Menu

Home ನಲಿಕಲಿ About ☰ Menu


 

🔍

7th ಅಧ್ಯಾಯ - 21. ನ್ಯಾಯಾಂಗ

 ಅಭ್ಯಾಸಗಳು

ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.
1. ನ್ಯಾಯಾಂಗದ ಮುಖ್ಯ ಕಾರ್ಯಗಳೇನು?
ಉತ್ತರ : ಶಾಸಕಾಂಗ ರೂಪಿಸಿದ ಕಾಯಿದೆಗಳ ಅರ್ಥವಿವರಣೆ ನೀಡುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಮತ್ತು ವ್ಯಕ್ತಿ-ಸರ್ಕಾರಗಳ ನಡುವೆ ವಿವಾದದಲ್ಲಿ  ತೀರ್ಪು ನೀಡುವುದು. ಪ್ರಜೆಗಳ ಪ್ರಾಣ, ಆಸ್ತಿ, ಮರ್ಯಾದೆ ಮತ್ತು ಹಕ್ಕುಗಳನ್ನು  ಕಾಯುವ ಕಾರ್ಯ ಮಾಡುತ್ತದೆ.

2. ರಾಷ್ಟ್ರಮಟ್ಟದಲ್ಲಿಯ ಅತ್ಯುನ್ನತ ನ್ಯಾಯಾಲಯ ಯಾವುದು?
ಉತ್ತರ : ಸರ್ವೋಚ್ಚ ನ್ಯಾಯಾಲಯ

3. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಇರಬೇಕಾದ ಅರ್ಹತೆಗಳೇನು?
ಉತ್ತರ : 
  • ಭಾರತದ ಪ್ರಜೆಯಾಗಿರಬೇಕು. 
  • ಕನಿಷ್ಠ ಹತ್ತು ವರ್ಷಗಳ ಕಾಲ ಭಾರತದ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿರಬೇಕು;   ಅಥವಾ 
  • ಹತ್ತು ವರ್ಷಗಳ ಕಾಲ ಉಚ್ಚನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು.
  • ನಿವೃತ್ತಿ ವಯಸ್ಸು 62 ವರ್ಷ. 

4. ಸರ್ವೋಚ್ಚ ನ್ಯಾಯಾಲಯದ ಕಾರ್ಯಗಳೇನು?
ಉತ್ತರ : 
  • ಕೇಂದ್ರ ಮತ್ತು ರಾಜ್ಯ ಹಾಗೂ ರಾಜ್ಯಗಳೊಳಗಿನ ವಿವಾದ ಬಗೆ ಹರಿಸುವುದು. 
  • ಸಂವೆಧಾನದ ಅರ್ಥವಿವರಣೆ ನೀಡುವುದು. 
  • ರಾಷ್ಟ್ರಪತಿಯವರು ಸಲಹೆ, ಅಭಿಪ್ರಾಯ ಕೇಳಿದಾಗ ನೀಡುವುದು.  
  • ಮೂಲಭೂತ ಹಕ್ಕುಗಳನ್ನು ರಕ್ಷಿಸಲು ವಿವಿಧ ರಿಟ್‌ ಆಜ್ಞೆಗಳನ್ನು ಹೊರಡಿಸುವುದು. 

5. ನ್ಯಾಯನಿರ್ಣಯದ ವಿಳಂಬವನ್ನು ತಡೆಯುವುದು ಹೇಗೆ?
ಉತ್ತರ : ಲೋಕ ಅದಾಲತ್(ಜನತಾ ನ್ಯಾಯಾಲಯ)ಗಳ ಮೊರೆ ಹೋಗುವ ಮೂಲಕ ನ್ಯಾಯನಿರ್ಣಯ ವಿಳಂಬ ತಡೆಯಬಹುದು. ಎರಡೂ ಪಕ್ಷದವರೂ ಪರಸ್ಪರ ರಾಜಿ ಮಾಡಿಕೊಂಡು ಮುಂದಿನ ಖರ್ಚು, ನಷ್ಟ ಹಾಗೂ ವಿಳಂಬ ತಪ್ಪುತ್ತದೆ.

6. ನ್ಯಾಯಾಲಯಗಳಿಗೆ ಇನ್ನಷ್ಟು ಅಧಿಕಾರ ನೀಡಬೇಕೆ? ಬೇಡವೆ?
ಉತ್ತರ : ನೀಡಬೇಕು ಏಕೆಂದರೆ ಪ್ರಜಾಪ್ರಭುತ್ವದಲ್ಲಿ  ಅತಿ ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ನ್ಯಾಯ ಸಿಗುವಂತಾಗಬೇಕು. ನ್ಯಾಯಾಲಯ ನೀಡುವ ನ್ಯಾಯ ನಿರ್ಣಯಕ್ಕೆ ನಮ್ಮ ದೇಶದಲ್ಲಿ  ಹೆಚ್ಚು ಗೌರವವಿದೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post