Menu

Home ನಲಿಕಲಿ About ☰ Menu


 

🔍

7th ಅಧ್ಯಾಯ - 14. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು

ಅಭ್ಯಾಸಗಳು
I. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. 'ಭಾರತದ ನವೋದಯ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?
ಉತ್ತರ : 'ಭಾರತದ ನವೋದಯ ಪಿತಾಮಹ' ಎಂದು ರಾಜಾ ರಾಮಮೋಹನರಾಯ್ ರವರನ್ನು ಕರೆಯುತ್ತಾರೆ.

2. ಮಹಾದೇವ ಗೋವಿಂದ ರಾನಡೆ ಯಾರು?
ಉತ್ತರ : ಮಹಾದೇವ ಗೋವಿಂದ ರಾನಡೆ ಬ್ರಹ್ಮ ಸಮಾಜದ ಪ್ರಮುಖ ನಾಯಕರು.

3. ಸತ್ಯಶೋಧಕ ಸಮಾಜದ ಸ್ಥಾಪಕರು ಯಾರು?
ಉತ್ತರ : ಸತ್ಯಶೋಧಕ ಸಮಾಜದ ಸ್ಥಾಪಕರು ಮಹಾತ್ಮ ಜ್ಯೋತಿಬಾ ಪುಲೆ.

4. “ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ” ಇದು ಯಾರ ಕರೆಯಾಗಿತ್ತು?
ಉತ್ತರ : “ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ" ಇದು ಸ್ವಾಮಿ ವಿವೇಕಾನಂದರ ಕರೆಯಾಗಿತ್ತು.

5. ಅನಿಬೆಸೆಂಟ್ ಯಾರು?
ಉತ್ತರ : ಅನಿಬೆಸೆಂಟ್ ಥಿಯಸಾಫಿಕಲ್ ಸೊಸಯಟಿಯ ಅಧ್ಯಕ್ಷರು.

6. ಅಲಿಘರ್ ಚಳುವಳಿಯ ನೇತಾರ ಯಾರಾಗಿದ್ದರು?
ಉತ್ತರ : ಅಲಿಘರ್ ಚಳುವಳಿಯ ನೇತಾರ ಸರ್ ಸೈಯ್ಯದ್ ಅಹ್ಮದ್ಖಾನ್

7. ಶ್ರೀ ನಾರಾಯಣಗುರು ಸ್ಥಾಪಿಸಿದ ಸಂಸ್ಥೆ ಯಾವುದು?
ಉತ್ತರ : ಶ್ರೀ ನಾರಾಯಣಗುರು ಸ್ಥಾಪಿಸಿದ ಸಂಸ್ಥೆ ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ

II. ಟಿಪ್ಪಣಿ ಬರೆಯಿರಿ.

1. ಸ್ವಾಮಿ ವಿವೇಕಾನಂದ
ಉತ್ತರ : ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ ದತ್ತ. ಇವರ ಗುರುಗಳು ಶ್ರೀ ರಾಮಕೃಷ್ಣ ಪರಮಹಂಸರು. 1893 ರಲ್ಲಿ ಅಮೆರಿಕಾದ ಚಿಕಾಗೊ ನಗರದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ವೇದಾಂತ ಕುರಿತು ಭಾಷಣ ಮಾಡಿದರು. ಶ್ರೀ ರಾಮಕೃಷ್ಣ ಮಿಷನ್ ಸಂಸ್ಥೆಯನ್ನು 1897 ರಲ್ಲಿ ಸ್ಥಾಪಿಸಿದರು. ಇವರು 'ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ' ಎನಿಸಿದ್ದಾರೆ. “ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ” ಇದು ಸ್ವಾಮಿ ವಿವೇಕಾನಂದರ ಕರೆಯಾಗಿತ್ತು. ಸ್ತ್ರೀಯರ ಉದ್ಧಾರ ರಾಷ್ಟ್ರದ ಉದ್ದಾರ ಎಂದರು.

