ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) - 2024 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ.
ಕೆಸೆಟ್-2024 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
☞ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 29.07.2024
☞ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 22.08.2024
☞ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26.08.2024
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಕೆಸೆಟ್-2024ಕ್ಕೆ "Online" ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು Website ವಿಳಾಸ :
KEA ವೆಬ್ಸೈಟ್ http:/kea.kar.nic.in ಅನ್ನು ಪ್ರವೇಶಿಸುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. (ಅರ್ಜಿಯನ್ನು ಸಲ್ಲಿಸುವ ಮುನ್ನ ಈ ಅಧಿಸೂಚನೆಯನ್ನು ಗಮನವಿಟ್ಟು ಓದಿ)
-->> K-SET ಅಧಿಸೂಚನೆ <<--
K-SET ಪರೀಕ್ಷೆಗೆ Online ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನದ ವಿಡಿಯೋ
ಅರ್ಹತಾ ನಿಬಂಧನೆಗಳು :
1) ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ / ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.55% ರಷ್ಟು ಅಂಕಗಳನ್ನು (ಪೂರ್ಣಾಂಕಿತ ಗೊಳಿಸಿರಬಾರದು) ಪಡೆದಿರಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರೆ ಹಿಂದುಳಿದ ಅಭ್ಯರ್ಥಿಗಳು (ಪ್ರವರ್ಗ-1, IIA, IIB, IIIA, IIIB), ವಿಕಲಚೇತನರು (PwD) ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ.50% ರಷ್ಟು (ಪೂರ್ಣಾಂಕಿತ ಗೊಳಿಸಿರಬಾರದು) ಅಂಕಗಳನ್ನು ಪಡೆದಿರಬೇಕು.
2) ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ಮಾತ್ರ ಪ್ರವೇಶ ನೀಡಲಾಗುವುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯನ್ನು, ಸಾಮಾನ್ಯ ವರ್ಗದವರು ಶೇ.55% ರಷ್ಟು ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-I, IIA, IIB, IIIA, ಮತ್ತು IIIB, ವಿಕಲಚೇತನರು (PwD) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು, ಶೇ. 50% ರಷ್ಟು ಅಂಕ ಪಡೆದು, ಅರ್ಹತೆ ಹೊಂದಿ ಕೆಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷದೊಳಗಾಗಿ ಅವರ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಿದರೆ ಮಾತ್ರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. ಇಲ್ಲವಾದಲ್ಲಿ ಅಂತಹವರ ಅರ್ಹತೆಯನ್ನು ರದ್ದುಪಡಿಸಲಾಗುವುದು.
ವಯೋಮಿತಿ :
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.
ಪರೀಕ್ಷೆ ಶುಲ್ಕ :
ವರ್ಗ | ಶುಲ್ಕ |
---|---|
ಸಾಮಾನ್ಯ ವರ್ಗ, II-A, II-В, ІІІ-А, ІІІ-В ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆ | ರೂ.1000/- |
ಪ್ರವರ್ಗ-I, SC, ST, PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ | ರೂ.700/- |
ಶುಲ್ಕ ಪಾವತಿಸುವ ವಿಧಾನ :
ಪರೀಕ್ಷೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.
E-Sign ಅರ್ಜಿಯನ್ನು ಡೌನ್ಲೋಡ್ ಮಾಡುವ ವಿಧಾನದ ವಿಡಿಯೋ
ಪರೀಕ್ಷಾ ವಿಧಾನ :
KSET ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿದ್ದು, ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
ಪತ್ರಿಕೆ | ಪ್ರಶ್ನೆಗಳ ಸಂಖ್ಯೆ | ಅಂಕಗಳು |
---|---|---|
I | 50 | 100 |
II | 100 | 200 |
ಪರೀಕ್ಷಾ ಪಠ್ಯಕ್ರಮ :
ಪತ್ರಿಕೆ - I :-
ಸಾಮಾನ್ಯ ಪತ್ರಿಕೆಯು ಅಭ್ಯರ್ಥಿಗಳ ಬೋಧನೆ, ಸಂಶೋಧನೆ ಮತ್ತು ಬುದ್ದಿ ಸಾಮರ್ಥ್ಯಗಳನ್ನು ಪರೀಕ್ಷಿಸುವುದಾಗಿರುತ್ತದೆ.
Download ಪತ್ರಿಕೆ - I ರ ಪಠ್ಯಕ್ರಮ
-->>ಸಾಮಾನ್ಯ ವಿಷಯ ಪಠ್ಯಕ್ರಮ <<--
ಪತ್ರಿಕೆ II :-
ಈ ಪತ್ರಿಕೆಯು ಅಭ್ಯರ್ಥಿಯ ಆಯ್ಕೆ ಮಾಡಿದ ವಿಷಯದ್ದಾಗಿರುತ್ತದೆ. ಈ ಪತ್ರಿಕೆಯು ಆಯ್ಕೆ ಮಾಡಿದ ವಿಷಯಗಳಲ್ಲಿ 100 ಕಡ್ಡಾಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೂ 2 ಅಂಕಗಳಿರುತ್ತದೆ. ಗರಿಷ್ಠ 200 ಅಂಕಗಳಿರುತ್ತವೆ.
