Menu

Home ನಲಿಕಲಿ About ☰ Menu


 

7th ಪಾಠ - ೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು

 ಗದ್ಯಭಾಗ

೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು 

#ಲೇಖಕರ ಪರಿಚಯ:

ಲೇಖಕರ ಹೆಸರು :   ಡಾ. ನಾಬರ್ಟ್ ಡಿಸೋಜ

ಜನನ : 1937 ಜೂನ್ 6

ತಂದೆ : ಎಫ್. ಪಿ. ಡಿಸೋಜ
ತಾಯಿ : ರೂಪಿಕಾ ಡಿಸೋಜ

ಪ್ರಮುಖ ಕೃತಿಗಳು :
37 ಕಾದಂಬರಿಗಳು, 4 ನಾಟಕಗಳು & 28 ಮಕ್ಕಳ ಕೃತಿಗಳನ್ನು ನೂರಾರು ಕತೆಗಳನ್ನು ಬರೆದಿದ್ದಾರೆ. ಕಾದಂಬರಿಗಳು - 'ಕಾಡಿನ ಬೆಂಕಿ',  'ದ್ವೀಪ',  'ಬಳುವಳಿ' 
ಕಿರು ಕಾದಂಬರಿ - 'ಮುಳುಗಡೆಯ ಊರಿಗೆ ಬಂದವರು'

ಪಡೆದ ಪ್ರಶಸ್ತಿಗಳು :
ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ-2011,
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಮುಂತಾದವು

*2014 ರ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 



ಅಭ್ಯಾಸ 

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದುಕೇಳಿದ? 

ಉತ್ತರ : ಪುಟ್ಟಜ್ಜಿಯ ಬಳಿ ಹುಡುಗ ಹಾಡ್ಗತೆ ಹೇಳಬೇಕೆಂದು ಕೇಳಿದ.

೨. ಯುವಕ ಮನೆಯ ಮುಂದೆ ಏನು ಮಾಡಿದ?

ಉತ್ತರ : ಯುವಕ ಮನೆಯ ಮುಂದೆ ತೋಟ ಮಾಡಿದ.

೩. ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು? 

ಉತ್ತರ : ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ಇತ್ತು.

೪. ಹುಲಿ ಸೋತು ಏನು ಮಾಡಿತು? 

ಉತ್ತರ : ಹುಲಿ ಸೋತು ಓಡಿ ಹೋಯಿತು.

೫. ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿ ಏನು ಮಾಡಿತು? 

ಉತ್ತರ : ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿಯು ಯುವಕನ ಮನೆಯೊಳಗೆ ಅವಿತುಕೊಂಡಿತು. 

೬. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು? 

ಉತ್ತರ : ಹಳ್ಳದ ದಂಡೆಯ ಮೇಲಿನ ಊರು ಬೆಳೆಯಿತು.

ಆ. ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಎರಡು-ಮಾರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ? 

ಉತ್ತರ : ಹಳ್ಳ ಹರಿದು ಊರ ಜನರನ್ನು ರಕ್ಷಿಸಿದೆ ಮತ್ತು ಎಲ್ಲ ಕಡೆಗೆ ಹಸಿರು ಬೆಳೆದು ಊರಿಗೆ ಸೊಬಗು ನೀಡಿದೆ.


೨. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದ? 

ಉತ್ತರ : ಯುವಕ ಹಳ್ಳದ ಬಳಿಗೆ ಬಂದು ಅಲ್ಲಿಯ ಸೊಬಗಿನ ದೃಶ್ಯವನ್ನು ಕಂಡು ಆಕರ್ಷಿತನಾಗಿ  ಅಲ್ಲಿಯೇ ಉಳಿಯುಲು ನಿರ್ಧರಿಸಿದ. ಹಳ್ಳದ ಪಕ್ಕದಲ್ಲಿ ಮನೆಯನ್ನು ಕಟ್ಟಿ, ಮನೆಯ ಮುಂದೆ ಒಂದು ತೋಟ ಮಾಡಿ ತನಗೆ ಬೇಕಾದುದ್ದನ್ನು ಬೆಳೆದ.


೩. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು?

ಉತ್ತರ : ಹುಲಿ -  ಈ ಜಿಂಕೆ ನನ್ನ ಆಹಾರ, ಅದನ್ನು ನೀನು ರಕ್ಷಿಸಿದರೆ  ಅರಣ್ಯ ನಿಯಮಕ್ಕೆ ವಿರೋಧವಾಗುತ್ತದೆ,  ಆದುದರಿಂದ ಜಿಂಕೆಯನ್ನು ಬಿಟ್ಟುಕೊಡು.

ಯುವಕ -  ಇದು ಅರಣ್ಯದ ಜಿಂಕೆಯಲ್ಲ,   ಯಾರೂ ಸಾಕಿದ ಪ್ರಾಣಿ,  ಅದರ ಕುತ್ತಿಗೆಯಲ್ಲಿ  ಗೆಜ್ಜೆ  ಇದೆ.  ಇದನ್ನು ತಿನ್ನಲು ನಿನಗೆ ಅಧಿಕಾರವಿಲ್ಲ  ನಾನು ಇದನ್ನು ಬಿಟ್ಟುಕೊಡುವುದಿಲ್ಲ ಎಂದನು.


೪. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು? 

ಉತ್ತರ : ಜಿಂಕೆಯನ್ನು ನೋಡಿದ ಯುವತಿ ಓಡಿ ಬಂದು ಜಿಂಕೆಯನ್ನು ತಬ್ಬಿಕೊಳ್ಳುತ್ತಾಳೆ , ಜಿಂಕೆ ಅವಳ ಕೈಯನ್ನು ನೆಕ್ಕುತ್ತದೆ. ಮೈಗೆ ಮೈ ತಾಗಿಸಿ ತಿಕ್ಕುತ್ತದೆ. ಯುವತಿ ಮುಖಕ್ಕೆ ಮುಖ ತಾಗಿಸಿ ಅಳುತ್ತಿದ್ದಾಳೆ.  


೫. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದ?

ಉತ್ತರ : ಯುವಕ ತಾನು ಚುಕ್ಕಿಯನ್ನು ಹುಲಿಯ ಕೈಯಿಂದ ರಕ್ಷಣೆ  ಕತೆಯನ್ನು ಹೇಳಿದ. ಹುಲಿಗೂ ತನಗೂ ಆದ ಹೋರಾಟದ ಗಾಯದ ಗುರುತುಗಳನ್ನು ತೋರಿಸಿದ. ಮದ್ದು ಮಾಡಿದ ರೀತಿಯನ್ನು ತಿಳಿಸಿದ.


ಇ. ಈ ವಾಕ್ಯಗಳನ್ನು ಯಾರು - ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ.

೧. "ಯಾವುದಾದರೊಂದು ಹಾಡ್ಗತೆ ಹೇಳು."

ಉತ್ತರ : ಈ ಮಾತನ್ನು ಹುಡುಗನು ಪುಟ್ಟಜ್ಜಿಗೆ ಹೇಳಿದನು.

೨. "ಏಯ್ ಯುವಕ, ಈ ಜಿಂಕೆ ನನ್ನ ಆಹಾರ."

ಉತ್ತರ : ಈ ಮಾತನ್ನು ಹುಲಿಯು ಯುವಕನಿಗೆ ಹೇಳಿತು.

೩. "ಇದು ನಾವು ಸಾಕಿಕೊಂಡ ಜಿಂಕೆ."

ಉತ್ತರ : ಈ ಮಾತನ್ನು ಯುವತಿ ಯುವಕನಿಗೆ ಹೇಳುತ್ತಾಳೆ.

೪.  "ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ."

ಉತ್ತರ : ಈ ಮಾತನ್ನು ಯುವತಿ ಯುವಕನಿಗೆ ಹೇಳಿದಳು.


ಈ. ಕೆಳಗೆ ನೀಡಿದ ಸೂಚನೆಯಂತೆ ಉತ್ತರ ಬರೆಯಿರಿ.

೧. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.

 ಹುಲಿ, ಚಿರತೆ, ಕಾಡುಕೋಣ, ಆನೆ, ಜಿಂಕೆ.


೨. ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ.

ಪುಟ್ಟಜಿ, ಹುಡುಗ, ಯುವಕ, ಯುವತಿ,  ಹುಡುಗ,  ಹುಡುಗಿ.


