Menu

Home ನಲಿಕಲಿ About ☰ Menu


 

KREIS 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2023-24

        ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ/ಸಂಗೊಳ್ಳಿ ರಾಯಣ್ಣ/ ಡಾ.ಬಿ.ಆರ್.ಅಂಬೇಡ್ಕರ್/ಶ್ರೀಮತಿ ಇಂದಿರಾಗಾಂಧಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ(KREIS) 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ-2023-24

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

*ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 05.01.2023

*ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 13.02.2023

✍️KRIES-2023 ದಿನಾಂಕವನ್ನು ಆನ್‌ಲೈನ್ ಅರ್ಜಿಗಾಗಿ 02/02/2023 ರವರೆಗೆ ವಿಸ್ತರಿಸಲಾಗಿದೆ 

*Hall Ticket ಬಿಡುಗಡೆ ದಿನಾಂಕ :

*ಪರೀಕ್ಷೆ ನಡೆಯುವ ದಿನಾಂಕ : 12.03.2023

@ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು

@ಅರ್ಜಿ ಸಲ್ಲಿಸುವ ವಿಧಾನ@

* ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿಯೇ ONLINE ಮೂಲಕ ಭರ್ತಿ ಮಾಡಬೇಕು.

@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@

1. ವಿದ್ಯಾರ್ಥಿಯ SATS ಸಂಖ್ಯೆ                                   (ವಿದ್ಯಾರ್ಥಿಯ ಬಹುತೇಕ ಪ್ರಮುಖ ಮಾಹಿತಿಗಳು  SATS ನಿಂದ fetch ಆಗುವದರಿಂದ SATS ನಲ್ಲಿ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಅಪ್ ಡೇಟ್ ಇರಬೇಕು)

2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ:

(ವಾರ್ಷಿಕ ಆದಾಯ ಮಿತಿ
SC/ST/C-1      : ₹2,50,000.
2A,2B,3A,3B : ₹1,00,000 )

3. ವಿದ್ಯಾರ್ಥಿಯ ಇತ್ತೀಚಿನ 2 ಭಾವಚಿತ್ರ

4. ಇತರೆ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು

*ಇತರೆ ಮೀಸಲಾತಿ ಪ್ರಮಾಣ ಪತ್ರಗಳೆಂದರೆ*

A) ವಿಶೇಷ ಚೇತನ ಮಗು(PH)

B) ಅಲೆಮಾರಿ/ ಅರೆ  ಅಲೆಮಾರಿ/ ಸೂಕ್ಷ್ಮ/ ಅತಿ ಸೂಕ್ಷ್ಮ ಮಗು

C) ಮಾಜಿ ಸೈನಿಕರ ಮಗು

D) ಆಶ್ರಮ/ ವಸತಿ ಶಾಲೆ ಮಗು

E) ಪೌರ ಕಾರ್ಮಿಕರ/ಸಫಾಯಿ ಕರ್ಮಚಾರಿ ಮಗು

F)ಬಾಲ ಕಾರ್ಮಿಕ,ವಿಧವೆ ಮಗು,ದೇವದಾಸಿ

ಮಗು,ವಿಧುರನ ಮಗು,ಯೋಜನಾ ನಿರಾಶ್ರಿತರ ಮಗು,ಅನಾಥ ಮಗು,ಹೆಚ್.ಐ.ವಿ ಪೀಡಿತರ ಮಗು,ಆತ್ಮಹತ್ಯೆ ರೈತರ ಮಗು.

G)ಸ್ಥಳೀಯ ಅಭ್ಯರ್ಥಿ( ಸ್ಥಳೀಯ ಅಭ್ಯರ್ಥಿ ಎಂದರೆ ಸ್ವಂತ ತಾಲ್ಲೂಕಿನ ಅಭ್ಯರ್ಥಿ)

*ಮೇಲ್ಕಂಡ ವಿಶೇಷ ವರ್ಗಕ್ಕೆ ಸೇರಿದಲ್ಲಿ ಸಂಬಂಧಿತ ಸಕ್ಷಮ ಪ್ರಾಧಿಕಾರದಿಂದ  ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸುವುದು.

