Menu

Home ನಲಿಕಲಿ About ☰ Menu


 

🔍

7th ಅಧ್ಯಾಯ -15. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857–1858)

ಅಭ್ಯಾಸಗಳು

 I  ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಕ್ಷಣದ ಕಾರಣ ಯಾವುದಾಗಿತ್ತು?
ಉತ್ತರ : ಸಾ.ಶ. 1857ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು (ಎನ್‌ಫೀಲ್ಡ್ ರೈಫಲ್) ಸೇನೆಯಲ್ಲಿ ತೊಡಗಿಸಿದ್ದು ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು.

2. ಮಂಗಲ ಪಾಂಡೆ ಯಾರು?
ಉತ್ತರ : ಮೀರತ್‌ನ ಬ್ಯಾರಕ್‌ಪುರದ (ಬಂಗಾಲ) ಭಾರತೀಯ ಸಿಪಾಯಿ ಮಂಗಲ್ ಪಾಂಡೆ ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿ, ಬಹಿರಂಗವಾಗಿಯೇ ಬಿಟ್ರಿಷ್ ಅಧಿಕಾರಿಯೊಬ್ಬನಿಗೆ ಗುಂಡಿಕ್ಕಿಕೊಂದವನು.

3. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಯಾವುದಾದರೂ ಒಂದು ಪರಿಣಾಮವನ್ನು ತಿಳಿಸಿರಿ.
ಉತ್ತರ : ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಅಂತ್ಯಗೊಂಡು ಅದರ ಕೈಯಲ್ಲಿದ್ದ ಭಾರತದ ಆಳ್ವಿಕೆಯನ್ನು ಬ್ರಿಟಿಷ್ ರಾಣಿ ವಹಿಸಿಕೊಂಡಳು. ಸಾ.ಶ. 1858ರಲ್ಲಿ ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಭಾರತೀಯರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು 'ಘೋಷಣೆ' ಯನ್ನು ಹೊರಡಿಸಿದಳು.

4. 1857ರ ಹೋರಾಟವನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಮೊದಲು ಕರೆದವರು ಯಾರು?

ಉತ್ತರ : 1857ರ ಹೋರಾಟವನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಮೊದಲು ಕರೆದವರು ವಿನಾಯಕ ದಾಮೋದರ ಸಾವರ್ಕರ್.

II  ಟಿಪ್ಪಣಿ ಬರೆಯಿರಿ.

1. ಸ್ವಾತಂತ್ರ್ಯ ಸಂಗ್ರಾಮದ ಕಾರಣಗಳು
ಉತ್ತರ : 1. ರಾಜಕೀಯ ಕಾರಣ
             2. ಆಡಳಿತಾತ್ಮಕ ಕಾರಣ
             3. ಆರ್ಥಿಕ ಕಾರಣ
             4. ಸಾಮಾಜಿಕ ಮತ್ತು ಧಾರ್ಮಿಕ ಕಾರಣ
             5. ಸೈನಿಕ ಕಾರಣ
             6. ತಕ್ಷಣದ ಕಾರಣ

2. ಮಂಗಲ್ ಪಾಂಡೆ
ಉತ್ತರ : ಬ್ಯಾರಕ್‌ ಪುರದ (ಬಂಗಾಲ) ಭಾರತೀಯ ಸಿಪಾಯಿ ಮಂಗಲ್‌ ಪಾಂಡೆ ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿ, ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನಿಗೆ ಗುಂಡಿಕ್ಕಿಕೊಂದನು. ನಂತರ ಅವನು ಸಹ ಕೊಲ್ಲಲ್ಪಟ್ಟನು.

3. ಝಾನ್ಸಿ ರಾಣಿ ಲಕ್ಷ್ಮೀಬಾಯಿ
ಉತ್ತರ : ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಭಾರತದ ಉತ್ತರಪ್ರದೇಶದ ಝಾನ್ಸಿಯ ರಾಣಿಯಾಗಿದ್ದಳು. ಸಾ.ಶ 1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಬ್ರಿಟಿಷ್ ರ ವಿರುದ್ಧ  ದಂಗೆಯಲ್ಲಿ ಲಕ್ಷ್ಮೀಬಾಯಿ ಹೋರಾಡಿ ವೀರ ಮರಣ ಹೊಂದಿದಳು. 

4. ಎರಡನೇ ಬಹಾದೂರ್‌ಷಹ
ಉತ್ತರ : ಮೋಘಲ್ ಸಾಮ್ರಾಜ್ಯದ ಕೊನೆಯ ದೊರೆ, ಡಾಲ್‌ಹೌಸಿಯ ನೀತಿಯಿಂದ ಈತ ರಾಜ್ಯ ಕಳೆದುಕೊಂಡನು. ವಯೋವೃದ್ಧನಾದ  ಬಹಾದೂರ್‌ಷಹ ರಾಜಕೀಯ ಒತ್ತಡಗಳಿಂದಾಗಿ ಕೇವಲ ನಾಮಮಾತ್ರ ಚಕ್ರವರ್ತಿಯಾಗಿದ್ದನು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post