Menu

Home ನಲಿಕಲಿ About ☰ Menu


 

🔍

KREIS 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2024-25

                  ರಾಜ್ಯದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ/ಶ್ರೀಮತಿ ಇಂದಿರಾ ಗಾಂಧಿ/ ಡಾ॥ ಬಿ.ಆರ್.ಅಂಬೇಡ್ಕರ್ / ಮಾಸ್ತಿ ವೆಂಕಟೇಶ ಅಯ್ಯಂಗಾರ್/ ಸಂಗೊಳ್ಳಿ ರಾಯಣ್ಣ/ ಕವಿ ರನ್ನ / ಗಾಂಧಿತತ್ವ / ಶ್ರೀ ನಾರಾಯಣ ಗುರು / ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಗಳಿಗೆ 2024-25ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

*ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 07-12-2023

*ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 31-12-2023

*Hall Ticket ಬಿಡುಗಡೆ ದಿನಾಂಕ :

*ಪರೀಕ್ಷೆ ನಡೆಯುವ ದಿನಾಂಕ : 18-02-2024

@ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು

KREIS 6th entrance Exam Notification 2024-25

@ಅರ್ಜಿ ಸಲ್ಲಿಸುವ ವಿಧಾನ@

* ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿಯೇ ONLINE ಮೂಲಕ ಭರ್ತಿ ಮಾಡಬೇಕು.

@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@

1. ವಿದ್ಯಾರ್ಥಿಯ SATS ಸಂಖ್ಯೆ                                   (ವಿದ್ಯಾರ್ಥಿಯ ಬಹುತೇಕ ಪ್ರಮುಖ ಮಾಹಿತಿಗಳು  SATS ನಿಂದ fetch ಆಗುವದರಿಂದ SATS ನಲ್ಲಿ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಅಪ್ ಡೇಟ್ ಇರಬೇಕು)

2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ:

(ವಾರ್ಷಿಕ ಆದಾಯ ಮಿತಿ
SC/ST/C-1      : ₹2,50,000.
2A,2B,3A,3B : ₹1,00,000 )

3. ವಿದ್ಯಾರ್ಥಿಯ ಇತ್ತೀಚಿನ 2 ಭಾವಚಿತ್ರ

4. ಇತರೆ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು

*ಇತರೆ ಮೀಸಲಾತಿ ಪ್ರಮಾಣ ಪತ್ರಗಳೆಂದರೆ*

A) ವಿಶೇಷ ಚೇತನ ಮಗು(PH)

B) ಅಲೆಮಾರಿ/ ಅರೆ  ಅಲೆಮಾರಿ/ ಸೂಕ್ಷ್ಮ/ ಅತಿ ಸೂಕ್ಷ್ಮ ಮಗು

C) ಮಾಜಿ ಸೈನಿಕರ ಮಗು

D) ಆಶ್ರಮ/ ವಸತಿ ಶಾಲೆ ಮಗು

E) ಪೌರ ಕಾರ್ಮಿಕರ/ಸಫಾಯಿ ಕರ್ಮಚಾರಿ ಮಗು

F)ಬಾಲ ಕಾರ್ಮಿಕ,ವಿಧವೆ ಮಗು,ದೇವದಾಸಿ

ಮಗು,ವಿಧುರನ ಮಗು,ಯೋಜನಾ ನಿರಾಶ್ರಿತರ ಮಗು,ಅನಾಥ ಮಗು,ಹೆಚ್.ಐ.ವಿ ಪೀಡಿತರ ಮಗು,ಆತ್ಮಹತ್ಯೆ ರೈತರ ಮಗು.

G)ಸ್ಥಳೀಯ ಅಭ್ಯರ್ಥಿ( ಸ್ಥಳೀಯ ಅಭ್ಯರ್ಥಿ ಎಂದರೆ ಸ್ವಂತ ತಾಲ್ಲೂಕಿನ ಅಭ್ಯರ್ಥಿ)

*ಮೇಲ್ಕಂಡ ವಿಶೇಷ ವರ್ಗಕ್ಕೆ ಸೇರಿದಲ್ಲಿ ಸಂಬಂಧಿತ ಸಕ್ಷಮ ಪ್ರಾಧಿಕಾರದಿಂದ  ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸುವುದು.

*ಅರ್ಜಿ ಸಲ್ಲಿಸುವಾಗ ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ(ಜಿಲ್ಲೆಯ ಎಲ್ಲ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು)

*ಅಭ್ಯರ್ಥಿಯು ತನ್ನ ಸ್ವಂತ ಜಿಲ್ಲೆಯ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.                        (ಸ್ವಂತ ಜಿಲ್ಲೆ ಎಂದರೆ ಜಾತಿ, ಆದಾಯ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಜಿಲ್ಲೆ.)

*ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ.

*ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.

ಪರೀಕ್ಷೆಯ ವಿಷಯ ಗಳು

*ಅಪ್ಲಿಕೇಶನ್‌ ಸಲ್ಲಿಸುವ ವಿಧಾನ, ಹಾಗೂ 'ಮಾಹಿತಿ ಪುಸ್ತಕ-2024' ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್‌ https://kreis.karnataka.gov.in/ ನಲ್ಲಿ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಡೌನ್‌ಲೋಡ್‌ ಮಾಡಿ ಓದಿಕೊಳ್ಳಬಹುದು.

ಲಭ್ಯವಿರುವ ಸ್ಥಾನಗಳ ಸಂಖ್ಯೆ


*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

@KREIS 2024 ಮಾಹಿತಿ ಪುಸ್ತಕ 

@KREIS 2024 ಪ್ರಕಟಣೆ 07-12-2023 

@CLICK For Online Application 

------------- ----------------------- -------------------- -----

 **NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು 

**NMMS ನ ಅಧ್ಯಯನ ವಸ್ತು/Study Material

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post