*ಅರ್ಜಿ ಸಲ್ಲಿಸುವಾಗ ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ(ಜಿಲ್ಲೆಯ ಎಲ್ಲ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು)

*ಅಭ್ಯರ್ಥಿಯು ತನ್ನ ಸ್ವಂತ ಜಿಲ್ಲೆಯ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.                        (ಸ್ವಂತ ಜಿಲ್ಲೆ ಎಂದರೆ ಜಾತಿ, ಆದಾಯ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಜಿಲ್ಲೆ.)

ಆದರ್ಶ ವಿದ್ಯಾಲಯ 6th ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿ.

*ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ.

*ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.

*ಅಪ್ಲಿಕೇಶನ್‌ ಸಲ್ಲಿಸುವ ವಿಧಾನ, ಹಾಗೂ 'ಮಾಹಿತಿ ಪುಸ್ತಕ-2022' ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್‌ https://kreis.karnataka.gov.in/ ನಲ್ಲಿ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಡೌನ್‌ಲೋಡ್‌ ಮಾಡಿ ಓದಿಕೊಳ್ಳಬಹುದು.


*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

@27-12 KREIS 2023 6ನೇ STD ಅಧಿಸೂಚನೆ 

@CLICK FOR MORE INFORMATION

------------- ----------------------- -------------------- -------------

 **NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು 

**NMMS ನ ಅಧ್ಯಯನ ವಸ್ತು/Study Material

ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು

ಸೂಚನೆ : ಪ್ರಶ್ನೆಗಳಿಗೆ ಉತ್ತರ ತಿಳಿಯಲು ಪ್ರತಿ ಪ್ರಶ್ನೆಯ ಕೆಳಗಿರುವ Show Answer ಬಟನ್ ಮೇಲೆ ಕ್ಲಿಕ್ ಮಾಡಿ...

Q ➤ ತಾಳಗುಂದದ ಪ್ರಾಚೀನ ಹೆಸರು.. ️


Q ➤ ಬನವಾಸಿಯ ಪ್ರಾಚೀನ ಹೆಸರು.. ️


Q ➤ ದೆಹಲಿಯ ಪ್ರಾಚೀನ ಹೆಸರು.. ️


Q ➤ ಬಂಗಾಳದ ಪ್ರಾಚೀನ ಹೆಸರು..


Q ➤ ಅಸ್ಸಾಂ ನ ಪ್ರಾಚೀನ ಹೆಸರು.. ️


Q ➤ ಪಾಟ್ನಾದ ಪ್ರಾಚೀನ ಹೆಸರು.. ️


Q ➤ ಹೈದರಬಾದಿನ ಪ್ರಾಚೀನ ಹೆಸರು.. ️


Q ➤ ಅಹಮದಾಬಾದಿನ ಪ್ರಾಚೀನ ಹೆಸರು..


Q ➤ ಅಲಹಾಬಾದಿನ ಪ್ರಾಚೀನ ಹೆಸರು.. ️


Q ➤ ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು..


Q ➤ ಬರ್ಮಾದ ಪ್ರಾಚೀನ ಹೆಸರು.. ️


Q ➤ ರಾಜಸ್ಥಾನದ ಪ್ರಾಚೀನ ಹೆಸರು.. ️


Q ➤ ಗುಜರಾತ್ ನ ಪ್ರಾಚೀನ ಹೆಸರು.. ️


Q ➤ ಅಹಮದಾಬಾದ್ ಪ್ರಸ್ತುತ ಹೆಸರು.. ️


Q ➤ ಅಲಹಾಬಾದಿನ ಪ್ರಾಚೀನ ಹೆಸರು.. ️


Q ➤ ಕಾಶಿಯ ಪ್ರಾಚೀನ ಹೆಸರು.. ️


Q ➤ ಒರಿಸ್ಸಾದ ಪ್ರಾಚೀನ ಹೆಸರು


Q ➤ ಮೈಸೂರಿನ ಪ್ರಾಚೀನ ಹೆಸರು.. ️


Q ➤ ಕನಕಗಿರಿಯ‌ ಪ್ರಾಚೀನ ಹೆಸರು.. ️


Q ➤ ಬ್ರಹ್ಮಗಿರಿಯ ಪ್ರಾಚೀನ ಹೆಸರು..