೩. ಅಜ್ಜಿ ಮತ್ತು ಕತೆ ಕೇಳುವ ಹುಡುಗನ ಸಂಭಾಷಣೆ ಬರೆಯಿರಿ.

ಹುಡುಗ : ಪುಟ್ಟಜ್ಜಿ  ಪುಟ್ಟಜ್ಜಿ  ಕತೆ ಹೇಳುತೀಯಾ? 

ಅಜ್ಜಿ : ಬಾ ಮಗ ಹೇಳ್ತೀನಿ ಒಳ್ಳೇಯದೊಂದು ಕತೆಯಾ. ಯಾವ ಕತೆ ಹೇಳಲಿ?

ಹುಡುಗ : ಯಾವದಾದರೂ ಒಂದು ಹಾಡ್ಗತೆ ಹೇಳು.


೪. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆಯನ್ನು ಬರೆಯಿರಿ. 

ಯುವತಿ : ಇದು ನಾವು ಸಾಕಿಕೊಂಡ ಜಿಂಕೆ, ಇದರ ಮೇಲಿನ ಚುಕ್ಕೆಯ ಗುರುತಿಗೆ ಇದಕ್ಕೆ ನಾವು ಚುಕ್ಕಿ ಎಂದು ಕರೆದೆವು. ಕೆಲ ದಿನಗಳ ಹಿಂದೆ ಹುಲಿ ಅಟ್ಟಿಸಿಕೊಂಡು ಬಂದಿದ್ದನ್ನು ಹಳ್ಳಿ  ಜನ ನೋಡಿದ್ದರು. ಇದರ ಕತೆ ಮುಗಿಯಿತು ಎಂದುಕೊಂಡಿದ್ದೆವು. ಆದರೆ ನನಗೆ ನಂಬಿಕೆ ಇತ್ತು ಇಂದು ಇದು ನನಗೆ ಸಿಕ್ಕಿದೆ.

ಯುವಕ : ಹುಲಿಗೂ ತನಗೂ ಹೋರಾಟ ನಡೆಯಿತು, ಅದರಲ್ಲಿ ನಾನು ಗಾಯವಾಗಿದ್ದೆ.

ಯುವತಿ : ಚಿಕ್ಕಂದಿನಿಂದ ಚುಕ್ಕಿ ನಮ್ಮ ಮನೆಯಲ್ಲಿ ದೊಡ್ಡದಾಗಿದೆ. ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ ಇದನ್ನ ಮನೆಗೆ  ಕರೆದುಕೊಂಡು ಹೋಗುತ್ತೇನೆ.

ಯುವಕ : ನಾನೂ ಅದನ್ನು ಬಿಟ್ಟು ಇರಲಾರೆ, ಹುಲಿ ಬಾಯಿಂದ ಕಾಪಾಡಿದ್ದೇನೆ... ಈಗ  ನೀನಗೆ ಕೊಡಲಾರೆ. 

ಯುವತಿ : ಹಾಗಾದರೆ ನಾನೂ ಇಲ್ಲಿಯೇ ಇರುತ್ತೇನೆ, ಚುಕ್ಕಿಯ ಜೋತೆಯಲ್ಲಿ.


ಉ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ.

ಪೊರೆ - ರಕ್ಷಿಸು, ಸಲಹು, ಕಾಪಾಡು.

ಪ್ರಾಣಿಗಿಂಡಿ - ಕಾಡು ಪ್ರಾಣಿಗಳು ನೀರು ಕುಡಿಯೋಕೆ ಹೋಗಲು ಮಾಡಿಕೊಂಡ ಕಿಂಡಿ.

ಭಯ - ಹೆದರಿಕೆ,  ಅಂಜಿಕೆ.

ತೊಗಟೆ - ಮರದ ಮೇಲಿನ ಸಿಪ್ಪೆ .

ಮದ್ದು -  ಔಷಧಿ.

ಯವತ್ತಾರ - ಯಾವತ್ತಾದರೂ ಒಂದು ದಿನ.


ಊ.  ಹೊಂದಿಸಿ ಬರೆಯಿರಿ.

       ಅ                    ಆ

೧. ಪುಟ್ಟಜ್ಜಿ           -  ಕತೆ 

೨. ಕಾಡು             -  ಹುಲಿ, ಚಿರತೆ, ಕಾಡುಕೋಣ 

೩. ಚುಕ್ಕಿ              -  ಜಿಂಕೆ

೪. ಮದ್ದು            -  ಸೊಪ್ಪುಸದೆ, ಬೇರು, ತೊಗಟೆ

೫. ಹಳ್ಳದ ದಂಡೆ  -  ಊರು ಬೆಳೆಯಿತು

೬.. ಜಗಳ            -  ಹುಲಿಗೂ ಯುವಕನಿಗೂ

('ಆ' ಮತ್ತು  'ಆ' ಪಟ್ಟಿಯ ಪದಗಳನ್ನು ಹೊಂದಿಸಿ ಅನಂತರ ಅವುಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಿರಿ.) 

1. ಪುಟ್ಟಜ್ಜಿ  ಕತೆ ಹೇಳಿದಳು.

2. ಕಾಡಿನಲ್ಲಿ  ಹುಲಿ, ಚಿರತೆ, ಕಾಡುಕೋಣಗಳಿರುತ್ತವೆ.

3. ಚುಕ್ಕಿ ಅನ್ನುವುದು ಜಿಂಕೆಯ ಹೆಸರು.

4. ಮದ್ದಾಗಿ  ಸೊಪ್ಪು , ಸದೆ, ಬೇರು,  ತೊಗಟೆಗಳನ್ನು ಉಪಯೋಗಿಸುತ್ತಿದ್ದರು.

5. ಹಳ್ಳದ ದಂಡೆಯ ಮೇಲೆ ಊರು ಬೆಳೆಯಿತು

6. ಜಗಳ, ಹುಲಿ ಮತ್ತು ಯುವಕನ ಮಧ್ಯೆ ನಡೆಯಿತು.


ಭಾಷಾಭ್ಯಾಸ 

ಅ. ಕೆಳಗೆ ಹಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ. ಇವುಗಳನ್ನು ಸಾಕುಪ್ರಾಣಿಗಳು ಮತ್ತು ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತೇಕ ಪಟ್ಟಿ ಮಾಡಿ.

ಸಾಕು ಪ್ರಾಣಿಗಳು      ಕಾಡು ಪ್ರಾಣಿಗಳು 

   ಕತ್ತೆ                             ಹುಲಿ

   ಎಮ್ಮೆ                         ಸಾರಂಗ

   ಆಡು                           ಕರಡಿ

   ಮೇಕೆ                           ಜಿಂಕೆ 

    ನಾಯಿ                     ಕಾಡುಕೋಣ 

     ಬೆಕ್ಕು                          ಜಿರಾಫೆ

    ಎತ್ತು                           ಮಂಗ

    ಕೋಳಿ                         ಸಿಂಹ 

     ಹಂದಿ                      ಘೆಂಡಾಮೃಗ

                                       ಚಿರತೆ 

                                        ಆನೆ 

                                     

ಆ. ಮೇಲಿನ ಎಲ್ಲ ಪ್ರಾಣಿಗಳ ಹೆಸರನ್ನು ಅಕಾರಾದಿಯಾಗಿ ಬರೆಯಿರಿ.

ಆಡು, ಆನೆ, ಎತ್ತು, ಕತ್ತೆ, ಕರಡಿ,  ಕಾಡುಕೋಣ, ಕೋಳಿ, ಘೆಂಡಾಮೃಗ, ಜಿರಾಫೆ, ಜಿಂಕೆ,  ನಾಯಿ,  ಬೆಕ್ಕು, ಮಂಗ, ಮೇಕೆ, ಸಾರಂಗ, ಹುಲಿ, ಹಂದಿ.


ಇ. ಕೆಳಗೆ ಪ್ರತೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ. ಪ್ರತಿ ಗುಂಪಿನಲ್ಲೂ  ಆ ಗುಂಪಿಗೆ ಸೇರದ ಒಂದೊಂದು ಶಬ್ದವಿದೆ.  ಈ ಶಬ್ದವನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂಬುದಕ್ಕೆ  ಕಾರಣ ನೀಡಿ.

