Menu

Home ನಲಿಕಲಿ About ☰ Menu


 

ಸರ್ ಸಿ.ವಿ.ರಾಮನ್ ಜೀವನ ಮತ್ತು ಸಾಧನೆ | Sir C. V. Raman Life and Achievement

ಸರ್  ಸಿ.ವಿ.ರಾಮನ್ ಜೀವನ ಮತ್ತು ಸಾಧನೆ | Sir C. V. Raman Life and Achievement

               ಸರ್ ಚಂದ್ರಶೇಖರ ವೆಂಕಟ ರಾಮನ್ ಅವರು ಭಾರತದ ಮಹಾನ್ ವಿಜ್ಞಾನಿ, ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪವು ಭಾರತವನ್ನು ಹೆಮ್ಮೆಪಡುವಂತೆ ಮಾಡಿತು. ವಿಜ್ಞಾನದಲ್ಲಿ ಅವರ ಆಸಕ್ತಿ ಮತ್ತು ಸಂಶೋಧನಾ ಕಾರ್ಯದ ಮೇಲಿನ ಸಮರ್ಪಣೆಯು ಅವರನ್ನು "ರಾಮನ್ ಪರಿಣಾಮ"ವನ್ನು ಕಂಡುಹಿಡಿಯುವಂತೆ ಮಾಡಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಸಾ.ಶ 1930 ರಲ್ಲಿ ಈ ನೊಬೆಲ್ ಪ್ರಶಸ್ತಿ ಪುರಸ್ಕೃತರಾದರು.

              ವಿಜ್ಞಾನದ ಎಂಬುದು ಕೇವಲ ಪಾಶ್ಚತ್ಯ ದೇಶದವರಿಗೆ ಸೀಮಿತವಾಗಿದ್ದ ಕಾಲದಲ್ಲಿ ಕೇವಲ ಇನ್ನೂರು ರೂಪಾಯಿಗಳ ವೆಚ್ಚದಲ್ಲಿ ತಾನೇ ಅಳವಡಿಸಿಕೊಂಡ ಉಪಕರಣಗಳ ಸಾಹಯದಿಂದ 1928 ಫೇಬ್ರುವರಿ 28 ರಂದು ಇಡಿ ವಿಶ್ವವು ಬೆರಗಾಗುವಂತೆ "ರಾಮನ್ ಪರಿಣಾಮ" ಸಂಶೋಧನೆಯನ್ನು ಜಗತ್ತಿಗೆ ಪರಿಚಯಿಸಿದ ದಿನ. ಈ ದಿನ ಭಾರತದ ವೈಜ್ಞಾನಿಕ ಕ್ಷೇತ್ರದಲ್ಲಿ ಸುವರ್ಣಕ್ಷರಗಳಲ್ಲಿ ಬರೆದಿಡಬೇಕಾದ ದಿನ ನಿರ್ದಿಷ್ಟ ತರಂಗಾಂತರದ ಬೆಳಕಿನ ಕಿರಣಗಳನ್ನು ರಾಮನ್ ಗಮನಿಸಿದರು. ಈ ಅಸಂಗತ ಚದುರುವಿಕೆ ಎಂದು ಕರೆಯಲ್ಪಡುವ ವಿದ್ಯಮಾನ "ರಾಮನ್ ಪರಿಣಾಮ" ಎಂದು ಪ್ರಖ್ಯಾತವಾಯಿತು.  


ಬಾಲ್ಯ ಜೀವನ ಮತ್ತು ಕುಟುಂಬ :