Q ➤ ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ..


Q ➤ ಬಿಹಾರದ ಇಂದಿನ ಹೆಸರು..


Q ➤ ಗುಲ್ಬರ್ಗದ ಪ್ರಾಚೀನ ಹೆಸರು..


Q ➤ ಹಳೇಬಿಡಿನ ಪ್ರಾಚೀನ ಹೆಸರು.. ️


Q ➤ ಇರಾಕ್ ನ ಪ್ರಾಚೀನ ಹೆಸರು..


Q ➤ ಇರಾನ್ ನ ಪ್ರಾಚೀನ ಹೆಸರು..


Q ➤ ಬಾದಾಮಿಯ ಪ್ರಾಚೀನ ಹೆಸರು


Q ➤ ಶ್ರವಣಬೆಳಗೋಳದ ಪ್ರಾಚೀನ ಹೆಸರು




ಶಿಕ್ಷಕರ ವರ್ಗಾವಣೆ 2022-23ರ ಮಾರ್ಗಸೂಚಿ & ವೇಳಾಪಟ್ಟಿ ಪ್ರಕಟ.

            2022-23ರ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು /ತತ್ಸಮಾನವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳ ಅಧಿಸೂಚನೆ ಮತ್ತು ವೇಳಾಪಟ್ಟಿ (26/12/2022) ಪ್ರಕಟಿಸಲಾಗಿದೆ.

ಅಧಿಸೂಚನೆ ಮತ್ತು ವೇಳಾಪಟ್ಟಿ ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 

 CLICK HERE TO DOWNLOAD NOTIFICATION

ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ - 2022 ಅಂತಿಮ ನಿಯಮಗಳು ಪ್ರಕಟ

           ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ 2022ರ ಸಂಬಂಧ ಶಿಕ್ಷಣ ಇಲಾಖೆ ಅಂತಿಮ ನಿಯಮಾವಳಿ ರಾಜ್ಯಪತ್ರ ಇಂದು (26/12/2022) ಪ್ರಕಟವಾಗಿದೆ.

           
              ಅಂತಿಮ ನಿಯಮಗಳ ಅಧಿಸೂಚನೆ ಡೌನ್‌ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.



2nd PUC ವಾರ್ಷಿಕ ಪರೀಕ್ಷೆ ವಿಷಯವಾರು ಮಾದರಿ ಪ್ರಶ್ನೆಪತ್ರಿಕೆ ಪ್ರಕಟ


   ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾರ್ಚ್ 2023ರ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧಪಡಿಸಿರುವ ಪರಿಷ್ಕೃತ ನೀಲನಕ್ಷೆ ಹಾಗೂ ಕರಡು ಮಾದರಿ ಪ್ರಶ್ನೆಪತ್ರಿಕೆಗಳು.
                ಒಟ್ಟು 100 ಅಂಕಗಳ ಪ್ರಶ್ನೆಪತ್ರಿಕೆಯಾಗಿದ್ದು,  05 ಅಂಕಗಳಿಗೆ ಎಂಸಿಕ್ಯು(ಬಹು ಆಯ್ಕೆ ಪ್ರಶ್ನೆಗಳು), 05 ಅಂಕಗಳಿಗೆ ಹೊಂದಿಸಿ ಬರೆಯಿರಿ, 05 ಅಂಕಗಳಿಗೆ ಬಿಟ್ಟ ಸ್ಥಳ ತುಂಬಿರಿ, 05 ಅಂಕಗಳ ಒಂದು ವಾಕ್ಯದಲ್ಲಿ ಉತ್ತರಿಸಿ ನೀಡಲಾಗಿದೆ.
  ಪ್ರಶ್ನೆ ಪತ್ರಿಕೆ & ನೀಲನಕ್ಷೆ ಡೌನ್ಲೋಡ್ ಮಾಡಲು ಕೆಳಗಿನ  ವಿಷಯಗಳ ಮೇಲೆ ಕ್ಲಿಕ್ ಮಾಡಿ.

