Menu

Home ನಲಿಕಲಿ About ☰ Menu


 

🔍

5 & 8ನೇ ತರಗತಿಗೆ ಮೌಲ್ಯಾಂಕನ 2022-23


       ಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009, ತಿದ್ದುಪಡೆ ಕಾಯ್ದೆ 2019ರ ಕಲಂ 16 (1) ರಿಂದ 16(4) ರ ಉಲ್ಲೇಖಗಳಂತೆ ಸರ್ಕಾರ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ 2022-23ನೇ ಶೈಕ್ಷಣಿಕ ವರ್ಷದಿಂದ ವಾರ್ಷಿಕ ಪರೀಕ್ಷೆ / ಮೌಲ್ಯಾಂಕನವನ್ನು   ನಡೆಸುತ್ತದೆ.

       1 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ 2022 - 23 ನೇ ಸಾಲಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ, ಈ ಕಲಿಕಾ ಚೇತರಿಕೆ ಮತ್ತು ಪಠ್ಯ ಪುಸ್ತಕಗಳ ಆಧಾರದ ಮೇಲೆ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ 2022-23ನೇ ಶೈಕ್ಷಣಿಕ ವರ್ಷಕ್ಕೆ ವಾರ್ಷಿಕ ಪರೀಕ್ಷೆ / ಮೌಲ್ಯಾಂಕನವನ್ನು  ನಡೆಸಲಾಗುವುದು.

               ಈ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (K.S.E.A.B) ನಡೆಸುತ್ತದೆ.

             ಈಗಾಗಲೇ FA-1, FA-2 ಮತ್ತು SA-1 ಪರೀಕ್ಷೆಗಳು ಪೂರ್ಣಗೊಂಡಿದ್ದು ಉಳಿದ ಅರ್ಧ ವರ್ಷಕ್ಕೆ ಸಂಬಂಧಿಸಿದ ಕಲಿಕಾ ಚೇತರಿಕೆ ಮತ್ತು ಪಠ್ಯ ಪುಸ್ತಕದ  ಪಠ್ಯಕ್ರಮವನ್ನು ಆಧರಿಸಿ ಈ ವಾರ್ಷಿಕ ಪರೀಕ್ಷೆ / ಮೌಲ್ಯಾಂಕನ (SA-2) ನಡೆಸಲಾಗುತ್ತದೆ.


ವಾರ್ಷಿಕ ಪರೀಕ್ಷೆ  / ಮೌಲ್ಯಾಂಕನ ನಿರ್ವಹಣೆ ಮಾರ್ಗಸೂಚಿ

1. ಪರೀಕ್ಷಾ ನೋಂದಣಿ :

         ಪರೀಕ್ಷೆಗೆ 2022 - 23 ರ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8 ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಧಾನ ಗುರುಗಳು SATS ನಲ್ಲಿ ನೋಂದಾಯಿಸಿದಂತೆ ದೃಢೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವಿದ್ಯಾರ್ಥಿಗಳ ಪಟ್ಟಿ ಸಲ್ಲಿಸುವ ಮೂಲಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವುದು. ವಿದ್ಯಾರ್ಥಿಯ SATS ಸಂಖ್ಯೆಯನ್ನು ಪರೀಕ್ಷಾ ರಿಜಿಸ್ಟರ್ ಸಂಖ್ಯೆ ಎಂದು ಪರಿಗಣಿಸಬೇಕು.


2. ಪರೀಕ್ಷಾ ನೋಂದಣಿ ಶುಲ್ಕ :

      ಯಾವುದೇ  ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವಂತಿಲ್ಲ, ಪರೀಕ್ಷಾ ಶುಲ್ಕವನ್ನು ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (K.S.E.A.B)  ಭರಿಸುತ್ತದೆ.


3. ಪರೀಕ್ಷಾ ಕೇಂದ್ರ :

      5ನೇ ತರಗತಿಯ ಕನಿಷ್ಠ 25  ವಿದ್ಯಾರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರವನ್ನು ರಚಿಸಲಾಗುವುದು, ಕನಿಷ್ಠ 25 ವಿದ್ಯಾರ್ಥಿಗಳು ಇಲ್ಲದಿದ್ದರೆ 2 ಕಿಮೀ ವ್ಯಾಪ್ತಿ ಒಳಗಿನ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಕೇಂದ್ರ ಸ್ಥಾಪನೆ.

           ಅದೇ ರೀತಿ 8ನೇ ತರಗತಿಯ ಕನಿಷ್ಠ 50 ವಿದ್ಯಾರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರವನ್ನು ರಚಿಸುವುದು, ಕನಿಷ್ಠ 50 ವಿದ್ಯಾರ್ಥಿಗಳು ಇಲ್ಲದಿದ್ದರೆ 2 ಕಿಮೀ ವ್ಯಾಪ್ತಿ ಒಳಗಿನ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಕೇಂದ್ರ ಸ್ಥಾಪನೆ.


4. ಪ್ರವೇಶ ಪತ್ರ (Hall Ticket) :

     ಶಾಲಾ ಮುಖ್ಯೋಪಾಧ್ಯಾಯರು K.S.E.A.B / SATS ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ಮೂಲಕ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಒದಗಿಸುತ್ತಾರೆ.