ಸರ್  ಸಿ. ವಿ. ರಾಮನ್ ಅವರು ಜನಿಸಿದ್ದು 1888 ನವೆಂಬರ್ 7ರಂದು ತಮಿಳುನಾಡಿನ ತಿರುಚನಪಳ್ಳಿಯಲ್ಲಿ. ಇವರು ಬಾಲ್ಯದಿಂದಲೂ ಬುದ್ಧಿವಂತ ಮತ್ತು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅವರ ತಂದೆ ಚಂದ್ರಶೇಖರ ಅಯ್ಯರ್ ಶಾಲಾ ಉಪಧ್ಯಾಯರು ರಾಮನ್ ತಮ್ಮ ತಂದೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎಫ್.ಎ (ಇಂದಿನ ಪಿ.ಯು.ಸಿ) ಪರೀಕ್ಷೆ ಮುಗಿಸಿ ಮದರಾಸಿಗೆ ಬಂದು ಪ್ರಸಿಡೇನ್ಸಿ ಕಾಲೇಜಿನಲ್ಲಿ ಬಿ.ಎ. ತರಗತಿ ಸೇರಿದರು. ಇವರು ಎಫ್.ಎ. ಮುಗಿಸಿ ಬಿ.ಎ. ತರಗತಿ ಸೇರಿದಾಗ ಕೇವಲ 14 ವರ್ಷಗಳು, ಎಮ್.ಎ. ಡಿಗ್ರಿಯನ್ನು ಪ್ರಥಮ ಸ್ಥಾನ ಪಡೆದುದಲ್ಲದೆ ವಿದ್ಯಾರ್ಥಿಯಾಗಿರುವಾಗಲೇ ಒಂದು ಸಂಶೋಧನ ಪ್ರಬಂಧವನ್ನು ಬರೆದು ಲಂಡನ್ನಿನ ಫಿಲಾಸಫಿಕಲ್  ಮ್ಯಾಗಜೀನ್ ನಲ್ಲಿ ಪ್ರಕಟಿಸಿದರು ಆಗ ಅವರಿಗೆ ಕೇವಲ 19 ವರ್ಷಗಳಾಗಿದ್ದವು.
           ಸಾ.ಶ 1907 ರಲ್ಲಿ ಸರ್ ಸಿ. ವಿ. ರಾಮನ್ ಅವರು ಲೋಕಸುಂದರಿ ಅಮ್ಮಾಳ್ ಅವರನ್ನು ವಿವಾಹವಾದರು ಮತ್ತು ಚಂದ್ರಶೇಖರ್ ಮತ್ತು ರಾಧಾಕೃಷ್ಣನ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದರು.

ಸಂಶೋಧನೆಗೆ "ಇಂಡಿಯನ್ ಅಸೋಸಿಯೇಷನ್ ​​ಫಾರ್ ಕಲ್ಟಿವೇಶನ್ ಅಂಡ್ ಸೈನ್ಸ್" ಪ್ರೇರಣೆ :

ಅವರ ತಂದೆಯ ಆಸಕ್ತಿಯಿಂದಾಗಿ, ಅವರು ಹಣಕಾಸು ನಾಗರಿಕ ಸೇವೆಗಳ (ಎಫ್‌ಸಿಎಸ್) ಪರೀಕ್ಷೆಗೆ ಹಾಜರಾಗಿ ಅಗ್ರಸ್ಥಾನ ಪಡೆದರು. 1907 ರಲ್ಲಿ, ಅವರು ಕಲ್ಕತ್ತಾಗೆ ಹೋದರು ಮತ್ತು ಸಹಾಯಕ ಅಕೌಂಟೆಂಟ್ ಜನರಲ್ ಆಗಿ ಸೇವೆಗೆ ಸೇರಿದರು. ಒಂದ ಸಂಜೆ ಕಛೇರಿಯಿಂದ ಮನೆಗೆ ಹಿಂದುರುಗುತ್ತಿದ್ದಾಗ ಇಂಡಿಯನ್ ಅಸೋಸಿಷಿಯನ್ ಪಾರ್ ಕಲ್ಟಿವೇಶನ್ ಆಫ್ ಸೈನ್ಸ್ ಎಂಬ ಬೋರ್ಡ ಅವರ ಕಣ್ಣಿಗೆ ಬಿದ್ದಿತ್ತು, ಇದು ಅವರ ಮುಂದಿನ ಜೀವನದ ಹಾದಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಅಲ್ಲಿ ಹೋಗಿ ವಿಚಾರಿಸಿದಾಗ ಸಂಜೆಯ ವೇಳೆಯಲ್ಲಿ ಅಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲು ಅವಕಾಶವಿದೆ ಎಂದು ತಿಳಿಯಿತು. ವಿಜ್ಞಾನದಲ್ಲಿ ಅವರಿಗಿದ್ದ ಅದಮ್ಯ ಆಸಕ್ತಿಯ ಕಾರಣ ಅವರು ಮರುದಿನದಿಂದ ಬಿಡುವಿನ ಕಾಲದ ವಿಜ್ಞಾನದ ಸಂಶೋಧಕರಾದರು. 14 ವರ್ಷಗಳಲ್ಲಿ ಅವರು ಹಾಗೆ ನಡೆಸಿದ ಸಂಶೋಧನೆಯಿಂದ ವಿಜ್ಞಾನ ಪ್ರಪಂಚದ ಗಮನ ಸೆಳೆದರು. 1917 ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿ ಅಶುತೋಷ ಮುಖರ್ಜಿ ರವರು ನೀಡಿದ ಆಹ್ವಾನವನ್ನು ಅಂಗೀಕರಿಸಿ ಪ್ರಾಧ್ಯಾಪಕರಾದರು. ಭಾರಿ ವೇತನದ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.