2301 ಕನ್ನಡ

 

2302 ಇಂಗ್ಲೀಷ್

 

2303 ಹಿಂದಿ

 

2304 ತಮಿಳು

 

2305 ತೆಲುಗು

 

2306 ಮಲಯಾಳಂ

 

2307 ಮರಾಠಿ

 

2308 ಉರ್ದು

 

2309 ಸಂಸ್ಕೃತ

 

2311 ಅರೆಬಿಕ್‌

 

2312 ಫ್ರೆಂಚ್‌

 

2316 ಐಚ್ಚಿಕ ಕನ್ನಡ

 

2321 ಇತಿಹಾಸ

 

2322 ಅರ್ಥಶಾಸ್ತ್ರ

 

2323 ತರ್ಕಶಾಸ್ತ್ರ

 

2324 ಭೂಗೋಳ ಶಾಸ್ತ್ರ

 

2326 ಹಿಂದುಸ್ತಾನಿ ಸಂಗೀತ

 

2327 ವ್ಯವಹಾರ ಅಧ್ಯಯನ

 

2328 ಸಮಾಜಶಾಸ್ತ್ರ

 

2329 ರಾಜ್ಯ ಶಾಸ್ತ್ರ

 

2330 ಲೆಕ್ಕಶಾಸ್ತ್ರ

 

2331 ಸಂಖ್ಯಾ ಶಾಸ್ತ್ರ

 

2332 ಮನ ಶಾಸ್ತ್ರ

 

2333 ಭೌತಶಾಸ್ತ್ರ

 

2334 ರಸಾಯನ ಶಾಸ್ತ್ರ

 

2335 ಗಣಿತ ಶಾಸ್ತ್ರ

 

2336 ಜೀವ ಶಾಸ್ತ್ರ

 

2337 ಭೂಗರ್ಭ ಶಾಸ್ತ್ರ

 

2340 ವಿದ್ಯುನ್ಮಾನ ಶಾಸ್ತ್ರ

 

2341 ಗಣಕ ವಿಜ್ಞಾನ

 

2352 ಶಿಕ್ಷಣ ಶಾಸ್ತ್ರ

 

2361 ಐ ಟಿ

 

2362 ರಿಟೇಲ್‌

 

2363 ಆಟೋಮೋಬೈಲ್‌

 

2365 ಬ್ಯೂಟಿ  ಆಂಡ್‌ ವೆಲ್‌ ನೆಸ್‌

 

2367 ಗೃಹ  ವಿಜ್ಞಾನ

 

2375 ಬೇಸಿಕ್ಸ್‌ ಮ್ಯಾಥ್ಸ್‌

 

 
ಹೆಚ್ಚಿನ ಮಾಹಿತಿಗಾಗಿ https://sslc.karnataka.gov.in  ಗೆ  ಭೇಟಿ  ನೀಡಿ.
     
