ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

KSET 2024 ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ

     ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) - 2024 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. 

KSET 2024 ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ

ಕೆಸೆಟ್-2024 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ

☞ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 29.07.2024 

☞ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 22.08.2024

☞ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26.08.2024

☞ ಪರೀಕ್ಷೆ ದಿನಾಂಕ  : 24.11.2024


ಅರ್ಜಿ ಸಲ್ಲಿಸುವ ವಿಧಾನ : 
ಅಭ್ಯರ್ಥಿಗಳು ಕೆಸೆಟ್-2024ಕ್ಕೆ "Online" ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸಲು Website ವಿಳಾಸ : 
KEA ವೆಬ್ಸೈಟ್ http:/kea.kar.nic.in ಅನ್ನು ಪ್ರವೇಶಿಸುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. (ಅರ್ಜಿಯನ್ನು ಸಲ್ಲಿಸುವ ಮುನ್ನ ಈ ಅಧಿಸೂಚನೆಯನ್ನು ಗಮನವಿಟ್ಟು ಓದಿ)


K-SET ಪರೀಕ್ಷೆಗೆ Online ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನದ ವಿಡಿಯೋ

ಅರ್ಹತಾ ನಿಬಂಧನೆಗಳು :
1) ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ / ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ  ವರ್ಗದ ಅಭ್ಯರ್ಥಿಗಳು ಶೇ.55% ರಷ್ಟು ಅಂಕಗಳನ್ನು (ಪೂರ್ಣಾಂಕಿತ ಗೊಳಿಸಿರಬಾರದು) ಪಡೆದಿರಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರೆ ಹಿಂದುಳಿದ ಅಭ್ಯರ್ಥಿಗಳು (ಪ್ರವರ್ಗ-1, IIA, IIB, IIIA, IIIB), ವಿಕಲಚೇತನರು (PwD) ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ.50% ರಷ್ಟು (ಪೂರ್ಣಾಂಕಿತ ಗೊಳಿಸಿರಬಾರದು) ಅಂಕಗಳನ್ನು ಪಡೆದಿರಬೇಕು. 

2) ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ಮಾತ್ರ ಪ್ರವೇಶ ನೀಡಲಾಗುವುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯನ್ನು, ಸಾಮಾನ್ಯ ವರ್ಗದವರು ಶೇ.55% ರಷ್ಟು ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-I, IIA, IIB, IIIA, ಮತ್ತು IIIB, ವಿಕಲಚೇತನರು (PwD) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು, ಶೇ. 50% ರಷ್ಟು ಅಂಕ ಪಡೆದು, ಅರ್ಹತೆ ಹೊಂದಿ ಕೆಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷದೊಳಗಾಗಿ ಅವರ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಿದರೆ ಮಾತ್ರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. ಇಲ್ಲವಾದಲ್ಲಿ ಅಂತಹವರ ಅರ್ಹತೆಯನ್ನು ರದ್ದುಪಡಿಸಲಾಗುವುದು.

ವಯೋಮಿತಿ :
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.

ಪರೀಕ್ಷೆ ಶುಲ್ಕ :
ವರ್ಗಶುಲ್ಕ
ಸಾಮಾನ್ಯ ವರ್ಗ, II-A, II-В, ІІІ-А, ІІІ-В ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆರೂ.1000/-
ಪ್ರವರ್ಗ-I, SC, ST, PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆರೂ.700/-

ಶುಲ್ಕ ಪಾವತಿಸುವ ವಿಧಾನ :
ಪರೀಕ್ಷೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

E-Sign  ಅರ್ಜಿಯನ್ನು  ಡೌನ್ಲೋಡ್ ಮಾಡುವ ವಿಧಾನದ ವಿಡಿಯೋ


ಪರೀಕ್ಷಾ ವಿಧಾನ : 
KSET ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿದ್ದು, ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
    ಪತ್ರಿಕೆಪ್ರಶ್ನೆಗಳ ಸಂಖ್ಯೆಅಂಕಗಳು
    I50100
    II100200

    ಪರೀಕ್ಷಾ ಪಠ್ಯಕ್ರಮ :
    ಪತ್ರಿಕೆ - I :-
    ಸಾಮಾನ್ಯ ಪತ್ರಿಕೆಯು ಅಭ್ಯರ್ಥಿಗಳ ಬೋಧನೆ, ಸಂಶೋಧನೆ ಮತ್ತು ಬುದ್ದಿ ಸಾಮರ್ಥ್ಯಗಳನ್ನು ಪರೀಕ್ಷಿಸುವುದಾಗಿರುತ್ತದೆ. 
    Download ಪತ್ರಿಕೆ - I ರ ಪಠ್ಯಕ್ರಮ