ಗುಂಪು – ೧ 

ಹಸು – ಎಮ್ಮೆ 

ಕರಡಿ – ಹಂದಿ 

* ಕರಡಿ – ಗುಂಪಿಗೆ ಸೇರುವುದಿಲ್ಲ , ಏಕೆಂದರೆ ಇದು ಸಾಕು ಪ್ರಾಣಿಯಲ್ಲ .


ಗುಂಪು – ೨

ನಾನು – ನೀನು 

ಅವನು – ರಮ್ಯ 

* ರಮ್ಯ  - ಎಲ್ಲವೂ ಸರ್ವನಾಮಗಳು, ರಮ್ಯ ಅಂಕಿತನಾಮ.


 ಗುಂಪು – ೩

ಯುವಕ – ಯುವತಿ 

ಮುದುಕ  - ಅಣ್ಣ 

* ಯುವತಿ – ಇದು  ಸ್ತ್ರೀಲಿಂಗ  ಪದೇ.


ಗುಂಪು – ೪

ಕತೆ  – ಕವನ

ಪೆನ್ಸಿಲು – ಕಾದಂಬರಿ

* ಪೆನ್ಸಿಲು – ಸಾಹಿತ್ಯ ಪ್ರಕಾರಕ್ಕೆ ಸೇರುವುದಿಲ್ಲ, ಇದು ಬರೆಯುವ ವಸ್ತು.


3. ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳನ್ನು  ಬಿಟ್ಟು ಆ ಜಾಗದಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ. ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ಆವರಣದಲ್ಲಿ  ನೀಡಲಾಗಿದೆ. ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳದಲ್ಲಿ ತುಂಬರಿ.

ಒಂದು ಕಾಗೆ ಹಾರಿ ಬಂದು ಒಂದು ಮರದ ಕೊಂಬೆ ಮೇಲೆ ಕುಳಿತುಕೊಂಡು ರೊಟ್ಟಿ  ತಿನ್ನತೊಡಗಿತು. ಮೋಸಗಾರ ನರಿ ಕಾಗೆಯನ್ನು ಕಂಡು ರೊಟ್ಟಿ ತಿನ್ನಬೇಕೆಂದು ಮರದ ಕೆಳಗೆ ನಿಂತು ಕಾಗೆಯನ್ನು  ಹೊಗಳಿತು. "ಎಲೈ ಕಾಗೆ ನೀನು ಚಂದ ಹಾಡುತ್ತೀಯೆ, ನಿನ್ನ ಹಾಡು ತುಂಬಾ ಚೆಂದ. ನಿನ್ನ ಹಾಡನ್ನು ಕೇಳುವ ಆಸೆ ನನಗೆ ಆಗಿದೆ" ಎಂದು ಹೊಗಳಿತು. ಕಾಗೆ ಅದರ ಹೊಗಳಿಕೆಗೆ ಮಾರು ಹೋಗಿ ಕಾಕಾಕಾ ಎಂದು ಹಾಡತೊಡಗಿತು. ಆಗ ಅದರ ಬಾಯಿಂದ ರೊಟ್ಟಿ ಕೆಳಗೆ ಬಿದ್ದಿತು. ಬಿದ್ದ ರೊಟ್ಟಿ ಯನ್ನು ನರಿ ಕಚ್ಚಿ  ಓಡಿ ಹೋಯಿತು.


 ಅಭ್ಯಾಸ

೧. ಕಥೆಯಲ್ಲಿ ಇರುವ ಯುವಕ,  ಯುವತಿ,  ಕಥೆಗಾರ, ಹಳ್ಳಿ,  ನದಿ,  ಇವುಗಳಿಗೆ ಅಂಕಿತನಾಮಗಳನ್ನು  ಗುರುತಿಸಿ. 

ಯುವಕ  –  ಭಗತ್ ಸಿಂಗ್

ಯುವತಿ  –  ರೇಖಾ

ಕಥೆಗಾರ  –  ಶಿವಾನಂದ   

ಹಳ್ಳಿ        –   ಹೊಸಟ್ಟಿ

ನದಿ        –  ಮಲಪ್ರಭಾ


೨. ಅಂಕಣದಲ್ಲಿರುವ ಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳನ್ನು ಗುರುತಿಸಿ ಪ್ರತೇಕ ಪಟ್ಟಿಮಾಡಿ.

ರೂಢನಾಮ      ಅಂಕಿತನಾಮ 

ಅಟ್ಟ                   ಅಮರ್ 

ಅತೆ                   ಅರುಣ್

ಅಕ್ಕಿ                    ಆರತಿ 

ಆಟ                  ಊರ್ವಶಿ

ಆಡು                  ಕಮಲ                  

ಆಕಾರ               ಕಪಿಲ್ 

ಊಟ                ಗಣೇಶ 

ಉಪ್ಪು                ಸಮೀರ್

ಓತಿಕೇತ             ಸ್ವರೂಪ್

 ಕೋತಿ               ಫಾತಿಮಾ 

ಕಮಲ               ಇಕ್ವಾಲ್

ಗಂಟೆ                 ಶಾಂತಿ

 ಸಂತೆ                ವಿಜಯ

ಬೆಂಚು 

ಪುಸ್ತಕ 

ಕಾವ್ಯ 

ಕವಿ 

           

೩. ಕೆಳಗಿನ ಪದಗಳಲ್ಲಿ ಅಂಕಿತನಾಮ ಮತ್ತು ಸರ್ವನಾಮಗಳನ್ನು ಗುರುತಿಸಿ ಪಟ್ಟಿಮಾಡಿ.

ರೂಢನಾಮ  ಅಂಕಿತನಾಮ  ಸರ್ವನಾಮ 

     ಅಜ್ಜ            ಅರುಣ್           ನಾನು

    ಆಡು            ಆರಿಫ್            ತಾವು

    ಬೆಳಗು          ನಾವು             ಅದು

                       ಡೇವಿಡ್         ಅವನು

                     ಮಮ್ತಾಜ್         ನೀನು

                      ಕಾರ್ತಿಕ್          ಅವರು

                       ಕಪಿಲ್            ಅವಳು

                      ಗಣೇಶ್             ನೀವು

                      ಸಮೀರ್            ಅವು

                      ಸ್ವರೊಪ್

                      ಫಾತಿಮಾ

                       ಇಕ್ಬಾಲ್

                       ಶಾಂತಿ

                      ರಾಜೇಶ್

                       ಕಾವ್ಯ 


೪. ಕೆಳಗಿನ ವಾಕ್ಯಗಳಲ್ಲಿ ಕಾಣುವ ಸರ್ವನಾಮಗಳ ಬದಲಿಗೆ ನಿಮಗಿಷ್ಟವಾದ ಹೆಸರಿಟ್ಟು ವಾಕ್ಯವನ್ನು ರಚಿಸಿ.

✯ ನಾನು ಏಳನೆಯ ತರಗತಿಯ ವಿದ್ಯಾರ್ಥಿ. 

ವಿವೇಕ ಏಳನೆಯ ತರಗತಿಯ ವಿದ್ಯಾರ್ಥಿ.

✯ ನೀನು ಎಂಟನೆಯ ತರಗತಿಯಲ್ಲಿ ಓದುತ್ತಿ. 

ಶಾರದಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ.

✯ ನಾವು ಸಂಜೆಯ ವೇಳೆ ಆಡುತ್ತೇವೆ.

ಶಿವಾಜಿ ಮತ್ತು ಸ್ನೇಹಿತರು ಸಂಜೆಯ ವೇಳೆ ಆಡುತ್ತಾರೆ.

✯ ಅವನು ನನ್ನ ಸ್ನೇಹಿತ.

ರಮೇಶ್ ಆತ್ಮಾನಂದನ ಸೇಹಿತ. 

✯ ಅವಳು ನನ್ನ ತಂಗಿ.

ಸುಭದ್ರೆ ಕೃಷ್ಣನ ತಂಗಿ.

✯ ಅವರು ನನ್ನ ತಂದೆ.  

ಅರ್ಜುನ ಅಭಿಮನ್ಯುವಿನ ತಂದೆ. 

✯ ಅದು ಹಣ್ಣನ್ನು ತಿನ್ನುತ್ತದೆ. 

ಅಳಿಲು ಹಣ್ಣನ್ನು ತಿನ್ನುತ್ತದೆ.