ಸಮುದ್ರದ ನೀಲಿ ಬಣ್ಣ ಕ್ಕೆ ಕಾರಣ ಸಂಶೋಧನೆ:

            ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್‌ ಅವರಿಗೆ ಸಮುದ್ರದ ನೀರು ಏಕೆ ಯಾವಾಗಲೂ ನೀಲಿಯಾಗಿ ಕಾಣಿಸುತ್ತದೆ? ಎಂಬ ಪ್ರಶ್ನೆ ಎದುರಾಯಿತಂತೆ, ಸೂರ್ಯನ ಬೆಳಕು ನೀರಿನಲ್ಲಿ ಚದುರಿ ಹೋಗುವುದರಿಂದ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು.

ರಾಮನ್ ಪರಿಣಾಮದ ಸಂಶೋಧನೆ :

            ಅನಿಲದ ಅಥವಾ ದ್ರಾವಣದ ಅಣುಗಳ ಮೇಲೆ ಬೀಳುವ ಬೆಳಕಿನ ಕಿರಣಗಳು ಚದುರಿತ್ತವೆ ಈ ಬಗೆಯ ಚದರುವಿಕೆಯನ್ನು ಕ್ಯಾಲೆ ಚದರಿಕೆ ಎಂದು ಹೆಸರು, ಆದರೆ ಈ ಬಗೆಯ ಕ್ಯಾಲೆ ಚದರಿಕೆಗೆ ಒಳಗಾಗುವುದಾದರು ಅದರ ಸ್ವಲ್ಪ ಭಾಗ ಮಾತ್ರ ಬೇರೊಂದು ಬಗೆಯ ಚದುರುವಿಕೆಗೆ ಒಳಗಾಗುತ್ತದೆ. ಈ ಎರಡನೆಯ ಬಗೆಯ ಚದರಿಸುವಾಗ ಆ ಬೆಳಕಿನ ಕಿರಣಗಳು ಬಣ್ಣ ಬದಲಾಯಿಸುವುದನ್ನು ನಿರೀಕ್ಷಿಸಿದ್ದರು. ಅದನ್ನು ಯಾರು ಕಂಡಿರಲಿಲ್ಲ. ಏಕೆಂದರೆ ಅಣುಗಳ ಮೇಲೆ ಬೀಳುವ ಬೆಳಕಿನ ಅತ್ಯಲ್ಪ ಭಾಗ ಮಾತ್ರ ಈ ಬಗೆಯ ಚದರುವಿಕೆಗೆ ಒಳಗಾಗುವ ಕಾರಣ, ಚದರಿದ ಆ ಬೇರೆ ಬಣ್ಣದ ಬೆಳಕು ಮಸಕಾಗಿದ್ದು ಅದನ್ನು ಗುರುತಿಸುವುದು ತುಂಬ ಕಷ್ಟ. ತಕ್ಕ ಸಲಕರಣೆಯನ್ನು ಜೋಡಿಸಿಕೊಂಡು ಪ್ರಯೋಗ ಮಾಡಿ, ಅಣುಗಳ ಚದರಿಸುವ ಬೆಳಕಿನ ಬಣ್ಣದಲ್ಲಾಗುವ ಆ ಬದಲಾವಣೆಯನ್ನು ಮೊಟ್ಟ ಮೊದಲ ಬಾರಿಗೆ 1928 ರಲ್ಲಿ ತೋರಿಸಿದರು.

ಹೊಸ ರಾಸಾಯನಿಕ ಸಂಯುಕ್ತಗಳ ರಚನೆಗೆ ನಾಂದಿ :

      ರಾಮನ್‌ ಪರಿಣಾಮದಿಂದ ವಸ್ತುವಿನ ರಚನೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ರಾಮನ್ ಪರಿಣಾಮದ ಕುರಿತು ಬೇರೆ ಬೇರೆ ದೇಶದ ವಿಜ್ಞಾನಿಗಳು ಬರೆದ 1800 ಪ್ರೌಢ ಪ್ರಬಂಧಗಳು ಪ್ರಕಟವಾದವು ಮತ್ತು ಅದೇ ಅವಧಿಯಲ್ಲಿ ಸಾವಿರಾರು ರಾಸಾಯನಿಕ ಸಂಯುಕ್ತಗಳ ರಚನೆಯನ್ನು ಹಾಗೂ ಕೃತಕವಾಗಿ ರಾಸಾಯನಿಕ ಪದಾರ್ಥ ತಯಾರಿಸುವ ಪ್ರಯತ್ನಕ್ಕೆ ನಾಂದಿ ಹಾಡಲಾಯಿತು.

          ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ ಸರ್ ಸಿ.ವಿ ರಾಮನ್, ಅವರ ಮಿತಿಯಿಲ್ಲದ ಕುತೂಹಲ ಮತ್ತು ವಿಜ್ಞಾನದ ಮೇಲಿನ ಶ್ರದ್ಧೆ ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗೆ ಆಡಿಪಾಯ ಹಾಕಿತು. 300 ಜೀವನದಲ್ಲಿ ನಡೆದ ಮೂರು ಘಟನೆಗಳಲ್ಲಿನ ಮೌಲ್ಯವನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ರಾಮನ್ ರವರು ಪಡೆದ ಪ್ರಶಸ್ತಿಗಳು

  • ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (1924)
  • ನೈಟ್‌ ಹುಡ್‌ ಪ್ರಶಸ್ತಿ (1929) 
  • ನೊಬೆಲ್‌ ಪ್ರಶಸ್ತಿ (1930)
  • ಮೈಸೂರು ಮಹಾರಾಜರಿಂದ, 'ರಾಜ ಸಭಾ ಭೂಷಣ ಗೌರವ' (1935)
  • ಭಾರತ ರತ್ನ ಪ್ರಶಸ್ತಿ (1954)

  • ಲೆನಿನ್‌ ಶಾಂತಿ ಪ್ರಶಸ್ತಿ (1957)

ಮರಣ :

1970 ರಲ್ಲಿ, ಅವರು ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ದೊಡ್ಡ ಹೃದಯಾಘಾತವನ್ನು ಪಡೆದರು. ಅವರು ನವೆಂಬರ್ 21, 1970 ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು.

ಸರ್ ಸಿ. ವಿ. ರಾಮನ್ ಜೀವನದ ಕೆಲ ಘಟನೆಗಳು 

ಘಟನೆ-1:

