Menu

Home ನಲಿಕಲಿ About ☰ Menu


 

🔍

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ | Karnataka Arogya Sanjeevini Scheme

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ | Karnataka Arogya Sanjeevini Scheme

ಯೋಜನೆಯ ಉದ್ದೇಶ
ಕರ್ನಾಟಕ ಸರ್ಕಾರವು ಆಯವ್ಯಯದಲ್ಲಿ ಘೋಷಿಸಿದಂತೆ, ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತವಾಗಿ ವಿವಿಧ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಎಂಬ ಮಹತ್ವಕಾಂಕ್ಷಿ ಆರೋಗ್ಯ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್) ಮುಖಾಂತರ ಅನುಷ್ಠಾನಗೊಳಿಸುತ್ತಿದೆ.


ಯೋಜನೆಯ ಫಲಾನುಭವಿಗಳು
• ಸರ್ಕಾರದ ಎಲ್ಲಾ ಇಲಾಖೆಗಳ ಐದು ಲಕ್ಷಕ್ಕಿಂತ ಹೆಚ್ಚು ಸರ್ಕಾರಿ ನೌಕರರು.
• ಸರ್ಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರು ಸೇರಿದಂತೆ ಅಂದಾಜು 25 ಲಕ್ಷಕ್ಕಿಂತ ಹೆಚ್ಚು ಜನರು ಈ ಯೋಜನೆಯ ಫಲಾನುಭವಿಗಳು.

• ಸರ್ಕಾರಿ ನೌಕರರ ಪತಿ ಅಥವಾ ಪತ್ನಿ, ಅವಲಂಬಿತ ಮಕ್ಕಳು ಮತ್ತು ತಂದೆ-ತಾಯಿ.


ಯೋಜನೆಯಡಿ ನೀಡಲಾಗುವ ವೈದ್ಯಕೀಯ ಸೌಲಭ್ಯಗಳು
• 2500 ಕ್ಕಿಂತ ಹೆಚ್ಚು ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳು.

• ವೈದ್ಯರು / ತಜ್ಞ ವೈದ್ಯರೊಂದಿಗೆ ಸಮಾಲೋಚನೆ.

• ಶಸ್ತ್ರ ಚಿಕಿತ್ಸಾ ವಿಧಾನಗಳು.

• ವೈದ್ಯಕೀಯ ಚಿಕಿತ್ಸಾ ವಿಧಾನಗಳು - ಮೆಡಿಕಲ್ ಮ್ಯಾನೆಜ್‌ಮೆಂಟ್.

• ರೋಗ ನಿರ್ಧಾರ ವಿಧಾನಗಳು - ವಿವಿಧ ಬಗೆಯ ವೈದ್ಯಕೀಯ ತಪಾಸಣಿಗಳು, ಇಮೇಜಿಂಗ್ ಸೌಲಭ್ಯಗಳು - ಕ್ಷ-ಕಿರಣ, ಸಿ.ಟಿ ಸ್ಥಾನ್, ಇ.ಸಿ.ಜಿ, ಎಂ.ಆರ್.ಐ, ಆಂಜಿಯೋಗ್ರಾಮ್, ಅಲ್ಬಸೌಂಡ್ ಇತ್ಯಾದಿ.

• ಕಣ್ಣು ಹಾಗೂ ದಂತ ಚಿಕಿತ್ಸೆಗಳು.

• ಹಗಲು ಚಿಕಿತ್ಸೆಗಳು Day-care - ಕಿಮೋಥೆರಪಿ, ಹಿಮೊಡಯಾಲಿಸಿಸ್, ಲಘು ವೈದ್ಯಕೀಯ ವಿಧಾನಗಳು, ಬಯಾಸ್ಸಿ, ಲಘು ಶಸ್ತ್ರ ಚಿಕಿತ್ಸೆಗಳು, ಕಣ್ಣಿನ ಮೊರೆ ಶಸ್ತ್ರ ಚಿಕಿತ್ಸೆ, ಇತ್ಯಾದಿ.

• ಅತಿ ವಿಶೇಷ, ವಿರಳ ಹಾಗೂ ಭಾರಿ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಚಿಕಿತ್ಸೆಗಳು.

• ಅಂಗಾಂಗ ಕಸಿ.

• ಆಯುರ್ವೇದ / ಪ್ರಕೃತಿ ಚಿಕಿತ್ಸೆ, ಯೋಗ, ಯುನಾನಿ, ಹೋಮಿಯೋಪತಿ ಚಿಕಿತ್ಸೆಗಳು.

• ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳು.

• ಆಂಬ್ಯುಲೆನ್ಸ್ ಸೇವೆಗಳು.


ಸಹಭಾಗಿ ಇಲಾಖೆಗಳು ಮತ್ತು ಸಂಸ್ಥೆಗಳು
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನದಲ್ಲಿ ಈ ಕೆಳಕಂಡ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತದೆ.

•  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆಯುಷ್‌ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ಸರ್ಕಾರಿ ವಲಯದ ವೈದ್ಯಕೀಯ ಸಂಸ್ಥೆಗಳು - ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು, ಸಾಮಾನ್ಯ ಆಸ್ಪತ್ರೆಗಳು, ಬಹುತಜ್ಞ ಆಸ್ಪತ್ರೆಗಳು, ಭೋದನಾ ಆಸ್ಪತ್ರೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಇತ್ಯಾದಿ. 