✯ ಅವು ಕಾಳನ್ನು ತಿನ್ನುತ್ತವೆ.

ಕೋಳಿಗಳು ಕಾಳನ್ನು ತಿನ್ನುತ್ತವೆ.


ಅಂತರಾಷ್ಟ್ರೀಯ ಯೋಗ ದಿನ | International Day of Yoga

 ವಿಶ್ವ ಯೋಗ ದಿನ
International Day of Yoga
ಅಂತರಾಷ್ಟ್ರೀಯ ಯೋಗ ದಿನ | International Day of Yoga

   ಪ್ರತಿ ವರ್ಷ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ/ ವಿಶ್ವ ಯೋಗ ದಿನವೆಂದು ವಿಶ್ವ ಸಂಸ್ಥೆಯು 11 ಡಿಸೆಂಬರ್ 2014 ರಂದು ಘೋಷಿಸಿದೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದು ಭಾರತ. ಯೋಗವು ಭಾರತೀಯ ಮೂಲದ, 6,000 ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ. ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆಯಾಗಿದೆ.

ವಿಶ್ವ ಯೋಗ ದಿನಾಚರಣೆ ಇತಿಹಾಸ :-

 ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ (2014 ಸೆಪ್ಟೆಂಬರ್‌) ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21 ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್‌ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.

 

ಮೊದಲ ವಿಶ್ವ ಯೋಗ ದಿನ :-

2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜಪಥದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನು ಅಭ್ಯಾಸಿಸಲಾಯಿತು.


ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವ :-

2015ರ ನಂತರ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಮತ್ತು ಅದರ ವಿವಿಧ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 21 ರಂದು ಪ್ರಪಂಚದಾದ್ಯಂತ ವಾರ್ಷಿಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. 

ಇದನ್ನು ಅಭ್ಯಾಸ ಮಾಡುವುದರಿಂದ ಪಡೆಯಬಹುದಾದ ದೈಹಿಕ, ಭಾವನಾತ್ಮಕ, ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವುದು ಇದರ ಉದ್ದೇಶವಾಗಿದೆ. ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ್ದರಿಂದ ಜೂನ್ 21 ರ ದಿನಾಂಕವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು.

"ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ ಆಧ್ಯಾತ್ಮಿಕ ಪ್ರಕ್ರಿಯೆ" - ನರೇಂದ್ರ ಮೋದಿ

ಯೋಗ ಎಂದರೇನು?

'ಯೋಗ' ಶಬ್ದ ಸಂಸ್ಕೃತ ಬಾಷೆಯ 'ಯುಜ್' ಎಂಬ ಪದದಿಂದ ಆಗಿದೆ. ಯೋಗವೆಂದರೆ 'ಜೋಡಿಸು' 'ಸೇರಿಸು' 'ಕೂಡಿಸು' ಎಂಬ ಆರ್ಥ ಬರುತ್ತದೆ. ಯೋಗವೆಂದರೆ 'ಸಮಾಧಿ' 'ಉಪಾಯ' 'ಸಾಧನ' ಎಂಬ ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜೊತೆ ಮನಸ್ಸು , ಬುದ್ಧಿ, ಭಾವನೆ, ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. "ಯೋಗೋ ಉಪಾಯ ಉದ್ದಿಷ್ಟ:" ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆ "ಯೋಗಶ್ಚಿತ್ತ ವೃತ್ತಿ ನಿರೋಧ:" ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ..

ಯೋಗದ ಮಹತ್ವ :-

ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ.

☞ ಮನಸ್ಸನ್ನು ಪ್ರಶಾಂತವಾಗಿಸುತ್ತದೆ & ಧನಾತ್ಮಕ ಭಾವನೆಗಳ ಬೆಳವಣಿಗೆ.

☞ ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ್ಪಕವನ್ನು ಕಲ್ಪಿಸುತ್ತದೆ. 

☞ ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ.  

☞ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ

☞ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು.

  ಯೋಗ ಉತ್ತಮ ಸ್ವ-ಆರೈಕೆಯನ್ನು ಉತ್ತೇಜಿಸುತ್ತದೆ.

 ಒತ್ತಡವನ್ನು ನಿರ್ವಹಿಸಲು ಯೋಗ ನಿಮಗೆ ಸಹಾಯ ಮಾಡುತ್ತದೆ.

  ಮನಸ್ಸು ಮತ್ತು ದೇಹದಿಂದ ಬರುವ ಕಾಯಿಲೆಗಳನ್ನು ದೂರವಿರಿಸುತ್ತದೆ.

☞ ಯೋಗದ ಮೂಲಕ ಉನ್ನತ ಮಟ್ಟದ ಏಕಾಗ್ರತೆಯನ್ನು ಸಾಧಿಸುವುದ ಜೊತೆಗೆ ನಮ್ಮ ಭಾವನೆಗಳನ್ನು ಹೇಗೆ ಸ್ಥಿರಗೊಳಿಸಬಹುದು ಎಂಬುದನ್ನು ಸಹ ಕಲಿಯಬಹುದು.

☞ ನಿಯಮಿತವಾಗಿ ಅಭ್ಯಾಸ ಮಾಡಿದರೆ ನೀವು ಯೋಗದಿಂದ ಸ್ವಯಂ-ಶಿಸ್ತು ಮತ್ತು ಸ್ವಯಂ-ಅರಿವನ್ನು ಬೆಳೆಸಿಕೊಳ್ಳಬಹುದು.

☞ ನೀವು ಉತ್ತಮ ಮಾನಸಿಕ ಸ್ಪಷ್ಟತೆ ಮತ್ತು ಉತ್ತಮ ತಿಳುವಳಿಕೆಯನ್ನು ಪಡೆಯುತ್ತೀರಿ.

☞ ದೇಹಕ್ಕೆ ಸೌಂದರ್ಯ ಹೆಚ್ಚಿಸುವುದು ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ವೃದ್ಧಿಸುವುದು.

☞ ದೇಹಕ್ಕೆ ಬೇಡವಾದ ವಸ್ತುಗಳನ್ನು ಹೀರಿಕೊಳ್ಳುವುದು ಹಾಗೂ ದೇಹಕ್ಕೆ ಬೇಡದ ವಿಷಯ ಕಲ್ಮಶ ಪದಾರ್ಥಗಳನ್ನು ಹೊರಹಾಕುವುದು ಶರೀರದ ಸೂಕ್ಷ್ಮ ಮತ್ತು ಸ್ಥೂಲ ರೋಗಗಳನ್ನು ಗುಣಪಡಿಸುತ್ತದೆ.

☞ ಶರೀರವನ್ನು ಬಲಗೊಳಿಸುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲಾ ಮಾಂಸಖಂಡವನ್ನು ಹಾಗೂ ಅಂಗವನ್ನು ಬಲಗೊಳಿಸುವುದು. ದೇಹದ ಪ್ರತಿಯೊಂದು ಭಾಗಕ್ಕೂ ಸರಿಯಾದ ರಕ್ತಸಂಚಾರ, ಶ್ವಾಸಕೋಶ, ಹೃದಯ, ನರಮಂಡಲ, ಮಿದುಳು ಇತ್ಯಾದಿ ಎಲ್ಲ ಅಂಗಗಳ ಚಟುವಟಿಕೆಗಳನ್ನು ಚುರುಕುಗೊಳಿಸುವುದು.


ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಘೋಷವಾಕ್ಯ :-

2022 ರ ಘೋಷಣೆ -  "ಮಾನವೀಯತೆಗಾಗಿ ಯೋಗ"

2023 ರ ಘೋಷಣೆ - "ಪ್ರತಿ ಮನೆಯಂಗಳದಲ್ಲಿ ಯೋಗಾಚರಣೆ" (Yoga for Vasudhaiva Kutumbakam)

2024 ರ ಘೋಷಣೆ - "ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ" 

2025 ರ ಘೋಷಣೆ -   "ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ ಯೋಗ"('Yoga for One Earth, One Health')


 ವಿಶಾಖಪಟ್ಟಣದ   ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ : -

ಈ ಬಾರಿ ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.


