ರಾರಂಭಿಸಲಾಯಿತು. ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನೀಡಲು ನಿರ್ದೇಶಿಸಲಾಗಿದೆ.

 ಹೆಸರು  -  ವರ್ಷ  -  ಕ್ಷೇತ್ರ
1. ಕುವೆಂಪು  - 1992 - ಸಾಹಿತ್ಯ

2. ಡಾ. ರಾಜ್‌ಕುಮಾರ್  -   1992 - ಸಿನೆಮಾ

3. ಎಸ್. ನಿಜಲಿಂಗಪ್ಪ  - 1999 -ರಾಜಕೀಯ
 
4. ಸಿ ಎನ್ ಆರ್ ರಾವ್ - 2000 - ವಿಜ್ಞಾನ

5. ದೇವಿ ಪ್ರಸಾದ್ ಶೆಟ್ಟಿ - 2001 - ವೈದ್ಯಕೀಯ

6. ಭೀಮಸೇನ ಜೋಷಿ - 2005 - ಸಂಗೀತ

7. ಶ್ರೀ ಶಿವಕುಮಾರ ಸ್ವಾಮಿಗಳು - 2007 - ಸಾಮಾಜಿಕ ಸೇವೆ

8. ಡಾ. ಡಿ. ಜವರೇಗೌಡ - 2008 - ಶಿಕ್ಷಣ ಮತ್ತು ಸಾಹಿತ್ಯ

9. ಡಾ. ವೀರೇಂದ್ರ ಹೆಗ್ಗಡೆ - 2009 - ಸಾಮಾಜಿಕ ಸೇವೆ 

10. ಪುನೀತ್ ರಾಜಕುಮಾರ್ - 2021 - ಸಿನಿಮಾ ಹಾಗೂ ಸಾಮಾಜಿಕ ಸೇವೆ

ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಮೊದಲಸುತ್ತಿನ ಸೀಟುಗಳ ಹಂಚಿಕೆ ಪ್ರಕಟ.

ಆದರ್ಶ ವಿದ್ಯಾಲಯ ಮಾದರಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ದಿನಾಂಕ 17ನೇ ಏಪ್ರಿಲ್ 2022 ರಂದು ನಡೆದ ಪ್ರವೇಶ ಪರೀಕ್ಷೆಯ ಮೊದಲಸುತ್ತಿನ ಸೀಟುಗಳ ಹಂಚಿಕೆ ಮತ್ತು  ಕಟ್ ಆಫ್ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. 

                          6 ನೇ ತರಗತಿ ಪ್ರವೇಶಕ್ಕೆ 1 ನೇ ಸುತ್ತಿನ ಸೀಟು ಹಂಚಿಕೆಯನ್ನು ಪರಿಶೀಲಿಸಲು ನಿಮ್ಮ ನೋಂದಣಿ ಸಂಖ್ಯೆ ಅಥವಾ ಎಸ್‌ಎಟಿಎಸ್ ಸಂಖ್ಯೆ ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ ಅನ್ನು ನಮೂದಿಸಿ. 

#Click here & Check seat alloted in Round 1 for 6th STD Admission.


ಒಂದನೇ ಸುತ್ತಿನ ಎಲ್ಲಾ ಜಿಲ್ಲೆಗಳ ಕಟ್ ಆಫ್ ಅಂಕಗಳನ್ನು ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

1 ನೇ ಸುತ್ತಿನ ಕಟ್ ಆಫ್ ಅಂಕಗಳು



ಕರ್ನಾಟಕದ ಜಿಲ್ಲೆಗಳ ವಿಶೇಷ ಹೆಸರುಗಳು

ಧಾರವಾಡ    -   ಪೇಡಾ ನಗರಿ, ವಿದ್ಯಾಕಾಶಿ,                                            ಸಾಂಸ್ಕೃತಿಕ ನಗರಿ 