   : ಮಾಹಿತಿ ಕೃಪೆ : 
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ

ಶ್ರೀ ಅಟಲ್ ಬಿಹಾರಿ ವಾಜಪೇಯಿ

ಭಾರತದ ಮಾಜಿ ಪ್ರಧಾನಮಂತ್ರಿ
 ( 25 ಡಿಸೆಂಬರ್ 1924 - 16 ಆಗಸ್ಟ್ 2018)
ಪ್ರಧಾನಮಂತ್ರಿ ಅವಧಿ
 ಮಾರ್ಚ್ 19, 1998 - ಮೇ 22, 2004 
 (ಭಾರತೀಯ ಜನತಾ ಪಕ್ಷ)

ಶ್ರೀ ಅಟಲ್ ಬಿಹಾರಿ ವಾಜಪೇಯಿ

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು, ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿಬದ್ಧರಾದವರು. ಅಕ್ಟೋಬರ್ 13, 1999ರಲ್ಲಿ, ಹೊಸ ಸಮ್ಮಿಶ್ರ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮುಖ್ಯಸ್ಥರಾಗಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1996ರಲ್ಲಿ ಇವರು ಅಲ್ಪಾವಧಿಗೆ ಪ್ರಧಾನಮಂತ್ರಿಯಾಗಿದ್ದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಭಾರತದ ಪ್ರಧಾನಮಂತ್ರಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಮಂತ್ರಿ ಎಂಬು ಹೆಗ್ಗಳಿಗೆ ಇವರು ಪಾತ್ರರಾಗಿದ್ದಾರೆ.

ಹಿರಿಯ ಸಂಸದೀಯ ಪಟುವಿನ ರಾಜಕೀಯ ಬದುಕು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿದೆ. ಶ್ರೀ ವಾಜಪೇಯಿ ಅವರು ಲೋಕಸಭೆಗೆ ಒಂಭತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವುದು ಒಂದು ದಾಖಲೆಯೇ.

ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧಪಕ್ಷದ ನಾಯಕರಾಗಿ ಅವರು ಭಾರತದ ಸ್ವಾತಂತ್ರ್ಯ ನಂತರ ದೇಶೀಯ ಮತ್ತು ವಿದೇಶಿ ನೀತಿಗಳಿಗೆ ಸ್ಪಷ್ಟ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಶ್ರೀವಾಜಪೇಯಿ ಅವರು ವಿದ್ಯಾರ್ಥಿ ದಿನಗಳಲ್ಲೇ ರಾಷ್ಟ್ರೀಯವಾದಿ ರಾಜಕಾರಣದೊಂದಿಗೆ ಹೋರಾಟಕ್ಕೆ ಧುಮುಕಿದರು. ಬಿಟ್ರಿಷ್ ಆಳ್ವಿಕೆಯನ್ನು ಕೊನೆಗೊಳಿಸಲು 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಗೆ ಸೇರಿದರು. ರಾಜಕೀಯ ಶಾಸ್ತ್ರ ಮತ್ತು ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಕಾಲೇಜಿನಲ್ಲಿ ವಿದೇಶಾಂಗ ವ್ಯವಹಾರಗಳಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡರು. ಹಲವಾರು ವರ್ಷಗಳ ಕಾಲ ಈ ಆಸಕ್ತಿಗೆ ನೀರೆರೆದು ಪೋಷಿಸಿದ ಅವು ಭಾರತವನ್ನು ವಿವಿಧ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ವೇದಿಕೆಗಳಲ್ಲಿ ಪ್ರತಿನಿಧಿಸುವಾಗ ಆ ಕೌಶಲ್ಯಗಳು ಮತ್ತು ಪರಿಣಿತಿಗಳನ್ನು ಬಳಸಿಕೊಂಡರು.

ಶ್ರೀ ವಾಜಪೇಯಿ ಅವರು ಓರ್ವ ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದರು. 1951ರಲ್ಲಿ ಆ ವೃತ್ತಿಯನ್ನು ಬಿಟ್ಟು ಭಾರತೀಯ ಜನ ಸಂಘ ಸೇರಿದರು. ಇದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮುಖ್ಯ ಭಾಗವಾದ ಇಂದಿನ ಭಾರತೀಯ ಜನತಾ ಪಕ್ಷವಾಗಿದೆ. ಅವರೊಳಗೊಬ್ಬ ಕವಿ ಇದ್ದಾನೆ. ನಿರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಅವರು ಸಂಗೀತ ಮತ್ತು ಅಡುಗೆ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ.