ವಿಶ್ವಸಂಸ್ಥೆ | United Nations Organization

ವಿಶ್ವಸಂಸ್ಥೆ 
 United Nations Organization 

ಸಾ.ಶ  1945 ರ ಯಾಲ್ಟಾ ಸಮ್ಮೇಳನದ (ವಿಶ್ವ ಸಂಸ್ಥೆ ಸ್ಥಾಪನೆ) ಪ್ರಧಾನ ಶಿಲ್ಪಿಗಳು.

ಅಮೇರಿಕಾದ ಅಧ್ಯಕ್ಷ - ಫ್ರಾಂಕ್ಲಿನ್ ಡಿ ರೂಸ್ವೆಲ್ಟ್
ರಷ್ಯಾದ ಪ್ರಧಾನ ಕಾರ್ಯದರ್ಶಿ ಜೋಸೆಫ್ ಸ್ಟಾಲಿನ್
☞ ಇಂಗ್ಲೆಂಡನ ಪ್ರಧಾನಿ - ವಿನ್ ಸ್ಟನ್ ಚರ್ಚಿಲ್

✯ 1945ರಲ್ಲಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಸುಮಾರು 50 ದೇಶದ 800 ಜನ ಹಾಜರಿದ್ದರು.

33 ದಿನಗಳ ಕಾಲ ಚರ್ಚೆ ನಡೆಯಿತು. 

✯ ವಿಶ್ವ ಸಂಸ್ಥೆ ಸ್ಥಾಪನೆಗಾಗಿ 404 ಸಭೆಗಳು ನಡೆದವು.

✯ ರಾಷ್ಟ್ರ ಸಂಘದ ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ ಪರಿಣಾಮ ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವ ಜನಾಂಗದ ಜೀವನಮಟ್ಟ ಸುಧಾರಿಸುವ ಧ್ಯೇಯದೊಂದಿಗೆ ಸ್ಥಾಪಿಸಲಾಯಿತು.
✯ 1945 ಅಕ್ಟೋಬರ್ 24ರಂದು ಅಸ್ತಿತ್ವಕ್ಕೆ ಬಂದಿತು.
✯ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿ ಇರುವ ಸ್ಥಳ - ನ್ಯೂಯಾರ್ಕ್
✯ ಆರಂಭದಲ್ಲಿದ್ದ ಸದಸ್ಯ ರಾಷ್ಟ್ರಗಳು 51.
✯ 1997 ರ ಪ್ರಕಾರ 185 ಸದಸ್ಯ ರಾಷ್ಟ್ರಗಳನ್ನು ಹೊಂದಿತ್ತು.

✯ ವಿಶ್ವಸಂಸ್ಥೆಗೆ ನಿವೇಶನ ನೀಡಿದವರು -  ಜಾನ್.ಡಿ.ರಾಕ್ ಫಿಲ್ಲರ್.

✯ ಭಾರತ 30 ಅಕ್ಟೋಬರ್ 1945 ರಲ್ಲಿ ವಿಶ್ವಸಂಸ್ಥೆಗೆ ಸೇರ್ಪಡೆ.

  ಪ್ರಸ್ತುತ ಸದಸ್ಯತ್ವ ರಾಷ್ಟ್ರಗಳ ಸಂಖ್ಯೆ - 193 ಮತ್ತು 2 ವೀಕ್ಷಕ ರಾಷ್ಟ್ರಗಳು.

 193ನೆ ಸದಸ್ಯ ರಾಷ್ಟ್ರ ದಕ್ಷಿಣ ಸೂಡಾನ್ (ರಿಪಬ್ಲಿಕ್ ಆಫ್ ಸೌತ್ ಸೂಡಾನ್)

ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು
ಅರೇಬಿಕ್,  ಚೈನಿಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್,  ಸ್ಪ್ಯಾನಿಶ್ .

ವಿಶ್ವಸಂಸ್ಥೆಯ ಉದ್ದೇಶಗಳು
1. ಯುದ್ಧದ ಭೀತಿಯಿಂದ ಪ್ರಪಂಚ ರಕ್ಷಣೆ.
2. ಸಮಾನತೆಯ ಆಧಾರದ ಮೇಲೆ ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧ ಬೆಳೆಸುವುದು.
3. ವಿಶ್ವದಲ್ಲಿನ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು.
4. ಮೂಲಭೂತ ಹಕ್ಕುಗಳಿಗೆ ಉತ್ತೇಜನ.

ವಿಶ್ವಸಂಸ್ಥೆಯ ಪ್ರಮುಖ ಅಂಗಗಳು

1) ಸಾಮಾನ್ಯ ಸಭೆ :-

ಇದನ್ನು ವಿಶ್ವ ಪಾರ್ಲಿಂಟ್ (ಸಂಸತ್) ಎನ್ನುತ್ತಾರೆ.
✯ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪ್ರತಿವರ್ಷ ಸೆಪ್ಟೆಂಬರ್ ನಲ್ಲಿ ಸಮಾವೇಶಗೊಳ್ಳುವರು.
✯ ಪ್ರತಿ ರಾಷ್ಟ್ರ ಐದು ಜನ ಸದಸ್ಯರನ್ನು ಕಳಿಸಬಹುದು ಆದರೆ ಮತ(Vote) ಮಾತ್ರ ಒಂದೇ.
✯ ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾ ಹಣ ನಿಗದಿ ಮಾಡುತ್ತದೆ.
 ಪ್ರಸ್ತುತ ಸಾಮಾನ್ಯ ಸಭೆಯ ಕೇಂದ್ರ ಕಚೇರಿ ಅಮೇರಿಕಾದ ನ್ಯೂಯಾರ್ಕ್.
✯ ಮೊದಲ ಅಧ್ಯಕ್ಷ - ಪೌಲ್ ಹೆನ್ರಿ ಸ್ಟಾಕ್ (ಬೆಲ್ಜಿಯಂ ದೇಶ)
✯ ಸಾಮಾನ್ಯ ಸಭೆಯ ಮೊದಲ ಅಧಿವೇಶನ 1946 ಜನೆವರಿ 10 ಲಂಡನ್ ವೆಸ್ಟ ಮಿನಿಸ್ಟರ್ ಸೆಂಟರ್ ಹಾಲ್.
✯ ಸಾ.ಶ 2000 ಶೃಂಗ ಸಭೆಯನ್ನು ನ್ಯೂಯಾರ್ಕ್ ನಲ್ಲಿ ನಡೆಸಲಾಯಿತು ಅಟಲ್ ಬಿಹಾರಿ ವಾಜಪೇಯಿ ಭಾಗವಹಿಸಿದ್ದರು, ಭಯೋತ್ಪಾದನೆ ವಿರುದ್ಧ ಕರೆ ನೀಡಿದರು.
✯ ಎ ಬಿ ವಾಜಪೇಯಿ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲಿಗ (ಸಾ.ಶ 1977).
✯ ಸಾಮಾನ್ಯ ಸಭೆಯ ಮೊದಲ ಮಹಿಳಾ ಅಧ್ಯಕ್ಷರು-ವಿಜಯಲಕ್ಷ್ಮಿ ಪಂಡಿತ್ (1953-54).
✯ ಪ್ರಸ್ತುತ  ಸಾಮಾನ್ಯ ಸಭೆಯ ಅಧ್ಯಕ್ಷ -  ಅಬ್ದುಲ್ಲಾ ಶಾಹಿದ್

2) ಭದ್ರತಾ ಮಂಡಳಿ :- 

✯ ಇದನ್ನು ವಿಶ್ವಸಂಸ್ಥೆಯ ಮೇಲ್ವಿಚಾರಣಾ ಸಮಿತಿ ಎಂದು ಕರೆಯುತ್ತಾರೆ.