ಯಾರು ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾರೋ ಅವರು ಮಹಾನ್ ಜ್ಞಾನಿಗಳಾಗಿರುತ್ತಾರೆ. ಇದಕ್ಕೆ ಒಂದು ಉದಾಹರಣೆ, ಹೆಸರಾಂತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು. ಧಾರವಾಡದ ಆಕಾಶವಾಣಿಯ ಕಾರ್ಯಕ್ರಮಾಧಿಕಾರಿಗಳಾದ ಹೆಚ್.ಕೆ ರಂಗನಾಥ್ ಅವರು, ರಾಮನ್ ಅವರಿಗೆ ಹತ್ತು ನಿಮಿಷದ ಒಂದು ಉಪನ್ಯಾಸವನ್ನು ನೀಡಲು ಮನವಿ ಮಾಡುತ್ತಾರೆ, ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ರಾಮನ್ ಅವರು ಹೂವಿನ ಬಣ್ಣಗಳ ಬಗ್ಗೆ ಮಾತನಾಡುತ್ತೇನೆಂದು ತಿಳಿಸುತ್ತಾರೆ. ರಂಗನಾಥ್ ಅವರು, ಇನ್ನು ಹತ್ತು ನಿಮಿಷಕ್ಕೆ ಸರಿಯಾಗಿ ರಾಷ್ಟ್ರೀಯ ವಾರ್ತೆಗಳು ಆರಂಭಗೊಳ್ಳುತ್ತದೆ ಆದ್ದರಿಂದ ಕೇವಲ ಹತ್ತು ನಿಮಿಷದಲ್ಲಿ ಉಪನ್ಯಾಸವನ್ನು ಮುಗಿಸುವಂತೆ ಮನವಿ ಮಾಡುತ್ತಾರೆ ಮತ್ತು ಒಂಭತ್ತು ನಿಮಿಷದ ನಂತರ ಒಂದು ಸಹ್ನೆಯನ್ನು ಮಾಡುವೆನೆಂದು ತಿಳಿಸುತ್ತಾರೆ. ಇದಕ್ಕೆ ಒಪ್ಪಿದ ರಾಮನ್, ರೆಕಾರ್ಡಿಂಗ್ ರೂಮ್‌ನಲ್ಲಿ ತಮ್ಮ ಪೇಟವನ್ನು ಬಿಚ್ಚಿಟ್ಟು `My dear listeners" ಎಂದು ಉಪನ್ಯಾಸ ಪ್ರಾರಂಭಿಸುತ್ತಾರೆ. ಹೂವುಗಳಿಗೆ ಬಣ್ಣ ಹೇಗೆ ಬರುತ್ತದೆ? ಎಂದು, ಸಣ್ಣ ಮಕ್ಕಳಿಗೂ ಅರ್ಥವಾಗುವಂತೆ ವಿವರಿಸುತ್ತಾ, ಕಣ್ಣು ಮುಚ್ಚಿ ಉಪನ್ಯಾಸವನ್ನು ಮುಂದುವರಿಸುತ್ತಾರೆ. ಏಳು ನಿಮಿಷಗಳು ಕಳೆದರೂ, ಉಪನ್ಯಾಸವನ್ನು ಮುಂದುವರಿಸಿದ ರಾಮನ್, ಕಣ್ಣನ್ನು ತೆಗೆಯದೆ ವಿವಿಧ ವಿವರಣೆಗಳನ್ನು ನೀಡುತ್ತಾ ಉಪನ್ಯಾಸದಲ್ಲಿ ಮಗ್ನರಾಗುತ್ತಾರೆ. ಇತ್ತ ರಂಗನಾಥ್‌ ರವರಿಗೆ ಭಯ ಪ್ರಾರಂಭವಾಗುತ್ತದೆ, ಈಗಾಗಲೆ ಎಂಟು ನಿಮಿಷವಾಗಿದೆ. ಹತ್ತು ನಿಮಿಷಕ್ಕೆ ಮುಕ್ತಾಯವಾಗ ಬೇಕು, ಇಲ್ಲವಾದರೆ ರಾಮನ್‌ ಅವರ ಉಪನ್ಯಾಸ ಪ್ರಸಾರವು ರದ್ದಾಗಿ, ರಾಷ್ಟ್ರೀಯ ವಾರ್ತೆ ಪ್ರಸಾರವಾಗುತ್ತದೆ ಮತ್ತು ಶೋತೃಗಳು ರಾಮನ್‌ ಅವರ ಉಪನ್ಯಾಸ ನಿಲ್ಲಿಸಿದ್ದಕ್ಕೆ ತುಂಬಾ ಕೋಪ ಮಾಡಿಕೊಳ್ಳುತ್ತಾರೆ ಎಂದು ಆತಂಕದಲ್ಲಿರುತ್ತಾರೆ. ಒಳಗೆ ರೆಕಾರ್ಡಿಂಗ್ ರೂಂಗೆ ಹೋಗಿ ಅವರನ್ನು ಎಚ್ಚರಿಸಿದರೆ, ಎಲ್ಲಿ ರಾಮನ್ ಅವರು ಕೋಪ ಮಾಡಿಕೊಳ್ಳುತ್ತಾರೋ ಎಂಬ ಭಯ. ಈ ಗೊಂದಲದಲ್ಲಿ ಒಂಭತ್ತು ನಿಮಿಷ ಕಳೆದೇ ಹೋಗುತ್ತದೆ. ರಾಮನ್ ಮಾತ್ರ ಯಾವುದೇ ಯೋಚನೆ ಇಲ್ಲದೆ ತಮ್ಮ ಉಪನ್ಯಾಸವನ್ನು ಕಣ್ಣು ಮುಚ್ಚಿ ಮುಂದುವರಿಸುತ್ತಾರೆ.

ಒಂಭತ್ತುವರೆ ನಿಮಿಷವು ಆಗಿಹೋಗುತ್ತದೆ, ಬೇರೆ ವಿಧಿಯಲ್ಲದೆ ರಂಗನಾಥ್ ರವರು ರೆಕಾರ್ಡಿಂಗ್ ರೂಮ್‌ಗೆ ಹೋಗಿ ಇನ್ನೇನು ರಾಮನ್ ಅವರನ್ನು ಎಚ್ಚರಿಸಬೇಕು ಅಷ್ಟರಲ್ಲಿ, ರಾಮನ್ ರವರು,' that's all my dear listeners" ಎಂದು ಉಪನ್ಯಾಸವನ್ನು ಸರಿಯಾದ ಸಮಯಕ್ಕೆ ಅಂತ್ಯಗೊಳಿಸುತ್ತಾರೆ. ಈ ವೃತ್ತಾಂತದ ನಂತರ ರಂಗನಾಥ್ ಅವರು, ರಾಮನ್‌ ಅವರಿಗೆ ನಮಸ್ಕರಿಸಿ ನಡೆದ ಪರಿಸ್ಥಿತಿಯನ್ನು ವಿವರಿಸುತ್ತಾರೆ, ಅದಕ್ಕೆ ರಾಮನ್ ಅವರು.. ನೋಡಿ, ನಾನು ನನ್ನ ಮನಸ್ಸಿನ ಗಡಿಯಾರಕ್ಕೆ ತಿಳಿಸಿದ್ದೆ. ಹತ್ತು ನಿಮಿಷದಲ್ಲಿ ಉಪನ್ಯಾಸ ಮುಗಿಸಬೇಕೆಂದು !!! ಅದರಲ್ಲಿ ಚಿಂತಿಸುವ ವಿಷಯವೇನಿತ್ತು!!!! ಮರು ಪ್ರಶ್ನಿಸುತ್ತಾರೆ. ರಾಮನ್ ಹತೋಟಿಯಲ್ಲಿಟ್ಟಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಅವರು ತಮ್ಮ ಮನಸ್ಸನ್ನು ಎಷ್ಟರಮಟ್ಟಿಗೆ