ಆಗಿನ ರಾಜಮನೆತನದ ಗ್ವಾಲಿಯರ್ನಲ್ಲಿ (ಈಗ ಮಧ್ಯಪ್ರದೇಶದ ಒಂದು ಭಾಗವಾಗಿದೆ) ಡಿಸೆಂಬರ್ 24, 1924ರಂದು ಆದರ್ಶ ಶಿಕ್ಷಕರೊಬ್ಬರ ಕುಟುಂಬದಲ್ಲಿ ಜನಿಸಿದ ಶ್ರೀವಾಜಪೇಯಿ ಅವರು ಸಾರ್ವಜನಿಕ ಜೀವನದಲ್ಲಿ ಬೆಳೆದಿದ್ದು ಅವರ ರಾಜಕೀಯ ಚಾಣಾಕ್ಷತನ ಮತ್ತು ಭಾರತೀಯ ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆಯಾಗಿದೆ. ದಶಕಗಳ ಕಾಲ ಅವರು ತಮ್ಮ ಉದಾರ ವಿಶ್ವ ದೃಷ್ಟಿಕೋನ ಮತ್ತು ಪ್ರಜಾಸತ್ತಾತ್ಮಕ ಆಲೋಚನೆಗಳಿಗೆ ಬೆಲೆ ನೀಡುವ ಓರ್ವ ನಾಯಕರಾಗಿ ಹೊರ ಹೊಮ್ಮಿದರು.

ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ಶ್ರೀವಾಜಪೇಯಿ ಅವರು ದೂರದೃಷ್ಟಿಯ, ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿದ್ದರು. ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿದ್ದರು.

ಸಮಾಜ ಮತ್ತು ದೇಶಕ್ಕಾಗಿ ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಇವರು ನೀಡಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. 1994ರಲ್ಲಿ ಇವರನ್ನು ‘ಅತ್ಯುತ್ತಮ ಸಂಸದೀಯ ಪಟು’ ಎಂದು ಗೌರವಿಸಲಾಯಿತು. ಅದರ ಪ್ರಮಾಣ ಪತ್ರದ ಒಕ್ಕಣೆ ಹೀಗಿದೆ : ಅವರ ಹೆಸರಿಗೆ ಅನುಗುಣವಾಗಿ ಅಟಲ್ಜಿ ಖ್ಯಾತ ರಾಷ್ಟ್ರೀಯ ನಾಯಕರು, ಓರ್ವ ಪ್ರೌಢ ರಾಜಕಾರಣಿ, ನಿಸ್ವಾರ್ಥ ಸಮಾಜ ಸೇವಕ, ವಾಗ್ಮಿ, ಕವಿ ಮತ್ತು ಸಾಹಿತಿ, ಪತ್ರಕರ್ತ ಹಾಘೂ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ನಾಯಕ. ಅಟಲ್ಜೀ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ..ಅವರ ಕಾರ್ಯಗಳು ರಾಷ್ಟ್ರೀಯತೆಗೆ ಬದ್ಧವಾಗಿ ಪ್ರತಿಧ್ವನಿಸುತ್ತವೆ.

ಮಾಜಿ ಪ್ರಧಾನಮಂತ್ರಿ ಮತ್ತು ಭಾರತೀಯ ಜನತಾಪಕ್ಷದ ಹಿರಿಯ ಧುರೀಣ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೇಂದ್ರ ಸರ್ಕಾರ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿದೆ. ಡಿಸೆಂಬರ್ 25ರಂದು ಈ ಮುತ್ಸದ್ಧಿಯ ಜನ್ಮದಿನ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬದ ಸುಸಂದರ್ಭದಲ್ಲೇ ಮಹಾನಾಯಕನಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡರು.