    ಪತ್ರಿಕೆ II  :- 
    ಈ ಪತ್ರಿಕೆಯು ಅಭ್ಯರ್ಥಿಯ ಆಯ್ಕೆ ಮಾಡಿದ ವಿಷಯದ್ದಾಗಿರುತ್ತದೆ. ಈ ಪತ್ರಿಕೆಯು ಆಯ್ಕೆ ಮಾಡಿದ ವಿಷಯಗಳಲ್ಲಿ 100 ಕಡ್ಡಾಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೂ 2 ಅಂಕಗಳಿರುತ್ತದೆ. ಗರಿಷ್ಠ 200 ಅಂಕಗಳಿರುತ್ತವೆ. 
                         ಕೆಸೆಟ್ (KSET) ಪರೀಕ್ಷೆಯ ಪತ್ರಿಕೆ I ಮತ್ತು ಪತ್ರಿಕೆ - II ಪಠ್ಯಕ್ರಮವು, ಯು.ಜಿ.ಸಿ / ಸಿ.ಎಸ್.ಐ.ಆರ್ ನೆಟ್ ನಿಗದಿಪಡಿಸಿರುವ ಪಠ್ಯಕ್ರಮದ ಮಾದರಿಯಲ್ಲೇ ಇರುತ್ತದೆ. ಎಲ್ಲಾ ವಿಷಯಗಳ ಪಠ್ಯಕ್ರಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಿಂದ (http://kea.kar.nic.in) Download ಮಾಡಿಕೊಳ್ಳುವುದು. ಕೆಸೆಟ್ ಪರೀಕ್ಷೆಯು 41 ವಿಷಯಗಳ ಹೆಸರು, ವಿಷಯಗಳ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಆವೃತ್ತಿಯ ವಿವರಗಳು ಈ ಕೆಳಕಂಡಂತಿರುತ್ತವೆ.       
    1. ಮಹಿಳಾ ಅಧ್ಯಯನ ವಿಷಯ ಪಠ್ಯಕ್ರಮ
    2.  ದೃಶ್ಯ ಕಲೆಗಳ ವಿಷಯ ಪಠ್ಯಕ್ರಮ
    3.  ಉರ್ದು ವಿಷಯ ಪಠ್ಯಕ್ರಮ
    4.  ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣಾ ವಿಷಯ ಪಠ್ಯಕ್ರಮ
    5.  ಸಮಾಜಶಾಸ್ತ್ರ ವಿಷಯ ಪಠ್ಯಕ್ರಮ
    6.  ಸಮಾಜ ಕಾರ್ಯ ವಿಷಯ ಪಠ್ಯಕ್ರಮ
    7.  ಸಂಸ್ಕೃತ ವಿಷಯ ಪಠ್ಯಕ್ರಮ
    8.  ಸಾರ್ವಜನಿಕ ಆಡಳಿತ ವಿಷಯ ಪಠ್ಯಕ್ರಮ
    9.  ಮನೋವಿಜ್ಞಾನ ವಿಷಯ ಪಠ್ಯಕ್ರಮ
    10.  ರಾಜ್ಯಶಾಸ್ತ್ರ ವಿಷಯ ಪಠ್ಯಕ್ರಮ
    11.  ಭೌತಿಕ ವಿಜ್ಞಾನ ವಿಷಯ ಪಠ್ಯಕ್ರಮ
    12.  ದೈಹಿಕ ಶಿಕ್ಷಣ ವಿಷಯ ಪಠ್ಯಕ್ರಮ
    13.  ತತ್ವಶಾಸ್ತ್ರ ವಿಷಯ ಪಠ್ಯಕ್ರಮ
    14.  ಪ್ರದರ್ಶನ ಕಲೆಗಳ ವಿಷಯ ಪಠ್ಯಕ್ರಮ
    15.  ಸಂಗೀತ ವಿಷಯ ಪಠ್ಯಕ್ರಮ
    16.  ಗಣಿತ ವಿಜ್ಞಾನ ವಿಷಯ ಪಠ್ಯಕ್ರಮ
    17.  ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪಠ್ಯಕ್ರಮ
    18.  ಮರಾಠಿ ವಿಷಯ ಪಠ್ಯಕ್ರಮ
    19.  ನಿರ್ವಹಣಾ ವಿಷಯ ಪಠ್ಯಕ್ರಮ
    20.  ಭಾಷಾಶಾಸ್ತ್ರ ವಿಷಯ ಪಠ್ಯಕ್ರಮ
    21.  ಜೀವ ವಿಜ್ಞಾನ ವಿಷಯ ಪಠ್ಯಕ್ರಮ
    22.  ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯ ಪಠ್ಯಕ್ರಮ
    23.  ಕಾನೂನು ವಿಷಯ ಪಠ್ಯಕ್ರಮ
    24.  ಕನ್ನಡ ವಿಷಯ ಪಠ್ಯಕ್ರಮ
    25.  ಗೃಹ ವಿಜ್ಞಾನ ವಿಷಯ ಪಠ್ಯಕ್ರಮ
    26.  ಇತಿಹಾಸ ವಿಷಯ ಪಠ್ಯಕ್ರಮ
    27.  ಹಿಂದಿ ವಿಷಯ ಪಠ್ಯಕ್ರಮ
    28.  ಭೂಗೋಳಶಾಸ್ತ್ರ ವಿಷಯ ಪಠ್ಯಕ್ರಮ
    29.  ಜಾನಪದ ಸಾಹಿತ್ಯ ವಿಷಯ ಪಠ್ಯಕ್ರಮ
    30.  ಪರಿಸರ ವಿಜ್ಞಾನ ವಿಷಯ ಪಠ್ಯಕ್ರಮ
    31.  ಇಂಗ್ಲಿಷ್ ವಿಷಯ ಪಠ್ಯಕ್ರಮ
    32.  ವಿದ್ಯುನ್ಮಾನ ವಿಜ್ಞಾನ ವಿಷಯ ಪಠ್ಯಕ್ರಮ
    33.  ಅರ್ಥಶಾಸ್ತ್ರ ವಿಷಯ ಪಠ್ಯಕ್ರಮ
    34.  ಶಿಕ್ಷಣ ವಿಷಯ ಪಠ್ಯಕ್ರಮ
    35.  ಭೂ ವಿಜ್ಞಾನ ವಿಷಯ ಪಠ್ಯಕ್ರಮ
    36.  ಅಪರಾಧಶಾಸ್ತ್ರ ವಿಷಯ ಪಠ್ಯಕ್ರಮ
    37.  ಕಂಪ್ಯೂಟರ್ ಸೈನ್ಸ್ ಮತ್ತು ಅಪ್ಲಿಕೇಶನ್ ಪಠ್ಯಕ್ರಮ
    38.  ವಾಣಿಜ್ಯ ವಿಷಯ ಪಠ್ಯಕ್ರಮ
    39.  ರಾಸಾಯನಿಕ ವಿಜ್ಞಾನ ವಿಷಯ ಪಠ್ಯಕ್ರಮ
    40.  ಪುರಾತತ್ವ ವಿಷಯ ಪಠ್ಯಕ್ರಮ
    41.  ಮಾನವಶಾಸ್ತ್ರ ವಿಷಯ ಪಠ್ಯಕ್ರಮ

