Menu

Home ನಲಿಕಲಿ About ☰ Menu


 

🔍

5, 8 ಮತ್ತು 9 ನೇ ತರಗತಿ SA-2 ವೇಳಾಪಟ್ಟಿ

                    2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಸಂಕಲಾತ್ಮಕ ಮೌಲ್ಯಮಾಪನ (SA-2)ವನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಪರಿಷತ್ತು ನಡೆಸಲಿದ್ದು; ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಪರಿಷತ್ತು ಪ್ರಕಟಿಸಿದೆ.

5, 8 ಮತ್ತು 9 ನೇ ತರಗತಿ SA-2 ವೇಳಾಪಟ್ಟಿ

        ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಶಾಲಾ ಹಂತದಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ತಾಲ್ಲೂಕು ಹಂತದಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ಆದರೆ, ಮಂಡಳಿಯಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಬಿಇಒ ಗಳಿಗೆ ಕಳುಹಿಸಲಾಗುತ್ತದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಅವಶ್ಯವಿರುವಷ್ಟು ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿಕೊಂಡು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ವಿತರಣೆ ಮಾಡಲಿದ್ದಾರೆ.

5ನೇ ತರಗತಿ ವೇಳಾಪಟ್ಟಿ :

5ನೇ ತರಗತಿ ಎಲ್ಲಾ ಪರೀಕ್ಷೆಗಳು ಮಾರ್ಚ್ 11 ರಿಂದ 14ರವರೆಗೆ ಮಧ್ಯಾಹ್ನ 2.30ರಿಂದ 4.30ರ ವರೆಗೆ  ನಡೆಯಲಿವೆ. 

ಮಾರ್ಚ್ 11 - ಪ್ರಥಮ ಭಾಷೆ ಕನ್ನಡ, 

ಮಾರ್ಚ್12 - ದ್ವಿತೀಯ ಭಾಷೆ ಇಂಗ್ಲಿಷ್

ಮಾರ್ಚ್ 13 - ಪರಿಸರ ಅಧ್ಯಯನ 

ಮಾರ್ಚ್ 14 - ಗಣಿತ ಪರೀಕ್ಷೆ ನಡೆಯಲಿದೆ.

2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನದ (SA-2) ತಾತ್ಕಾಲಿಕ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.


8 ಮತ್ತು 9ನೇ ತರಗತಿ ವೇಳಾಪಟ್ಟಿ :

ಮಾರ್ಚ್ 11 - ಪ್ರಥಮ ಭಾಷೆ ಕನ್ನಡ

ಮಾರ್ಚ್ 12 - ದ್ವಿತೀಯ ಭಾಷೆ ಇಂಗ್ಲಿಷ್

ಮಾರ್ಚ್ 13 - ತೃತೀಯ ಭಾಷೆ ಹಿಂದಿ

ಮಾರ್ಚ್ 14 - ಗಣಿತ

ಮಾರ್ಚ್ 15 - ವಿಜ್ಞಾನ

ಮಾರ್ಚ್ 16 - ಸಮಾಜ ವಿಜ್ಞಾನ

ಮಾರ್ಚ್ 18 - ದೈಹಿಕ ಶಿಕ್ಷಣ

8 ಮತ್ತು 9ನೇ ತರಗತಿ ಎಲ್ಲಾ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿವೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post