ವಾಜಪೇಯಿ ಅವರು 1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಜನಿಸಿದರು. ಇವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿದ್ದಕ್ಕೆ ಅವರು ಹದಿವಯಸ್ಸಿನಲ್ಲಿ ಸ್ವಲ್ಪ ಕಾಲ ಜೈಲು ವಾಸ ಅನುಭವಿಸಿದರು. 50ರ ದಶಕದ ಪ್ರಾರಂಭದಲ್ಲಿ ಆರ್ಎಸ್ಎಸ್ ನಿಯತಕಾಲಿಕವೊಂದನ್ನು ನಡೆಸುವ ಉದ್ದೇಶದಿಂದ ಕಾನೂನು ವ್ಯಾಸಂಗವನ್ನು ತೊರೆದರು. ಅವರು ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಗಳಾಗಿದ್ದರು.

ಅಟಲ್ ಬಿಹಾರಿ ವಾಜಪೇಯಿಯವರು ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ನಂತರ ಬಿಜೆಪಿಗೆ ಸೇರ್ಪಡೆಯಾಗಿ 1957ರಲ್ಲಿ ಪ್ರಥಮ ಬಾರಿ ಸಂಸದರಾಗಿ ಆಯ್ಕೆಯಾದರು. ಐದು ದಶಕಗಳಿಗೂ ಹೆಚ್ಚು ಕಾಲ ಅತ್ಯಂತ ಕ್ರಿಯಾಶೀಲ ಸಂಸದೀಯ ಪಟುವಾಗಿ ದೇಶದ ಗಮನ ಸೆಳೆದರು.
ಅಟಲ್ಜೀ ಅವರು ದಿಟ್ಟ ಹೆಜ್ಜೆಗಳು ಹಲವಾರು. 1992ರ ಡಿಸೆಂಬರ್ 6ರಂದು ಆಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣವು ವಾಜಪೇಯಿ ಅವರಿಗೆ ಅಗ್ನಿಪರೀಕ್ಷೆಯಾಗಿತ್ತು. ಆ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ಎಲ್.ಕೆ.ಅಡ್ವಾಣಿ ಮತ್ತು ಬಿಜೆಪಿಯ ಇತರ ನಾಯಕರು ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದರು. ಆದರೆ ವಾಜಪೇಯಿ ಅವರು ಇದನ್ನು ಖಂಡಿಸಿ ತಮ್ಮ ಧರ್ಮ ನಿರಪೇಕ್ಷ ನಿಲುವಿಗೆ ಅಂಟಿಕೊಂಡಿದ್ದು ಅವರು ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ.

1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಮಂತ್ರಿಯಾದರು. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. 1998ರಲ್ಲಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದರು. ಎಐಎಡಿಎಂಕೆ ಪರಮೋಚ್ಚ ನಾಯಕ ಜೆ.ಜಯಲಲಿತಾ ಬೆಂಬಲ ವಾಪಸ್ ಪಡೆದ ಕಾರಣ 13 ತಿಂಗಳುಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. 1999ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾಗಿ ಪೂರ್ತಿ ಐದು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದು ಎನ್ಡಿಎ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅವರ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಂಡವು. ಭಾರತವು 1998ರಲ್ಲಿ ರಾಜಸ್ತಾನ ಪೋಖ್ರಾನ್ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು.
ಭಾರತದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಫಥ ರಸ್ತೆ ನಿರ್ಮಾಣ ಯೋಜನೆ ಕೂಡ ವಾಜಪೇಯಿ ಅವರ ಪರಿಕಲ್ಪನೆ. ಪಾಕಿಸ್ತಾನ ಜತೆಗಿನ ಸಂಬಂಧವನ್ನು ಸುಧಾರಿಸುವುದು ವಾಜಪೇಯಿ ಅವರ ವೈಯಕ್ತಿಕ ಉದ್ದೇಶವಾಗಿತ್ತು. 1970ರ ದಶಕದ ಕೊನೆಯಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಆಗಲೇ ಅವರು ಭಾರತ-ಪಾಕಿಸ್ತಾನ ನಡುವಣ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯಲು ವೇದಿಕೆ ಸಿದ್ದಗೊಳಿಸಿದ್ದರು.ಅಟಲ್ ಬಿಹಾರಿ ವಾಜಪೇಯಿ ಅವರ ನಿಷ್ಠೆ, ದಕ್ಷತೆ, ಪ್ರಾಮಾಣಿಕತೆ ಮತ್ತು ಕಾರ್ಯವೈಖರಿಯನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಅವಿವಾಹಿತರಾದ ವಾಜಪೇಯಿ ಅವರು ಉತ್ತಮ ಕವಿಯೂ ಆಗಿದ್ದರು.