ಗದಗ           -    ಮುದ್ರಣ ನಗರಿ

ಬೆಳಗಾವಿ      -   ಕುಂದಾನಗರಿ 

ಮಂಡ್ಯ         -   ಸಕ್ಕರೆ ನಾಡು 

ಮೈಸೂರು     -   ಮಲ್ಲಿಗೆ ನಗರಿ / ಸಾಂಸ್ಕೃತಿಕ ನಗರಿ

ಬೆಂಗಳೂರು   -   ಉದ್ಯಾನನಗರಿ 

ತುಮಕೂರು    -  ಕಲ್ಪತರು ನಾಡು 

ಚಿತ್ರದುರ್ಗ      -  ದುರ್ಗದ ನಾಡು / ಕೋಟೆನಾಡು

ಬಾಗಲಕೋಟೆ - ಕೋಟೆನಾಡು 

ಹಾವೇರಿ          -  ಏಲಕ್ಕಿ ನಾಡು 

ಕೋಲಾರ         -  ಚಿನ್ನದ ನಗರಿ

ಬಳ್ಳಾರಿ             -  ಬಿಸಿಲನಾಡು, ಗಣಿನಾಡು

ದಾವಣಗೆರೆ      -  ಬೆಣ್ಣೆ  ನಗರಿ 

ಮಂಗಳೂರು    -  ಬಂದರು ನಗರಿ 

ಉಡುಪಿ           -  ಕೃಷ್ಣ  ನಗರಿ 

ಚಿಕ್ಕಮಗಳೂರು -  ಕಾಫಿ ನಾಡು 

ಕೊಡಗು           -  ಮಂಜಿನ ನಗರಿ 

ರಾಯಚೂರು   -   ಎಡೆದೊರೆ ನಾಡು / ಬಿಸಿಲ ನಾಡು

ವಿಜಯಪುರ    -   ಗುಮ್ಮಟ ನಗರಿ 

ಬೀದರ           -   ಸೂಫಿ ನಾಡು 

ಕಲಬುರ್ಗಿ       -   ಶರಣರ ನಾಡು 

ಉತ್ತರ ಕನ್ನಡ  -   ಕಡಲ ನಗರಿ / ಅರಣ್ಯಗಳ ನಾಡು

ರಾಮನಗರ     -   ರೇಷ್ಮೆ ನಾಡು 

ಶಿವಮೊಗ್ಗ        -  ಮಲೆನಾಡ ಹೆಬ್ಬಾಗಿಲು  

ಕೊಪ್ಪಳ        -  ಭತ್ತದ ಕಣಜ  


#ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು  & 4 ಕಂದಾಯ ವಿಭಾಗಗಳು

ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು

 ನಮ್ಮ  ಕರ್ನಾಟಕ ರಾಜ್ಯವು 1956 ನವ್ಹೆಂಬರ್ 1 ರಂದು ಮೈಸೂರು ರಾಜ್ಯವಾಗಿ ಏಕೀಕರಣವಾಯಿತು.  1973 ನವ್ಹೆಂಬರ್ 1 ಕ್ಕೆ ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಮಾಡಲಾಯಿತು. ಕರ್ನಾಟಕಕ್ಕೆ  ಎರಡು ಸಾವಿರ ವರ್ಷಗಳ ಇತಿಹಾಸವಿದೆ.  ಆಡಳಿತದ ಅನುಕೂಲಕ್ಕಾಗಿ  ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು.  ರಾಜ್ಯ ಸರ್ಕಾರ ಆಡಳಿತದ ಅನುಕೂಲಕ್ಕಾಗಿ ಪ್ರಸ್ತುತದ ಮೂವತ್ತೊಂದು ಜಿಲ್ಲೆಗಳನ್ನು ನಾಲ್ಕು ಕಂದಾಯ ವಿಭಾಗಗಳಾಗಿ ವಿಂಗಡಿಸಿದೆ.

