ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

Mankuthimmana Kagga / ಕಗ್ಗ (ಅ )

ಅಜ್ಞಾತವಾದುದನಭಾವವೆನೆ ನಾಸ್ತಿಕನು ।

ಜ್ಞೇಯವೆಂದದಕೆ ಕೈಮುಗಿಯೆ ಭಕ್ತ ।।          

ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।        

ಸ್ವಜ್ಞಪ್ತಿಶೋಧಿ ಮುನಿ ಮಂಕುತಿಮ್ಮ ।।  


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।      

ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।               

ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।

ತಿನ್ನುವುದದಾತ್ಮವನೆ ಮಂಕುತಿಮ್ಮ ।।


ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।             

ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ।। 

ನಗುವುದೊಂದರೆ ನಿಮಿಷ ನಗಲು ಬಾಳ್ಮುಗಿಯುವುದು ।

ಮುಗುಳು ದುಡಿತಕೆ ತಣಿಸು ಮಂಕುತಿಮ್ಮ ।।  


ಅನ್ನವುಣುವಂದು ಕೇಳ್ ಅದನು ಬೇಯಿಸಿದ ನೀರ್ ।    

ನಿನ್ನ ದುಡಿತದ ಬೆಮರೊ ಪೆರರ ಕಣ್ಣೀರೋ ।। 

ತಿನ್ನು ನೀಂ ಜಗಕೆ ತಿನಲಿತ್ತನಿತ ಮಿಕ್ಕೂಟ ।  

ಜೀರ್ಣಿಸದ ಋಣಶೇಷ ಮಂಕುತಿಮ್ಮ ।।  

 

ಅತ್ಯಂತದುತ್ಕಟದ ಸನ್ನಿವೇಶಗಳ ಭರ ।

ಪ್ರತ್ಯಕ್ಷದರ್ಶನದಿನಲ್ಲದೆಂತಹುದು ।।                

ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ ।

ವಿಸ್ತಾರದದ್ಭುತವ ಮಂಕುತಿಮ್ಮ ।।   


ಅರಿ ಮಿತ್ರ ಸತಿ ಪುತ್ರ ಬಂಧು ಬಳಗವದೆಲ್ಲ ।

ಕರುಮದವತಾರಗಳೊ ಋಣಲತೆಯ ಚಿಗುರೋ ।।

ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ ।

ವುರಿಮಾರಿಯಾದೀತೋ ಮಂಕುತಿಮ್ಮ ।।  


ಅನುಭವದ ಪಾಲೊಳು ವಿಚಾರಮಂಥನವಾಗೆ । 

ಜನಿಯಿಕುಂ ಜ್ಞಾನನವನೀತವದೆ ಸುಖದಂ ।।      

ಗಿಣಿಯೋದು ಪುಸ್ತಕಜ್ಞಾನ ನಿನ್ನನುಭವವೆ ।  

ನಿನಗೆ ಧರುಮದ ದೀಪ ಮಂಕುತಿಮ್ಮ ।।  


ಅಂತೂ ಇಂತೂ ಎಂಟೂ ಜೀವಕಥೆ ಮುಗಿಯುವುದು ।

ಅಂದೂ ಎಂದೂ ಎಂದೂ ಜನುಮ ಕಳೆಯುವುದು ।। 

ಒಂದೇ ಮರುವಿನ ಮುಸುಕು ಮುಸುಕಲಿಹುದೆಲ್ಲವನು 

ಸಂತಸದ ಮಾತಿಷ್ಟೇ - ಮಂಕುತಿಮ್ಮ ।। 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಪಟ್ಟಿ.

 ಇಂದಿನವರೆಗಿನ ಅಧ್ಯಕ್ಷರುಗಳ ವಿವರ

mahesh-joshi-sir

ನಾಡೋಜ ಡಾ . ಮಹೇಶ್ ಜೋಶಿ

1234

ಕೃಪೆ : ಕನ್ನಡ ಸಾಹಿತ್ಯ ಪರಿಷತ್ತು (Website)

ಜಯ ಭಾರತ ಜನನಿಯ ತನುಜಾತೆ (ನಾಡಗೀತೆ)

ಜಯ ಭಾರತ ಜನನಿಯ ತನುಜಾತೆ, 

ಜಯ ಹೇ ಕರ್ನಾಟಕ ಮಾತೆ!

ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೇ,ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸನ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ !

ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ,
ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ

ಸಾಹಿತ್ಯ: ಕುವೆಂಪು

ಕನ್ನಡದ / ಕರ್ನಾಟಕದ ಮೊದಲುಗಳು..

1. ಅಚ್ಚ ಕನ್ನಡದ ಮೊದಲ ದೊರೆ.

  ➥ ಮಯೂರವರ್ಮ

2. ಕನ್ನಡದ ಮೊದಲ ಕವಿ.

  ➥ ಪಂಪ

3. ಕನ್ನಡದ ಮೊದಲ ಶಾಸನ. 

  ➥ ಹಲ್ಮಿಡಿ ಶಾಸನ

4. ತ್ರಿಪದಿ ಛಂದಸ್ಸಿನ ಮೊದಲ ಬಳಕೆ.

   ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ

5. ಕನ್ನಡದ ಮೊದಲ ಲಕ್ಷಣ ಗ್ರಂಥ.

  ➥ ಕವಿರಾಜಮಾರ್ಗ

6. ಕನ್ನಡದ ಮೊದಲ ನಾಟಕ.

   ಮಿತ್ರವಿಂದ ಗೋವಿಂದ (ಸಿಂಗರಾರ್ಯ)

7. ಕನ್ನಡದ ಮೊದಲ ಮಹಮದೀಯ ಕವಿ.