ಘಟನೆ-2:

ರಾಮನ್ ಭಾರತ ದೇಶವು ಕಂಡ ಅಪ್ರತಿಮ ವಿಜ್ಞಾನಿ, ಅವರ ಸಾಧನೆ ಮತ್ತು ಅವರ ಮನೋಭಾವ ಎಲ್ಲರಿಗೂ ದಾರಿದೀಪ, ಮನೋಭಾವ ಎಂದ ತಕ್ಷಣ, ರಾಮನ್ ಅವರ ಇನ್ನೊಂದು ವಿಷಯ ನೆನಪಿಗೆ ಬರುತ್ತದೆ. ಅವರು ರಾಮನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ನಡೆದ ಘಟನೆ, ರಾಮನ್ ಇನ್‌ಸ್ಟಿಟ್ಯೂಟ್‌ಗೆ ಮೂರು ಸಹಾಯಕ ವಿಜ್ಞಾನಿಗಳ ಅವಶ್ಯಕತೆ ಇರುತ್ತದೆ. ಇದಕ್ಕೆ ಅಂತಿಮ ಪಟ್ಟಿಯಲ್ಲಿರುವ ಐದು ವಿಜ್ಞಾನಿಗಳಲ್ಲಿ ಮೂರು ಜನರನ್ನು ಆಯ್ಕೆಮಾಡುವ ಜವಾಬ್ದಾರಿ ರಾಮನ್‌ ಅವರಿಗೆ ನೀಡಲಾಗಿರುತ್ತದೆ. ಸಂದರ್ಶನಕ್ಕೆ ಬರುವ ಐದು ವಿಜ್ಞಾನಿಗಳಿಗೂ ಪ್ರಯಾಣಭತ್ಯೆಯನ್ನು ನೀಡಲು ತೀರ್ಮಾನಿಸಲಾಗಿರುತ್ತದೆ. ಐವರು ವಿಜ್ಞಾನಿಗಳಿಗೂ ರಾಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಅವರೆಲ್ಲರು ಪುಳಕಿತರಾಗಿರುತ್ತಾರೆ. ಸಂದರ್ಶನದ ನಂತರ ಮೂವರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಎಲ್ಲರಿಗೂ ಪ್ರಯಾಣ ಭತ್ಯೆಯನ್ನು ನೀಡುತ್ತಾರೆ. ಸಂಜೆ ರಾಮನ್‌ ಕೆಲಸವನ್ನು ಮುಗಿಸಿಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ಗೇಟ್ ಬಳಿಯಲ್ಲಿ ಒಬ್ಬ ಸಂದರ್ಶನಕ್ಕೆ ಬಂದು, ಆಯ್ಕೆಯಾಗದ ವ್ಯಕ್ತಿ ನಿಂತಿರುತ್ತಾನೆ. ಅವನನ್ನು ನೋಡಿ ಮಾತನಾಡಿಸಿ, ಧೈರ್ಯ ಹೇಳಲು ರಾಮನ್‌ ಮುಂದಾಗುತ್ತಾರೆ. ಅದಕ್ಕೆ ಆ ವ್ಯಕ್ತಿ ರಾಮನ್ ಅವರಿಗೆ, ಸರ್ ನನಗೆ ಪ್ರಯಾಣ ಭತ್ಯೆಯಲ್ಲಿ ಏಳು ರೂಪಾಯಿಗಳನ್ನು ಹೆಚ್ಚು ನೀಡಿರುತ್ತಾರೆ. ಲೆಕ್ಕಾಧಿಕಾರಿಗಳಿಗೆ ಹಿಂದಿರುಗಿಸಲು ಹೋದರೆ ಅವರು ಲೆಕ್ಕವನ್ನೆಲ್ಲಾ ಈಗಾಗಲೆ ಮುಗಿಸಿದ್ದು, ಅದನ್ನು ತಗೆದುಕೊಂಡು ಊರಿಗೆ ಹೋಗಲು ಹೇಳುತ್ತಾರೆ, ಆದರೆ ಹೆಚ್ಚು ಹಣವನ್ನು ತೆಗೆದುಕೊಂಡು ಹೋಗಲು ಮನಸ್ಸು ಒಪ್ಪುತ್ತಿಲ್ಲಾ ಎಂದು ತಿಳಿಸುತ್ತಾರೆ. ನಂತರ ರಾಮನ್ ಅವರು ವ್ಯಕ್ತಿಯಿಂದ ಏಳು ರೂಪಾಯಿಯನ್ನು ಪಡೆದು, ಮರುದಿನ ಬಂದು ಭೇಟಿಯಾಗಲು ತಿಳಿಸುತ್ತಾರೆ. ಮರುದಿನ ಅವರನ್ನು ಭೇಟಿಯಾದ ರಾಮನ್ ಅವರು ``dear, you have failed in science test, but passed in honesty test" ಎಂದು ಮತ್ತು ಅವರಿಗಾಗಿ ಒಂದು ಹುದ್ದೆಯನ್ನು ಸೃಷ್ಟಿಸಿರುವುದಾಗಿ ತಿಳಿಸಿ, ಕೆಲಸ ನೀಡುತ್ತಾರೆ. ಆ ವ್ಯಕ್ತಿ ರಾಮನ್ ಅವರೊಂದಿಗೆ ಕೆಲಸ ಮಾಡಿ ಮುಂದೆ ದೊಡ್ಡ ವಿಜ್ಞಾನಿಯಾಗುತ್ತಾರೆ, ಅವರೇ ಸುಬ್ರಮಣ್ಯನ್ ಚಂದ್ರಶೇಖರ್, ಅವರು ``7 rupees that changed my life" ಎಂಬ ಪುಸ್ತಕದಲ್ಲಿ ಈ ವೃತ್ತಾಂತವನ್ನು ವಿವರಿಸಿದ್ದಾರೆ. ಇದು ಹಿಡಿದ ಕೈಗನ್ನಡಿಯಾಗಿದೆ. ರಾಮನ್ ಅವರ ಜೀವನಶೈಲಿ ಎಲ್ಲರಿಗೂ ಮಾದರಿಯಾಗಿದೆ. ರಾಮನ್ ಅವರ ಮನೋಭಾವಕ್ಕೆ