✯ ಶಾಂತಿ ಮತ್ತು ಭದ್ರತೆ ಕಾಪಾಡುವುದು ಇದರ ಪ್ರಮುಖ ಉದ್ದೇಶ.
✯ ಕೇಂದ್ರ ಕಚೇರಿ ನ್ಯೂಯಾರ್ಕ್.
✯ ಮೊದಲ ಸಭೆ 17 ಜನವರಿ 1946 ರಲ್ಲಿ ಲಂಡನ್ ಚರ್ಚ್ ಹೌಸ ನಲ್ಲಿ ನಡೆಯಿತು.
✯ ಒಟ್ಟು 15 ಜನ(ರಾಷ್ಟ್ರ)ಸದಸ್ಯರಿದ್ದು, 10 ತಾತ್ಕಾಲಿಕ  ಮತ್ತು 5 ಖಾಯಂ ಸದಸ್ಯ ರಾಷ್ಟ್ರಗಳು (ಖಾಯಂ ಸದಸ್ಯ ರಾಷ್ಟ್ರಗಳು - ಅಮೇರಿಕ, ರಷ್ಯಾ, ಚೀನಾ, ಫ್ರಾನ್ಸ್, ಇಂಗ್ಲೆಂಡ್).
✯ ಯಾವುದೇ ನಿರ್ಣಯ ಅಂಗೀಕೃತ ವಾಗಲು 9 ರಾಷ್ಟ್ರಗಳು ಒಪ್ಪಿಗೆ ಅವಶ್ಯ.
✯ ಎರಡು ವರ್ಷಕ್ಕೊಮ್ಮೆ ಐದು ರಾಷ್ಟ್ರಗಳು ಸೇರ್ಪಡೆಯಾಗುತ್ತವೆ.
✯ ಖಾಯಂ ರಾಷ್ಟ್ರಗಳಿಗೆ ವೀಟೋ ಅಧಿಕಾರವಿದೆ.
ಪ್ರಸ್ತುತ ಅಧ್ಯಕ್ಷರು - ಡಿಮಿಟ್ರಿ ಮ್ಯಾನುಯೆಲ್ಸ್ಕಿ
 

3) ಆರ್ಥಿಕ ಮತ್ತು ಸಾಮಾಜಿಕ ಸಮಿತಿ :-

✯ 54 ಸದಸ್ಯರನ್ನು ಹೊಂದಿದೆ.
✯ ಪ್ರತಿವರ್ಷ ಮೂರನೆಯ ಒಂದು ಭಾಗ ಜನ (18) ನಿವೃತ್ತಿ ಹೊಂದುತ್ತಾರೆ.
✯ ಅಧಿಕಾರ ಅವಧಿ ಮೂರು ವರ್ಷ.
✯ ಅಧ್ಯಕ್ಷರ ಅಧಿಕಾರ ಅವಧಿ 1 ವರ್ಷ
✯ ಪ್ರಸ್ತುತ ಅಧ್ಯಕ್ಷರು - ಕೊಲೆನ್ ವಿಕ್ಸೆನ್ ಕೆಲಪಿಲೆ

4) ಧರ್ಮದರ್ಶಿ ಸಮಿತಿ :-

✯ ಎರಡನೇ ಮಹಾಯುದ್ಧದ ನಂತರ ವಿಜಯ ರಾಷ್ಟ್ರಗಳ ಹಂಚಿಕೆಯಲ್ಲಿ ವಿವಾದ ತಲೆದೋರಿದಾಗ ಮೇಲ್ವಿಚಾರಣೆಗೆಂದು ಈ ಸಮಿತಿ ರಚನೆಯಾಯಿತು.
✯ ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳು ಸ್ವತಂತ್ರ ಪಡೆದಿರುವುದರಿಂದ ಇದರ ಅವಶ್ಯಕತೆ ಇಲ್ಲ.

5) ಕಾರ್ಯಾಲಯ :-

✯ ಇದು ವಿಶ್ವಸಂಸ್ಥೆಯ ಮುಖ್ಯ ಆಡಳಿತ ಕಚೇರಿಯಾಗಿದೆ.
✯ ಪ್ರಧಾನ ಕಾರ್ಯದರ್ಶಿ ಮತ್ತು ಸಿಬ್ಬಂದಿ ಯನ್ನು ಒಳಗೊಂಡಿದೆ.
✯ ಪ್ರಧಾನ ಕಾರ್ಯದರ್ಶಿಯ ಅಧಿಕಾರ ಅವಧಿ ಐದು ವರ್ಷ.
✯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಆದೇಶದಂತೆ ಕಾರ್ಯಭಾರ ನಡೆಸಿಕೊಂಡು ಹೋಗುವುದು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ
   ಹೆಸರು    -  ದೇಶ   -    ಅವಧಿ
1. ಟ್ರಿಗ್ವೇ ಲಿ.  -  ನಾರ್ವೆ 1946-52
2. ಡಾಗ್ ಹೋಮರ್ಸ್ - ಸ್ವೀಡನ್ - 1953-61 
3. ಯು ಥಾಂಟ್ - ಬರ್ಮಾ -  1961-71
4. ಕರ್ಟ್ ವಾಲ್ಡೈಮ್ಆಸ್ಟ್ರಿಯಾ - 1972-1981
5. ಜೇವಿಯರ್ ಪೆರೆಜ್ ಡಿ ಕ್ಯುಲ್ಲರ್ - ಪೆರು - 1982-1991
6. ಬೌಟ್ರೋಸ್ ಬೌಟ್ರೋಸ್ - ಘಾಲಿ ಈಜಿಪ್ಟ್ - 1992-1996
7. ಕೋಫಿ ಅನ್ನಾನ್ - ಘಾನಾ - 1997-2006
8. ಬಾನ್ ಕಿ-ಮೂನ್ - ದಕ್ಷಿಣ ಕೊರಿಯಾ  - 2007-2016
9. ಆಂಟೋನಿಯೊ ಗುಟೆರೆಸ್ಪೋರ್ಚುಗಲ್ - 1 ಜನವರಿ 2017 ಪ್ರಭಾರಿ.
 
6) ಅಂತರಾಷ್ಟ್ರೀಯ ನ್ಯಾಯಾಲಯ :-

✯ ಇದು ನೆದರ್ ಲ್ಯಾಂಡ್ ನ ಹೇಗ ನಲ್ಲಿದೆ.
✯ 15 ಜನ ನ್ಯಾಯಾಧೀಶರಿರುತ್ತಾರೆ.
✯ ಪ್ರತಿವರ್ಷ 5 ಜನರನ್ನು ಆಯ್ಕೆ ಮಾಡುವರು.
✯ ಅಧಿಕಾರ ಅವಧಿ 9 ವರ್ಷ.
✯ ಭಾರತದ ಡಾ. ನಾಗೇಂದ್ರ ಸಿಂಗ್ (1985-88)ಇದರ ಅಧ್ಯಕ್ಷರಾಗಿದ್ದರು.
✯ ಪ್ರಸ್ತುತ ಅಧ್ಯಕ್ಷರು - ಜೋನ್ ಡೊನೊಘ್

ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆಗಳು
1. FAO :- (ಆಹಾರ ಮತ್ತು ಕೃಷಿ ಸಂಸ್ಥೆ)
(Food and Agriculture Organization)
ಸ್ಥಾಪನೆ - 16 ಅಕ್ಟೋಬರ್ 1945.
☆ ಕೇಂದ್ರ ಕಚೇರಿ - ಇಟಲಿಯ ರೋಮ್.
☆ ಧ್ಯೇಯ ವಾಕ್ಯ - Let there be bread
ವಿಶ್ವವನ್ನು ಹಸಿವಿನಿಂದ ಮುಕ್ತಗೊಳಿಸುವ ಗುರಿ ಹೊಂದಿದೆ.
ಪೌಷ್ಟಿಕ ಆಹಾರ ವಸ್ತುಗಳ ಬಳಕೆ ಜಾರಿಗೆ ತರುವುದು.
☆ ಪ್ರಸ್ತುತ ಅಧ್ಯಕ್ಷರು - ಕ್ಯು ಡೊಂಗ್ಯು

2. WHO :- (ವಿಶ್ವ ಆರೋಗ್ಯ ಸಂಸ್ಥೆ)
(World Health Organisation)
☆ ಸ್ಥಾಪನೆ - 7 ಎಪ್ರಿಲ್ 1948.
☆ ಕೇಂದ್ರ ಕಚೇರಿ - ಜಿನೇವಾ
☆ ರೋಗ ಪೀಡಿತ ಜನರಿಗೆ ಉತ್ತಮ ಆರೋಗ್ಯ ಒದಗಿಸುವುದು.
☆ ಸಿಡುಬು ರೋಗವನ್ನು ತಡೆಗಟ್ಟಿದೆ.
☆ ಏಡ್ಸ್ ರೋಗದ ಬಗ್ಗೆ ಎಚ್ಚರಿಕೆ ಮೂಡಿಸುತ್ತಿದೆ.
☆ ಪ್ರಸ್ತುತ ಕೋವಿಡ್-19 ರೋಗದ ಬಗ್ಗೆ ಎಚ್ಚರಿಕೆ ಮೂಡಿಸುತ್ತಿದೆ.
☆ ಪ್ರಸ್ತುತ ಅಧ್ಯಕ್ಷ - ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