    ಶ್ರೀ ನಾಡಪ್ರಭು ಕೆಂಪೇಗೌಡರ ಕುರಿತು ರಸಪ್ರಶ್ನೆ

    ಶ್ರೀ ನಾಡಪ್ರಭು ಕೆಂಪೇಗೌಡರ ಕುರಿತು ರಸಪ್ರಶ್ನೆ

              ಶ್ರೀ ನಾಡಪ್ರಭು ಕೆಂಪೇಗೌಡ ಬೆಂಗಳೂರು ನಗರದ ನಿರ್ಮಾಪಕರು  ದೂರದೃಷ್ಟಿ ಮತ್ತು ಆಡಳಿತಾತ್ಮಕ ಕೌಶಲ್ಯಗಳಿಗೆ ಹೆಸರುವಾಸಿಯಾದ ಧೀಮಂತ ನಾಯಕ. ಆರ್ಥಿಕ ಹಿತಚಿಂತನೆ, ಕೃಷಿ, ನೀರಾವರಿ, ನಿರ್ಮಾಣ ಮುಂತಾದ ಸುಧಾರಣೆಗಳನ್ನು ತರುವ ಮೂಲಕ ಜಾಗತಿಕ ಮನ್ನಣೆಗೆ‌ ಕಾರಣವಾದ ಇವರ ಕುರಿತು ಪ್ರಶ್ನೋತ್ತರಗಳ ಮೂಲಕ  ತಿಳಿಯುತ್ತ ಹೋಗೋಣ.