ಘಟನೆ-3:

ನಮ್ಮಲ್ಲಿ ಅನೇಕ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಮಾಜದಲ್ಲಿ ಕಲಿಸುವುದು ತುಂಬಾ ಏಕತಾನತೆಯ ಕೆಲಸ, ಪ್ರತಿ ವರ್ಷ ಅದೇ ಪಾಠ ಮಾಡುವುದು ನೀರಸ, ಇದಕ್ಕೆ ಸಿದ್ಧತೆ ಬೇರೆ ಬೇಕಾ? ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ತರಗತಿಯನ್ನು ಯೋಜಿಸಲು ಸಮಯಾವಕಾಶವಿಲ್ಲ ಎಂದು ಕೊರಗುತ್ತಾರೆ, ಇದಕ್ಕೆ ಅವರ ಒಂದು ವೃತ್ತಾಂತ ನಮಗೆಲ್ಲರಿಗೂ ಮಾದರಿಯಾಗಿದೆ. ಈ ಘಟನೆ ನಡೆದಿದ್ದು ರಾಮ ಬೆಂಗಳೂರಿನಲ್ಲಿ, ರಾಮನ್ ಅವರು ಕೆಲಸವನ್ನೆಲ್ಲಾ ಮುಗಿಸಿ, ತಮ್ಮ ಮನೆಯ ಕಡೆಗೆ ಕಬ್ಬನ್ ಉದ್ಯಾನವನದಿಂದ ಹಾದು ಹೋಗುತ್ತಿರುತ್ತಾರೆ, ಅದು ಬೇಸಿಗೆಯ ಕಾಲ, ಬೇಸಿಗೆಯಲ್ಲಿ ಮಳೆ ಬಂದರೆ, ಅನೇಕ ದೀಪದ ಹುಳುಗಳು ಹೆಲಿಕ್ಯಾಪ್ಟರ್ ರೀತಿಯಲ್ಲಿ ಹಾರಿ ದೀಪವನ್ನು ಸುತ್ತುವರೆದು ನಂತರ ದೀಪವನ್ನು ಮುಟ್ಟಿ ಕೆಳಗೆ ಬೀಳುತ್ತವೆ.