3. UNESCO :- (ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ)
(United Nations Educational, Scientific and Cultural Organization)
☆ ಸ್ಥಾಪನೆ - 16 ನವೆಂಬರ್ 1946
☆ ಕೇಂದ್ರ ಕಚೇರಿ - ಪ್ಯಾರಿಸ್
☆ ಮಾನವ ಹಕ್ಕುಗಳನ್ನು ರಕ್ಷಿಸುವುದು ಮತ್ತು ಶೈಕ್ಷಣಿಕ ಅಭಿವೃದ್ಧಿ.
☆ ಮಾನವ ಹಾಗೂ ಪರಿಸರದ ನಡುವೆ ಸಮತೋಲನ ಕಾಯುವುದು.
 ಪ್ರಸ್ತುತ ಅಧ್ಯಕ್ಷರು - ಶ್ರೀಮತಿ ಆಡ್ರೆ ಅಜೌಲೆ

4. ILO :-(ಅಂತರಾಷ್ಟ್ರೀಯ ಕಾರ್ಮಿಕ ಸಂಘ)
(International Labour Organization)
☆ ಸ್ಥಾಪನೆ - 1919
☆ ಕೇಂದ್ರ ಕಚೇರಿ - ಜಿನೇವಾ
☆ ಬಾಲಕಾರ್ಮಿಕತೆ ತಡೆಯುವುದು.
☆ ಪೌಷ್ಟಿಕ ಆಹಾರ ಒದಗಿಸುವುದು.
☆ ಸಾಮಾಜಿಕ ಭದ್ರತೆ ಒದಗಿಸುವುದು.
☆ ಇದಕ್ಕೆ 1969 ರಲ್ಲಿ ನೊಬೆಲ್ ಪ್ರಶಸ್ತಿ ದೊರೆತಿದೆ.
☆ ಪ್ರಸ್ತುತ ಅಧ್ಯಕ್ಷರು - ಗಿಲ್ಬರ್ಟ್ ಎಫ್ ಹೌಂಗ್ಬೋ

5. UNICEF :- (ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ)
(United Nations International Children's Emergency Fund).
☆ ಸ್ಥಾಪನೆ - 1946
☆ ಕೇಂದ್ರ ಕಚೇರಿ - ನ್ಯೂಯಾರ್ಕ್
☆ ಎರಡನೇ ಮಹಾಯುದ್ಧದಲ್ಲಿ ತೊಂದರೆಯಲ್ಲಿ ದ್ದಾಗ ಮಕ್ಕಳಿಗೆ ಸಹಾಯ ಮಾಡಿತು, ಪ್ರಸ್ತುತ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಅನೈತಿಕ ವ್ಯವಹಾರ ತಡೆಯುವುದು.
☆ 1965ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ.
☆ ಪ್ರಸ್ತುತ ಅಧ್ಯಕ್ಷರು - ಟೋರ್ ಹ್ಯಾಟ್ರೆಮ್

6. IMF - (ಅಂತರಾಷ್ಟ್ರೀಯ ಹಣಕಾಸು ನಿಧಿ)
(International Monetary Fund)
☆ ಸ್ಥಾಪನೆ - 1945
☆ ಆರಂಭ - 1947
☆ ಕೇಂದ್ರ ಕಚೇರಿ - ವಾಷಿಂಗ್ಟನ್ ಡಿಸಿ
☆ ಆರ್ಥಿಕ ಸಮಸ್ಯೆಗಳ ಬಗ್ಗೆ ಸಲಹೆ ವಿಶ್ವ ವ್ಯಾಪಾರಕ್ಕೆ ಪ್ರೋತ್ಸಾಹಿಸುವುದು.
☆ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರು: ಕ್ರಿಸ್ಟಲಿನಾ ಜಾರ್ಜಿವಾ
 

7. UNDP :- (ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ)
(United Nations Development Programme)
☆ ಸ್ಥಾಪನೆ - 1965
☆ ಕೇಂದ್ರ ಕಚೇರಿ - ನ್ಯೂಯಾರ್ಕ್
ಬಡತನವನ್ನು ತೊಡೆದುಹಾಕಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು  ಮಾನವ ಅಭಿವೃದ್ಧಿಯನ್ನು ಸಾಧಿಸಲು ದೇಶಗಳಿಗೆ ಸಹಾಯ ಮಾಡುತ್ತದೆ.
☆ ಪ್ರಸ್ತುತ ಮುಖ್ಯಸ್ಥರು - ಅಚಿಮ್ ಸ್ಟೈನರ್.

8. WTO :- (ವಿಶ್ವ ವ್ಯಾಪಾರ ಸಂಘಟನೆ)
(World Trade organisation)
☆ 1 ಜನೆವರಿ 1995 ರಂದು ಜಾರಿ.
☆ ಕೇಂದ್ರ ಕಚೇರಿ - ಜಿನೇವಾ.
☆ ಮುಖ್ಯಸ್ಥರು - ನಿಂಗೋಜಿ ಒಕೊಂಜೊ-ಎವಿಲಾ

9. UNCTAD :- (ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳನ)
(United Nations Conference on Trade and Development)
☆ ಸ್ಥಾಪನೆ - 1964.
☆ ಕೇಂದ್ರ ಕಚೇರಿ - ನ್ಯೂಯಾರ್ಕ್.
☆ ಅಂತರರಾಷ್ಟ್ರೀಯ ವಾಣಿಜ್ಯ ವ್ಯಾಪಾರವನ್ನು ಪ್ರೋತ್ಸಾಹಿಸುತ್ತದೆ ಪ್ರತಿ ವರ್ಷ ಎರಡು ಬಾರಿ ಸಭೆ ಸೇರುತ್ತದೆ.
☆ ಪ್ರಸ್ತುತ ಕಾರ್ಯದರ್ಶಿ - ರೆಬೆಕಾ ಗ್ರಿನ್ಸ್ಪಾನ್.

10. IAEA :- (ಅಂತರಾಷ್ಟ್ರೀಯ ಅನುಶಕ್ತಿ ಒಕ್ಕೂಟ)
(International Atomic Energy Agency)
☆ ಸ್ಥಾಪನೆ - 1957
☆ ಕೇಂದ್ರ ಕಚೇರಿ - ವಿಯೆನ್ನಾ.
☆ ಪರಮಾಣು ಶಕ್ತಿಯನ್ನು ಶಾಂತಿ ಉದ್ದೇಶಕ್ಕೆ ಬಳಸುವ ಸಂಸ್ಥೆ.
☆ ಪ್ರಸ್ತುತ ಮುಖ್ಯಸ್ಥರು  - ರಾಫೆಲ್ ಮರಿಯಾನೋ ಗ್ರೋಸಿ

11. WMO :- (ವಿಶ್ವ ಹವಾಮಾನ ಸಂಸ್ಥೆ)
(World Meteorological Organization)
☆ ಸ್ಥಾಪನೆ - 20 ಮಾರ್ಚ್ 1950.
☆ ಕೇಂದ್ರ ಕಚೇರಿ - ಜಿನೇವಾ.
☆ ಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಮಾಹಿತಿ ನೀಡುತ್ತದೆ.
☆ ಪ್ರಸ್ತುತ ಅಧ್ಯಕ್ಷರು - ಗೆರ್ಹಾರ್ಡ್ ಆಡ್ರಿಯನ್ (ಜರ್ಮನಿ).

12. ವಿಶ್ವ ಬ್ಯಾಂಕ್ :- (World Bank)
☆ ಸ್ಥಾಪನೆ - 1944
☆ ಕೇಂದ್ರ ಕಚೇರಿ - ವಾಷಿಂಗ್ಟನ್ ಡಿಸಿ
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದ್ದು, ಬಂಡವಾಳ ಯೋಜನೆಗಳನ್ನು ಅನುಸರಿಸುವ ಉದ್ದೇಶಕ್ಕಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳ ಸರ್ಕಾರಗಳಿಗೆ ಸಾಲಗಳು ಮತ್ತು ಅನುದಾನಗಳನ್ನು ಒದಗಿಸುತ್ತದೆ.
ಪ್ರಸ್ತುತ ಅಧ್ಯಕ್ಷರು - ಡೇವಿಡ್ ಮಾಲ್ಪಾಸ್

2nd PUC Result | ಫಲಿತಾಂಶ ಪ್ರಕಟ 2022

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ  ಫಲಿತಾಂಶವನ್ನು  ದಿನಾಂಕ 18/06/2022 ರ ಮಧ್ಯಾಹ್ನ  12:00 ಗಂಟೆಗೆ  ಪಿ.ಯು ಬೋರ್ಡ್ ಪ್ರಕಟಿಸಲಿದೆ. 