ಕೆಸೆಟ್ (KSET) ಪರೀಕ್ಷೆಯ ಪತ್ರಿಕೆ I ಮತ್ತು ಪತ್ರಿಕೆ - II ಪಠ್ಯಕ್ರಮವು, ಯು.ಜಿ.ಸಿ / ಸಿ.ಎಸ್.ಐ.ಆರ್ ನೆಟ್ ನಿಗದಿಪಡಿಸಿರುವ ಪಠ್ಯಕ್ರಮದ ಮಾದರಿಯಲ್ಲೇ ಇರುತ್ತದೆ. ಎಲ್ಲಾ ವಿಷಯಗಳ ಪಠ್ಯಕ್ರಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಿಂದ (http://kea.kar.nic.in) Download ಮಾಡಿಕೊಳ್ಳುವುದು. ಕೆಸೆಟ್ ಪರೀಕ್ಷೆಯು 41 ವಿಷಯಗಳ ಹೆಸರು, ವಿಷಯಗಳ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಆವೃತ್ತಿಯ ವಿವರಗಳು ಈ ಕೆಳಕಂಡಂತಿರುತ್ತವೆ.
- ಮಹಿಳಾ ಅಧ್ಯಯನ ವಿಷಯ ಪಠ್ಯಕ್ರಮ
- ದೃಶ್ಯ ಕಲೆಗಳ ವಿಷಯ ಪಠ್ಯಕ್ರಮ
- ಉರ್ದು ವಿಷಯ ಪಠ್ಯಕ್ರಮ
- ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣಾ ವಿಷಯ ಪಠ್ಯಕ್ರಮ
- ಸಮಾಜಶಾಸ್ತ್ರ ವಿಷಯ ಪಠ್ಯಕ್ರಮ
- ಸಮಾಜ ಕಾರ್ಯ ವಿಷಯ ಪಠ್ಯಕ್ರಮ
- ಸಂಸ್ಕೃತ ವಿಷಯ ಪಠ್ಯಕ್ರಮ
- ಸಾರ್ವಜನಿಕ ಆಡಳಿತ ವಿಷಯ ಪಠ್ಯಕ್ರಮ
- ಮನೋವಿಜ್ಞಾನ ವಿಷಯ ಪಠ್ಯಕ್ರಮ
- ರಾಜ್ಯಶಾಸ್ತ್ರ ವಿಷಯ ಪಠ್ಯಕ್ರಮ
- ಭೌತಿಕ ವಿಜ್ಞಾನ ವಿಷಯ ಪಠ್ಯಕ್ರಮ
- ದೈಹಿಕ ಶಿಕ್ಷಣ ವಿಷಯ ಪಠ್ಯಕ್ರಮ
- ತತ್ವಶಾಸ್ತ್ರ ವಿಷಯ ಪಠ್ಯಕ್ರಮ
- ಪ್ರದರ್ಶನ ಕಲೆಗಳ ವಿಷಯ ಪಠ್ಯಕ್ರಮ
- ಸಂಗೀತ ವಿಷಯ ಪಠ್ಯಕ್ರಮ
- ಗಣಿತ ವಿಜ್ಞಾನ ವಿಷಯ ಪಠ್ಯಕ್ರಮ
- ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪಠ್ಯಕ್ರಮ
- ಮರಾಠಿ ವಿಷಯ ಪಠ್ಯಕ್ರಮ
- ನಿರ್ವಹಣಾ ವಿಷಯ ಪಠ್ಯಕ್ರಮ
- ಭಾಷಾಶಾಸ್ತ್ರ ವಿಷಯ ಪಠ್ಯಕ್ರಮ
- ಜೀವ ವಿಜ್ಞಾನ ವಿಷಯ ಪಠ್ಯಕ್ರಮ
- ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯ ಪಠ್ಯಕ್ರಮ
- ಕಾನೂನು ವಿಷಯ ಪಠ್ಯಕ್ರಮ
- ಕನ್ನಡ ವಿಷಯ ಪಠ್ಯಕ್ರಮ
- ಗೃಹ ವಿಜ್ಞಾನ ವಿಷಯ ಪಠ್ಯಕ್ರಮ
- ಇತಿಹಾಸ ವಿಷಯ ಪಠ್ಯಕ್ರಮ
- ಹಿಂದಿ ವಿಷಯ ಪಠ್ಯಕ್ರಮ
- ಭೂಗೋಳಶಾಸ್ತ್ರ ವಿಷಯ ಪಠ್ಯಕ್ರಮ
- ಜಾನಪದ ಸಾಹಿತ್ಯ ವಿಷಯ ಪಠ್ಯಕ್ರಮ
- ಪರಿಸರ ವಿಜ್ಞಾನ ವಿಷಯ ಪಠ್ಯಕ್ರಮ
- ಇಂಗ್ಲಿಷ್ ವಿಷಯ ಪಠ್ಯಕ್ರಮ
- ವಿದ್ಯುನ್ಮಾನ ವಿಜ್ಞಾನ ವಿಷಯ ಪಠ್ಯಕ್ರಮ
- ಅರ್ಥಶಾಸ್ತ್ರ ವಿಷಯ ಪಠ್ಯಕ್ರಮ
- ಶಿಕ್ಷಣ ವಿಷಯ ಪಠ್ಯಕ್ರಮ
- ಭೂ ವಿಜ್ಞಾನ ವಿಷಯ ಪಠ್ಯಕ್ರಮ
- ಅಪರಾಧಶಾಸ್ತ್ರ ವಿಷಯ ಪಠ್ಯಕ್ರಮ
- ಕಂಪ್ಯೂಟರ್ ಸೈನ್ಸ್ ಮತ್ತು ಅಪ್ಲಿಕೇಶನ್ ಪಠ್ಯಕ್ರಮ
- ವಾಣಿಜ್ಯ ವಿಷಯ ಪಠ್ಯಕ್ರಮ
- ರಾಸಾಯನಿಕ ವಿಜ್ಞಾನ ವಿಷಯ ಪಠ್ಯಕ್ರಮ
- ಪುರಾತತ್ವ ವಿಷಯ ಪಠ್ಯಕ್ರಮ
- ಮಾನವಶಾಸ್ತ್ರ ವಿಷಯ ಪಠ್ಯಕ್ರಮ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.