     
    ಸೂಚನೆ :- ಪ್ರತಿ ಪ್ರಶ್ನೆಗಳ ಕೆಳಗೆ Show Answer ಬಟನ್ ಇದ್ದು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಉತ್ತರವನ್ನು ನೋಡಬಹುದು.

    Q ➤ 1. 1ನೇ ಕೆಂಪೇಗೌಡ ಯಾವ ರಾಜ ವಂಶಸ್ಥಕ್ಕೆ ಸೇರಿದ ರಾಜ?


    Q ➤ 2. ಹಿರಿಯ ಕೆಂಪೇಗೌಡ ಯಾವಾಗ ಜನಿಸಿದರು?


    Q ➤ 3. ಕೆಂಪೇಗೌಡರ ತಂದೆಯ ಹೆಸರೇನು?


    Q ➤ 4. ಕೆಂಪೇಗೌಡರ ತಾಯಿಯ ಹೆಸರೇನು?


    Q ➤ 5. ಕೆಂಪೇಗೌಡರ ಕುಲಗುರುಗಳು ಯಾರು?


    Q ➤ 6. ಕೆಂಪೇಗೌಡರ ಧರ್ಮಪತ್ನಿಯ ಹೆಸರೇನು?


    Q ➤ 7. ಕೆಂಪೇಗೌಡರು ಕಟ್ಟಿಸಿದ ಪ್ರಸಿದ್ದ ನಗರದ ಹೆಸರೇನು?


    Q ➤ 8. ಬೆಂಗಳೂರು ನಗರವನ್ನು ಯಾವ ವರ್ಷದಲ್ಲಿ ಕಟ್ಟಿಸಿದರು?


    Q ➤ 9. ಕೆಂಪೇಗೌಡ ನ ಯಾವ ಸಾಮ್ರಾಜ್ಯದ ಸಾಮಂತ ದೊರೆಯಾಗಿದ್ದರು?


    Q ➤ 10. ಬೆಂಗಳೂರು ನಗರ ಎಷ್ಟನೇ ಶತಮಾನದಲ್ಲಿ ನಿರ್ಮಿಸಲಾಯಿತು?


    Q ➤ 11. ಯಾರ ನೆನಪಿಗಾಗಿ ಬೆಂಗಳೂರು ನಗರವನ್ನು ನಿರ್ಮಿಸಲಾಯಿತು?


    Q ➤ 12. ವಿಜಯ ದಶಮಿಯ ಮಲ್ಲಯುದ್ದದಲ್ಲಿ ಕೆಂಪೇಗೌಡರು ಸೋಲಿಸಿದ ಜಟ್ಟಿಯ ಹೆಸರೇನು?


    Q ➤ 13. ರಣದುಲ್ಲಾಖಾನ ಯಾವ ಸುಲ್ತಾನರ ಸಾಮ್ರಾಜ್ಯಕ್ಕೆ ಸೇರಿದವನು?


    Q ➤ 14. ಅರ್ಕಾವತಿ ನದಿಯ ಉಗಮತಾಣ ಯಾವುದು?


    Q ➤ 15. ಬೆಂಗಳೂರು ನಗರಕ್ಕೆ ಇರುವ ಮುಖ್ಯದ್ವಾರಗಳು ಎಷ್ಟು?


    Q ➤ 16. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಪೂರ್ವದ ಮುಖ್ಯದ್ವಾರ ಯಾವುದು?:


    Q ➤ 17. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಪಶ್ಚಿಮದ ಮುಖ್ಯದ್ವಾರ ಯಾವುದು?


    Q ➤ 18. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಉತ್ತರದ ಮುಖ್ಯದ್ವಾರ ಯಾವುದು?


    Q ➤ 19.ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ದಕ್ಷಿಣದ ಮುಖ್ಯದ್ವಾರ ಯಾವುದು?


    Q ➤ 20. ಬೆಂಗಳೂರು ನಗರದ ಕೋಟೆ ನಿರ್ಮಾಣಕ್ಕೆ ತನ್ನ ಪ್ರಾಣವನ್ನೆ ಬಲಿ ಕೊಟ್ಟ ನಾಡಪ್ರಭುಗಳ ಸೊಸೆಯ ಹೆಸರೇನು?


    Q ➤ 21. ಕೆಂಪೇಗೌಡ ನಿರ್ಮಿಸಿದ ಒಟ್ಟು ಕೋಟೆಗಳು ಎಷ್ಟು?


    Q ➤ 22. ಸಾ.ಶ 1537 ರಲ್ಲಿ ಕಟ್ಟಿಸಿದ ಬೆಂಗಳೂರು ಕೋಟೆಯು ಯಾವುದರಿಂದ ನಿರ್ಮಾಣಗೊಂಡಿತ್ತು?