ನಿಮ್ಮ ಫಲಿತಾಂಶ ವೀಕ್ಷಣೆ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ನಿಮ್ಮ Registration Number(ಹಾಲ್ ಟಿಕೆಟ್ ನಂಬರ್) ಮತ್ತು  Subject Combination ನಮೂದಿಸಿ.

 ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್  ಮಾಡಿ



Click here to get the results=  http://www.karresults.nic.in/ 

ವಿವಿಧ ಕ್ರೀಡೆಯಲ್ಲಿ ಉಪಯೋಗಿಸುವ ಪದಗಳು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕ್ರೀಡೆಗಳಿಗೆ ಸಂಬಂಧಿಸಿದಂತೆ ಬಳಸುವ ಪದಗಳ ಬಗ್ಗೆ ಪ್ರಶ್ನೆಗಳು ಬರುತ್ತವೆ. ಹಾಗಾಗಿ ಇಲ್ಲಿ ಪ್ರಮುಖ 13 ಕ್ರೀಡೆಗಳು ಮತ್ತು ಅವುಗಳಲ್ಲಿ ಬಳಸುವ ಪದಗಳ ಪಟ್ಟಿಯನ್ನು ನೀಡಲಾಗಿದೆ.

1. ಬ್ಯಾಡ್ಮಿಂಟನ್ (Badminton)

» ಡ್ಯೂಸ್

» ಡ್ರಾಪ್

» ಸ್ಮ್ಯಾಶ್

» ಲೆಟ್

» ಲವ್


2. ಬಿಲಿಯರ್ಡ್ಸ್ (Billiards)

» ಕ್ಯೂ

» ಜಿಗ್ಗರ್

» ಪಾಟ್

» ಸ್ಕ್ರಾಚ್

» ಕ್ಯಾನನ್


3. ಬಾಕ್ಸಿಂಗ್ (Boxing)

» ಜಬ್

» ಹುಕ್

» ಕಿಡ್ನಿ ಪಂಚ್

» ರಾಬಿಟ್ ಪಂಚ್

» ಸ್ಲ್ಯಾಮ್

» ಅಪ್ಪರ್ಕಟ್

» ನಾಕ್ಔಟ್


4. ಚೆಸ್ (Chess)

» ಬಿಷಪ್ ಗ್ಯಾಂಬಿಟ್

» ಚೆಕ್ ಮೆಟ್

» ಸ್ಟೇಲ್ ಮೆಟ್


5. ಕ್ರಿಕೆಟ್ (Cricket)

» ಎಲ್ಬಿಡಬ್ಲ್ಯೂ

» ಫಾಲೋ ಆನ್

» ಸ್ಟಂಪ್ಡ್

» ಬೈ

» ಲೆಗ್ ಬೈ

» ಗೂಗ್ಲಿ

» ಹ್ಯಾಟ್ರಿಕ್

» ಗಲ್ಲಿ

» ಡ್ರೈವ್

» ಡಕ್

» ನೋ ಬಾಲ್

» ಕವರ್ ಪಾಯಿಂಟ್

» ಸಿಲ್ಲಿ ಪಾಯಿಂಟ್

» ಪಿಚ್

» ಲೆಗ್ ಬ್ರೇಕ್

» ಕವರ್ ಪಾಯಿಂಟ್

» ಹಿಟ್-ವಿಕೆಟ್

» ಲೇಟ್-ಕಟ್

» ಸ್ಲಿಪ್

» ಸ್ಟೋನ್ ವಾಲ್ಲಿಂಗ್

» ಚಿನಮಾನ್

» ಲೆಗ್ ಸ್ಪಿನ್ನರ್

» ದಿ ಆಶಸ್

» ಬಾಡಿಲೈನ್ ಬೌಲಿಂಗ್

» ಬಂಪರ್ ಬೌಲಿಂಗ್

» ಚಕ್ಕರ್


6. ಫುಟ್ಬಾಲ್ (Football)

» ಆಫ್ ಸೈಡ್

» ಡ್ರಿಬ್ಬಲ್

» ಥ್ರೋವಿನ್

» ಟಚ್ ಡೌನ್

» ಸ್ಟಾಪರ್

» ಪೆನಾಲ್ಟಿ

» ಫೌಲ್

» ಡ್ರಾಪ್ ಕಿಕ್


7. ಗಾಲ್ಫ್ (Golf)

» ಬಾಗೈ,

» ಹೋಲ್,

» ಟೈ,

» ಸ್ಟೈಮಿಕ್,

» ಕ್ಯಾಡಲ್


8. ಹಾಕಿ (Hockey)

» ಸಡನ್ ಡೆತ್

» ಟೈ-ಬ್ರೇಕರ್

» ಬುಲ್ಲಿ

» ಪೆನಾಲ್ಟಿ-ಕಾರ್ನರ್

» ಸ್ಟಿಚ್, ಸ್ಕೂಪ್

» ಸಿರ್ಲ್

» ಸ್ಟ್ರಿಕ್ಕಿಂಗ್

» ರೋಲ್ ಇನ್

» ಕ್ಯಾರೀಡ್

» ಅಂಡರ್ ಕಟ್ಟಿಂಗ್


9. ರೈಫಲ್-ಶೂಟಿಂಗ್ (Rifle-Shooting)

» ಬುಲ್ಲಿಸ್ ಐ,

» ಸೆಂಟರ್ ಆಪ್ ಟಾರ್ಗೆಟ್


10. ಲಾನ್ ಟೆನಿಸ್ (Lawn Tennis)

» ವೊಲೈ

» ಸ್ಮ್ಯಾಶ್ ಡ್ಯೂಸ್

» ಸರ್ವಿಸ್

» ಲೆಟ್ ಗ್ರ್ಯಾಂಡ್ ಸ್ಲ್ಯಾಮ್

» ಡಬಲ್ ಫಾಲ್ಟ್

» ಬ್ಯಾಕ್ ಹ್ಯಾಂಡ್ ಡ್ರೈವ್


11. ವ್ರೆಸ್ಲಿಂಗ್ (Wrestling)

» ಹಾಫ್ ನೆಲ್ಸನ್

» ಹೀವ್


12. ವಾಲಿಬಾಲ್ (Volleyball)

» ಡ್ಯೂಸ್,

» ಸ್ಪೈಕರ್,

» ಬೂಸ್ಟರ್


13. ಅಥ್ಲೆಟಿಕ್ಸ್ (Athletics)

 » ಡೆಡ್ ಹೀಟ್

 » ಸ್ಟೀಪಲ್ ಚೇಸ್

 » ಫೋಟೋ ಫಿನಿಷ್

ಕನ್ನಡ ಗುಣಿತಾಕ್ಷರಗಳ ಅನಿಮೇಷನ್‌

 ಈ ಕೆಳಗಿನ ವ್ಯಂಜನಾಕ್ಷರಗಳ ಮೇಲೆ ಕ್ಲಿಕ್ ಮಾಡಿ ಆಯಾ ವ್ಯಂಜನದ ಗುಣಿತಾಕ್ಷರಗಳನ್ನು ಬರೆಯುವ ರೀತಿಯ ಅನಿಮೇಷನ್ ನೋಡಬಹುದು.

ಗುಣಿತಾಕ್ಷರಗಳ ಅನಿಮೇಷನ್‌ ಜಿ.ಐ.ಎಫ್.‌:

ಸಹಯೋಗ : ಕನ್ನಡ ಬಳಗ ಯು.ಕೆ ಮತ್ತು ಕೇಂಬ್ರಿಜ್‌ ಕನ್ನಡ ಸಂಘ ಯು.ಕೆ. 

 


ಕೃಪೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ(website)

Popular Post