• ಸಾರ್ವಜನಿಕ ವಲಯದ ಸ್ವಾಯತ್ತ ಸಂಸ್ಥೆಗಳು.

• ಸ್ಥಳೀಯ ಸಂಸ್ಥೆಗಳಿಗೆ ಒಳಪಟ್ಟ ಆಸ್ಪತ್ರೆಗಳು.

• ಯೋಜನೆಯಡಿ ನೊಂದಾಯಿಸಲ್ಪಟ್ಟ ಖಾಸಗಿ ವಲಯದ ವೈದ್ಯಕೀಯ ತಪಾಸಣಾ ಕೇಂದ್ರಗಳು, ರೋಗ ನಿರ್ಧಾರ ಕೇಂದ್ರಗಳು, ಇಮೇಜಿಂಗ್ ಕೇಂದ್ರಗಳು, ಏಕ ಹಾಗೂ ಬಹುತಜ್ಞ ಆಸ್ಪತ್ರೆಗಳು.

• ಕಣ್ಣು ಹಾಗೂ ದಂತ ಆಸ್ಪತ್ರೆಗಳು.

• ಹಗಲು ಚಿಕಿತ್ಸಾ ಕೇಂದ್ರಗಳು – ಡೇ-ಕೇರ್ ಕೇಂದ್ರಗಳು.

• ಡಯಾಲಿಸಿಸ್ ಕೇಂದ್ರಗಳು.

• ಆಯುರ್ವೇದ, ಯುನಾನಿ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಆಸ್ಪತ್ರೆಗಳು.

• ಕೃತಕ ಗರ್ಭಧಾರಣ (IVF) ಕೇಂದ್ರಗಳು. ವಾಕ್ ಶ್ರವಣ – ಎ.ವಿ.ಟಿ ಕೇಂದ್ರಗಳು.


ಯೋಜನೆಯ ನಿರ್ವಹಣೆ ಮತ್ತು ಅನುಷ್ಠಾನ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿರ್ವಹಿಸಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಮುಖಾಂತರ ಅನುಷ್ಠಾನಗೊಳಿಸಲಾಗುವುದು.

ಯೋಜನೆಯ ಕಾರ್ಯ ವಿಧಾನ
• ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಒದಗಿಸಲಾಗುವ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳು ನಗದು ರಹಿತವಾಗಿರುತ್ತವೆ.

• ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯಡಿ ನೊಂದಾಯಿಸಲ್ಪಡುತ್ತಾರೆ.

• ಫಲಾನುಭವಿಗಳು ತಮಗೆ ಅನುಕೂಲವಾದ ಯಾವುದೇ ಸಾರ್ವಜನಿಕ ವಲಯದ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ರೆಫರಲ್ ಇಲ್ಲದೆ ತಮ್ಮ ಕೆ.ಎ.ಎಸ್.ಎಸ್ ಆರೋಗ್ಯ ಕಾರ್ಡ್‌ನ್ನು ಹಾಜರುಪಡಿಸಿ ವೈದ್ಯಕೀಯ ಸೌಲಭ್ಯಗಳನ್ನು ನಗದು ರಹಿತವಾಗಿ ಪಡೆಯಬಹುದಾಗಿದೆ.

• ಆಸ್ಪತ್ರೆಯಲ್ಲಿ ದಾಖಲಾದ ಕೆಲವೇ ಘಂಟೆಗಳಲ್ಲಿ ಎಸ್.ಎ.ಎಸ್.ಟಿ ಮುಖಾಂತರ ಪ್ರಿ-ಆಥ್ (ಪೂರ್ವ ಅನುಮತಿ) ಅನುಮೋದನೆ ಹಾಗೂ ಚಿಕಿತ್ಸೆಗೆ ಅನುವು ಮಾಡಿ ಕೊಡಲಾಗುವುದು.

• ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಗರಿಷ್ಟ ಮಿತಿ ಇಲ್ಲ.


ಯೋಜನೆಯ ಚಾಲನೆ ಹಾಗೂ ಕಾರ್ಯಾಚರಣೆ
• ಯೋಜನೆಗೆ ಸಾಂಕೇತಿಕವಾಗಿ ದಿನಾಂಕ 20/03/2023ರಂದು ಚಾಲನೆ ನೀಡಲಾಗಿದೆ.

• ಕೆಲವೇ ದಿನಗಳಲ್ಲಿ ಫಲಾನುಭವಿಗಳ ನೋಂದಣಿ ಹಾಗೂ ಆಸ್ಪತ್ರೆಗಳ ನೋಂದಾವಣೆ ಪ್ರಾರಂಭ.

• ಹಂತ ಹಂತವಾಗಿ ನಗದು ರಹಿತ ಹೊರರೋಗಿ ಚಿಕಿತ್ಸೆ ಹಾಗೂ ಔಷಧೋಪಚಾರ, ವಾರ್ಷಿಕ ಆರೋಗ್ಯ ತಪಾಸಣೆ, ವಿಶೇಷ ಚೇತನರಿಗೆ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಣೆ ಮಾಡಲಾಗುವುದು.


KASS ಕರ್ನಾಟಕ ರಾಜ್ಯಪತ್ರ 



ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕೈಪಿಡಿ 


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post