 31 ಜಿಲ್ಲೆಗಳು ಪಟ್ಟಿ 

1. ಬೆಳಗಾವಿ 

2. ಕಲ್ಬುರ್ಗಿ 

3. ಬೀದರ್ 

4. ವಿಜಯಪುರ 

5. ಬಳ್ಳಾರಿ 

6. ರಾಯಚೂರು 

7. ಗದಗ

8. ಬಾಗಲಕೋಟೆ 

9. ಧಾರವಾಡ

10. ಹಾವೇರಿ 

11. ಕೊಪ್ಪಳ 

12. ಚಿತ್ರದುರ್ಗ 

13. ಯಾದಗಿರಿ 

14. ಉತ್ತರಕನ್ನಡ 

15. ರಾಮನಗರ 

16. ಮಂಡ್ಯ 

17. ಮೈಸೂರು 

18. ಹಾಸನ

19. ಕೊಡಗು 

20. ಬೆಂಗಳೂರು ನಗರ

21. ಬೆಂಗಳೂರು ಗ್ರಾಮಾಂತರ 

22. ಕೋಲಾರ 

23. ದಾವಣಗೆರೆ 

24. ತುಮಕೂರು 

25. ದಕ್ಷಿಣಕನ್ನಡ

26. ಉಡುಪಿ 

27. ಚಾಮರಾಜನಗರ 

28. ಶಿವಮೊಗ್ಗ 

29. ಚಿಕ್ಕಬಳ್ಳಾಪುರ 

30. ಚಿಕ್ಕಮಗಳೂರು

31. ವಿಜಯನಗರ 


ಕಂದಾಯ ವಿಭಾಗಗಳು & ಅವುಗಳಲ್ಲಿನ  ಜಿಲ್ಲೆಗಳು :

ಬೆಂಗಳೂರು ವಿಭಾಗ :-

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ.


ಬೆಳಗಾವಿ ವಿಭಾಗ :-

ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ


ಕುಲಬುರ್ಗಿ ವಿಭಾಗ :-

ಬಳ್ಳಾರಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯನಗರ


ಮೈಸೂರು ವಿಭಾಗ :-

ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು


#ಕರ್ನಾಟಕದ ಜಿಲ್ಲೆಗಳ ವಿಶೇಷ ಹೆಸರುಗಳು 

NEP-2020 ಆಧಾರಿತ Online ತರಬೇತಿ in Diksha App..

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ NEP-2020 ಆಧಾರಿತ ಮಾಡ್ಯೂಲ್ ಗಳನ್ನು ಇಲಾಖೆ ಸಿದ್ದಪಡಿಸಿದ್ದು, ಈಗಾಗಲೇ ತಾವು ನಿಷ್ಠಾ ಮಾಡ್ಯೂಲ್ ಗಳನ್ನು ಪೂರ್ಣಗೊಳಿಸಿದ್ದು ಅದೇ ಮಾದರಿಯಲ್ಲಿ NEP-2020 ಇದಕ್ಕೆ ಸಂಬಂಧಪಟ್ಟ ಮಾಡ್ಯೂಲ್ ಗಳು ಸಿದ್ಧವಾಗಿದ್ದು. ಜೂನ್ ಒಂದರಿಂದ  ದೀಕ್ಷಾ ಆ್ಯಪ್ ನಲ್ಲಿ ಲಭ್ಯವಿದ್ದು ಕಡ್ಡಾಯವಾಗಿ ಶಿಕ್ಷಕರು ಈ ಕೋರ್ಸುಗಳನ್ನು ಪೂರ್ಣಗೊಳಿಸಬೇಕು.