ಬಾಂದನಿ ರೇಡಿಯೋ ಪಾಠಗಳು 2022-23.

01Radio Programme Circular

02Radio Programme Time Table 


ಬಾಂದನಿ ರೇಡಿಯೋ ಪಾಠಗಳನ್ನು ಮತ್ತೇ ಕೇಳಲು ಕೆಳಗೆ ವೀಕ್ಷಿಸಿ.

1)Episode 1:- 1-3 ನೇ ತರಗತಿ - ನೀತಿಕಥೆ 


5) Episode 5:- 8,9ತರಗತಿ - ಇಂಗ್ಲಿಷ್ ಕಲಿಕೆ.

6) Episode 6:- 4ನೇ ತರಗತಿ - ಗಣಿತ - ಹಣದ ಸಂಕಲನ & ವ್ಯವಕಲನ


7) Episode 7:- 4,5 ನೇ ತರಗತಿ ಇಂಗ್ಲಿಷ್ ಕಲಿಕೆ


8) Episode 8:- 5ನೇ ತರಗತಿ - ಗಣಿತ - ಭಿನ್ನರಾಶಿಗಳು.

9) Episode 9:- 6,7 ನೇ ತರಗತಿ - ಯೋಗ & ಆರೋಗ್ಯ ಶಿಕ್ಷಣ.

10) Episode 10:- 4ನೇ ತರಗತಿ - ಕನ್ನಡ - ಪ್ರವಾಸ ಹೋಗೋಣ.


11) Episode 11:- 1-3 English lesson My Family.

12 Episode 12:- 5 ನೇ ತರಗತಿ ಗಣಿತ ಕೋನಗಳ ವಿಧಗಳು.

13) Episode 13 :- 6 & 7 ನೇ ತರಗತಿ ವೃತ್ತಿ ಶಿಕ್ಷಣ - ಚಿತ್ರಕಲೆ.

14) Episode 14 :- 4 ನೇ ತರಗತಿ ಕನ್ನಡ ಹುತಾತ್ಮ ಬಾಲಕ.

15) Episode 15 :- 4 ಮತ್ತು 5 ನೇ ತರಗತಿ ನೀತಿ ಕಥೆ.

16) Episode 16:- 5 ನೇ ತರಗತಿ ಗಣಿತ ತೂಕ ಮತ್ತು ಗಾತ್ರ.


17) Episode 17:- 8 ಮತ್ತು 9 ನೇ ತರಗತಿ ನೀತಿ ಕಥೆ 


18) Episode 18 :- 4 ನೇ ತರಗತಿ ಗಣಿತ ಅಳತೆಗಳು 


19) Episode 19 :- 6-7 ENGLISH food and festival 


20) Episode 20 :- 5 ನೇ ತರಗತಿ ಕನ್ನಡ ಧೀರ ಸೇನಾನಿ


21) Episode 21 :- 1 ರಿಂದ 3 ನೇ ತರಗತಿ English Birds










32) Episode 32 :- 4 ನೇ ತರಗತಿ ಗಣಿತ ದತ್ತಾಂಶಗಳ ನಿರ್ವಹಣೆ.














Popular Post