Menu

Home ನಲಿಕಲಿ About ☰ Menu


 

PAN-AADHAAR Link, Check Status | ಪ್ಯಾನ್-ಆಧಾರ ಲಿಂಕ್ ಮಾಡುವ ವಿಧಾನ.

                   ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದ ವಿತ್ತ ಸಚಿವಾಲಯವು PAN Card ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ ಎಂದು ಗಡುವು ನೀಡಿತ್ತು. ಹೊಸ ಆದೇಶದ ಪ್ರಕಾರ ಜೂನ್ 30, 2023ರ ತನಕ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ. Link ಮಾಡದಿದ್ದರೆ ಅಂಥವರ PAN Card ಏಪ್ರಿಲ್ 1ರಿಂದ ನಿಷ್ಕ್ರಿಯವಾಗಲಿದೆ.

ನಿಮ್ಮ  PAN ಗೆ - ಆಧಾರ್ ಲಿಂಕ್ ಆಗಿರುವ ಮತ್ತು ಆಗಿರದ ಸ್ಟೇಟಸ್ ಅನ್ನು ಆನ್‌ಲೈನ್‌ ನಲ್ಲೇ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

PAN-ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

 PAN-Aadhaar Link Status

PAN-AADHAAR Link , Check Status | ಪ್ಯಾನ್-ಆಧಾರ ಲಿಂಕ್ ಮಾಡುವ ವಿಧಾನ.

Step - 1: ಮೇಲಿನ ಲಿಂಕ್ ಕ್ಲಿಕ್ ಮಾಡಿ ನಂತರ ಮೇಲಿನ ರೀತಿ ಒಂದು ಪೇಜ್ ತೆರೆದುಕೊಳ್ಳುತ್ತದೆ.

Step - 2 : ಅಲ್ಲಿ  ನಿಮ್ಮ PAN ನಂಬರ್ ನಮೂದಿಸಿ.

Step - 3 : ನಿಮ್ಮ Aadhaar ನಂಬರ್ ನಮೂದಿಸಿ.

Step - 4 : ಕೆಳಗೆ ಕಾಣುವ View Link Aadhaar Status” ಮೇಲೆ ಕ್ಲಿಕ್ ಮಾಡಿ.

Step - 5 : ನಿಮ್ಮ PAN-ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬ Status ತಿಳಿಯುತ್ತದೆ.

PAN-ಆಧಾರ್ ಲಿಂಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

🔗 PAN-Aadhaar Link

PAN-AADHAAR Link

ಮೇಲಿನ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಈ ಮೇಲಿನ ರೀತಿ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ  PAN ಮತ್ತು ಆಧಾರ್ ನಂಬರ್‌ಗಳನ್ನು ನಮೂದಿಸಿ. ಸೂಚನೆಯಂತೆ ಮುಂದುವರೆದು Link ಮಾಡಿಕೊಳ್ಳಿ.

SMS ಮೂಲಕ PAN-ಆಧಾರ್ ಲಿಂಕ್ ಮಾಡುವ ವಿಧಾನ.

Step - 1 : ಸಂದೇಶವನ್ನು ಈ ಕೆಳಗಿನಂತೆ ಟೈಪ್ ಮಾಡಿ UIDPAN<SPACE><12 digit Aadhaar Number><Space><10 digit PAN Number>

Step - 2 : ಈ ಸಂದೇಶವನ್ನು Registered ಮೊಬೈಲ್ ನಂಬರ್ ನಿಂದ 56161 ಅಥವಾ 567678 ನಂಬರಿಗೆ send ಮಾಡಿ.

Step - 3 : ಆಗ ನಿಮ್ಮ ಮೊಬೈಲ್ ಗೆ ದೃಢೀಕರಣ ಸಂದೇಶ ಬರುತ್ತದೆ.
ಉದಾಹರಣೆಗೆ : ನಿಮ್ಮ ಆಧಾರ್ ನಂಬರ್  123456789012 ಮತ್ತು  ಪ್ಯಾನ್ ABCDE1234G ಆಗಿದ್ದರೆ, 
UIDPAN 123456789012 ABCDE1234G ಎಂದು ಟೈಪ್ ಮಾಡಿ 56161 ಅಥವಾ 56768 ನಂಬರಿಗೆ ಕಳುಹಿಸಿ.

ಡಿಜಿಟಲ್ PAN Card ( E-Pan Card) ಡೌನ್ಲೋಡ್ ಮಾಡುವ ವಿಧಾನ.

Step - 1 : ಕೆಳಗಿನ ಲಿಂಕ್ ಕ್ಲಿಕ್ ಮಾಡಿ  https://www.onlineservices.nsdl.com/paam/requestAndDownloadEPAN.html

Step - 2 : ನಿಮ್ಮ PAN Card ನಂಬರ್ ನಮೂದಿಸಿ.

Step - 3 : ನಿಮ್ಮ  Aadhaar ನಂಬರ್ ನಮೂದಿಸಿ.

Step - 4 : ನಿಮ್ಮ  ಜನನದ ತಿಂಗಳು ನಮೂದಿಸಿ.

Step - 5 : ನಿಮ್ಮ ಜನನದ ವರ್ಷ ನಮೂದಿಸಿ.

Step - 6 :  ✅ Right ಕ್ಲಿಕ್ ಮಾಡಿ.

Step - 7 : ಅಲ್ಲಿ ಕಾಣುವ Captcha ಕೋಡ್ ನಮೂದಿಸಿ.

Step - 8 : Submit ಮೇಲೆ ಕ್ಲಿಕ್ ಮಾಡಿ.
ಆಗ Digital PAN Card ಡೌನ್ಲೋಡ್ ಆಗುತ್ತದೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post