    Q ➤ 23. "ಯಲಹಂಕದ ನಾಡಪ್ರಭುಗಳು" ಎಂಬ ಬಿರದನ್ನು ನೀಡಿದವರು ಯಾರು?


    Q ➤ 24. ಬೆಂಗಳೂರು ನಿರ್ಮಾಣ ಮಾಡಲು ಕೆಂಪೇಗೌಡರಿಗೆ ಸಹಾಯ ಮಾಡಿದ ವಿಜಯನಗರದ ಅರಸ ಯಾರು?


    Q ➤ 25. ಕೆಂಪೇಗೌಡ ತನ್ನ ಆಡಳಿತದ ಅನುಕೂಲಕ್ಕಾಗಿ ಟಂಕಿಸಿದ ನಾಣ್ಯದ ಹೆಸರೇನು?


    Q ➤ 26. ಕಂಪೇಗೌಡರನ್ನು ಭೈರವ ನಾಣ್ಯ ಟಂಕಿಸಿದ್ದಾಕ್ಕಾಗಿ ಯಾವ ಜೈಲಿನಲ್ಲಿ ಬಂಧಿಸಿಡಲಾಯಿತು?


    Q ➤ 27. ಕೆಂಪೇಗೌಡರ ನಿಧನಗೊಂಡಿದ್ದು ಯಾವಾಗ?


    Q ➤ 28. ಕೆಂಪೇಗೌಡರ ಸಮಾಧಿ ಸ್ಥಳ ಎಲ್ಲಿದೆ?


    Q ➤ 29. ಇತ್ತೀಚಿಗೆ ಸ್ಥಾಪಿಸಿದ ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯ ಹೇಸರೇನು?


    Q ➤ 30.ಕೆಂಪೇಗೌಡರ ಕಾಲಾವಧಿಯಲ್ಲಿ ತೊಲಗಿಸಿದ ಸಂಪ್ರದಾಯ ಸಮಾಜದ ಅನಿಷ್ಟ ಪದ್ಧತಿ ಯಾವುದು?.


    Q ➤ 31. ಕೆಡಂಪೇಗೌಡರ ಆರಾಧ್ಯ ಧೈವ ಯಾವುದು?


    Q ➤ 32. ಕೆಂಪೇಗೌಡರು ರಚಿಸಿದ ಕೃತಿ ಯಾವುದು?


    Q ➤ 33. ಕೆಂಪೇಗೌಡರು ರಚಿಸಿದ ಕೃತಿ ಯಾವ ಭಾಷೆಯಲ್ಲಿದೆ?


    Q ➤ 34. ನಾಡಪ್ರಭು ಕೆಂಪೇಗೌಡರ 108 ಅಡಿ ಪುತ್ಥಳಿಯನ್ನು ಎಷ್ಟನೇ ಜಯಂತೋತ್ಸವದ ನೆನಪಿಗಾಗಿ ಸ್ಥಾಪಿಸಲಾಯಿತು?


    Q ➤ 35. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಯಾವ ತಾಲ್ಲೂಕಿನಲ್ಲಿದೆ?


    Q ➤ 36. ಬೆಂಗಳೂರು ಕಟ್ಟಿಸಿದ ದೊರೆ ಯಾರು?


    Q ➤ 37. ಕೆಂಪೇಗೌಡರು ಆಳ್ವಿಕೆ ಮಾಡಿದ್ದು ಎಷ್ಟನೇ ಶತಮಾನ ?


    Q ➤ 38. ಮೊದಲನೆಯ ಕೆಂಪೇಗೌಡರು ಯಾವ ಸಾಮ್ರಾಜ್ಯದ ಸಾಮಂತ ಅರಸರಾಗಿದ್ದರು?


    Q ➤ 39. ಕೆಂಪೇಗೌಡರ ಕುಲದೇವರು ಯಾರು?


    Q ➤ 40. ಕೆಂಪೇಗೌಡರ ಪಟ್ಟಾಭಿಷೇಕ ಯಾವಾಗ ಮಾಡಲಾಯಿತು?


    Q ➤ 41. ಕೆಂಪೇಗೌಡರು ಕೆಂಪಮ್ಮನ ಹೆಸರಿನಲ್ಲಿ ಕಟ್ಟಿಸಿದ ಕೆರೆಯ ಹೆಸರೇನು?


    Q ➤ 42. ಕೆಂಪೇಗೌಡರಿಗೆ ಶಿಕ್ಷಣ ನೀಡಿದ ಗುರುಗಳ ಹೆಸರೇನು?