  ➥ ಶಿಶುನಾಳ ಷರೀಪ

8. ಕನ್ನಡದ ಮೊದಲ ಕವಯಿತ್ರಿ.

 ➥ ಅಕ್ಕಮಹಾದೇವಿ

9. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ.

  ➥ ಇಂದಿರಾಬಾಯಿ

10. ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ.

    ಚೋರಗ್ರಹಣ ತಂತ್ರ

11. ಕನ್ನಡದ ಮೊದಲ ಛಂದೋಗ್ರಂಥ.

   ➥ ಛಂದೋಂಬುಧಿ (ನಾಗವರ್ಮ)

12. ಕನ್ನಡದ ಮೊದಲ ಸಾಮಾಜಿಕ ನಾಟಕ.

   ➥ ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ

13. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ.

   ➥ ಜಾತಕ ತಿಲಕ (ಶ್ರೀಧರಚಾರ್ಯ)

14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ.

   ➥ ವ್ಯವಹಾರ ಗಣಿತ (ರಾಜಾದಿತ್ಯ)

15. ಕನ್ನಡದ ಮೊದಲ ಕಾವ್ಯ.

    ಆದಿಪುರಾಣ

16. ಕನ್ನಡದ ಮೊದಲ ಗದ್ಯ ಕೃತಿ.

   ➥ ವಡ್ಡಾರಾಧನೆ

17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ.

  ➥ ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)

18. ಕನ್ನಡದ ಮೊದಲ ಪತ್ರಿಕೆ.

    ಮಂಗಳೂರು ಸಮಾಚಾರ

19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು.

  ➥ ಚಂದ್ರರಾಜ

20. ಕನ್ನಡದಲ್ಲಿ ಮೊದಲು ಕಥೆ ಬರೆದವರು.

   ➥ ಪಂಜೆಮಂಗೇಶರಾಯರು

21. ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ.

    ಒಲುಮೆ (ತೀನಂಶ್ರೀ)

22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು.

    ಹೆಚ್.ವಿ.ನಂಜುಂಡಯ್ಯ

23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ.

   ➥ ಆರ್.ನರಸಿಂಹಾಚಾರ್

24. ಕನ್ನಡದ ಮೊದಲ ವಚನಕಾರ.

    ದೇವರದಾಸಿಮಯ್ಯ

25. ಹೊಸಗನ್ನಡದ ಮೊದಲ ಮಹಾಕಾವ್ಯ.

    ಶ್ರೀರಾಮಾಯಣ ದರ್ಶನಂ

26. ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ.

    ಕುವೆಂಪು

27. ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು.

  ➥ ಆರ್.ಎಫ್.ಕಿಟೆಲ್

28. ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ.

    ಸೂಕ್ತಿ ಸುಧಾರ್ಣವ

29. ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ.

   ➥ ಬೆಂಗಳೂರು (1915)

30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ.

     ಕುವೆಂಪು

31. ಕನ್ನಡದ ಮೊದಲ ವಿಶ್ವಕೋಶ.

   ➥ ವಿವೇಕ ಚಿಂತಾಮಣಿ (ನಿಜಗುಣ ಶಿವಯೋಗಿ)

32. ಕನ್ನಡದ ಮೊದಲ ವೈದ್ಯಗ್ರಂಥ.

   ➥ ಗೋವೈದ್ಯ (ಕೀರ್ತಿವರ್ಮ)

33. ಕನ್ನಡದ ಮೊದಲ ಪ್ರಾಧ್ಯಾಪಕರು.

   ➥ ಟಿ.ಎಸ್.ವೆಂಕಣ್ಣಯ್ಯ

34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ.

   ➥ ಮಂದಾನಿಲ ರಗಳೆ

35. ಕನ್ನಡದ ಮೊದಲ ಹಾಸ್ಯ ಪತ್ರಿಕೆ

   ➥ ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)

36. ಕನ್ನಡದ ಮೊದಲ ವೀರಗಲ್ಲು .

    ತಮ್ಮಟಗಲ್ಲು ಶಾಸನ

37. ಕನ್ನಡದ ಮೊದಲ ಹಾಸ್ಯ ಲೇಖಕಿ.

   ➥ ಟಿ.ಸುನಂದಮ್ಮ

38. ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ.

   ➥ ಜಯದೇವಿ ತಾಯಿ ಲಿಗಾಡೆ 

39. ಕನ್ನಡದ ಮೊದಲ ವ್ಯಾಕರಣ ಗ್ರಂಥ.

  ➥ ಶಬ್ದಮಣಿದರ್ಪಣ 

40. ಹೊಸಗನ್ನಡದ ಮೊದಲ ವ್ಯಾಕರಣ.

   ➥ ಮಧ್ಯಮ ವ್ಯಾಕರಣ

41. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೊದಲ ಕನ್ನಡಿಗ.

  ➥ ಕುವೆಂಪು

42. ಕನ್ನಡದಲ್ಲಿ ಬೆರಳಚ್ಚು ಯಂತ್ರ ಸಿದ್ದಪಡಿಸಿದ ಕನ್ನಡಿಗ.

  ➥ ಅನಂತ ಸುಬ್ಬರಾವ್

43. ಕನ್ನಡದ ಮೊದಲ ರಾಷ್ಟ್ರಕವಿ.

   ➥ ಮಂಜೆಶ್ವರ ಗೋವಿಂದ ಪೈ 

44. ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ.

   ➥ ಜಿ. ಬಿ. ಜೋಶಿ 

45. ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥ.

    ಜಾತಕತಿಲಕ 

46. ಕನ್ನಡ ನಾಡಿನ ಮೊದಲ ರಾಜವಂಶ.

    ಕದಂಬ

47. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟ.

  ➥ ಡಾ. ರಾಜಕುಮಾರ