 ಮಾಡ್ಯೂಲ್ ಗಳ ವಿವರ ಈ ಕೆಳಗಿನಂತಿದೆ 

141-EP ರಿಂದ 149-EP ವರೆಗಿನ 9 ಮಾಡ್ಯೂಲ್ ಗಳು LPS ಹಾಗೂ HPS ಶಿಕ್ಷಕರಿಗೆ ಕಡ್ಡಾಯವಾಗಿದ್ದು, ನಂತರ  ಬೋಧಿಸುವ ವಿಷಯಗಳ 6 ಮಾಡ್ಯೂಲ್ ಗಳನ್ನು ಆಯ್ಕೆ ಮಾಡಿಕೊಂಡು ಪೂರ್ಣಗೊಳಿಸಬೇಕು.(9+6=15).

 ಈ ಕೆಳಗಿನ ಮಾಡ್ಯೂಲ್ ಗಳ ಹೆಸರಿನ ಮೇಲೆ ಕ್ಲಿಕ್ ಮಾಡಿ ಆ ಕೋರ್ಸ್ ಪ್ರಾರಂಭಿಸಿ..

1) KA_NEP_GC_141_ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರ ಪರಿಚಯಾತ್ಮಕ ಮಾಡ್ಯೂಲ್ (ಭವಿಷ್ಯದ ರೂಪುರೇಷೆಗಳು) 


2) KA_NEP_GC_142_ಒಳಗೊಳ್ಳುವ ಶಿಕ್ಷಣ-ಶೈಕ್ಷಣಿಕ ಪ್ರಕ್ರಿಯೆ ಮತ್ತು ತರಗತಿ ಅನುಷ್ಠಾನ


3) KA_NEP_GC_143_ಹೆಣ್ಣುಮಕ್ಕಳ ಶಿಕ್ಷಣ 


4) KA_NEP_GC_144_ಶಾಲಾಧಾರಿತ ಮೌಲ್ಯಾಂಕನ 


5)  KA_NEP_GC_145_NEP-2020: ತರಗತಿ ಪ್ರಕ್ರಿಯೆಯ ಸ್ವರೂಪ, ಬದಲಾವಣೆ ಹಾಗೂ ಅನುಷ್ಠಾನ (What to Think ನಿಂದ How to Think) 


6) KA_NEP_GC_146_ಸಂಜ್ಞಾಭಾಷೆ 


7) KA_NEP_GC_147_ಕಲಿಕಾರ್ಥಿ ಕೇಂದ್ರಿತ ಕಲಿಕಾ ಚಟುವಟಿಕೆಗಳು ಹಾಗೂ ತರಗತಿ ಪ್ರಕ್ರಿಯೆಗಳು


8) KA_NEP_GC_148_ವಿಶೇಷ ಸನ್ನಿವೇಶದ ಶಾಲೆಗಳಲ್ಲಿ -ತರಗತಿ ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು (ಅತಿ ಕಡಿಮೆ ಮಕ್ಕಳಿರುವ ಶಾಲೆಗಳು) 


9) KA_NEP_GC_149_ ವಿಶೇಷ ಸನ್ನಿವೇಶದ ಶಾಲೆಗಳಲ್ಲಿ – ತರಗತಿ ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು (ಅತಿ ಹೆಚ್ಚು ಮಕ್ಕಳಿರುವ ಶಾಲೆಗಳು) 



LPS ಬೋಧಿಸುವ ಶಿಕ್ಷಕರ ಕೋರ್ಸ್ ಗಳು

10) KA_NEP_GC_131_ಕಲಿಕಾ ಫಲಗಳು ಹಾಗೂ ತರಗತಿ ಪ್ರಕ್ರಿಯೆ ಪೂರ್ವ ಪ್ರಾಥಮಿಕ 1 ಮತ್ತು 2ನೇ ತರಗತಿ ವಿಷಯ ಕನ್ನಡ 


11) KA_NEP_GC_132_ ಕನ್ನಡ: ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (3, 4 ಮತ್ತು 5ನೇ ತರಗತಿ)