    Q ➤ 43.ಕೆಂಪೇಗೌಡರು ಮದ್ದುಗುಂಡಿನ ಕಾರ್ಖಾನೆ ಸ್ಥಾಪಿಸಿದ ಸ್ಥಳ ಯಾವುದು?


    Q ➤ 44. ಕೆಂಪೇಗೌಡ ಯಾವ ದೇವರ ಆರಾಧಕರಾಗಿದ್ದರು


    Q ➤ 45. ತಾಳಿಕೋಟಿ ಕದನದಲ್ಲಿ ಭಾಗವಹಿಸಲು ಕೆಂಪೇಗೌಡರು 2000 ಸೈನಿಕರೊಂದಿಗೆ ಯಾರನ್ನು ಕಳುಹಿಸಿಕೊಟ್ಟರು?


    Q ➤ 46. ಇತ್ತೀಚಿಗೆ ಯಾವ ವರ್ಷ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.


    Q ➤ 47.ಇತ್ತೀಚಿಗೆ ಅನಾವರಣಗೊಳಿಸಿದ ಕೆಂಪೇಗೌಡರ ಪ್ರತಿಮೆ ಯಾವ ಲೋಹದಿಂದ ಮಾಡಲಾಗಿದೆ?


    Q ➤ 48. ಕೆಂಪೇಗೌಡರ ಪ್ರತಿಮೆಯ ಎತ್ತರ ಎಷ್ಟು?


    Q ➤ 49. ಕೆಂಪೇಗೌಡ ಪ್ರತಿಮೆಯ ನಿರ್ಮಾಣಕ್ಕೆ ಖರ್ಚಾದ ಹಣವೆಷ್ಟು?


    Q ➤ 50.ಕೆಂಪೇಗೌಡರ ಪ್ರತಿಮೆಯಲ್ಲಿರುವ ಖಡ್ಗದ ಒಟ್ಟು ತೂಕವೆಷ್ಟು?


    Q ➤ 51. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?


    Q ➤ 52. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹೆಸರೇನು?


    Q ➤ 53. ಕೆಂಪೇಗೌಡರು ಯಾವಾಗ ತಂದೆಯಿಂದ ಅಧಿಕಾರ ಪಡೆದು ರಾಜ್ಯಭಾರ ಆರಂಭಿಸಿದರು?


    Q ➤ 54.ಕೆಂಪೇಗೌಡರ ಆಡಳಿತದ ಅವಧಿಯಲ್ಲಿಯ ಎಷ್ಟು ಶಾಸನಗಳು ಇಲ್ಲಿಯವರೆಗೆ ದೊರೆತಿವೆ?


    Q ➤ 55. ವಿಜಯನಗರ ಅರಸ ಅಚ್ಯುತರಾಯ ಕೆಂಪೇಗೌಡರಿಗೆ ಎಷ್ಟು ಹೋಬಳಿಗಳನ್ನು ಉಡುಗೊರೆಯಾಗಿ ನೀಡಿದನು?


    Q ➤ 56. ಬೆಂಗಳೂರು ನಗರ ನಿರ್ಮಾಣಕ್ಕೆ ಕೆಂಪೇಗೌಡರಿಗೆ ಸ್ಪೂರ್ತಿಯಾದ ಸ್ಥಳ ಯಾವುದು?


    Q ➤ 57. ಕೆಂಪೇಗೌಡರು ಯಾವ ಮನೆತನಕ್ಕೆ ಸೇರಿದವರು?


    Q ➤ 58. ಕೆಂಪೇಗೌಡರ ಪೂರ್ವಜರು ಯಾವುದನ್ನು ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ಮಾಡುತ್ತಿದ್ದರು?


    Q ➤ 59.ಬೆಂಗಳೂರನ್ನು ಕೆಂಪೇಗೌಡರು ನಿರ್ಮಿಸಿದ ವರ್ಷ ಯಾವುದು?


    Q ➤ 60. ಕೆಂಪೇಗೌಡರು ಬೆಂಗಳೂರು ಸುತ್ತಲೂ ನಿರ್ಮಿಸಿದ ದ್ವಾರಗಳು ಎಷ್ಟು?.


    Q ➤ 61. ಕೆಂಪೇಗೌಡರು ಬೆಂಗಳೂರಿನಲ್ಲಿ ನಿರ್ಮಿಸಿದ ಒಟ್ಟು ಪೇಟೆಗಳ ಸಂಖ್ಯೆ ಎಷ್ಟು?


