Home ವಿವೇಕ ಜ್ಯೋತಿ ನಲಿಕಲಿ About Me ☰ Menu

7th ಅಧ್ಯಾಯ - 22. ರಕ್ಷಣಾ ಪಡೆಗಳು

ಅಭ್ಯಾಸಗಳು

 ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.

1. ರಕ್ಷಣಾಪಡೆಗಳ ಸರ್ವೋಚ್ಚ ಅಧಿಕಾರ ಯಾರಿಗೆ ನೀಡಲಾಗಿದೆ?
ಉತ್ತರ : ರಾಷ್ಟ್ರಪತಿಯವರಿಗೆ ರಕ್ಷಣಾಪಡೆಗಳ ಸರ್ವೋಚ್ಚ ಅಧಿಕಾರ ನೀಡಲಾಗಿದೆ.

2. ರಕ್ಷಣಾಪಡೆಯ ವಿಭಾಗಗಳಾವುವು?
ಉತ್ತರ : ರಕ್ಷಣಾಪಡೆಯ ವಿಭಾಗಗಳು ಮೂರು ಭೂಸೇನೆ. ನೌಕಾಸೇನೆ. ವಾಯುಸೇನೆ.

3. ಭೂಸೇನೆಯ ಮುಖ್ಯಸ್ಥರನ್ನು ಏನೆಂದು ಕರೆಯುವರು?
ಉತ್ತರ : ಭೂಸೇನೆಯ ಮುಖ್ಯಸ್ಥರನ್ನು  ದಂಡನಾಯಕ (ಜನರಲ್) ಎಂದು ಕರೆಯುವರು.

4. ಭೂಸೇನೆಯ ಆಡಳಿತ ಕಚೇರಿ ಎಲ್ಲಿದೆ?
ಉತ್ತರ : ಭೂಸೇನೆಯ ಆಡಳಿತ ಕಚೇರಿ ಹೊಸದಿಲ್ಲಿಯಲ್ಲಿದೆ.

5. ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ?
ಉತ್ತರ : ನೌಕಾದಳದ ಮುಖ್ಯಸ್ಥರನ್ನು ಆಡ್ಮಿರಲ್‌ ಎಂದು ಕರೆಯುತ್ತಾರೆ.

6. ಎನ್‌ಸಿಸಿಯ ಧ್ಯೇಯ ವಾಕ್ಯ ಯಾವುದು?
ಉತ್ತರ : ಎನ್‌ಸಿಸಿಯ ಧ್ಯೇಯ ವಾಕ್ಯ  ʼಶಿಸ್ತು ಮತ್ತು ಒಗ್ಗಟ್ಟುʼ.

7. ಭೂಸೇನೆಯ ಪ್ರಮುಖ ಕಾರ್ಯಗಳಾವುವು?
ಉತ್ತರ : ದೇಶದ ಗಡಿಗಳ ರಕ್ಷಣೆ. ನೈಸರ್ಗಿಕ ವಿಕೋಪಗಳ (ಭೂಕಂಪ, ಪ್ರವಾಹ, ಬರಗಾಲ, ಭೂಕುಸಿತ, ಬಿರುಗಾಳಿ ಮುಂತಾದವು) ಸಂದರ್ಭದಲ್ಲಿ  ಮಾನವೀಯ ಕಾರ್ಯಗಳ ನಿರ್ವಹಣೆ. 

8. ಗಡಿರಸ್ತೆಗಳ ಸಂಘಟನೆಯ ಕಾರ್ಯಗಳಾವುವು?
ಉತ್ತರ : ಮುಚ್ಚಿರುವ ರಸ್ತೆಗಳನ್ನು  ತೆರವು ಮಾಡಿ ಸೈನಿಕ ಕಾರ್ಯಾಚರಣೆಗಳಿಗೆ ತಕ್ಷಣದ ಸಹಾಯ ಮಾಡುವುದು. ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ಮತ್ತು ಒಳಚರಂಡಿ ನಿರ್ಮಾಣದ ಕಾರ್ಯ ಮಾಡುತ್ತದೆ.

9. ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯ ಯಾವುದು?
ಉತ್ತರ : ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯ ʼಮಾನವೀಯತೆ ಮತ್ತು ಸ್ವಯಂಸೇವೆʼ.

10. ರಕ್ಷಣಾಪಡೆಯಲ್ಲಿ ಸೇವೆ ಸಲ್ಲಿಸಲು ನಿನಗೆ ಇಚ್ಛೆಯಿದೆಯೇ? ಕಾರಣ ಕೊಡು,
ಉತ್ತರ : ರಕ್ಷಣಾಪಡೆಯಲ್ಲಿ ಸೇವೆ ಸಲ್ಲಿಸಲು ನನಗೆ ಇಚ್ಛೆಯಿದೆ ಕಾರಣ ದೇಶ ಸೇವೆ ಮಾಡುವುದೆಂದರೆ ನಿನಗೆ ತುಂಬಾ ಇಷ್ಟ. ನಮ್ಮ ದೇಶದ ಹೆಮ್ಮೆ ಹಾಗೂ ಗೌರವದ ಪ್ರತೀಕವಾದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಲು, ಅಖಂಡ ಭಾರತವನ್ನು ಉಳಿಸಲು, ವಿಶ್ವಕ್ಕೆ ಭಾರತದ ಐಕ್ಯತೆ ಸಾರಲು ನಾನು ರಕ್ಷಣಾ ಪಡೆಗೆ ಸೇರಬೇಕು. ದೇಶದ ನೆಲ, ಗಡಿ, ಜಲ ಪ್ರಾಕೃತಿಕ ಸಂಪತ್ತಿನ ರಕ್ಷಣೆಗಾಗಿ; ಭಾರತೀಯರಲ್ಲಿ ಮಾನವೀಯ ಮೌಲ್ಯ ಉಳಿಸಿ ಬೆಳೆಸಲು ಶಾಂತಿಯನ್ನು ಕಾಪಾಡಲು ನಾನು ರಕ್ಷಣಾಪಡೆಗೆ ಸೇರಬೇಕು.

ನಾವೇಕೆ ರಕ್ಷಣಾಪಡೆಯಲ್ಲಿ ಸೇವೆ ಸಲ್ಲಿಸಬೇಕು?

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.