12KA_NEP_GC_136_MATHS_ಕಲಿಕಾ ಫಲಗಳು ಮತ್ತು ತರಗತಿ  ಪ್ರಕ್ರಿಯೆ_ಗಣಿತ (ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ) 


13) KA_NEP_GC_137_ ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ_ಗಣಿತ ( 3 ರಿಂದ 5 ನೇ ತರಗತಿ ) 


14) KA_NEP_GC_150_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (ಪೂರ್ವ ಪ್ರಾಥಮಿಕ ಹಾಗೂ 1 ಮತ್ತು 2 ನೇ ತರಗತಿ)


15) KA_NEP_GC_151_ಕಲಿಕಾ ಫಲಗಳು ಹಾಗೂ ತರಗತಿ ಪ್ರಕ್ರಿಯೆ, (3 ರಿಂದ 5ನೇ ತರಗತಿ, ಪರಿಸರ ಅಧ್ಯಯನ) 



HPS ಬೋಧಿಸುವ ಶಿಕ್ಷಕರ ಕೋರ್ಸ್ ಗಳು 

16) KA_NEP_GC_133_ ಕನ್ನಡ: ಕಲಿಕಾಫಲಗಳು ಮತ್ತು ತರಗತಿ ಪ್ರಕ್ರಿಯೆ (6, 7 ಮತ್ತು 8ನೇ ತರಗತಿ) 

17) KA_NEP_GC_134_Learning Outcomes and Classroom Interaction Class V-VIII 


18) KA_NEP_GC_138_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ ವರ್ಗ 6 ರಿಂದ 8 ನೇ ತರಗತಿ ಗಣಿತ   


19) KA_NEP_GC_139_ಕಲಿಕಾಫಲಗಳು ಮತ್ತು ತರಗತಿ ಪ್ರಕ್ರಿಯೆ_ವಿಜ್ಞಾನ (6 ರಿಂದ 8) 


20) KA_NEP_GC_140_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (6,7 ಮತ್ತು 8ನೇ ತರಗತಿ ಸಮಾಜ ವಿಜ್ಞಾನ)


21) KA_NEP_GC_152_URDU_ಕಲಿಕಾ ಫಲಗಳು ತರಗತಿ ಪ್ರಕ್ರಿಯೆ - Pre Primary + Class 1 + Class 2 + Foundational Stage URDU. 


ಮುಂದಿನ ಮಾಡ್ಯೂಲ್ ಗಳ ಲಿಂಕ್ Updates ಗಾಗಿ ಮತ್ತೆ-ಮತ್ತೆ ಈ ಪುಟಕ್ಕೆ ಭೇಟಿ ನೀಡುತ್ತಿರಿ. 

@ ಎಲ್ಲಾ ಮಾಡ್ಯೂಲ್ ಗಳ ಪಟ್ಟಿ 


GPT (6-8) ಶಿಕ್ಷಕರ ನೇಮಕಾತಿ ಪರೀಕ್ಷೆಯ Key-Answer ಪ್ರಕಟ - 2022

 15000 GPT (6-8) ಶಿಕ್ಷಕರ ನೇಮಕಾತಿಗೆ ದಿನಾಂಕ : 21 ಮೇ 2022 ಮತ್ತು 22 ಮೇ 2022  ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷಗಳ ಅಧಿಕೃತ Key-Answer ಅನ್ನು ಇಲಾಖೆಯ Website ನಲ್ಲಿ ಪ್ರಕಟಿಸಿದ್ದು, Key-Answer Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.


Click & Download KEY-ANSWER



@ ಇಲಾಖೆ ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು 10/06/2022 ಕೊನೆಯ ದಿನಾಂಕವಾಗಿದ್ದು, ಆಕ್ಷೇಪಣೆಗಳನ್ನು Online ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದ್ದು, ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಭ್ಯರ್ಥಿಯು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ ಆಕ್ಷೇಪಣೆ ಸಲ್ಲಿಸಬಹುದು.

Popular Post