2. ಸ್ವಾಮಿ ದಯಾನಂದ ಸರಸ್ವತಿ
ಉತ್ತರ : ಇವರ ಮೊದಲ ಹೆಸರು ಮೂಲ ಶಂಕರ. ಇವರು ವೇದಗಳಿಗೆ ಹಿಂದಿರುಗಿ ಎಂದು ಕರೆಕೊಟ್ಟರು. ಇವರು 1875 ರಲ್ಲಿ ಆರ್ಯಸಮಾಜವನ್ನು ಸ್ಥಾಪಿಸಿದರು. ಮೂರ್ತಿಪೂಜೆ,ಅಸ್ಪೃಶ್ಯತೆ, ಬಾಲ್ಯವಿವಾಹ, ಜಾತಿ ಪದ್ಧತಿ ಖಂಡಿಸಿದರು. ಅಂತರ್ಜಾತೀಯ & ವಿಧವಾ ವಿವಾಹ, ಗೋ ಪೂಜೆ, ಸ್ವರಾಜ್ಯ & ಸ್ವದೇಶಿ ಭಾವನೆ. ಪ್ರೋತ್ಸಾಹ ನೀಡಿದರು. ಇವರ ಕೃತಿ ಸತ್ಯಾರ್ಥ ಪ್ರಕಾಶ, ಲಾಹೋರ್ (ಈಗಿನ ಪಾಕಿಸ್ತಾನದಲ್ಲಿದೆ) ನಲ್ಲಿ ದಯಾನಂದ ಆಂಗ್ಲವೇದಿಕ್ ಶಾಲೆ ಆರಂಭಿಸಿದರು.

3. ಸರ್ ಸಯ್ಯದ್ ಅಹ್ಮದ್ ಖಾನ್
ಉತ್ತರ : 1863 ರಲ್ಲಿ ಅಬ್ದುಲ್ ಲತೀಫರು 'ಮಹಮಡನ್ ಲಿಟರರಿ ಸೊಸೈಟಿ' ಸ್ಥಾಪಿಸಿದರು. ಪರ್ದಾಪದ್ಧತಿ, ಬಹುಪತ್ನಿತ್ವ, ವಿವಾಹ ವಿಚ್ಛೇದನ ಪದ್ಧತಿ ವಿರೋಧ ಪಡಿಸಿದರು. ಅಲಿಘರ್ ಚಳುವಳಿಯನ್ನು ನಡೆಸಿದರು. 'ಟ್ರಾನ್ಸ್‌ಲೇಷನ್ ಸೊಸೈಟಿ' ಸ್ಥಾಪನೆ ನಂತರ ಸೈಂಟಿಫಿಕ್ ಸೊಸೈಟಿ ಎಂದಾಯಿತು. ಪತ್ರಿಕೆ: 'ಆಲಿಘರ್ ಇನ್‌ಸ್ಟಿಟ್ಯುಟ್ ಗೆಸೆಟ್' ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. 1875 ರಲ್ಲಿ 'ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜು ಆರಂಭ ನಂತರ 1920 ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಾಯಿತು.

4‌. ಶ್ರೀ ನಾರಾಯಣಗುರು
ಉತ್ತರ : ಶ್ರೀ ನಾರಾಯಣ ಗುರುಗಳು “ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ” ಸಂಸ್ಥೆಯನ್ನು ಸ್ಥಾಪಿಸಿದರು. ಜಾತಿ ಪದ್ಧತಿ, ಪ್ರಾಣಿಬಲಿ ವಿರೋಧ ವ್ಯಕ್ತಪಡಿಸಿ ಸುದಾರಣೆಗೆ ಪ್ರಯತ್ನಿಸಿದರು. ಒಬ್ಬ ದೇವರು, ಒಂದು ಧರ್ಮ ಮತ್ತು ಒಂದು ಜಾತಿ' ಇವರ ಆಶಯವಾಗಿತ್ತು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post