5. ಪರೀಕ್ಷೆಯ ಪಠ್ಯಕ್ರಮ :

       ನವೆಂಬರ್ 2022 ರಿಂದ ಮಾರ್ಚ್ 2023ರ ವರೆಗಿನ ಕಲಿಕಾ ಚೇತರಿಕೆಯ ಕಲಿಕಾ ಫಲಗಳು ಮತ್ತು ಪಠ್ಯ ಪುಸ್ತಕ  ಆಧರಿಸಿ ವಾರ್ಷಿಕ ಪರೀಕ್ಷೆ / ಮೌಲ್ಯಂಕನ(SA-2 ಪರೀಕ್ಷೆ)ವನ್ನು ನಡೆಸಲಾಗುವುದು.


6. ಪರೀಕ್ಷೆ / ಪ್ರಶ್ನೆ ಪತ್ರಿಕೆ ವಿನ್ಯಾಸ :

      ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(K.S.E.A.B) ನವೆಂಬರ್ 2022 ರಿಂದ ಮಾರ್ಚ್ 2023 ರವರೆಗಿನ ಪಠ್ಯಕ್ರಮದ ಆಧರಿಸಿ ಪ್ರಶ್ನೆ ಪತ್ರಿಕೆ ತಯಾರಿಸುತ್ತದೆ. 

ಪ್ರಶ್ನೆ ಪತ್ರಿಕೆ ಸಹಿತ ಉತ್ತರ ಪತ್ರಿಕೆ ಒದಗಿಸಲಾಗುವುದು.

           ಈ ಪರೀಕ್ಷೆಗೆ 5 ಮತ್ತು 8 ನೇ ತರಗತಿಗೆ 50 ಅಂಕಗಳಿಗೆ  2 ಗಂಟೆ ಸಮಯ ನಿಗದಿಪಡಿಸಿದೆ.

ಲಿಖಿತ ಪರೀಕ್ಷೆ       -  40 ಅಂಕಗಳು
ಮೌಖಿಕ ಪರೀಕ್ಷೆ    -  10 ಅಂಕಗಳು
                ಒಟ್ಟು   -  50 ಅಂಕಗಳು

ಲಿಖಿತ ಪರೀಕ್ಷೆಯ 40 ಅಂಕಗಳಲ್ಲಿ
20 ಅಂಕಗಳು - ಬಹು ಆಯ್ಕೆ ಆಧಾರಿತ (MCQ).
20 ಅಂಕಗಳು - ವಾಕ್ಯ ರೂಪದಲ್ಲಿ (ಸಣ್ಣ ಉತ್ತರ, ದೀರ್ಘ ಉತ್ತರ, ಅತಿ ದೀರ್ಘ ಉತ್ತರ). 

7. ಮಾದರಿ ಪ್ರಶ್ನೆಪತ್ರಿಕೆ :

     ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (K.S.E.A.B) ಮಾದರಿ ಮತ್ತು ನೀಲನಕ್ಷೆಗೆ ಅನುಗುಣವಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು 2023 ರ ಜನವರಿ / ಫೆಬ್ರವರಿಯಲ್ಲಿ ಬಿಡುಗಡೆ ಮಾಡುತ್ತದೆ.

8. ಪರೀಕ್ಷೆ ವೇಳಾಪಟ್ಟಿ :

          ಪರೀಕ್ಷೆಯನ್ನು 09ನೇ ಮಾರ್ಚ್ 2023 ರಿಂದ 17 ನೇ ಮಾರ್ಚ್ 2023ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ನೀಡಲಾಗಿದೆ. ಅಂತಿಮ ವೇಳಾಪಟ್ಟಿಯನ್ನು K.S.E.A.B ಪ್ರಕಟಿಸುವುದು.

9. ಫಲಿತಾಂಶ :

         5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶಗಳನ್ನು FA1, FA2, FA3, FA-4, SA-1 ಮತ್ತು ಪ್ರಸ್ತುತ ನಿರ್ವಹಿಸುವ  SA-2 ಅಂಕಗಳ ಆಧಾರದ ಮೇಲೆ ಒಟ್ಟು 100 ಅಂಕಗಳಿಗೆ ಪ್ರಕಟಿಸಲಾಗುವುದು, 100 ಅಂಕಗಳಲ್ಲಿ ವಿದ್ಯಾರ್ಥಿಗಳು ಕನಿಷ್ಠ 35% ಅಂಕಗಳನ್ನು ಗಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಜೂನ್, ಜುಲೈನಲ್ಲಿ ಪರಿಹಾರ ಬೋಧನೆ ಮಾಡಿ ಎರಡು ಪೂರಕ ಪರೀಕ್ಷೆ ಮೌಲ್ಯಾಂಕನಗಳನ್ನು  ಶಾಲಾ ಹಂತದಲ್ಲಿ ನಿರ್ವಹಿಸಿ ವಿದ್ಯಾರ್ಥಿಗಳ ಕಲಿಕೆಯನ್ನು ಬಲವರ್ಧನೆಗೊಳಿಸುವುದು.


5 ಮತ್ತು 8ನೇ ತರಗತಿಗಳಿಗೆ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ಸುತ್ತೋಲೆ - 12/12/2022.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post