    Q ➤ 62. ಕೆಂಪೇಗೌಡರನ್ನು ಯಾವ ನಗರದ ನಿರ್ಮಾತೃ ಎಂದು ಕರೆಯುತ್ತಾರೆ ?


    Q ➤ 63.ಬೆಂಗಳೂರಿನ ಹಳೆಯ ಅಥವಾ ಪ್ರಾಚೀನ ಹೆಸರೇನು?


    Q ➤ 64. ಕೆಂಪೇಗೌಡ ಎಲ್ಲಿ ಜನಿಸಿದರು ?


    Q ➤ 65. ಕೆಂಪೇಗೌಡರ ಸೊಸೆಯ ಹೆಸರೇನು?


    Q ➤ 66. ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳನ್ನು ಪೂರೈಸಲು ಸುಮಾರು ಎಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಿದರು?


    Q ➤ 67.ಕೆಂಪೇಗೌಡ ಯಾವಾಗ ನಿಧನರಾದರು?


    Q ➤ 68. ಯಾವ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಡಲಾಗಿದೆ ?


    Q ➤ 69. ಕೆಂಪೇಗೌಡರ ಪ್ರತಿಮೆಯನ್ನು ಇತ್ತೀಚಿಗೆ ಎಲ್ಲಿ ಅನಾವರಣಗೊಳಿಸಲಾಯಿತು?


    Q ➤ 70. ಇತ್ತೀಚಿಗೆ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಯಾರು?


    Q ➤ 71. ಇತ್ತೀಚಿಗೆ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದವರು ಯಾರು?


    Q ➤ 72. ಯಲಹಂಕ ನಾಡಪ್ರಭುಗಳಲ್ಲಿ ಪ್ರಸಿದ್ದ ರಾಜ ಯಾರು?


    Q ➤ 73. ಕೆಂಪೇಗೌಡ ಹೆಸರಿನ ಸಿನಿಮಾದಲ್ಲಿ ಪೋಲಿಸ್ ಅಧಿಕಾರಿ ಕೆಂಪೇಗೌಡನ ಪಾತ್ರದಲ್ಲಿ ನಟನೆ ಮಾಡಿದ ನಟ ಯಾರು?


    Q ➤ 74. ಕೆಂಪೇಗೌಡರು ಯಾವುದರ ಆಧಾರದ ಮೇಲೆ ಪೇಟೆಗಳನ್ನು ನಿರ್ಮಿಸಿದರು?


    2023-24 ಸಾಲಿನ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ ಮತ್ತು ಅಭಿಮತ ವರ್ಗಾವಣೆ.

    2023-24ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಮುಂದುವರೆಸಿ ಪರಿಷ್ಕೃತ ವೇಳಾ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ.

    2023-24 ಸಾಲಿನ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ ಮತ್ತು ಅಭಿಮತ ವರ್ಗಾವಣೆ.