ಅಂದು ಸಂಜೆಯು ಕೂಡ ಮಳೆಯಾಗಿದ್ದರಿಂದ ಅನೇಕ ದೀಪದ ಹುಳುಗಳು ಕಬ್ಬನ್ ಉದ್ಯಾನದ ರಸ್ತೆಯಲ್ಲಿ ಬಿದ್ದಿರುತ್ತವೆ. ಇದನ್ನು ಕಂಡ ರಾಮನ್ ಅವರು ಕಾರಿನ ಚಾಲಕನಿಗೆ ಕಾರನ್ನು ನಿಲ್ಲಿಸಲು ಹೇಳಿ, ನಿಧಾನವಾಗಿ ಕಾರಿನಿಂದ ಇಳಿದು, ರಸ್ತೆಯ ಮೇಲೆ ಬಿದ್ದಿದ್ದ ಆ ದೀಪದ ಹುಳುಗಳ ರೆಕ್ಕೆಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತಾರೆ. ಅದೇ ರಸ್ತೆಯಲ್ಲಿ ರಾಮನ್ ಇನ್‌ಸ್ಟಿಟ್ಯೂಟ್‌ನ ಇನ್ನೊಬ್ಬ ಕಳೆದುಕೊ೦ಡಿರಬೇಕೆಂದು ಅವರಿಗೆ ವಿಜ್ಞಾನಿ ಬರುತ್ತಿರುತ್ತಾರೆ, ರಾಮ ಅವರು ತಮ್ಮ ಪರ್ಸನ್ನು ಮಾಡಲು ಕಾರಿನಿಂದ ಕೆಳಗಿಳಿಯುತ್ತಾರೆ. ಇದನ್ನು ಕಂಡ ರಾಮನ್, ಹುಳುಗಳನ್ನು ತುಳಿಯದಂತೆ ನಿಧಾನವಾಗಿ ರಸ್ತೆ ದಾಟಲು ತಿಳಿಸುತ್ತಾರೆ. ರಾಮನ್ ಅವರು ದೀಪದ ಹುಳುಗಳ ರೆಕ್ಕೆಗಳನ್ನು ಆರಿಸುವುದನ್ನು ಕಂಡು ಆಶ್ಚರ್ಯಗೊಂಡ ಅವರು, ರಾಮನ್‌ರಂತೆ ರೆಕ್ಕೆಗಳನ್ನು ಸಂಗ್ರಹಿಸಿ ಅವರಿಗೆ ನೀಡುತ್ತಾರೆ. ಕುತೂಹಲ ತಡೆಯಲಾರದೆ ಅವರು ರಾಮನ್ ರವರಿಗೆ, ಬಹಳ ವಿನಯದಿಂದ ಸಾರ್, ಈ ದೀಪದ ಹುಳುಗಳ ರೆಕ್ಕೆಗಳು ಏತಕ್ಕಾಗಿ ಎಂದು ಕೇಳುತ್ತಾರೆ. ಅದಕ್ಕೆ ರಾಮನ್‌ ಅವರು ನಾಳೆ ನನಗೆ ಕಾರ್ಪೊರೇಷನ್ ಶಾಲೆಯಲ್ಲಿ diffraction of light ಬಗ್ಗೆ ಉಪನ್ಯಾಸ ನೀಡಲು ಕರೆದಿದ್ದಾರೆ, ಆದರೆ ಅಲ್ಲಿ ಬರುವ ಮಕ್ಕಳಿಗೆ ಸೌಲಭ್ಯದ ಕೊರತೆಯಿರುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

    ಸಾ.ಶ 1987 ರಿಂದ ಪ್ರತಿ ವರ್ಷ ಫೆಬ್ರವರಿ 28ರಂದು  ಸರ್ ಸಿ ವಿ ರಾಮನ್ ರ "ರಾಮನ್ ಪರಿಣಾಮ" ಆವಿಷ್ಕಾರದ (ಸಾ.ಶ 1928 ಫೆಬ್ರವರಿ 28) ಸ್ಮರಣಾರ್ಥವಾಗಿ "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳ ಸಹಯೋಗದೊಂದಿಗೆ ದೇಶಾದಾದ್ಯಂತ ವಿಜ್ಞಾನಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲು ಉತ್ತೇಜಿಸುತ್ತದೆ.


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post