    ಪ್ರಾಥಮಿಕ ಶಿಕ್ಷಕರ ಜಿಲ್ಲಾ ಹಂತದ ವರ್ಗಾವಣೆ

    @ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಣೆ  : 18/07/2024

    #ಖಾಲಿ ಹುದ್ದೆಗಳ ಪ್ರಕಟಣೆ : 23/07/2024

    @ಕೌನ್ಸಿಲಿಂಗ್ ಕೋರಿಕೆ : 24/07/2024ರಿಂದ25/07/2024

    #ಪರಸ್ಪರ ಕೌನ್ಸಿಲಿಂಗ್ ಮುಂಜಾನೆ : 29/07/2024

    ವಿಭಾಗೀಯ ಹಂತದ ವರ್ಗಾವಣೆ

    @ಅಂತಿಮ ಜೇಷ್ಠತಾ ಪಟ್ಟಿ ಪ್ರಕಟ : 18/07/2024

    #ಖಾಲಿ ಹುದ್ದೆಗಳ ಪ್ರಕಟಣೆ : 01/08/2024

    @ಕೋರಿಕೆ.ವ.ಕೌನ್ಸಿಲಿಂಗ್ : 02/8/2024ರಿಂದ05/08/2024

    #ಪರಸ್ಪರ ಕೌನ್ಸಿಲಿಂಗ್ : 12/08/2024 ಮುಂಜಾನೆ 

    ಅಂತರ್ ವಿಭಾಗದ ಕೌನ್ಸಿಲಿಂಗ್ 

    @ಖಾಲಿ ಹುದ್ದೆ ಪ್ರಕಟ :14/08/2024

    #ಕೋರಿಕೆ ಕೌನ್ಸಿಲಿಂಗ್ : 17/08/24ರಿಂದ20/8/24

    @ಪರಸ್ಪರ ಕೌನ್ಸಿಲಿಂಗ್ : 27/8/2024


    ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

    ಜಿಲ್ಲಾ ಅಂತ :-

    @ಅಂತಿಮ ಜೇಷ್ಠತಾ ಪಟ್ಟಿ ಪ್ರಕಟ  : 18/07/2024

    #ಖಾಲಿ ಹುದ್ದೆ ಪ್ರಕಟಣೆ : 23/07/2024

    @ಕೋರಿಕೆ ವರ್ಗಾವಣೆ ಕೌನ್ಸಲಿಂಗ್ : 26/07/2024ರಿಂದ27/07/24

    #ಪರಸ್ಪರ ಕೌನ್ಸಿಲಿಂಗ್ : 29/07/24 ಮಧ್ಯಾಹ್ನ


    ವಿಭಾಗಿಯ ಹಂತ 

    @ಅಂತಿಮ ಜೇಷ್ಠತಾ ಪಟ್ಟಿ 18/07/2024

    #ಖಾಲಿ ಹುದ್ದೆ ಪ್ರಕಟಣೆ 01/08/2024

    @ಕೋರಿಕೆ ವರ್ಗಾವಣೆ ಕೌನ್ಸಲಿಂಗ್ : 06/08/2024ರಿಂದ08/08/24

    #ಪರಸ್ಪರ ಕೌನ್ಸಲಿಂಗ್ : 12/08/24 ಮಧ್ಯಾಹ್ನ


    ಅಂತರ್ ವಿಭಾಗದ ಕೌನ್ಸಿಲಿಂಗ್ 

    @ಖಾಲಿ ಹುದ್ದೆ ಪ್ರಕಟ :14/08/2024

    #ಕೋರಿಕೆ ಕಾನ್ಸ್ಲಿಂಗ್ ಪ್ರೌಢ ವಿಭಾಗ : 21/8/24ರಿಂದ23/8/24

    @ಪರಸ್ಪರ ಕೌನ್ಸಿಲಿಂಗ್ : 27/8/2024

    ಪರಿಷ್ಕೃತ ವೇಳಾಪಟ್ಟಿಯ ಆದೇಶ ಪ್ರತಿ 
     


    "ಅಭಿಮತ ವರ್ಗಾವಣೆ" 
    ಬಳ್ಳಾರಿ ಜಿಲ್ಲೆಯಿಂದ ಮಾರ್ಪಡಿಸಿ ವಿಜಯನಗರ ಜಿಲ್ಲೆ ರಚನೆಯಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಮೂಲ ಜಿಲ್ಲೆಗೆ ಸ್ಥಳ ನಿಯುಕ್ತಿಗೊಳಿಸಲು "ಅಭಿಮತ ವರ್ಗಾವಣೆ" ನಡೆಸಲು ಇಲಾಖೆ ತಿರ್ಮಾನಿಸಿದೆ.

    ಅಭಿಮತ ವರ್ಗಾವಣೆ ಆದೇಶ ಪ್ರತಿ 

    SSLC Result 2024 | ಫಲಿತಾಂಶ ಪ್ರಕಟ..

        ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2023-24 ನೇ ಸಾಲಿನ SSLC ಪರೀಕ್ಷೆ-1 ರ ಫಲಿತಾಂಶವನ್ನು ತನ್ನ ಅಧಿಕೃತ Website ನಲ್ಲಿ ದಿನಾಂಕ 09/05/2024ರಂದು ಬೆಳಿಗ್ಗೆ 10:30 ಗಂಟೆಗೆ  ಪ್ರಕಟಿಸಲಿದೆ.

    SSLC Result | ಫಲಿತಾಂಶ ಪ್ರಕಟ..

    ಫಲಿತಾಂಶ ಪರಿಶೀಲನೆ ಮಾಡುವ ವಿಧಾನ 
    Step -1 :  ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ karresults.nic.in ಗೆ ಭೇಟಿ ನೀಡಿ.
    Step -2 : ಈ ಪೇಜ್‌ ಓಪನ್ ಆದ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
    Step -3 : ಆ ನಂತರ, ತಮ್ಮ ಎಸ್‌ಎಸ್‌ಎಲ್‌ಸಿ Registration Number ಮತ್ತು Date of Birth ಟೈಪ್‌ ಮಾಡಬೇಕು.
    Step -4 : 'Submit' ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶ ವೀಕ್ಷಿಸಿ.

     ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್  ಮಾಡಿ
      Result Link Updated